Asianet Suvarna News Asianet Suvarna News

Zodiac Sign and Fear: ಹಣ ಕಳೆದುಕೊಳ್ಳುವ ಭಯವೇ? ಇಲ್ಲಿದೆ ಜನ್ಮರಾಶಿಗೊಂದು ಭಯದ ಗೈಡ್

ನೀವು ಕೆಲವು ಸಂಗತಿಗಳ ಬಗ್ಗೆ ಹೆಚ್ಚಿನ ಭಯ ಆತಂಕಗಳನ್ನು ಹೊಂದಿರುವುದನ್ನು ನೀವೇ ಗಮನಿಸಿರಬಹುದು. ನಿಮ್ಮ ಭಯಗಳು ನಿಮ್ಮ ಜನ್ಮರಾಶಿಯನ್ನು ಹೊಂದಿಕೊಂಡಿರುತ್ತವೆ ಎಂಬುದು ನಿಮಗೆ ಗೊತ್ತೆ?

 

 

Fear of people varies from zodiac signs and few fear of cockroach too
Author
Bengaluru, First Published Nov 17, 2021, 4:38 PM IST

ನಮ್ಮ ಜೀವನದಲ್ಲಿ ಭಯವನ್ನು (Fear) ನಿರಾಕರಿಸಲು ಆಗುವುದಿಲ್ಲ. ನಮ್ಮ ಭಯವನ್ನು ಒಪ್ಪಿಕೊಳ್ಳುವುದು ಮತ್ತು ಅವುಗಳನ್ನು ಜಯಿಸಲು ಒಂದು ಹೆಜ್ಜೆ ಇಡುವುದು ನಿಮ್ಮನ್ನು ಬಲಪಡಿಸುತ್ತದೆ. ನಿಮ್ಮ ದೊಡ್ಡ ಅಭದ್ರತೆಗಳು ಮತ್ತು ಭಯಗಳನ್ನು ನೀವು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಇದರಿಂದ ನೀವು ನಿಧಾನವಾಗಿ ಅವುಗಳನ್ನು ನಿವಾರಿಸಬಹುದು ಮತ್ತು ನಿರ್ಭೀತತೆಯ ಹಾದಿಯನ್ನು ತಲುಪಬಹುದು. ಆದ್ದರಿಂದ, ನಿಮ್ಮ ಭಯವನ್ನು ಗುರುತಿಸಲು ನಿಮಗೆ ಸಹಾಯ ಮಾಡಲು, ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರವಾಗಿ ನೋಡೋಣ.

ಮೇಷ ರಾಶಿ (Aries)
ಈ ರಾಶಿಚಕ್ರ ಚಿಹ್ನೆಯು ಜನರ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವ ದೊಡ್ಡ ಭಯವನ್ನು ಹೊಂದಿದೆ. ಅವರು ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರ ಚಲಾಯಿಸಲು ಬಯಸುತ್ತಾರೆ. ಆದ್ದರಿಂದ ತಮ್ಮ ಮಾತು ಕೇಳದವರ ಭಯವು ಅವರನ್ನು ಹೆಚ್ಚು ಬಾಧಿಸುತ್ತದೆ. ಅವರು ಏಕಾಂಗಿಯಾಗಿ ಇರಲು ಹೆದರುತ್ತಾರೆ.

ವೃಷಭ ರಾಶಿ (Taurus)
ಇವರು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ. ಆದ್ದರಿಂದ ಬಡತನ ರೇಖೆಯ ಕೆಳಗೆ ವಾಸಿಸುವುದು ಅವರನ್ನು ಸಂಪೂರ್ಣವಾಗಿ ಅಲ್ಲಾಡಿಸುತ್ತದೆ. ತಮ್ಮ ಪ್ರೀತಿಪಾತ್ರರಿಗೆ ಒಳ್ಳೆಯ ಜೀವನ ಒದಗಿಸಲು ಸಾಧ್ಯವಾಗದಿರುವುದು ಅವರ ದೊಡ್ಡ ಭಯ. ವೃಷಭ ರಾಶಿಯವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದ್ದರಿಂದ ತಮ್ಮ ಅರ್ಹತೆಗಿಂತ ಕಡಿಮೆಯದ್ದನ್ನು ಪಡೆಯುವುದು ಅವರನ್ನು ನಿರಾಶೆಗೊಳಿಸುತ್ತದೆ.

ಮಿಥುನ ರಾಶಿ (Gemini)
ಇವರು ನೀರಸ ವ್ಯಕ್ತಿಯಾಗಿ ಇರುವುದರ ಬಗ್ಗೆ ಭಯಪಡುತ್ತಾರೆ. ಜೀವನದಲ್ಲಿ ಉತ್ಸಾಹ, ಮೋಜು ಮತ್ತು ಉಲ್ಲಾಸ ಮಾತ್ರ ಇವರಿಗೆ ಜೀವ ತುಂಬುತ್ತದೆ. ಆದರೆ ಹೊಟ್ಟೆಪಾಡಿನ ಕೆಲಸ ಮಾಡಲು, ನೀರಸ ಲೌಕಿಕ ಜೀವನ ನಡೆಸಲು ಅವರನ್ನು ಮೂಲೆಗುಂಪು ಮಾಡಿದರೆ ಅವರು ಅಳುವುದು ಖಚಿತ.

ಕಟಕ ರಾಶಿ (Cancer)
ಇವರು ಯಾವುದೇ ಜಗಳವನ್ನು ಮುಖಾಮುಖಿಯಾಗಿ ಎದುರಿಸಲು ಇಷ್ಟಪಡುವುದಿಲ್ಲ. ವಿಶೇಷವಾಗಿ ಜಗಳಗಳು ಮತ್ತು ವಿವಾದಗಳನ್ನು ಇಷ್ಟಪಡುವುದಿಲ್ಲ. ಇವರು ನೆರಳು ಮತ್ತು ಅಧಿಕಾರವನ್ನು ಪಡೆಯುವ ಭಯವನ್ನು ಹೊಂದಿದ್ದಾರೆ. ಅವರು ಬಹಳಷ್ಟು ಆತಂಕದ ಸಮಸ್ಯೆಗಳನ್ನು ಹೊಂದಿರುತ್ತಾರೆ ಮತ್ತು ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ.

ಸಿಂಹ ರಾಶಿ (Leo)
ಇವರಿಗೆ ನಿರಾಕರಣೆಯ ಭಯ ಹೆಚ್ಚು. ಇವರಿಗೆ, ತಮ್ಮ ಶಕ್ತಿಯನ್ನು ಆಗಾಗ ತೋರಿಸುತ್ತಿರುವುದು ಅತ್ಯಗತ್ಯವಾಗಿ ಕಾಣುತ್ತದೆ. ಇವರು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಮತ್ತು ಬೇರೊಬ್ಬರಿಂದ ಸಾಂತ್ವನ ಪಡೆಯುವುದು, ಪೋಷಣೆ ಮಾಡಿಸಿಕೊಳ್ಳುವುದನ್ನು ತುಂಬಾ ದ್ವೇಷಿಸುತ್ತಾರೆ. ಸ್ವಾವಲಂಬಿಯಲ್ಲದ ಜೀವನವನ್ನು ನಡೆಸಲು ಹೆದರುತ್ತಾರೆ.

ಕನ್ಯಾ ರಾಶಿ (Virgo)
ಇವರು ತಮ್ಮ ಬ್ಯಾಲೆನ್ಸ್ ನಿಯಂತ್ರಣವನ್ನು ಕಳೆದುಕೊಳ್ಳಲು ಭಯಪಡುತ್ತಾರೆ. ಇವರು ಹಣದ ನಷ್ಟದ ನಿರಂತರ ಭಯವನ್ನು ಎದುರಿಸುತ್ತಾರೆ. ಬಡತನದ ಆಲೋಚನೆ ಅವರ ಜೀವನದುದ್ದಕ್ಕೂ ಅವರನ್ನು ಕಾಡುತ್ತದೆ. ಇವರು ತಮ್ಮ ಸಂತೋಷವನ್ನು ಕಸಿದುಕೊಳ್ಳುವ ಆರ್ಥಿಕ ನಿರ್ಬಂಧಗಳೊಂದಿಗೆ ಜೀವನವನ್ನು ನಡೆಸಲು ಹೆದರುತ್ತಾರೆ.

Hindu Wedding Ritual: ಪತಿ-ಪತ್ನಿ ಜೊತೆಯಾಗಿಡುವ ಏಳು ಹೆಜ್ಜೆಗಳ ಅರ್ಥವೇನು?

ತುಲಾ ರಾಶಿ (Libra)
ಇವರು ಕಷ್ಪಪಟ್ಟು ದುಡಿದು ಗಳಿಸಿದ ಹಣವನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ. ಆರಾಮವಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಇವರು ತಮ್ಮ ಕೆಲವು ವಿಷಯವನ್ನು ಹಂಚಿಕೊಳ್ಳಲು ಭಯಪಡುತ್ತಾರೆ. ಇವರು ತಮ್ಮ ವಸ್ತುಗಳನ್ನು ಬಹಳ ವ್ಯವಸ್ಥಿತವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸುತ್ತಾರೆ ಹಾಗೂ ಅವುಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತಾರೆ.

ವೃಶ್ಚಿಕ ರಾಶಿ (Scorpio)
ಇವರು ಎಲ್ಲರ ಮುಂದೆ ಬಹಿರಂಗಗೊಳ್ಳಲು ಭಯಪಡುತ್ತಾರೆ. ಜನರಿಂದ ಹಾನಿಯಾಗದಂತೆ ತಮ್ಮನ್ನು ನಿರ್ವಹಿಸಿಕೊಳ್ಳಲು ಇವರು ಇಷ್ಟಪಡುತ್ತಾರೆ. ಇವರು ನಿಜವಾಗಿಯೂ ಯಾರಿಗೂ ಬೇಗನೆ ತೆರೆದುಕೊಳ್ಳುವುದಿಲ್ಲ. ಇವರು ಹೊಸ ಜನರನ್ನು ಪರಿಚಯಿಸಿಕೊಳ್ಳಲು ಅಂಜುತ್ತಾರೆ. ಏಕೆಂದರೆ ಇವರು ಒಂದು ಸೀಮಿತ ವಲಯದ ಜನರೊಂದಿಗೆ ಇರಲು ಬಯಸುತ್ತಾರೆ.

ಧನು ರಾಶಿ (Sagittarius)
ಇವರು ತುಂಬಾ ಆತಂಕಗೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ವಿವಿಧ ರೀತಿಯ ಫೋಬಿಯಾಗಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ. ಮುಖ್ಯವಾಗಿ ಮುಚ್ಚಿದ ಸ್ಥಳಗಳ ಫೋಬಿಯಾ. ಇವರು ತಮ್ಮ ದೌರ್ಬಲ್ಯಗಳನ್ನು ಬಹಿರಂಗಪಡಿಸಲು ತುಂಬಾ ಹೆದರುತ್ತಾರೆ.

Happiness: ಈ ರಾಶಿಯವರಿಗೆ ಇದೇ ದಾರಿ!

ಮಕರ ರಾಶಿ (Capricorn)
ಇವರು ಹುಟ್ಟು ವಿಜೇತರು. ಹೀಗಾಗಿ ಉನ್ನತ ಸ್ಥಾನವನ್ನು ತಲುಪಿ ಸದಾ ಅಲ್ಲಿಯೇ ಇರಲು ಬಯಸುತ್ತಾರೆ, ಅಲ್ಲಿಂದ ಬೀಳುವ ಬಗ್ಗೆ ಭಯಪಡುತ್ತಾರೆ. ಇವರು ಜನರನ್ನು ಹಾಗೂ ಸ್ಥಾನವನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ ಮತ್ತು ಜನರಿದ್ದಲ್ಲಿ ನಾಚಿಕೆಪಡುತ್ತಾರೆ. ಇವರು ಎಲ್ಲಕ್ಕಿಂತ ಹೆಚ್ಚು ಅಂತರ್ಮುಖಿ ಮತ್ತು ನಾಚಿಕೆ ಸ್ವಭಾವದವರು ಕೂಡ.

ಕುಂಭ ರಾಶಿ (Aquarius)
ಇವರು ಆರಾಮವಾಗಿ ಬದುಕಲು ಬಯಸುತ್ತಾರೆ ಹಾಗೂ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲು ಹೆದರುತ್ತಾರೆ. ಸುಲಭವಾಗಿ, ಸರಳವಾಗಿ ಬದುಕಲು ಇಷ್ಟಪಡುತ್ತಾರೆ. ಇವರ ಕೆಲಸದ ಸ್ಥಳದ ವಿಷಯಕ್ಕೆ ಬಂದಾಗ, ಇವರು ಎರಡನೇ ಸ್ಥಾನದಲ್ಲಿರಲು ಮತ್ತು ತಮ್ಮ ಸಹೋದ್ಯೋಗಿಗೆ ಅಧೀನರಾಗಲು ಹೆದರುತ್ತಾರೆ.

ಮೀನ ರಾಶಿ (Pisces)
ಅವರು ಪ್ರೀತಿಗಾಗಿ ಏನು ಬೇಕಾದರೂ ಮಾಡುವ ನಿಷ್ಠಾವಂತ ಜನರು. ಇವರು ಪ್ರೀತಿಯಲ್ಲಿ ನಿರಾಕರಣೆಯನ್ನು ಎದುರಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಇವರ ಹೃದಯವನ್ನು ಚೂರು ಮಾಡುತ್ತದೆ. ಇವರು ಬಹಳ ಸಂವೇದನಾಶೀಲರು. ಭಾವನೆಗಳ ಬಗ್ಗೆ ರಹಸ್ಯವಾಗಿರುತ್ತಾರೆ. ತಮ್ಮನ್ನು ನಿಯಂತ್ರಿಸುವ ವ್ಯಕ್ತಿಯನ್ನು ಭೇಟಿಯಾಗುವುದು ಇವರ ಕೆಟ್ಟ ದುಃಸ್ವಪ್ನ.

Story of Ahalya: ದೇವೇಂದ್ರನಿಗೆ ಮೈಯೆಲ್ಲಾ ಯೋನಿ! ಯಾಕೆ ಗೊತ್ತೆ?

Follow Us:
Download App:
  • android
  • ios