Asianet Suvarna News Asianet Suvarna News

ಪ್ರತಿ ದಿನ ಬೆಳಗ್ಗೆ ಎದ್ದು ಈ ವಾಸ್ತು ಟಿಪ್ಸ್ ಅನುಸರಿಸಿದರೆ ನಿಮ್ಮ ಮನೆ ತುಂಬಲಿದೆ ಸಂಪತ್ತು!

ಬೆಳಗ್ಗೆ ಎದ್ದು ಕೆಲ ವಾಸ್ತು ಹಾಗೂ ಹಿಂದೂ ಪದ್ಧತಿಗಳನ್ನು ಅನುಸರಿಸಿದರೆ ಮನೆಯಲ್ಲಿ ಸಂಪತ್ತು, ಆದಾಯ ವೃದ್ಧಿಸಲಿದೆ. ಶ್ರೀಮಂತರಾಗಲು ಹಾಗೂ ಆದಾಯ ಮೂಲಗಳನ್ನು ಕಾಪಾಡಿಕೊಳ್ಳಲು ಈ ವಾಸ್ತು ಟಿಪ್ಸ್ ಪ್ರಮುಖವಾಗಿದೆ.

Fallow these hindu vastu tips for double your wealth after wake up at every morning ckm
Author
First Published Sep 12, 2024, 9:05 PM IST | Last Updated Sep 12, 2024, 9:05 PM IST

ಹಿಂದೂ ವಾಸ್ತು ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಪ್ರಮುಖ ವಿಚಾರಗಳಲ್ಲಿ  ವಾಸ್ತು ತಪ್ಪಿದರೆ ಅಪಾಯವೂ ತಪ್ಪಿದ್ದಲ್ಲ. ಸಂಪತ್ತು, ಹಣ, ಆದಾಯದ ಅಧಿದೇವತೆ ಲಕ್ಷ್ಮಿ. ಲಕ್ಷ್ಮಿ ಆರಾಧನೆ, ಪೂಜೆಗಳು ಸರ್ವೆ ಸಾಮಾನ್ಯ. ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾದರೆ ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ ಅನ್ನೋದು ನಂಬಿಕೆ. ಆದಾಯ, ಸಂಪತ್ತು, ಹಣ ಹೆಚ್ಚಿಸಲು ಪ್ರತಿ ದಿನ ಬೆಳಗ್ಗೆ ಎದ್ದು ಕೆಲ ವಾಸ್ತು ಶಾಸ್ತ್ರದ ಸಲಹೆ ಪಾಲಿಸಬೇಕು. ಹೀಗೆ ಮಾಡಿದರೆ ಧನ, ಸಂಪತ್ತು, ಐಶ್ವರ್ಯ ಹೆಚ್ಚಾಗಲಿದೆ. 

ಹಣೆಗೆ ಗಂಧದ ತಿಲಕ ಹಚ್ಚಿಕೊಳ್ಳಿ
ಬೆಳಗ್ಗೆ ಎದ್ದು ಸ್ನಾನ ಮಾಡಿ ಗಂಧದ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ. ದೇವಸ್ಥಾನಗಳಲ್ಲಿ ಹೆಚ್ಚಾಗಿ ಗಂಧದ ತಿಲಕ ನೀಡಲಾಗುತ್ತದೆ. ಈ ತಿಲಕ ಹಣೆಗೆ ಹೆಚ್ಚಿಕೊಂಡರೆ ಲಕ್ಷ್ಮಿ ದೇವಿ ಮನಸಂಪ್ರೀತಳಾಗುತ್ತಾಳೆ ಅನ್ನೋ ಮಾತಿದೆ. ಹಿಂದೂ ಶಾಸ್ತ್ರದ ಪ್ರಕಾರ ಗಂಧದ ತಿಲಕಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

Vastu Shastra : 99ರಷ್ಟು ಮಹಿಳೆಯರು ಮನೆ ಒರೆಸುವಾಗ ಮಾಡ್ತಾರೆ ಈ ತಪ್ಪು

ಮನೆ ಶುಚಿಗೊಳಿಸಿ ರಂಗೋಲಿ ಹಾಕಿ
ಬೆಳಗ್ಗೆ ಎದ್ದ ಬಳಿಕ ಮನೆಯನ್ನು ಶುಚಿಗೊಳಿಸಬೇಕು. ಪ್ರವೇಶದ ದ್ವಾರದಲ್ಲಿ ರಂಗೋಲಿ ಹಾಕುವುದು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ಅನುಕೂಲವಾಗಲಿದೆ. ಮನೆಯ ಪ್ರವೇಶ ದ್ವಾರದ ಬಳಿಯ ರಂಗೋಲಿ ಲಕ್ಷ್ಮಿ ದೇವಿಯನ್ನು ಸ್ವಾಗತಿಸಲಿದೆ. ರಂಗೋಲಿ ಹಾಕಿದ ಮನೆಗೆ ಲಕ್ಷ್ಮಿ ದೇವಿ ಆಗಮಿಸುತ್ತಾಳೆ ಅನ್ನೋದು ನಂಬಿಕೆ ಹಾಗೂ ಪ್ರತೀತಿ. 

ತುಳಸಿ ಗಿಡಕ್ಕೆ ನೀರು ಹಾಕಿ ಪೂಜಿಸಿ
ಲಕ್ಷ್ಮಿ ದೇವಿ ತುಳಸಿಯಲ್ಲಿ ನೆಲೆಸಿದ್ದಾಳೆ ಅನ್ನೋದು ಹಿಂದೂ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ತುಳಸಿ ಗಿಡಕ್ಕೆ ಪ್ರತಿ ದಿನ ಬೆಳಗ್ಗೆ ನೀರು ಹಾಕಿ ಪೂಜಿಸುವುದು ಲಕ್ಷ್ಮಿ ದೇವಿಯನ್ನು ಪೂಜಿಸಿದಂತೆ. ತುಳಸಿ ಗಿಡಕ್ಕೆ ನೀರು ಹಾಕಿ ಪೂಜಿಸುವುದರಿಂದ ಸುಖ ಶಾಂತಿ ಹಾಗೂ ನೆಮ್ಮದಿಯನ್ನೂ ತರಲಿದೆ. ಇದರಿಂದ ಲಕ್ಷ್ಮೀ ದೇವಿ ಕೂಡ ಸಂಪ್ರೀತಳಾಗುತ್ತಾಳೆ.  ಜೊತೆಗೆ ತುಳಸಿ ಗಿಡಕ್ಕೆ ಸುತ್ತುಬರುವುದರಿಂದ ಆರೋಗ್ಯ ಗಣಲಕ್ಷ್ಮಗಳು ಇವೆ.

ಮನೆಯ ಪ್ರವೇಶ ದ್ವಾರದ ಬಳಿ ದೀಪ ಉರಿಸಿ
ಮನೆಯ ಪ್ರವೇಶ ದ್ವಾರದ ಬಳಿ ದೀಪ ಉರಿಸುವುದು ಲಕ್ಷ್ಮಿ ದೇವಿಯನ್ನು ಸ್ವಾಗತ ಮಾಡಿದಂತೆ. ರಂಗೋಲಿ, ದೀಪವಿಟ್ಟ ಮನೆಗೆ ಲಕ್ಷ್ಮಿ ದೇವಿ ಬರುತ್ತಾಳೆ. ಲಕ್ಷ್ಮಿ ದೇವಿಯ ಸ್ವಾಗತಕ್ಕಾಗಿ ದೀಪ ಇಡಲಾಗುತ್ತದೆ. 

ಸೂರ್ಯದೇವನಿಗೆ ನೀರು
ಪ್ರತಿ ದಿನ ಬೆಳಗ್ಗೆ ಸೂರ್ಯದೇವನಿಗೆ ನೀರು ಇಡುವ ಸಂಪ್ರದಾಯ ರೂಢಿ ಮಾಡಿ. ಸಣ್ಣ ಪಾತ್ರೆಯಲ್ಲಿ ಸ್ವಚ್ಚ ನೀರನ್ನು ತೆಗೆದುಕೊಂಡು ಆ ನೀರಿನಲ್ಲಿ ಕೆಂಪು ಹೂವಿನ ದಳಗಳನ್ನು ಹಾಕಿ, ಜೊತೆಗೆ ಸ್ವಲ್ಪ ಅಕ್ಷತೆ ಹಾಕಿ ಸೂರ್ಯದೇವನಿಗೆ ಅರ್ಪಿಸಿದರೆ ನಿಮ್ಮ ಸಂಪತ್ತು ವೃದ್ಧಿಸಲಿದೆ. ಆದಾಯ ಮೂಲಗಳು ಹೆಚ್ಚಾಗಲಿದೆ. 

ಈ ವಾಸ್ತು ಸಲಹೆಗಳನ್ನು ಪ್ರತಿ ದಿನ ಪಾಲಿಸಿದರೆ ಶ್ರೀಮಂತರಾಗಲು, ಸಂಪತ್ತು ವೃದ್ಧಿಸಲು ನೆರವಾಗಲಿದೆ ಎಂದು ಹಿಂದೂ ಶಾಸ್ತ್ರಗಳ ಹೇಳುತ್ತಿದೆ. ಭಕ್ತಿಯಿಂದ ವಾಸ್ತು ಸಲಹೆ ಪಾಲಿಸಿದರೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತೀರಿ.

ಪೂಜೆ ಮಾಡೋವಾಗ ಈ ಸೂಚನೆ ಸಿಕ್ರೆ, ನಿಮ್ಮ ಪೂಜೆ ದೇವರಿಗೆ ತೃಪ್ತಿಯಾಗಿಲ್ಲವೆಂರ್ಥ!

Latest Videos
Follow Us:
Download App:
  • android
  • ios