Asianet Suvarna News Asianet Suvarna News

ಶಿವ ಪ್ರಿಯ ಸೋಮವಾರ ಈ ಕೆಲಸ ಮಾಡಿ ಸಿಕ್ಕಿಬೀಳ್ಬೇಡಿ

 ಸೋಮವಾರ ದೇವಾಧಿದೇವ ಶಿವನಿಗೆ ಅರ್ಪಿತವಾಗಿದೆ. ಈ ದಿನ ಭಕ್ತರು ಮಾಡುವ ಪ್ರತಿಯೊಂದು ಕೆಲಸವೂ ಮಹತ್ವ ಪಡೆಯುತ್ತದೆ. ಈಶ್ವರನ ಕೃಪೆ ಸದಾ ನಿಮ್ಮ ಮೇಲಿರಬೇಕು ಎಂದಾದ್ರೆ ನೀವು ಸೋಮವಾರ ಎಚ್ಚರಿಕೆ ಹೆಜ್ಜೆ ಇಡಬೇಕು. 

Never Do These Work On Monday Otherwise Lord Shiva Angry roo
Author
First Published Sep 25, 2023, 12:51 PM IST

ಬ್ರಹ್ಮಾಂಡದ ಸೃಷ್ಟಿಗೆ ಮೊದಲು ಶಿವ ಮಾತ್ರ ಅಸ್ತಿತ್ವದಲ್ಲಿದ್ದನು ಎಂಬ  ಧಾರ್ಮಿಕ ನಂಬಿಕೆ ನಮ್ಮಲ್ಲಿದೆ. ಶಿವನನ್ನು ದೇವಾಧಿದೇವ ಎಂದು ಕರೆಯಲಾಗುತ್ತದೆ. ಬ್ರಹ್ಮನ ರೂಪದಲ್ಲಿ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿ, ವಿಷ್ಣುವಿನ ಅವತಾರದಲ್ಲಿ ಇದನ್ನೆಲ್ಲ ನೋಡಿ, ರುದ್ರನ ರೂಪದಲ್ಲಿ ನಾಶಪಡಿಸುವವನೇ ಶಿವ. 

ಹಿಂದೂ ಧರ್ಮ (Hinduism) ದಲ್ಲಿ ಪೂಜಿಸಲ್ಪಡುವ ಕೋಟ್ಯಾಂತರ ದೇವಾನುದೇವತೆಗಳಲ್ಲಿ ಶಿವ (Shiva) ಪ್ರಮುಖ ಸ್ಥಾನ ಪಡೆದಿದ್ದಾನೆ. ಮಹಾದೇವನನ್ನು ನಾನಾ ಹೆಸರುಗಳಿಂದ ಭಕ್ತರು ಪೂಜೆ ಮಾಡ್ತಾರೆ. ಜಟಿಲ ಸಮಸ್ಯೆಗಳಿಗೂ ಪರಿಹಾರ ನೀಡಿ, ಕಷ್ಟಗಳನ್ನು ಪರಿಹರಿಸಬಲ್ಲ ದೇವರೆಂದ್ರೆ ಶಿವ ಎಂದು ನಂಬಲಾಗಿದೆ. ತನ್ನನ್ನು ಭಕ್ತಿಯಿಂದ ಪ್ರಾರ್ಥನೆ (Prayer) ಮಾಡುವ ಯಾವುದೇ ವ್ಯಕ್ತಿಗೂ ಈಶ್ವರ ಒಲಿಯಬಲ್ಲ. ಭಕ್ತರು  ಕೇಳಿದ ವರವನ್ನು ನೀಡಬಲ್ಲ. ಶಿವನನ್ನು ಒಲಿಸಿಕೊಳ್ಳಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಶಿವನ ಪೂಜೆ, ಉಪವಾಸ, ಆರಾಧನೆ, ಮಂತ್ರ ಪಠಣೆ ಹೀಗೆ ಅನೇಕ ವಿಧಗಳಲ್ಲಿ ಶಿವನನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. 

ಸೂರ್ಯನ ಅನುಗ್ರಹದಿಂದ ಈ ರಾಶಿಯವರಿಗೆ ಅದೃಷ್ಟ & ಯಶಸ್ಸು

ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಸೋಮವಾರವನ್ನು ಈಶ್ವರನಿಗೆ ಅರ್ಪಿಸಲಾಗಿದೆ. ಸೋಮವಾರವನ್ನು ಪ್ರೀತಿಸುವ ಶಿವನಿಗೆ ಆ ದಿನ ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ಈ ದಿನವನ್ನು ಚಂದ್ರದೇವನಿಗೂ ಅರ್ಪಿಸಲಾಗಿದೆ. ಶಿವನ ಕೃಪೆಗೆ ಪಾತ್ರರಾಗಬೇಕು, ನೆಚ್ಚಿನ ವರ ಪಡೆಯಬೇಕು ಎನ್ನುವ ಭಕ್ತರು, ಜಾತಕದಲ್ಲಿರುವ ದೋಷ ನಿವಾರಣೆಯಾಗಿ, ಚಂದ್ರನ ಆಶೀರ್ವಾದ ಬೇಕು ಎನ್ನುವ ಭಕ್ತರು ಸೋಮವಾರ ಕೆಲ ಕೆಲಸಗಳ ಬಗ್ಗೆ ಗಮನ ಹರಿಸಬೇಕು.

ಸೋಮವಾರ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ :

• ರಾಹುಕಾಲ ನೋಡಿ ಹೊರಡಿ: ಸೋಮವಾರ ಬೆಳಿಗ್ಗೆ 7 ಗಂಟೆ 30 ನಿಮಿಷದಿಂದ 9 ಗಂಟೆಯವರೆಗೆ ರಾಹುಕಾಲ ಇರುತ್ತದೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಅಥವಾ ಪ್ರಯಾಣ ಇತ್ಯಾದಿಗಳನ್ನು ಮಾಡಬಾರದು.

ಜಾತಕದಲ್ಲಿನ ಈ ಐದು ದೋಷ ಭಾರೀ ಕೆಟ್ಟದು, ಜೀವನದಲ್ಲಿ ಬರೀ ದುಃಖ

• ಈ ದಿಕ್ಕಿಗೆ ಪ್ರಯಾಣ ಬೆಳೆಸಬೇಡಿ: ನೀವು ಯಾವ ವಾರ ಯಾವ ದಿಕ್ಕಿನಲ್ಲಿ ಪ್ರಯಾಣ ಬೆಳೆಸಬೇಕು ಎಂಬುದನ್ನು ಕೂಡ ಪುರಾಣಗಳಲ್ಲಿ ಹೇಳಲಾಗಿದೆ. ಸೋಮವಾರದಂದು ಉತ್ತರ, ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ಸೋಮವಾರದಂದು ದಿಶಾಸುಲ್ ವಿಶೇಷವಾಗಿ ಪೂರ್ವ ದಿಕ್ಕಿನಲ್ಲಿ ಸಂಭವಿಸುತ್ತದೆ. ದಿಶಾಶೂಲದಲ್ಲಿ ಪ್ರಯಾಣ ಮಾಡುವುದರಿಂದ ಕೆಲಸದಲ್ಲಿ ವೈಫಲ್ಯ ಅಥವಾ ಅಶುಭ ಘಟನೆ ನಡೆಯುತ್ತದೆ. ಸೋಮವಾರ ನೀವು ಈ ದಿಕ್ಕಿನಲ್ಲಿ ಪ್ರಯಾಣಿಸುವುದು ಅನಿವಾರ್ಯ ಎಂದಾಗ ಒಂದು ಉಪಾಯ ಮಾಡಿ. ಮನೆಯಿಂದ ಹೊರಡುವ ಮೊದಲು  ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿ ನಂತರ ಹೊರಡಿ. ಇದ್ರ ಜೊತೆ ಮನೆಯಿಂದ ಹೊರಬರುವ ಮೊದಲು ಐದು ಹೆಜ್ಜೆ ಹಿಂದಕ್ಕೆ ಇರಿಸಿ ನಂತ್ರ ಹೊರಡಿ.

• ಶನಿಯ ಈ ಕೆಲಸ ಮಾಡಬೇಡಿ: ಸೋಮವಾರ ಕೆಲ ಆಹಾರ ಸೇವನೆಯನ್ನು ತ್ಯಜಿಸಬೇಕು. ವಿಶೇಷವಾಗಿ ಶನಿದೇವನಿಗೆ ಸಂಬಂಧಿಸಿದ ಬದನೆ ಕಾಯಿ, ಹಲಸಿನ ಕಾಯಿ, ಸಾಸಿವೆ, ಕಪ್ಪು ಎಳ್ಳು, ಉದ್ದಿನಬೇಳೆಯನ್ನು ತಿನ್ನಬಾರದು. ಹಾಗೆಯೇ ಈ ದಿನ ಶನಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಬೇಡಿ.

• ಈ ವಸ್ತುಗಳ ದಾನ ಬೇಡ: ನಿಮ್ಮ ಜಾತಕದಲ್ಲಿ ಚಂದ್ರ ದೋಷವಿದ್ದರೆ ನೀವು ಕೆಲ ವಸ್ತುಗಳನ್ನು ಸೋಮವಾರ ಅಪ್ಪಿತಪ್ಪಿಯೂ ದಾನ ಮಾಡಬಾರದು. ನೀವು ಚಂದ್ರನ ದೋಷದಿಂದ ಬಳಲುತ್ತಿದ್ದರೆ ಸಕ್ಕರೆ, ಹಾಲು, ಮೊಸರು, ಬಿಳಿ ಬಟ್ಟೆ ಮುಂತಾದ ಬಿಳಿ ವಸ್ತುಗಳನ್ನು ಸೋಮವಾರ ಮರೆತೂ ದಾನ ಮಾಡಬೇಡಿ. ಇದ್ರಿಂದ ದೋಷ ಉಲ್ಬಣಿಸಬಹುದು. ಸೋಮವಾರ ತಾಯಿಗೆ ಅವಮಾನ ಮಾಡುವಂತಹ ಯಾವುದೇ ಕೆಲಸವನ್ನು ನೀವು ಮಾಡಬಾರದು.
 

Follow Us:
Download App:
  • android
  • ios