Asianet Suvarna News Asianet Suvarna News

ಆಂಜನೇಯ ಮತ್ತು ಕೃಷ್ಣ ಜಗತ್ತಿನ ಅತಿ ದೊಡ್ಡ ರಾಜತಾಂತ್ರಿಕರು ಎಂದ ಸಚಿವ; ಕಾರಣವೇನು?

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಭಗವಾನ್ ಕೃಷ್ಣ ಮತ್ತು ಹನುಮಂತರೇ ವಿಶ್ವದ ಅತಿದೊಡ್ಡ ರಾಜತಾಂತ್ರಿಕರು ಎಂದಿದ್ದಾರೆ. ಇದನ್ನು ಪುಷ್ಠೀಕರಿಸುವುದಕ್ಕೆ 10 ಕಾರಣಗಳು ಇಲ್ಲಿವೆ. 

External Affairs Minister Jaishankar calls Hanuman Krishna as biggest diplomats here is their 10 life lessons skr
Author
First Published Jan 31, 2023, 4:00 PM IST

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು 'ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆ್ಯನ್ ಅನ್‌ಸರ್ಟೇನ್ ವರ್ಲ್ಡ್' ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು ಮತ್ತು ಈ ಸಂದರ್ಭದಲ್ಲಿ ಪೌರಾಣಿಕ ಸಾಹಿತ್ಯವು ಭಾರತದ ಕಾರ್ಯತಂತ್ರದ ಮೌಲ್ಯಗಳನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂದು ಹೇಳಿದರು. ಜೊತೆಗೆ, ಭಗವಾನ್ ಕೃಷ್ಣ ಮತ್ತು ಹನುಮಂತ ವಿಶ್ವದ ಅತಿ ದೊಡ್ಡ ರಾಜತಾಂತ್ರಿಕರು ಎಂದು ಉಲ್ಲೇಖಿಸಿದರು. ಕೃಷ್ಣ ಮತ್ತು ಆಂಜನೇಯರಿಂದ ಕಲಿಯಬೇಕಾದ ಟಾಪ್ 10 ಜೀವನ ಪಾಠಗಳು ಇಲ್ಲಿವೆ. 

ವಾಕ್ ಸಾಮರ್ಥ್ಯ
ಹನುಮಂತನು ಅದ್ಭುತವಾದ ಸಂವಹನ ಕೌಶಲ್ಯವನ್ನು ಹೊಂದಿದ್ದನು ಮತ್ತು ಭಗವಾನ್ ರಾಮನಿಗೆ ನಿಜವಾದ ಸಂದೇಶವಾಹಕನಾಗಿದ್ದನು. ಆತನಿಗೆ ತನ್ನ ಭಕ್ತಿಯನ್ನು ತಲುಪಿಸುವ ಮಾತುಗಳೂ ತಿಳಿದಿತ್ತು, ತಾನು ಎಲ್ಲಿ ಯಾವ ರೀತಿ ಮಾತಾಡಬೇಕೆಂಬ ಕೌಶಲ್ಯವೂ ಇತ್ತು. ಅತ್ಯುತ್ತಮ ಮಾತುಗಾರಿಕೆಯ ಕೌಶಲ್ಯ ರಾಜತಾಂತ್ರಿಕರಿಗಿರಬೇಕಾದ ಅತ್ಯಗತ್ಯ ಗುಣವಾಗಿದೆ.

ಹೊಂದಿಕೊಳ್ಳಿ
ಭಗವಾನ್ ಹನುಮಂತನು ಗೆಲ್ಲುವ ತಂತ್ರವನ್ನು ಹೊಂದಿದ್ದಾನೆ ಮತ್ತು ಅನೇಕರ ಜೀವಗಳನ್ನು ಉಳಿಸಿದ್ದಾನೆ. ಹೊಂದಿಕೊಳ್ಳುವ ಕೌಶಲ್ಯ ಅವನಲ್ಲಿತ್ತು. ಆತ ಯಾವುದಕ್ಕೂ ಹಟ ಮಾಡಲಿಲ್ಲ. ರಾಮನ ಮಾತನ್ನು ಶಿರಸಾವಹಿಸಿ ಪಾಲಿಸುತ್ತಿದ್ದ. ರಾಜತಾಂತ್ರಿಕರೂ ದೇಶದ ಹಿತಕ್ಕಾಗಿ ನಾಯಕರ ಆಶಯವನ್ನು ತಮ್ಮ ತಂತ್ರಗಳ ಮೂಲಕ ಫಲಿಸುವಂತೆ ಮಾಡಬೇಕು. 

ಫೆಬ್ರವರಿಯಲ್ಲಿ ಏರ್ಪಡಲಿದೆ 'ತ್ರಿಗ್ರಾಹಿ ಯೋಗ'; ನಿಮ್ಮ ರಾಶಿಯನ್ನಿದು ಶ್ರೀಮಂತವಾಗಿಸುತ್ತದೆಯೇ?

ನಿಷ್ಠೆ
ಅತ್ಯಂತ ನಿಷ್ಠಾವಂತ ಸಂದೇಶವಾಹಕನಾಗಿದ್ದ ಆಂಜನೇಯ. ಭಕ್ತ ಹನುಮಾನ್ ನಂಬಿಕೆಯು ಅಚಲವಾಗಿತ್ತು. ಮತ್ತು ಆತನ ಕಡೆಯವರು ಕಣ್ಣು ಮುಚ್ಚಿ ಅವನನ್ನು ನಂಬಬಹುದಾಗಿತ್ತು. ಇದಕ್ಕೆ ಸಾಥ್ ನೀಡುವಂತೆ ಅಪ್ರತಿಮ ಧೈರ್ಯ ಅವನಲ್ಲಿತ್ತು.

ಪರಿಹಾರಗಳನ್ನು ಕಂಡುಹಿಡಿಯುವುದು
ಲಕ್ಷ್ಮಣನನ್ನು ಉಳಿಸಲು ಗಿಡಮೂಲಿಕೆಯನ್ನು ಹುಡುಕುವುದು ಮತ್ತು ಸೀತೆಯನ್ನು ಹುಡುಕುವುದು ಹೀಗೆ- ಪ್ರತಿಯೊಂದು ಸಮಸ್ಯೆಗೆ ಹನುಮಂತನು ಪರಿಹಾರವನ್ನು ಹುಡುಕುತ್ತಿದ್ದನು. ಸಮಸ್ಯೆ ಎಂದಾಗ ಕಂಗಾಲಾಗದೆ ಪರಿಹಾರದ ಬಗ್ಗೆ ಯೋಚಿಸುವುದು ಮತ್ತು ಅದಕ್ಕಾಗಿ ತ್ವರಿತ ಪ್ರಯತ್ನಗಳನ್ನು ಮಾಡುವುದು ಉತ್ತಮ ರಾಜತಾಂತ್ರಿಕರ ಲಕ್ಷಣ.

ನಾಯಕ
ಹನುಮಂತನು ನದಿಯನ್ನು ದಾಟುವಾಗ ತನ್ನ ತಂಡವನ್ನು ಮುನ್ನಡೆಸಿದನು ಮತ್ತು ಅವನ ನಿರ್ವಹಣಾ ಕೌಶಲ್ಯದಿಂದ ತನ್ನ ಸೈನ್ಯಕ್ಕೆ ಮತ್ತು ಭಗವಾನ್ ರಾಮನಿಗೆ ನದಿ ದಾಟಲು ಸಹಾಯ ಮಾಡಿದನು. ಆತ ರಾಮನ ಮಾತಿನಂತೆ ಹೇಗೆ ನಡೆಯುತ್ತಿದ್ದನೋ, ಹಾಗೆಯೇ ಆತನ ಮಾತಿನಂತೆ ಆತನ ತಂಡ ನಡೆಯುತ್ತಿತ್ತು. 

ಕರ್ತವ್ಯ ಮುಖ್ಯ
ಯಾವುದೇ ಸಂದರ್ಭವಿರಲಿ, ನಾವು ನಮ್ಮ ಕರ್ತವ್ಯದ ಮೇಲೆ ಕೇಂದ್ರೀಕರಿಸಬೇಕು ಎಂದು ಕೃಷ್ಣ ಹೇಳುತ್ತಾನೆ.

ಎಂದಿಗೂ ಬಿಟ್ಟುಕೊಡಬೇಡಿ
ನೀವು ಇಷ್ಟಪಡುವುದರಲ್ಲಿ ಯಶಸ್ವಿಯಾಗಲು ನೀವು ಅದನ್ನು ಸಾಧಿಸುವವರೆಗೂ ಬಿಟ್ಟುಕೊಡಬೇಡಿ ಎಂದು ಕೃಷ್ಣ ಹೇಳುತ್ತಾನೆ.

ಸದ್ಭಾವನೆಗೆ ಯಾವಾಗಲೂ ಪ್ರತಿಫಲ ಸಿಗುತ್ತದೆ
ನೀವು ಮಾಡುವ ಆಯ್ಕೆಗಳು ಮತ್ತು ಕರ್ತವ್ಯವನ್ನು ಅನುಸರಿಸುವ ವ್ಯಕ್ತಿಯನ್ನು ಭಗವಂತ ರಕ್ಷಿಸುತ್ತಾನೆ ಮತ್ತು ಬಹುಮಾನ ನೀಡುತ್ತಾನೆ.

Bhishma Ekadashi 2023: ವಿಷ್ಣು ಸಹಸ್ರನಾಮಕ್ಕೆ ಓನಾಮ ಬರೆದ ಭೀಷ್ಮಾಚಾರ್ಯರು!

ಕೆಲಸ ಒಂದು ಕೆಲಸ
ಭಗವಾನ್ ಕೃಷ್ಣ ಹೇಳುತ್ತಾನೆ, ಉದ್ಯೋಗವೆಂದರೆ ಕೆಲಸ, ಅದು ದೊಡ್ಡದು ಅಥವಾ ಚಿಕ್ಕದಲ್ಲ ಮತ್ತು ನೀವು ನಿಮ್ಮ ಕೈಲಾದಷ್ಟು ಮಾಡಬೇಕು.

ಏನೇ ಆಗಲಿ ಅದು ಒಳ್ಳೆಯದಕ್ಕೆ ಆಗುತ್ತದೆ
ಅವರು ಹೇಳುವಂತೆ, ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ ಮತ್ತು ಏನಾಗುತ್ತದೆ, ಅದು ಒಳ್ಳೆಯದಕ್ಕಾಗಿಯೇ ಆಗುತ್ತದೆ. 

ಕೃಷ್ಣನ ಈ ಮಾತುಗಳು, ಹನುಮಂತನ ಕೃತಿಗಳು ಎಲ್ಲವೂ ಉತ್ತಮ ರಾಜತಾಂತ್ರಿಕತೆಯನ್ನು ಪ್ರದರ್ಶಿಸುತ್ತವೆ. ಅಷ್ಟೇ ಅಲ್ಲ, ಕೃಷ್ಣ ಕೂಡಾ ಯಾರನ್ನು ಹೇಗೆ ಬೇಕಾದರೂ ಮಾತಿನಲ್ಲೇ ಒಲಿಸುತ್ತಿದ್ದ. ತನಗೆ ಅಗತ್ಯವಿರುವ ಫಲಿತಾಂಶಕ್ಕೆ ತಕ್ಕಂತೆ ಜನರನ್ನು ಸಂವಹನ ಕೌಶಲದಿಂದ ನಡೆಸುತ್ತಿದ್ದ. ಇಷ್ಟೆಲ್ಲ ಆದ ಮೇಲೆ ಇವರಿಬ್ಬರು ಜಗತ್ತು ಕಂಡ ಶ್ರೇಷ್ಠ ರಾಜತಾಂತ್ರಿಕರಲ್ಲದೆ ಮತ್ತೇನು?

Follow Us:
Download App:
  • android
  • ios