Asianet Suvarna News Asianet Suvarna News

Chanting beads: ಯಾವ ದೇವರಿಗೆ ಯಾವ ಜಪಮಾಲೆ ಇಷ್ಟ, ಬಳಸೋದು ಹೇಗೆ?

ದೇವರನ್ನು ಪ್ರಸನ್ನಗೊಳಿಸಲು ಅನೇಕ ವಿಧವಾದ ಮಾರ್ಗಗಳಿವೆ. ವ್ರತ ಮತ್ತು ಉಪಾಸನೆಗಳಿಂದ ಕೆಲವರು ದೇವರ ಕೃಪೆ ಪಡೆಯಲು ಪ್ರಯತ್ನಿಸಿದರೆ, ಇನ್ನು ಕೆಲವರು ಅರ್ಚನೆ, ಪೂಜೆ ಮತ್ತು ಜಪ ಮಾಡುವ ಮೂಲಕ ದೇವರನ್ನು ಪ್ರಸನ್ನ ಗೊಳಿಸುತ್ತಾರೆ. ಯಾವ ಜಪ ಮಾಲೆಯಿಂದ ಜಪ ಮಾಡಿದರೆ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ತಿಳಿಯೋಣ..

For getting Success Chant mantra using this japamala
Author
Bangalore, First Published Nov 17, 2021, 4:08 PM IST

ದೇವತೆಗಳನ್ನು (God) ಪ್ರಸನ್ನಗೊಳಿಸಲು (Blessings) ಅನೇಕ ರೀತಿಯ ಮಾರ್ಗಗಳಿವೆ. ಪೂಜೆ, ಅರ್ಚನೆ, ಜಪ, ಮಂತ್ರ ಪಠಣ, ವ್ರತ, ಉಪವಾಸ ಹೀಗೆ ಅನೇಕ ವಿಧದಲ್ಲಿ ದೇವರ ಕೃಪೆ ಪಡೆಯಲು ಪ್ರಯತ್ನಿಸುತ್ತಾರೆ. ಪುರಾಣಗಳ (Puranas) ಪ್ರಕಾರ ಜಪ (Japa) ಮಾಲೆಯಿಂದ ದೇವರ ನಾಮವನ್ನು (Chant) ಸ್ಮರಿಸುತ್ತಾ ಜಪ ಮಾಡುವುದು ದೇವರನ್ನು ಪ್ರಸನ್ನಗೊಳಿಸಿಕೊಳ್ಳಲು ಇರುವ ಶ್ರೇಷ್ಠ (Auspicious) ಮಾರ್ಗವೆಂದು ಹೇಳಲಾಗಿದೆ. ಜಪ ಮಾಲೆಯಲ್ಲಿ ಅನೇಕ ವಿಧಗಳಿವೆ. ಅಷ್ಟೇ ಅಲ್ಲದೆ ಬೇರೆ ಬೇರೆ ದೇವರಿಗೆ ಬೇರೆ ಬೇರೆ ಜಪಮಾಲೆಗಳು ಪ್ರಿಯವಾಗಿರುತ್ತವೆ. ಅವುಗಳ ಮೂಲಕ ಜಪ ಮಾಡುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಗಾದರೆ ಯಾವ ದೇವರಿಗೆ (God) ಯಾವ ಜಪಮಾಲೆ ಶ್ರೇಷ್ಠ ಎಂಬುದನ್ನು ತಿಳಿಯೋಣ. 

ಗಣೇಶ (Ganesh)
ಪ್ರಥಮ ಪೂಜಕ ಶ್ರೀ ಗಣೇಶನಿಗೆ ಮತ್ತು ದೇವಗುರು (Jupiter) ಬೃಹಸ್ಪತಿಗೆ ಅರಿಶಿಣದ (Turmeric) ಜಪಮಾಲೆ  ಪ್ರಿಯವಾದದ್ದೆಂದು ಹೇಳಲಾಗುತ್ತದೆ. ಹಾಗಾಗಿ ಅರಿಶಿಣ ಮಣಿಯ ಜಪಮಾಲೆಯಿಂದ ಜಪ ಮಾಡಿದರೆ ಶ್ರೇಷ್ಠವೆಂದು ಮತ್ತು ಗಣೇಶನ ಕೃಪೆ ಬೇಗ ಸಿಗುತ್ತದೆ ಎಂದು ಸಹ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಅರಿಶಿಣದ ಮಾಲೆಯಿಂದ ಜಪ ಮಾಡಿದರೆ ಸಂತಾನ ಪ್ರಾಪ್ತಿ ಮತ್ತು ಉದ್ಯೋಗ (Job) ಪ್ರಾಪ್ತಿ ಶೀಘ್ರದಲ್ಲಿ (Quick) ಆಗುತ್ತದೆ ಎಂದು ಹೇಳಲಾಗುತ್ತದೆ.

ಶಿವ (Lord Shiva) 
ಶಿವನ ಕಣ್ಣೀರಿನಿಂದಲೇ ಉದ್ಭವಿಸಿರುವ ರುದ್ರಾಕ್ಷಿಯು (Rudraksh) ಶಿವನಿಗೆ ಅತ್ಯಂತ ಪ್ರಿಯವಾದದ್ದು. ರುದ್ರಾಕ್ಷಿ ಮಾಲೆಯಿಂದ ಜಪ  ಮಾಡಿದರೆ ಮನೋ ಕಾಮನೆಗಳು (Desire) ಈಡೇರುತ್ತವೆ ಎಂದು ಹೇಳಲಾಗುತ್ತದೆ. ಮಹಾದೇವನ ಕೃಪೆ ಪಡೆಯ ಬಯಸುವವರು ರುದ್ರಾಕ್ಷಿ ಮಾಲೆಯನ್ನು ಬಳಸಿ ಶಿವ ಮಂತ್ರವನ್ನು ಪಠಿಸಬೇಕು (Chanting). ಇದರಿಂದ ಶಿವ ಬಹುಬೇಗ ಪ್ರಸನ್ನ ಗೊಳ್ಳುತ್ತಾನೆಂದು ಹೇಳಲಾಗುತ್ತದೆ.

ಇದನ್ನು ಓದಿ: ಚಿನ್ನ, ಬೆಳ್ಳಿ ಆಭರಣಗಳ ಕನಸು ಬಿದ್ದರೆ ಅದೃಷ್ಟವೋ, ದುರಾದೃಷ್ಟವೋ..?

ಅಂಬಾ ದೇವಿ (Devi Amba)
ಅಂಬಾದೇವಿಯನ್ನು ಪ್ರಸನ್ನಗೊಳಿಸಿಕೊಳ್ಳಲು ಸ್ಪಟಿಕದ (Spatika) ಜಪಮಾಲೆಯಿಂದ ಜಪ ಮಾಡಬೇಕೆಂದು ಹೇಳಲಾಗುತ್ತದೆ. ಸ್ಪಟಿಕದ ಮಾಲೆ ಬಳಸಿ ಜಪ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು (Negative energy) ನಾಶವಾಗುತ್ತವೆ ಮತ್ತು ಕೆಲಸ ಕಾರ್ಯಗಳಲ್ಲಿ ಸಫಲತೆ (Success) ದೊರಕುತ್ತದೆ.  

ದುರ್ಗಾ ದೇವಿ (Devi durga)
ದೇವಿ ದುರ್ಗೆಯ ಕೃಪೆ ಪಡೆಯಲು ಚಂದನದ ಮಣಿಗಳಿಂದ ತಯಾರಿಸಿದ ಜಪ ಮಾಲೆಯನ್ನು ಬಳಸಬೇಕು. ರಕ್ತ ಚಂದನ ಎಂದು ಸಹ ಕರೆಯಲ್ಪಡುವ ಈ ಮಣಿಯ ಜಪ ಮಾಲೆ ಮನಸ್ಸಿಗೆ ಶಾಂತಿ (Peace) ಮತ್ತು ನೆಮ್ಮದಿಯನ್ನು ನೀಡುವುದಲ್ಲದೆ, ಸಕಾರಾತ್ಮಕ ಶಕ್ತಿಯನ್ನು (Positive energy) ನೀಡುತ್ತದೆ. ಈ ಜಪಮಾಲೆ ಬಳಸಿ ಮಂತ್ರ ಪಠಣ ಮಾಡಿದರೆ  ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. 

ಸೂರ್ಯ ದೇವ (Sun)
ಸೂರ್ಯ ದೇವನ ಕೃಪೆ ಪಡೆಯಲು ಮಾಣಿಕ್ಯ ಅಥವಾ ಬಿಲ್ವ ಮರದ ತುಂಡುಗಳಿಂದ ಮಾಡಿದ ಮಣಿಯ ಜಪಮಾಲೆ ಶ್ರೇಷ್ಠವೆಂದು ಹೇಳಲಾಗುತ್ತದೆ. ಈ ಮಾಲೆಯಿಂದ ಸೂರ್ಯ ಮಂತ್ರವನ್ನು ಜಪಿಸಿದರೆ ಪಿತೃ ದೋಷ (Pitru dosha) ನಾಶವಾಗುವುದಲ್ಲದೆ ಎಲ್ಲಾ ರೀತಿಯ ಗ್ರಹ ದೋಷಗಳು (Planet) ನಿವಾರಣೆಯಾಗುತ್ತವೆ. 

ಲಕ್ಷ್ಮೀ ದೇವಿ (Goddess Lakshmi) 
ಲಕ್ಷ್ಮೀ ದೇವಿಯನ್ನು ಪ್ರಸನ್ನಗೊಳಿಸಲು ಕಮಲದ (Lotus) ಬೀಜದಿಂದ ತಯಾರಿಸಿದ ಜಪಮಾಲೆಯು ಶ್ರೇಷ್ಠವೆಂದು ಹೇಳಲಾಗುತ್ತದೆ. ಈ ಮಾಲೆಯನ್ನು ಬಳಸಿ ಲಕ್ಷ್ಮೀದೇವಿಯ ಮಂತ್ರವನ್ನು ಜಪಿಸಿದರೆ ಸಂಪತ್ತು (Wealth) ಮತ್ತು ಐಶ್ವರ್ಯ ದೊರಕುತ್ತದೆ. ಅದೇ ತುಳಸಿ ಮತ್ತು ಚಂದನದ ಜಪಮಾಲೆಯಿಂದ ವಿಷ್ಣುವಿನ (Vishnu) ಮಂತ್ರವನ್ನು ಜಪಿಸಬೇಕು. 

ಇದನ್ನು ಓದಿ: ಸಾಲದ ಶೂಲದಿಂದ ತಪ್ಪಿಸಿಕೊಳ್ಳಲು ಇಲ್ಲಿವೆ ಸುಲಭದ ದಾರಿ

ಸರಸ್ವತಿ (Goddess Saraswati)
ಸರಸ್ವತಿ ದೇವಿಯನ್ನು ಆರಾಧಿಸಲು ಸ್ಪಟಿಕದ ಮಾಲೆ ಉತ್ತಮ ಎಂದು ಹೇಳಲಾಗುತ್ತದೆ. ಸರಸ್ವತಿ ದೇವಿಯ ಕೃಪೆ ಪಡೆಯಲು ವಿದ್ಯೆ (Education) ಸಿದ್ಧಿಸಲು ಸ್ಪಟಿಕದ ಜಪಮಾಲೆ ಉತ್ತಮ. ಈ ಮಾಲೆಯನ್ನು ಧರಿಸಿದವರ ಅದರ ಪ್ರಭಾವದಿಂದ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಪಡೆಯುತ್ತಾರೆ.

ಚಂದ್ರ (Moon) 
ಚಂದ್ರ ಗ್ರಹದ ಶಾಂತಿಗಾಗಿ ಅಥವಾ ಚಂದ್ರ ಗ್ರಹದ ಕೃಪೆ ಪಡೆಯಲು  ಮುತ್ತಿನ (Pearl) ಮಾಲೆಯಿಂದ ಚಂದ್ರ ಮಂತ್ರವನ್ನು ಜಪಿಸಬೇಕು. ಈ ಮಾಲೆಯಿಂದ ಶಿವನ ಆರಾಧನೆಯನ್ನು (Worship) ಸಹ ಮಾಡಲಾಗುತ್ತದೆ.

Follow Us:
Download App:
  • android
  • ios