Asianet Suvarna News Asianet Suvarna News

Zodiac Nature: ತಾಳ್ಮೆ ಇಲ್ಲದ ಈ ರಾಶಿಗಳಿಗೆ ಎಲ್ಲಕ್ಕೂ ಅಸಹನೆ ಹೆಚ್ಚು

ತಾಳ್ಮೆ ಎಲ್ಲರಿಗೂ ಸಿದ್ಧಿಸೋದಲ್ಲ. ಆರ್ಡರ್ ಮಾಡಿದ ವಸ್ತು ಒಂದು ಗಂಟೆ ತಡವಾಗಿ ಬಂದರೆ ಸಿಟ್ಟಾಗುವವರಿದ್ದಾರೆ, ಪತ್ನಿ ಅಡುಗೆ ಮಾಡೋದು 5 ನಿಮಿಷ ತಡವಾದರೆ ಊಟವೇ ಬೇಡವೆಂದು ಕೋಪ ತೋರುವವರುದ್ದಾರೆ. ಹೀಗೆ ತಾಳ್ಮೆಯೇ ಇಲ್ಲದ, ಅಸಹನೆ ಹೆಚ್ಚಿರುವವರು ಸಾಮಾನ್ಯವಾಗಿ ಈ ರಾಶಿಗಳಿಗೆ ಸೇರಿರುತ್ತಾರೆ. 

Extremely impatient zodiac signs as per astrologer skr
Author
First Published Feb 1, 2023, 3:51 PM IST

ನೀವು ಕೆಲಸಕ್ಕೆ ಹೋಗುವ ದಾರಿಯಲ್ಲಿ ಕಾಫಿಗಾಗಿ ಸಾಲಿನಲ್ಲಿ ನಿಲ್ಲುವುದನ್ನು ಅಥವಾ ನೀವು ಹಸಿವಿನಿಂದ ಬಳಲುತ್ತಿರುವಾಗ ಟ್ರಾಫಿಕ್‌ನಲ್ಲಿ ಕುಳಿತು ಕಾಯುವುದನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ, ಅನಿವಾರ್ಯತೆಗಳು ನಮ್ಮನ್ನು ಕಾಯಿಸುತ್ತವೆ. ಕೆಲವರು ಕಾಯುವ ಸಮಯವನ್ನು ಒಪ್ಪಿಕೊಂಡು ಮುಂದುವರಿಯುತ್ತಾರೆ, ಮತ್ತೆ ಕೆಲವರು ಕೋಪದಲ್ಲಿ ಕುದಿಯುತ್ತಾರೆ. ಹೀಗೆ ಕಾಯಬೇಕೆಂದಾಗಲೆಲ್ಲ, ಅಥವಾ ಕೆಲಸ ಬೇಗ ಮುಗಿಯುತ್ತಿಲ್ಲವೆಂದಾಗಲೆಲ್ಲ ಅಸಹನೆ ಪ್ರದರ್ಶಿಸುವವರು, ತಾಳ್ಮೆಯ ತೃಣವನ್ನೂ ಹೊಂದದವರು ಎಲ್ಲದರಿಂದಲೂ ತಕ್ಷಣಕ್ಕೆ ಫಲಿತಾಂಶ, ತೃಪ್ತಿ ಬಯಸುತ್ತಾರೆ. 

ಹೀಗೆ ತಾಳ್ಮೆಗೆಟ್ಟ ಸಂದರ್ಭದಲ್ಲಿ ಕೆಲಸಕ್ಕೆ ರಿಸೈನ್ ಮಾಡಿ ಆಮೇಲೆ ಕೊರಗುವವರ ಸಂಖ್ಯೆ ದೊಡ್ಡದಿದೆ. ತಾಳ್ಮೆಯ ಕೊರತೆಯಿಂದ ಪ್ರೀತಿಯನ್ನು ತೊರೆದು ಮನೆಯವರು ತೋರಿದವರನ್ನು ವಿವಾಹವಾದವರಿದ್ದಾರೆ. ತಾಳ್ಮೆಯ ಕೊರತೆಯಿಂದ ಸಾಧಿಸಬೇಕಾದದ್ದನ್ನು ಅರ್ಧಕ್ಕೇ ಬಿಟ್ಟು ಪಶ್ಚಾತ್ತಾಪ ಪಡುವವರೂ ಇದ್ದಾರೆ. 

ತಾಳ್ಮೆ ಎಂಬುದು ಬಹಳ ದೊಡ್ಡ ಅಸ್ತ್ರ. ಆದರೆ, ಅದನ್ನು ಎಲ್ಲರಿಂದಲೂ ಸಂಪಾದಿಸಲಾಗುವುದಿಲ್ಲ.ತಾಳ್ಮೆಯು ಅನೇಕರು ಸಮಯದೊಂದಿಗೆ ಸಾಧಿಸುವ ಒಂದು ಸದ್ಗುಣವಾಗಿದ್ದರೆ ಕೆಲವರು ಹುಟ್ಟಿನಿಂದಲೇ ಆಶೀರ್ವದಿಸಲ್ಪಟ್ಟಿರುತ್ತಾರೆ. ಅಂದ ಹಾಗೆ ತಾಳ್ಮೆ ಕಡಿಮೆ ಇರುವವರು(Impatient zodiac signs) ಸಾಮಾನ್ಯವಾಗಿ ಯಾವ ರಾಶಿಗಳಿಗೆ ಸೇರಿರುತ್ತಾರೆ ಗೊತ್ತಾ?

ಮೇಷ ರಾಶಿ (Aries)
ಮೇಷ ರಾಶಿಯನ್ನು ಮಂಗಳ ಗ್ರಹವು ಆಳುತ್ತದೆ. ಈ ರಾಶಿಯವರು ಬೆಂಕಿಯ ಸ್ವಭಾವದವರು. ಅವರಲ್ಲಿ ತಾಳ್ಮೆ ಕಡಿಮೆ. ಅವರು ತಮ್ಮದೇ ರೀತಿಯಲ್ಲಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ. ಕ್ರಿಯೆ ಮತ್ತು ಪ್ರಚೋದನೆಯ ಗ್ರಹವಾದ ಮಂಗಳದಿಂದ ಆಳಲ್ಪಡುವ ಮೇಷ ರಾಶಿಯು ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹಿಂತಿರುಗಿ ನೋಡದೆ ಹೊಸ ಉದ್ಯಮಗಳಿಗೆ ಕೈ ಹಾಕಲು ಹಿಂಜರಿಯುವುದಿಲ್ಲ.

Snowfall in Kedarnath: ಹಿಮದ ಹೊದಿಕೆ ಹೊದ್ದು ಕಣ್ಣಿಗೆ ಹಬ್ಬವಾದ ಕೇದಾರನಾಥ

ಧನು ರಾಶಿ(Sagittarius)
ಧನು ರಾಶಿ ಕೂಡಾ ಬೆಂಕಿಯ ಚಿಹ್ನೆಯಾಗಿರುವುದರಿಂದ ಸಾಧ್ಯವಾದಷ್ಟು ಬೇಗ ವಿಷಯಗಳು ಘಟಿಸಬೇಕೆಂದು ಇಷ್ಟಪಡುತ್ತಾರೆ ಮತ್ತು ತಾಳ್ಮೆ ಅವರು ಅಪರೂಪವಾಗಿ ಹೊಂದಿರುವ ಸದ್ಗುಣವಾಗಿದೆ. ಯಾವಾಗಲೂ ಕ್ರಮ ತೆಗೆದುಕೊಳ್ಳಲು ಬಯಸುವ ಧನು ರಾಶಿಯು ವಿವರಗಳನ್ನು ಗಮನಿಸುವುದಿಲ್ಲ. ಇವರಿಗೆ ಹೇಳಿದ ಟೈಂಗೆ ಕೆಲಸವಾಗುತ್ತಿರಬೇಕು. ಇಲ್ಲದಿದ್ದಲ್ಲಿ ಅಸಹನೆ ಹೊರ ಹೊಮ್ಮುತ್ತದೆ.

ಸಿಂಹ ರಾಶಿ(Leo)
ಸಿಂಹ ರಾಶಿಯವರು ರಾಜನ ಸ್ವಭಾವದವರು. ರಾಜ ಕಾಯಲಿ ಎಂದು ಬಯಸುವುದು ಶುದ್ಧ ಮೂರ್ಖತನವಾಗುತ್ತದೆ. ಹಾಗಾಗಿ ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಸರದಿಯಲ್ಲಿ ನಿಲ್ಲವವರಲ್ಲ. ಅವರಿಗೆ ಎಲ್ಲವೂ ಬೇಗ ಆಗಬೇಕು. 

ಮಕರ ರಾಶಿ(Capricorn)
ಮಕರ ರಾಶಿಯು ಕಾನೂನು ತಯಾರಕನಾದ ಶನಿಯಿಂದ ಆಳಲ್ಪಡುವ ಭೂಮಿಯ ಚಿಹ್ನೆಯಾಗಿದೆ. ತಮ್ಮ ನಿರೀಕ್ಷೆಗಳು ವಾಸ್ತವಕ್ಕೆ ತಿರುಗದಿರುವುದನ್ನು ನೋಡಿದಾಗ ಅವರು ತಾಳ್ಮೆ ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಅವರ ತಾಳ್ಮೆಯನ್ನು ಪರೀಕ್ಷಿಸದಿರುವುದೇ ಉತ್ತಮ. 

ಕನ್ಯಾ ರಾಶಿ(Virgo)
ಕನ್ಯಾ ರಾಶಿಯು ಪಾದರಸದಿಂದ ಆಳಲ್ಪಡುವುದು. ಅದು ಬಹಳ ವಿಶ್ಲೇಷಣಾತ್ಮಕವಾಗಿದೆ ಮತ್ತು ಯೋಜನೆಯಲ್ಲಿ ಉತ್ತಮವಾಗಿದೆ. ಆದಾಗ್ಯೂ, ಅವರ ಯೋಜನೆಗಳ ಪ್ರಕಾರ ವಿಷಯಗಳು ನಡೆಯದಿದ್ದರೆ ಅಥವಾ ಕನ್ಯಾ ರಾಶಿಯವರು ಮಾಡಿದ ವಿವರವಾದ ಯೋಜನೆಯ ಬಗ್ಗೆ ಯಾರಾದರೂ ಅಭಿಪ್ರಾಯವನ್ನು ನೀಡಲು ಪ್ರಯತ್ನಿಸಿದರೆ ಅವರು ತಾಳ್ಮೆಯನ್ನು ತ್ವರಿತವಾಗಿ ಕಳೆದುಕೊಳ್ಳಬಹುದು. 

Mahashivratri 2023: ದಿನಾಂಕ, ಮುಹೂರ್ತ, ಪೂಜಾ ಮಹತ್ವ ಇಲ್ಲಿದೆ..

ಕುಂಭ ರಾಶಿ(Aquarius)
ಕುಂಭ ರಾಶಿಯನ್ನು  ಸ್ವತಂತ್ರ ಚಿಹ್ನೆ ಎಂದು ಕರೆಯಲಾಗುತ್ತದೆ ಮತ್ತು ತಮ್ಮದೇ ಆದ ಜಾಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ತಾಳ್ಮೆಯಿಂದ ಇರಬೇಕೆ ಅಥವಾ ಬೇಡವೇ ಎಂಬ ನಿರ್ಧಾರವು ಸಂಪೂರ್ಣವಾಗಿ ಕುಂಭ ರಾಶಿಯವರ ಕೈಯಲ್ಲಿದೆ. ಅವರು ಬಯಸಿದರೆ ಅವರು ಹೆಚ್ಚು ತಾಳ್ಮೆಯಿಂದಿರಬಹುದು ಅಥವಾ ಬೇರೆ ರೀತಿಯಲ್ಲಿರಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios