Marriage Astrology: ವೈವಾಹಿಕ ಜೀವನ ಚೆನ್ನಾಗಿರಬೇಕೆ? ಇದಕ್ಕಿವೆ ಹಲವು ವೈದಿಕ ಪರಿಹಾರ
ವೈವಾಹಿಕ ಜೀವನ ಸುಖಮಯವಾಗಿರಬೇಕು ಎನ್ನುವುದು ಎಲ್ಲರ ಆಶಯ. ವೈವಾಹಿಕ ಬದುಕು ಯಶಸ್ಸು ಕಾಣಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಮಾರ್ಗೋಪಾಯಗಳನ್ನು ತಿಳಿಸಲಾಗಿದೆ. ಇವುಗಳಿಂದ ದಂಪತಿಯಲ್ಲಿ ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಹೆಚ್ಚಿ ಸಂಬಂಧ ಸದೃಢವಾಗುತ್ತದೆ.

ಮದುವೆ ಪವಿತ್ರ ಬಾಂಧವ್ಯ. ಸಂಗಾತಿಯೊಂದಿಗೆ ಜೀವನ ಕಳೆಯಲು ನಿರ್ಧರಿಸುವ ಹಂತ. ಆದರೆ, ಇಂದಿನ ದಿನಗಳಲ್ಲಿ ಯಾವ್ಯಾವುದೋ ಕಾರಣಗಳಿಂದ ಮದುವೆ ಮುರಿದು ಬೀಳುತ್ತಿದೆ. ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ಮೊದಲ ಕಾರಣ. ಯಾವುದೇ ಸಮಸ್ಯೆ ಇದ್ದರೂ ಮುಕ್ತ ಮನಸ್ಸಿದ್ದು, ಪರಸ್ಪರ ಹೊಂದಾಣಿಕೆ, ಬದಲಾವಣೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇದ್ದರೆ ಎಲ್ಲವನ್ನೂ ಎದುರಿಸಲು ಸಾಧ್ಯ. ಇದು ಸಾಧ್ಯವಾಗದೇ, ಮದುವೆಯಿಂದ ಆಚೆ ಬರಲು ನಿರ್ಧರಿಸಿದರೂ ಅದನ್ನು ಎದುರಿಸುವುದು ಮಾನಸಿಕವಾಗಿ ಯಾತನೆ ನೀಡುವ ಸಂಗತಿ. ಜತೆಗೆ, ಮಕ್ಕಳು, ಮನೆಯವರು ಎನ್ನುವ ಅನೇಕ ಅಡೆತಡೆಗಳು. ಹೀಗಾಗಿ, ಹೇಗೋ ಅದೇ ಸಂಸಾರದಲ್ಲಿ ಬಾಳುವವರು ಬಹಳಷ್ಟು ಜನ. ಆದರೆ, ವೈವಾಹಿಕ ಜೀವನದಲ್ಲಿ ಅತೃಪ್ತಿ ಇರುವುದು ಉತ್ತಮ ಬದುಕಿನ ಲಕ್ಷಣವಲ್ಲ. ವೈವಾಹಿಕ ಜೀವನ ನೆಮ್ಮದಿಯಿಂದ ಕೂಡಿರಬೇಕು. ಹಲವು ಕಷ್ಟಗಳಿದ್ದರೂ ಪರಸ್ಪರರಲ್ಲಿ ಪ್ರೀತಿ-ವಿಶ್ವಾಸ ಇರಬೇಕು. ಯಾರೊಬ್ಬರೂ ಮೇಲಲ್ಲ, ಯಾರೂ ಕೀಳಲ್ಲ ಎನ್ನುವ ಸಮಾನ ಭಾವದೊಂದಿಗೆ ನಡೆದಾಗ ಭಿನ್ನಾಭಿಪ್ರಾಯಗಳಿಗೆ ಕಡಿಮೆ ಆಸ್ಪದವಿರುತ್ತದೆ. ಇಂಥದ್ದೊಂದು ಸುಮಧುರ ಬಾಂಧವ್ಯ ಮೂಡಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಮಾರ್ಗೋಪಾಯಗಳನ್ನು ತಿಳಿಸಲಾಗಿದೆ. ನಿಮ್ಮ ವಿವಾಹ ಯಶಸ್ಸು ಕಾಣಬೇಕೆಂದಿದ್ದರೆ ಇವುಗಳನ್ನು ಅನುಸರಿಸುವುದು ಉತ್ತಮ.
• ಗಣೇಶನ ಪೂಜೆ (Worship of Ganesha)
ವಿಘ್ನಗಳನ್ನು (Obstacles) ನಿವಾರಿಸುವ ದೇವರು ಗಣೇಶ. ಗಣೇಶನ ಪೂಜೆ ಮಾಡುವುದು ವೈವಾಹಿಕ ಜೀವನದಲ್ಲಿ (Married Life) ಸಾಮರಸ್ಯ (Harmony) ಹಾಗೂ ಪ್ರೀತಿ (Love) ಹೆಚ್ಚಲು ಇರುವ ಅತ್ಯುತ್ತಮ ಪರಿಹಾರ. ಗಣೇಶನ ಪ್ರತಿಮೆ ಅಥವಾ ಫೋಟೊ ಇರಿಸಿ ಪೂಜೆ ಮಾಡಬಹುದು. ಅದನ್ನು ಮನೆಯ ಶುಚಿಯಾದ, ಪವಿತ್ರ ಭಾಗದಲ್ಲಿ ಇಡಬೇಕು. ಅಂದರೆ, ದೇವರ ಕೋಣೆಯಲ್ಲಿ. ಗಣಪತಿಗೆ ಗಂಧದ ಕಡ್ಡಿ, ಆರತಿ ಧೂಪ ಬೆಳಗಬೇಕು. ತಾಜಾ ಹೂವುಗಳನ್ನು ಇಟ್ಟು ಪೂಜಿಸುವುದು ಶ್ರೇಯಸ್ಕರ. ಅಂತರಾಳದಿಂದ ಪ್ರಾರ್ಥಿಸಬೇಕು. ದಿನವೂ “ಓಂ ಗಂ ಗಣೇಶಾಯ ನಮಃʼ ಮಂತ್ರವನ್ನು 108 ಬಾರಿ ಪಠಿಸಬೇಕು. ದಂಪತಿ (Couple) ಇಬ್ಬರೂ ಹೀಗೆ ಮಾಡಿದರೆ ವೈವಾಹಿಕ ಜೀವನದಲ್ಲಿ ಧನಾತ್ಮಕತೆ (Positive) ಹೆಚ್ಚುತ್ತದೆ.
ಶಿವ ಪ್ರಿಯ ಸೋಮವಾರ ಈ ಕೆಲಸ ಮಾಡಿ ಸಿಕ್ಕಿಬೀಳ್ಬೇಡಿ
• ರತ್ನ (Gemstone) ಧರಿಸುವುದು
ನಿಮ್ಮ ಕುಂಡಲಿಗೆ ಅನುಗುಣವಾಗಿ ರತ್ನಗಳನ್ನು ಧರಿಸುವುದು ಮತ್ತೊಂದು ಪರಿಹಾರ. ವೈವಾಹಿಕ ಜೀವನಕ್ಕೆ ಅಡೆತಡೆ ನೀಡುವ ಗ್ರಹಗಳ ಸ್ಥಾನ, ಚಲನೆಯಿಂದಾಗುವ ಪರಿಣಾಮಗಳನ್ನು ಇದರಿಂದ ಸಮತೋಲನಗೊಳಿಸಬಹುದು. ಯಾವ್ಯಾವುದೋ ರತ್ನಗಳನ್ನು ಧರಿಸುವುದರಿಂದ ಸಮಸ್ಯೆ (Problem) ಹೆಚ್ಚಾಗಬಹುದು. ತಜ್ಞ ಜ್ಯೋತಿಷಿಗಳ ಸಲಹೆ ಮೇರೆಗೇ ಮಾತ್ರ ರತ್ನ ಧರಿಸಬೇಕು. ಸಂಬಂಧದಲ್ಲಿ ಉಂಟಾಗುವ ಏಳುಬೀಳುಗಳನ್ನು ನಿಭಾಯಿಸಲು, ಪರಸ್ಪರ ಪ್ರೀತಿ-ವಿಶ್ವಾಸ ಹೆಚ್ಚಲು ರತ್ನಗಳಿಂದ ಅನುಕೂಲವಾಗುತ್ತದೆ.
• ಶಿವಮಂತ್ರ ಪಠಣ (Shiva Mantra)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಿವ ದೇವರು ನಕಾರಾತ್ಮಕ ಶಕ್ತಿಗಳನ್ನು (Negative Energy) ಹೊಡೆದೋಡಿಸುವಲ್ಲಿ ಅತಿ ಪ್ರಬಲ. ಶಿವ ಮಂತ್ರವನ್ನು ಪಠಣ ಮಾಡುವುದರಿಂದ, ಏನೇನೋ ಅಡೆತಡೆಗಳು ಉಂಟಾಗುತ್ತಿದ್ದರೆ ನಿವಾರಣೆಯಾಗುತ್ತವೆ. ನಕಾರಾತ್ಮಕತೆ, ತಪ್ಪು ತಿಳಿವಳಿಕೆ ದೂರವಾಗುತ್ತದೆ. “ಓಂ ನಮಃ ಶಿವಾಯʼ ಎನ್ನುವ ಶಿವ ಮಂತ್ರವನ್ನು ದಿನವೂ ಪಠಿಸಬೇಕು. ಮನೆಯ ಸ್ವಚ್ಛ, ಶಾಂತವಾದ ಸ್ಥಳದಲ್ಲಿ ಗಂಧದ ಕಡ್ಡಿ ಬೆಳಗಿ, ಆರಾಮಾಗಿ ಕುಳಿತು, ಕಣ್ಣುಗಳನ್ನು ಮುಚ್ಚಿ, 108 ಬಾರಿ ಶಿವ ಮಂತ್ರವನ್ನು ಜಪಿಸಬೇಕು. ಜತೆಗೇ, ನಿಮ್ಮ ವೈವಾಹಿಕ ಜೀವನ ಸುಖಮಯವಾಗುತ್ತಿದೆ, ಸಾಮರಸ್ಯ ಮೂಡುತ್ತಿದೆ ಎಂದು ಮನದಲ್ಲೇ ಚಿತ್ರೀಕರಿಸಿಕೊಳ್ಳಬೇಕು (Visualise) ಮಾಡಬೇಕು.
• ಅಶ್ವತ್ಥ ವೃಕ್ಷಕ್ಕೆ (Peepal Tree) ನೀರು
ವಿಷ್ಣು ದೇವರಿಗೆ (Lord Vishnu) ಅತಿ ಪ್ರಿಯವಾದ ವೃಕ್ಷ ಅಶ್ವತ್ಥ. ಇದು ದೀರ್ಘಾಯುಷ್ಯ ಮತ್ತು ಅಭಿವೃದ್ಧಿಯ ಪ್ರತೀಕ. ಈ ವೃಕ್ಷಕ್ಕೆ ದಿನವೂ ನೀರನ್ನು ಎರೆಯುವುದು ಅತ್ಯಂತ ಹಳೆಯ (Old) ಪದ್ಧತಿ. ಇದರಿಂದ ವೈವಾಹಿಕ ಜೀವನ ಸದೃಢವಾಗುತ್ತದೆ.
ಸೂರ್ಯನ ಅನುಗ್ರಹದಿಂದ ಈ ರಾಶಿಯವರಿಗೆ ಅದೃಷ್ಟ & ಯಶಸ್ಸು
• ಜತೆಯಾಗಿ ರಾಮಾಯಣ ಓದಿರಿ (Ramayana Reading)
ಜತೆಯಾಗಿ ರಾಮಾಯಣ ಓದುವುದರಿಂದ ಪರಸ್ಪರ ಹೆಚ್ಚು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಪ್ರೀತಿ, ಬದ್ಧತೆ (Commitment) ಮತ್ತು ನಂಬಿಕೆಯ ಮೌಲ್ಯಯುತ ಪಾಠ ದೊರೆಯುತ್ತದೆ. ದಿನವೂ ನಿರ್ದಿಷ್ಟ ಸಮಯದಲ್ಲಿ ಕುಳಿತು, ಪರಸ್ಪರ ರಾಮಾಯಣದ ಬಗ್ಗೆಯೇ ಚರ್ಚಿಸುತ್ತ ಅಧ್ಯಾಯಗಳನ್ನು ಓದುವುದು ಉತ್ತಮ ಅಭ್ಯಾಸ.