Asianet Suvarna News Asianet Suvarna News

Feng Shui ಪ್ರಕಾರ ಅವಿವಾಹಿತರ ರೂಮ್ ಹೇಗಿರ್ಬೇಕು ಗೊತ್ತಾ?

ದಾಂಪತ್ಯ ಸರಿಯಾದ ಹಾದಿಯಲ್ಲಿ ಸಾಗ್ಬೇಕು ಎನ್ನುವ ಕಾರಣಕ್ಕೆ ದಂಪತಿಗೆ ವಾಸ್ತು ಟಿಪ್ಸ್ ಫಾಲೋ ಮಾಡುವಂತೆ ಹೇಳ್ತೇವೆ. ಆದ್ರೆ ಬರೀ ದಂಪತಿ ಮಾತ್ರವಲ್ಲ ಅವಿವಾಹಿತರು ಕೂಡ ವಾಸ್ತು ಟಿಪ್ಸ್ ಪಾಲನೆ ಮಾಡ್ಬೇಕು. ಅವರ ಮುಂದಿನ ವಿವಾಹಿತ ಜೀವನ ಸುಖವಾಗಿರ್ಬೇಕೆಂದ್ರೆ ಈಗ ರೂಮ್ ಸರಿ ಇರ್ಬೇಕು.
 

Feng Shui Tips Unmarried People
Author
Bangalore, First Published Jun 13, 2022, 1:52 PM IST

ಚೀನೀ ವಾಸ್ತು ಶಾಸ್ತ್ರ ಫೆಂಗ್ ಶೂಯಿ (Feng Shui) ಯಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನುಷ್ಯನ ಜೀವನ (Life) ಹೇಗಿರಬೇಕು? ಸುಖ, (Happy) ಸಂತೋಷದಿಂದ ಕೂಡಿರಲು ಜನರು ಏನು ಮಾಡ್ಬೇಕು ಎಂಬೆಲ್ಲ ಸಂಗತಿಯನ್ನು ಇದ್ರಲ್ಲಿ ಹೇಳಲಾಗಿದೆ. ಮನೆ (Home) ಯಲ್ಲಿ ವಸ್ತುಗಳು ಎಲ್ಲಿರಬೇಕು ಎಂಬುದ್ರಿಂದ ಹಿಡಿದು ಕಚೇರಿ ವಾಸ್ತು ಬಗ್ಗೆಯೂ ಇದ್ರಲ್ಲಿ ಹೇಳಲಾಗಿದೆ. ಫೆಂಗ್ ಶೂಯಿಯಲ್ಲಿ ಮಲಗುವ ರೂಮ್ (bedroom ) ಬಗ್ಗೆ ಮುಖ್ಯವಾದ ವಿಷಯಗಳನ್ನು  ಹೇಳಲಾಗಿದೆ. ಫೆಂಗ್ ಶೂಯಿಯಲ್ಲಿ ಬರೀ ದಂಪತಿ ಮಲಗುವ ಕೋಣೆ ಮಾತ್ರವಲ್ಲ ಅವಿವಾಹಿತರು ಮಲಗುವ ಕೋಣೆ ಹೇಗಿರಬೇಕು ಎಂಬುದನ್ನೂ ಹೇಳಲಾಗಿದೆ. ಅವಿವಾಹಿತರು ಮಲಗುವ ಕೋಣೆಯಲ್ಲಿ ಎಲ್ಲ ವಸ್ತುಗಳನ್ನು ಇಡಬಾರದು. ಅದು ಅವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅವರ ಸಂತೋಷ, ಸಮೃದ್ಧಿಗೆ ಅದು ಹಾನಿಯುಂಟು ಮಾಡುತ್ತದೆ. ಮಲಗುವ ಕೋಣೆಯಲ್ಲಿಡುವ ಕೆಲ ವಸ್ತುಗಳು  ಅವರ ಪ್ರೇಮ ಜೀವನ ಮತ್ತು ಮುಂದಿನ ವೈವಾಹಿಕ ಜೀವನಕ್ಕೆ  ತೊಂದರೆ ತರಬಹುದು. ಇಂದು ನಾವು ಫೆಂಗ್ ಶೂಯಿ ಪ್ರಕಾರ, ಅವಿವಾಹಿತರು ತಮ್ಮ ಕೋಣೆಯಲ್ಲಿ ಯಾವ ವಸ್ತುವನ್ನು ಇಡಬಾರದು ಎಂಬುದನ್ನು ಹೇಳ್ತೇವೆ. 

ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬಾರದು : 

ಟಿವಿ- ಕಂಪ್ಯೂಟರ್ : ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಟಿವಿ-ಕಂಪ್ಯೂಟರ್ ಅನ್ನು ಇಡಬಾರದು. ಇದು ಅವರ ಜೀವನದಲ್ಲಿ ತಪ್ಪು ತಿಳುವಳಿಕೆ ಕಾರಣವಾಗುತ್ತದೆ. ಹಾಗೆಯೇ ಸಂವಹನದ ಕೊರತೆಯನ್ನು ಉಂಟುಮಾಡಬಹುದು. ಇದಲ್ಲದೆ ಅವರ ಪ್ರೀತಿಯ ಜೀವನದಲ್ಲಿ ತೊಂದರೆಯುಂಟು ಮಾಡುವ ಸಾಧ್ಯತೆಯಿರುತ್ತದೆ.

ಈ ಚಿತ್ರ  ಬೇಡ : ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ನದಿ, ಕೊಳ, ಜಲಪಾತ ಮುಂತಾದ ನೀರಿಗೆ ಸಂಬಂಧಿಸಿದ ಯಾವುದೇ ಚಿತ್ರಗಳನ್ನು ಹಾಕಬಾರದು. ಹಾಗೆ ಮಾಡುವುದರಿಂದ ಅವರ ದಾಂಪತ್ಯದಲ್ಲಿ ಸಮಸ್ಯೆಗಳು ಉಂಟಾಗಬಹುದು.

ದಿರಿಸು ಖರೀದಿಸೋ ದಿನದಿಂದ ಧರಿಸೋ ತನ್ಕ Vastu ಏನನ್ನುತ್ತೆ ಕೇಳಿ..

ಇಂಥ ಕೋಣೆ ಬೇಡ : ಮಲಗುವ ಕೋಣೆಯಲ್ಲಿ ವಿಭಜನೆಯಾಗಿದ್ದರೆ ಅಥವಾ  ಕೋಣೆಯ ಮಧ್ಯದಲ್ಲಿ ಕಂಬಗಳಿದ್ದರೆ ಆ ಕೋಣೆಯಲ್ಲಿ ಮಲಗಬೇಡಿ. ಇದು  ಮದುವೆಗೆ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಮದುವೆ ತಡವಾಗಲು ಇದೂ ಕಾರಣವಾಗಬಹುದು.

ಹಾಸಿಗೆ : ಅವಿವಾಹಿತರು 2 ಹಾಸಿಗೆಯ ಮೇಲೆ ಮಲಗಬಾರದು. ಇದು ಅವರ ಜೀವನದಲ್ಲಿ ನಕಾರಾತ್ಮಕತೆ ತರಲು ಕಾರಣವಾಗುತ್ತದೆ. ಪ್ರೇಮ ಜೀವನದಲ್ಲಿ ಸಮಸ್ಯೆ ಸೃಷ್ಟಿಸುತ್ತದೆ. ಅವಿವಾಹಿತರು ಯಾವಾಗ್ಲೂ ಒಂದೇ ಹಾಸಿಗೆ ಮೇಲೆ ಮಲಗಬೇಕು. 
    
ಬಾತ್ ರೂಮ್ :  ಅವಿವಾಹಿತರು ಮಲಗುವ ಕೋಣೆಯಲ್ಲಿ ಟಾಯ್ಲೆಟ್-ವಾಶ್‌ರೂಮ್ ಅಟ್ಯಾಚ್ ಆಗಿದ್ದರೆ, ಅದರ ಬಾಗಿಲು ಯಾವಾಗಲೂ ಮುಚ್ಚಿರುವಂತೆ ನೋಡ್ಕೊಳ್ಳಿ. ವಿಶೇಷವಾಗಿ ಶೌಚಾಲಯದ ಬಾಗಿಲು ಹಾಸಿಗೆಯ ಮುಂದೆ ಇದ್ದರೆ ಆ ಬಾಗಿಲನ್ನು ಯಾವಾಗ್ಲೂ ಹಾಕಿಯೇ ಇರಿ. ಅಟ್ಯಾಚ್ ಬಾತ್ ರೂಮ್ ಇರುವ ರೂಮಿನಲ್ಲಿ ಮಲಗುವುದು ಒಳ್ಳೆಯದಲ್ಲ. ಅನಿವಾರ್ಯವಾದಾಗ ಅದ್ರ ಬಾಗಿಲು ತೆಗೆಯದಿರುವುದೇ ಒಳ್ಳೆಯದು.   

Zodiac Sign: ಈ ರಾಶಿಗಳ ಜನ ಸಂಗಾತಿಯನ್ನ ಕೊಂಕಿಲ್ಲದೆ ಪ್ರೀತಿಸ್ತಾರೆ

ಕಿಟಕಿ : ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಹಾಕುವ ಹಾಸಿಗೆ ಬಗ್ಗೆಯೂ ಹೆಚ್ಚಿನ ಗಮನ ನೀಡ್ಬೇಕು. ನೀಟಾಗಿ ಕಾಣಲಿ ಎನ್ನುವ ಕಾರಣಕ್ಕೆ ಹಾಸಿಗೆ ಮೂಲೆಯನ್ನು ಯಾವುದೇ ಕಿಟಕಿ ಅಥವಾ ಗೋಡೆಗೆ ಅಂಟಿಕೊಂಡಿರುವಂತೆ ಹಾಕುತ್ತೇವೆ. ಆದ್ರೆ ಹಾಗೆ ಮಾಡುವುದು ಒಳ್ಳೆಯದಲ್ಲ.  ಹಾಸಿಗೆ ಯಾವಾಗ್ಲೂ ಗೋಡೆ ಅಥವಾ ಕಿಟಕಿಯಿಂದ ಸ್ವಲ್ಪ ದೂರದಲ್ಲಿರಬೇಕು. 

ಕನ್ನಡಿ : ಅವಿವಾಹಿತರು ಮಾತ್ರವಲ್ಲ ವಿವಾಹಿತರು ಕೂಡ ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಬೇಕು. ಅದರಲ್ಲೂ ವಿಶೇಷವಾಗಿ ಅವಿವಾಹಿತರು ತಮ್ಮ ಮಲಗುವ ಕೋಣೆಯಲ್ಲಿ ಕನ್ನಡಿ ಹಾಕಬಾರದು. ಒಂದ್ವೇಳೆ ಕನ್ನಡಿಯಿದ್ದರೆ ಅದನ್ನು ಮುಚ್ಚಿಡುವುದ ಒಳ್ಳೆಯದು. ಕನ್ನಡಿಯನ್ನು ಪರದೆ ಅಥವಾ ಬಟ್ಟೆಯಿಂದ ಸದಾ ಮುಚ್ಚಿಟ್ಟರೆ ಒಳಿತು. 
 

Follow Us:
Download App:
  • android
  • ios