Asianet Suvarna News Asianet Suvarna News

ನವರಾತ್ರಿಯಲ್ಲಿ ಹೀಗೆ ಮಾಡಿದ್ರೆ ಮನೋಕಾಮನೆ ಪೂರ್ಣವಾಗುತ್ತೆ; ದೇವಿಯ ಆಶೀರ್ವಾದ ಲಭಿಸುತ್ತೆ

ನವರಾತ್ರಿಯಲ್ಲಿ ಕೆಲವು ವಿಶೇಷ ಚಟುವಟಿಕೆಗಳನ್ನು ಮಾಡುವುದರ ಮೂಲಕ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಸರಳವಾಗಿ ಮಾಡಬಹುದಾದ ಕಾರ್ಯಗಳನ್ನು ಪಾಲನೆ ಮಾಡಿ ನಿಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳಿ.
 

Follow these steps in Navaratri for get prosperity
Author
First Published Oct 15, 2023, 3:32 PM IST

ಭಕ್ತಿ-ಭಾವದಲ್ಲಿ ಮಿಂದೇಳುವ ಶಾರದೀಯ ನವರಾತ್ರಿ ಇಂದಿನಿಂದ ಆರಂಭವಾಗಿದೆ. ಮನದ ಇಚ್ಛೆಯನ್ನು ಪೂರೈಸಿಕೊಳ್ಳುವ ಹಂಬಲದೊಂದಿಗೆ ನವರಾತ್ರಿಯ ಸಮಯದಲ್ಲಿ ಸಾಕಷ್ಟು ರೀತಿಯಲ್ಲಿ ವ್ರತ, ನಿಯಮಗಳನ್ನು ಭಕ್ತರು ಪಾಲನೆ ಮಾಡುತ್ತಾರೆ. ವಿವಿಧ ಮಾರ್ಗಗಳ ಮೊರೆ ಹೋಗುತ್ತಾರೆ. ಮಾತೆ ದುರ್ಗಾ ದೇವಿಯನ್ನು ಪ್ರಸನ್ನಗೊಳಿಸಲು ಹಲವು ಮಾರ್ಗಗಳನ್ನು ಪಾಲನೆ ಮಾಡುವುದರಿಂದ ಬಯಸಿದ ಸೌಭಾಗ್ಯಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ. ನಿಮ್ಮ ಮನಸ್ಸಿನ ಇಚ್ಛೆಗಳನ್ನು ಒಂದು ಪಟ್ಟಿ ಮಾಡಿಕೊಂಡು ಅದನ್ನು ದಿನವೂ ಧ್ಯಾನಿಸಿಕೊಂಡು ದೇವಿಯ ಉಪಾಸನೆ ಮಾಡಬೇಕು.

ಮಧ್ಯೆ ಮಂತ್ರವನ್ನು ಉಚ್ಚರಿಸುತ್ತ ನಿಮ್ಮ ಆಸೆಗಳನ್ನು ಜೋಡಿಸಬೇಕು. ಯಾ ದೇವಿ ಸರ್ವಭೂತೇಷು .. ಎನ್ನುವ ಮಂತ್ರವನ್ನು ಕೇಳಿರಬಹುದು. ನಿಮಗೆ ಜೀವನದಲ್ಲಿ ಯಾವುದು ಬೇಕೋ ಅದನ್ನು ಈ ಮಂತ್ರಕ್ಕೆ ಸೇರಿಸಿ ದಿನವೂ 11 ಬಾರಿ ಅಥವಾ 21 ಬಾರಿ ಅಥವಾ 108 ಬಾರಿ ಜಪಿಸುವುದರಿಂದ ಮನೋಕಾಮನೆ ಪೂರ್ಣಗೊಳ್ಳುತ್ತದೆ. ಉದಾಹರಣೆಗೆ, “ಯಾ ದೇವಿ ಸರ್ವಭೂತೇಷು ವಿದ್ಯಾ ರೂಪೇಣ ಸಂಸ್ಥಿತಾ, ನಮಸ್ತಸೈ ನಮಸ್ತಸೈ ನಮಸ್ತಸೈ ನಮೋನ್ನಮಃ’ ಎನ್ನುವ ಮಂತ್ರವನ್ನು ವಿದ್ಯಾರ್ಥಿಗಳು ಪಠಿಸಬೇಕು. ಮನೆಯಲ್ಲಿ ಶಾಂತಿ ನೆಮ್ಮದಿ ಬೇಕೆಂದಾದರೆ, ಶಾಂತಿ, ಹಣಕಾಸು ಸ್ಥಿತಿ ಉತ್ತಮವಾಗಬೇಕೆಂದರೆ ಲಕ್ಷ್ಮೀ ರೂಪೇಣ ಸಂಸ್ಥಿತಾ ಎಂದು ಹೇಳುವ ಮೂಲಕ ಮನದ ಇಚ್ಛೆಗಳನ್ನು ಪೂರೈಸಿಕೊಳ್ಳಬಹುದು. ಹೀಗೆಯೇ, ಬುದ್ಧಿ ರೂಪೇಣ, ಮಾತೃ ರೂಪೇಣ, ವೃತ್ತಿ ರೂಪೇಣ, ಧೃತಿ ರೂಪೇಣ, ಪ್ರತಿಭಾ ರೂಪೇಣ ಇತ್ಯಾದಿ ಸೇರಿಸಿ ಮಂತ್ರ ಹೇಳಬೇಕು.

ಮಾತೆಯೆಂದರೆ ಸ್ನೇಹದ ಮೂರ್ತಿ. ಎಲ್ಲ ತಪ್ಪುಗಳನ್ನೂ ಕ್ಷಮಿಸುವ ಧರಿತ್ರಿ. ಅಮ್ಮನನ್ನು ಒಲಿಸಿಕೊಳ್ಳಲು ಮಕ್ಕಳಿಗೆ ಹೆಚ್ಚು ಸಮಯ ಬೇಕಾಗಿಲ್ಲ. ಜೀವನದಲ್ಲಿ ಬೇರೆ ಯಾವುದಾದರೂ ಕಷ್ಟವಾಗಿರಬಹುದು. ಆದರೆ, ತಾಯಿಯ ಆಶೀರ್ವಾದ ಯಾವತ್ತೂ ಅತ್ಯಂತ ಸರಳವಾಗಿ, ಸುಲಭವಾಗಿ ದೊರೆಯುತ್ತದೆ. ಮಾತೆ ದುರ್ಗೆಯೂ ಇದಕ್ಕೆ ಹೊರತಲ್ಲ. ಶ್ರದ್ಧೆ, ದಯೆ, ಭಕ್ತಿ, ಕರುಣೆ, ಜಿಜ್ಞಾಸೆ, ಕ್ಷಮೆಯಂತಹ ಭಾವನೆಗಳನ್ನು ಉದ್ದೀಪಿಸಿಕೊಳ್ಳಬೇಕಾದರೆ ಮಾತೆಯನ್ನು ಭಕ್ತಿಯಿಂದ, ಮುಗ್ಧವಾಗಿ ಆರಾಧನೆ ಮಾಡಿ. 

Navaratri 2023: ನವರಾತ್ರಿಯಲ್ಲಿ ರಾತ್ರಿ ಪೂಜೆ ಮಾಡುವುದರಿಂದ ಸಿದ್ಧಿ ಪಡೆಯೋಕೆ ಸಾಧ್ಯ!

ಧ್ಯಾನ (Meditation) ಮಾಡಿ: ನವರಾತ್ರಿಯ (Navaratri) ಸಮಯದಲ್ಲಿ ಪ್ರತಿದಿನವೂ ಬೆಳಗ್ಗೆ ಬ್ರಾಹ್ಮಿ (Early Morning) ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ದೇವರ ಕೋಣೆಯಲ್ಲಿ (Pooja Room) ಸ್ವಲ್ಪ ಸಮಯ ಧ್ಯಾನ ಮಾಡಬೇಕು. ಏಕಾಗ್ರತೆಯನ್ನು ಈ ಸಮಯದಲ್ಲಿ ಹೆಚ್ಚಿಸಿಕೊಳ್ಳಬಹುದು. ಮನದಲ್ಲಿ ದೇವಿಯ ದಿವ್ಯ ಸ್ವರೂಪವನ್ನು ಸ್ಮರಿಸಿಕೊಳ್ಳಿ. ಧ್ಯಾನದ ಬಳಿಕ ಹಣೆಗೆ ಕುಂಕುಮದಿಂದ ತಿಲಕ ಇರಿಸಿಕೊಳ್ಳಿ. ಇದರಿಂದ ಚಿತ್ತ ಸ್ಥಿರವಾಗುತ್ತದೆ. 9 ದಿನಗಳ ಕಾಲವೂ ಹೀಗೆ ಮಾಡುವುದರಿಂದ ಏಕಾಗ್ರತೆ (Concentration) ಹೆಚ್ಚುತ್ತದೆ. 

ಕುಂಕುಮದ (Kunkum) ಬಳಕೆ: ಮನೆಯಲ್ಲಿ ಸದಾ ಸಮೃದ್ಧಿ (Prosperity), ಶಾಂತಿ (Peace) ಇರಬೇಕು, ಸೌಭಾಗ್ಯವತಿಯಾಗಿ ಇರಬೇಕು ಎಂದು ಮಹಿಳೆಯರು (Woman) ಇಚ್ಛಿಸುತ್ತಾರೆ. ಹಾಗೆಯೇ ಪುರುಷರು (Male) ಭಾಗ್ಯವಂತರಾಗಬೇಕೆಂದು ಬಯಸುತ್ತಾರೆ. ಇದನ್ನು ಪೂರೈಸಿಕೊಳ್ಳಲು ನವರಾತ್ರಿಯಲ್ಲಿ ಪ್ರಯತ್ನ ಮಾಡಿ. ನವರಾತ್ರಿಯ ಮೊದಲ ದಿನದಂದು ಒಂದು ಕುಂಕುಮದ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಹೊಸ ಕುಂಕುಮ, ಅರಿಶಿಣ ತುಂಬಿ. ಅದನ್ನು ದೇವಿಯ ಚಿತ್ರ ಅಥವಾ ಮೂರ್ತಿಯ ಎದುರು ಇಡಿ. ಪ್ರತಿದಿನವೂ ಪೂಜೆ (Worship) ಮಾಡುವಾಗ ಅದು ಅಲ್ಲಿಯೇ ಇರಲಿ. ಹೀಗೆ ನವರಾತ್ರಿ, ವಿಜಯದಶಮಿಯಂದು ಪೂಜೆಗೊಂಡ ಅರಿಶಿಣ, ಕುಂಕುಮಕ್ಕೆ ಪಾವಿತ್ರ್ಯತೆ ಲಭ್ಯವಾಗುತ್ತದೆ. ಇದನ್ನು ಮುಂದಿನ 21 ದಿನಗಳ ಕಾಲ ದೀಪಾವಳಿಯವರೆಗೆ ಹಚ್ಚಿಕೊಳ್ಳಿ. ಪುರುಷರು ಸಹ ತಿಲಕವನ್ನು ಇರಿಸಿಕೊಳ್ಳಬೇಕು. ಮಹಿಳೆಯರು, ಕುಂಕುಮವನ್ನು ಬೈತಲೆಗೆ ಹಚ್ಚಿಕೊಳ್ಳಬೇಕು. ಇದರಿಂದ ಭಾಗ್ಯ, ಸೌಭಾಗ್ಯಗಳು ಸಿದ್ಧಿಸುತ್ತವೆ.

ಲಲಿತಾ ಪಂಚಮಿಯ ಮಹತ್ವ, ಮುಹೂರ್ತ ತಿಳ್ಕೊಳಿ, ಆರೋಗ್ಯಕ್ಕಾಗಿ ಲಲಿತಾರಾಧನೆ ಮಾಡಿ

ಅಖಂಡ ಜ್ಯೋತಿ (Light): ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿಸುವುದು ಅಗತ್ಯ. ಮೊದಲ ದಿನ ಹಚ್ಚಿದ ದೀಪವನ್ನು ವಿಜಯದಶಮಿಯವರೆಗೂ ಬೆಳಗುವಂತೆ ನೋಡಿಕೊಳ್ಳಿ. ಹಾಗೆಯೇ, ನವರಾತ್ರಿಯ ಎರಡನೇ ದಿನ ಒಂದೊಂದು ದೀಪವನ್ನು ಹೆಚ್ಚಿಸುತ್ತ ಸಾಗಿ. ಅಂದರೆ, 2ನೇ ದಿನ 2 ದೀಪ, 3ನೇ ದಿನ 3 ದೀಪ, 9ನೇ ದಿನಕ್ಕೆ 9 ದೀಪಗಳನ್ನು ಹಚ್ಚಿ. ಮೊದಲ ದಿನ ಹಚ್ಚಿದ ದೀಪವೊಂದೇ ಅಖಂಡವಾಗಿದ್ದರೆ ಸಾಕು. ಈ ರೀತಿಯಲ್ಲಿ ದೇವಿಯನ್ನು 9 ಸ್ವರೂಪಗಳಲ್ಲೂ ಆರಾಧಿಸುವುದರಿಂದ ಸಾಮರ್ಥ್ಯ, ಉತ್ಪಾದಕತೆ (Productivity) ಹೆಚ್ಚುತ್ತದೆ. 
 

Follow Us:
Download App:
  • android
  • ios