February Horoscope 2023: ಫೆಬ್ರುವರಿ ತಿಂಗಳಲ್ಲಿ ಈ ರಾಶಿಗಳಿಗೆ ಸಂಕಷ್ಟ!

ತಿಂಗಳು ಬದಲಾಗ್ತಿದ್ದಂತೆ ಜನರು ಈ ತಿಂಗಳು ಹೇಗಿರುತ್ತೆ ಎಂದು ತಿಳಿಯಲು ಇಷ್ಟಡ್ತಾರೆ. ಕೆಲವರು ತಿಂಗಳ ಭವಿಷ್ಯವನ್ನು ಓದಿ ಮೊದಲೇ ಎಚ್ಚರಿಕೆ ತೆಗೆದುಕೊಳ್ತಾರೆ. ಫೆಬ್ರವರಿಯಲ್ಲಿ ಯಾವ ರಾಶಿಯ ಜನರು ಶುಭಕ್ಕಿಂತ ಹೆಚ್ಚು ಅಶುಭ ಘಟನೆ ಎದುರಿಸಬೇಕಾಗುತ್ತೆ ಎಂಬುದು ಇಲ್ಲಿದೆ. 

February 2023 Astro Remedies For Zodiac Signs In Trouble

ಹೊಸ ವರ್ಷ 2023 ಶುರುವಾಗಿ ಆಗ್ಲೇ ಒಂದು ತಿಂಗಳು ಕಳಿತಿದೆ. ಹೊಸ ವರ್ಷದ ಮೊದಲ ತಿಂಗಳು ಕೆಲವರಿಗೆ ಸಂತೋಷ ನೀಡಿದ್ರೆ ಮತ್ತೆ ಕೆಲವರಿಗೆ ದುಃಖ ನೀಡಿರಬಹುದು. ಮುಂದಿನ ತಿಂಗಳು ಫೆಬ್ರವರಿ ಹೇಗಿರಲಿದೆ ಎಂಬುದನ್ನು ತಿಳಿಯಲು ಅನೇಕರು ಕುತೂಹಲದಲ್ಲಿರುತ್ತಾರೆ. ಫೆಬ್ರವರಿಯಲ್ಲಿ ಕೆಲ ರಾಶಿಯವರಿಗೆ ಶುಭ ಫಲ ಸಿಕ್ಕಿದ್ರೆ ಮತ್ತೆ ಕೆಲ ರಾಶಿಯವರು ಸಣ್ಣಪುಟ್ಟ ಸಮಸ್ಯೆ ಎದುರಿಸಲಿದ್ದಾರೆ. ನಾವಿಂದು ಆರ್ಥಿಕ ಸಮಸ್ಯೆ, ಅನಾರೋಗ್ಯ, ಕೌಟುಂಬಿಕ ಕಲಹ ಸೇರಿದಂತೆ ಅನೇಕ ಸಮಸ್ಯೆಗಳನ್ನು ಫೆಬ್ರವರಿಯಲ್ಲಿ ಎದುರಿಸುವ ರಾಶಿ ಯಾವುದು ಎಂಬುದನ್ನು ನಿಮಗೆ ಹೇಳ್ತೆವೆ.

ಮಿಥುನ (Gemini) ರಾಶಿ : ಮಿಥುನ ರಾಶಿಯವರು ಫೆಬ್ರವರಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ (Finance) ಮುಗ್ಗಟ್ಟು ಇವರನ್ನು ಕಾಡಬಹುದು. ವ್ಯಾಪಾರಸ್ಥರು (Businessman) ಈ ತಿಂಗಳು ಜಾಗರೂಕರಾಗಿರಬೇಕು. ಕೆಲವೊಂದು ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಖರ್ಚು ಹೆಚ್ಚಾಗುವ ಕಾರಣ, ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಅನಾರೋಗ್ಯ (illness) ಕೂಡ ನಿಮ್ಮನ್ನು ಮುತ್ತಿಕೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ ತಿಂಗಳ ಮಧ್ಯಭಾಗ ಸ್ವಲ್ಪ ಉಸಿರಾಡಲು ಅವಕಾಶ ಸಿಗುತ್ತದೆ. ಪರಿಹಾರ – ವಿಷ್ಣು (Vishnu) ಸಹಸ್ತ್ರನಾಮವನ್ನು ನಿಯಮಿತವಾಗಿ ಪಠಿಸಿ ಮತ್ತು ಗುರುವಾರದಂದು ಬಡವರಿಗೆ ಆಹಾರವನ್ನು ನೀಡಿ.

ಕರ್ಕ (Cancer) ರಾಶಿ : ವೃತ್ತಿ (career) ಮತ್ತು ಉದ್ಯೋಗದಲ್ಲಿ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಯಿದೆ.  ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಾಗದೆ ಹೋಗ್ಬಬಹುದು. ಇದ್ರಿಂದ ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರಾಗುತ್ತದೆ. ಮಾನಸಿಕ ಒತ್ತಡ ಕಾಡುತ್ತದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಆರೋಗ್ಯ ನಿರ್ಲಕ್ಷ್ಯ ಮಾಡ್ಬೇಡಿ. ಪರಿಹಾರ - ಹನುಮಾನ್ ಚಾಲೀಸಾ ಪಠಿಸಬೇಕು. ನಿಯಮಿತವಾಗಿ ಹನುಮಾನ್ ಚಾಲೀಸಾ ಪಠಿಸಲು ಸಾಧ್ಯವಿಲ್ಲ ಎನ್ನುವವರು ಮಂಗಳವಾರ ಮತ್ತು ಶನಿವಾರ ತಪ್ಪದೆ ಓದಿ. 

ಸಿಂಹ ರಾಶಿ : ಫೆಬ್ರವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಮಿಶ್ರ ಫಲ ಸಿಗುತ್ತದೆ. ವೃತ್ತಿಯಲ್ಲಿ ಕೆಲ ಸಮಸ್ಯೆ ಎದುರಾಗುತ್ತದೆ. ಆರೋಗ್ಯ ಹದಗೆಡುವ ಜೊತೆಗೆ ಸಂಬಂಧ ಹಾಳಾಗುವ ಸಂಭವವಿದೆ. ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ನಷ್ಟ ಕಾಡಬಹುದು. ಹಾಗಾಗಿ ಉಳಿತಾಯ ಮಾಡಲು ಒತ್ತು ನೀಡುವುದು ಒಳ್ಳೆಯದು. ಪರಿಹಾರ -  ಸೂರ್ಯನನ್ನು ನಿಯಮಿತವಾಗಿ ಪೂಜಿಸಬೇಕು. ಕುಂಕುಮ ಮಿಶ್ರಿತ ನೀರನ್ನು ಸೂರ್ಯನಿಗೆ ಅರ್ಪಿಸಿ. ಭಾನುವಾರ ಆದಿತ್ಯ ಹೃದಯ ಸ್ರೋತವನ್ನು ಪಠಿಸೋದ್ರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ತುಲಾ ರಾಶಿ : ತುಲಾ ರಾಶಿಯವರಿಗೆ ಕೂಡ ಶುಭ ಹಾಗೂ ಅಶುಭ ಎರಡೂ ಫಲಗಳು ಸಿಗಲಿವೆ. ಈ ರಾಶಿಯವರು ವೃತ್ತಿ ಬಗ್ಗೆ ಹೆಚ್ಚು ಗಮನಹರಿಸುವ ಅಗತ್ಯವಿದೆ. ಕೆಲವು ನಿರ್ದಿಷ್ಟ ಕಾರಣಗಳಿಂದ ಒತ್ತಡಕ್ಕೆ ಒಳಗಾಗಬಹುದು. ಆದ್ರೆ ಅದ್ರಿಂದ ಹೊರಬರದೆ ಹೋದ್ರೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ವ್ಯಾಪಾರಿಗಳಿಗೆ ಸಮಸ್ಯೆ ಕಾಡಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಯೋಗ ಮತ್ತು ಧ್ಯಾನ ಮಾಡಿ. ದಂಪತಿ ಮಧ್ಯೆ ವಿವಾದವಾಗುವ ಸಂಭವವಿದೆ. ಇದ್ರ ಮಧ್ಯೆಯೇ ಕೆಲವರಿಗೆ ಸಣ್ಣಪುಟ್ಟ ಲಾಭ ಕೂಡ ಸಿಗಲಿದೆ.  ಪರಿಹಾರ - ದುರ್ಗಾ ಚಾಲೀಸವನ್ನು ನಿಯಮಿತವಾಗಿ ಪಠಿಸಿ ಮತ್ತು ಶುಕ್ರವಾರದಂದು ಲಕ್ಷ್ಮಿ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಿ. 

ಮಕರ ರಾಶಿ : ಫೆಬ್ರವರಿ ತಿಂಗಳು ಈ ರಾಶಿಯವರಿಗೆ ಕೆಲವು ಏರಿಳಿತವಾಗಲಿದೆ. ವೃತ್ತಿ ಜೀವನದಲ್ಲಿ ಕಾಳಜಿ ವಹಿಸಬೇಕು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಪ್ರಯಾಣದ ಸಾಧ್ಯತೆಯಿದೆ. ಪ್ರಯಾಣದ ವೇಳೆ ಜಾಗರೂಕರಾಗಿರಿ. ಪ್ರೀತಿಯಲ್ಲಿ ಕೂಡ ಸಮಸ್ಯೆಯಾಗುವ ಸಾಧ್ಯತೆಯಿದೆ.  ಪರಿಹಾರ- ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸಬೇಕು.   

Latest Videos
Follow Us:
Download App:
  • android
  • ios