Asianet Suvarna News Asianet Suvarna News

ಸಂಖ್ಯೆ 2; ಇವರ ಸ್ವಭಾವ ಹೇಗಿರುತ್ತೆ? ಅದೃಷ್ಟದ ಬಣ್ಣ ಯಾವುದು?

ನಿಮ್ಮ ಸಂಖ್ಯೆ 2 ಆಗಿದ್ದರೆ ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ವ್ಯಕ್ತಿತ್ವ, ಸ್ವಭಾವ, ದೌರ್ಬಲ್ಯ, ಬಲವೇನು ಎಲ್ಲವನ್ನೂ ಹೇಳಬಹುದು. ಅಂದ ಹಾಗೆ 2, 11, 20, ಅಥವಾ 29ನೇ ತಾರೀಖಿನಂದು ಜನಿಸಿದವರ ಸಂಖ್ಯೆ 2 ಆಗಿರುತ್ತದೆ. 

Everything You Need To Know About Number 2 In Numerology skr
Author
Bangalore, First Published Jun 27, 2022, 2:29 PM IST | Last Updated Jun 27, 2022, 2:29 PM IST

ಸಂಖ್ಯಾಶಾಸ್ತ್ರ(Numerology)ದಲ್ಲಿ ಸಂಖ್ಯೆ 2ಕ್ಕೆ ವಿಶಿಷ್ಠ ಸ್ಥಾನಮಾನವಿದೆ. ನಿಮ್ಮ ಜನ್ಮ ದಿನಾಂಕ ಸಂಖ್ಯೆಗಳು 2, 11, 20, ಅಥವಾ 29 ಆಗಿದ್ದರೆ, ನಿಮ್ಮ ವ್ಯಕ್ತಿತ್ವ, ಸ್ವಭಾವ, ಬಲ, ದೌರ್ಬಲ್ಯ ಎಲ್ಲದರ ಬಗ್ಗೆ ಸಂಖ್ಯಾ ಶಾಸ್ತ್ರ ಏನನ್ನುತ್ತದೆ ಎಂದು ಇಲ್ಲಿ ಹೇಳಲಾಗಿದೆ. 

ಚಂದ್ರ(Moon)ನು ಸಂಖ್ಯಾಶಾಸ್ತ್ರದ ಸಂಖ್ಯೆ 2 ಅನ್ನು ನಿಯಂತ್ರಿಸುತ್ತದೆ. ಭಾವನೆಗಳ ಗ್ರಹ ಎಂದು ಗುರುತಿಸಿಕೊಂಡಿರುವ ಚಂದ್ರನ ಶಕ್ತಿಯಿಂದ ಸಂಖ್ಯೆ 2 ಬಹಳ ಭಾವನಾತ್ಮಕ ಜನವಾಗಿರುತ್ತಾರೆ. ಇವರಲ್ಲಿ ತಾಳ್ಮೆ ಮತ್ತು ಕಾಳಜಿ ಹೆಚ್ಚು. ಸಂಗೀತ ಮತ್ತು ಕಾವ್ಯದಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ. ಸುಗಂಧ ಮತ್ತು ಪರಿಮಳಗಳನ್ನು ಆರಾಧಿಸುತ್ತಾರೆ. ಸ್ನೇಹಕ್ಕೆ ಮಹತ್ವ ಕೊಡುವವರು ಇವರು. ಇವರೊಂದಿಗೆ ಸಂಪರ್ಕ ಸಾಧಿಸುವ ಜನರು ಇವರ ಹೃದಯ ಮತ್ತು ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ.

ಶಾಂತಿ ಪ್ರತಿಪಾದಕರಾದ ಇವರು ತತ್ವಗಳ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಮತ್ತು ಉತ್ತಮ ಮಧ್ಯಸ್ಥಗಾರರಾಗಿರುತ್ತಾರೆ. ಇವರು ಭಾವನಾತ್ಮಕವಾಗಿ ದೃಢವಾದ ಮತ್ತು ಹೋರಾಟಗಾರ ಜನರ ಸಹವಾಸವನ್ನು ಪ್ರೀತಿಸುತ್ತಾರೆ. ಇವರ ನೋಟವು ಆಕರ್ಷಕವಾಗಿರುತ್ತದೆ, ಹೃದಯದಲ್ಲಿ ಕೋಮಲರಾಗಿರುತ್ತಾರೆ.

ಚಂದ್ರನು ಅಧಿಪತಿಯಾದ ಕಾರಣ, ಸಂಖ್ಯೆ 2 ಹೊಂದಿರುವವರು ಕೆಲವೊಮ್ಮೆ ಖಿನ್ನತೆಗೆ ಒಳಗಾಗಬಹುದು ಮತ್ತು ಕೆಲವೊಮ್ಮೆ ಆಶಾವಾದಿಯಾಗಬಹುದು. ಸಾಮಾನ್ಯವಾಗಿ, ನಿರ್ಧಾರ ತೆಗೆದುಕೊಳ್ಳುವ ಮೊದಲು ಇವರು ಹಲವಾರು ಬಾರಿ ಯೋಚಿಸುತ್ತಾರೆ. 

ಅಷಾಢ ಅಮಾವಾಸ್ಯೆ 2022 ಯಾವಾಗ? ಏನು ಮಾಡಿದರೆ ಪುಣ್ಯ ಫಲ?

ಸಂಖ್ಯೆ 2 ಪ್ರಮುಖ ಸಾಮರ್ಥ್ಯಗಳು( Major strengths)
ಚಂದ್ರನು ಸಂಪೂರ್ಣ ಶಾಂತ ಗ್ರಹ. ನೀವು ಸಂಖ್ಯೆ 2 ಹೊಂದಿದ್ದರೆ, ಈ ಗುಣಗಳನ್ನು ನಿಮ್ಮ ಸಾಮರ್ಥ್ಯ ಎಂದು ಕರೆಯಬಹುದು.

ಸಮಗ್ರತೆ: ಸಂಖ್ಯಾಶಾಸ್ತ್ರದ ಸಂಖ್ಯೆ 2 ಸಮಗ್ರತೆ ಹೊಂದಿರುತ್ತದೆ. ಹೀಗಾಗಿ ತಂಡದ  ಜೊತೆ ಕೆಲಸ ಮಾಡುವುದು, ಸಹಕಾರ ನೀಡುವುದು ಇವರಿಗೆ ಸುಲಭ. ಚಾತುರ್ಯದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಹಿಡಿದು ಸಂಘರ್ಷವನ್ನು ಅಂತ್ಯಗೊಳಿಸುವ ಸನ್ನಿವೇಶಗಳೊಂದಿಗೆ ವ್ಯವಹರಿಸುವವರೆಗೆ, ಇವರು ನಿಭಾಯಿಸಬಲ್ಲರು. 

ಸಂಖ್ಯಾಶಾಸ್ತ್ರದಲ್ಲಿ 2 ಸಂಖ್ಯೆಯು ಅತ್ಯಂತ ಪ್ರಭಾವಶಾಲಿ ಸಂಖ್ಯೆಯಲ್ಲಿ ಸ್ಥಾನ ಪಡೆದಿದೆ. ಎಲ್ಲ ರೀತಿಯ ಸಂಬಂಧಗಳು ಮತ್ತು ಸನ್ನಿವೇಶಗಳ ಮೇಲೆ ಬಲವನ್ನು ಗ್ರಹಿಸುವುದರೊಂದಿಗೆ, ಇವರು ಜೀವನದ ವಿಷಯಗಳನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಾರೆ. ಜನರು ಇವರ ಮಾತನ್ನು ಕೇಳುತ್ತಾರೆ ಮತ್ತು ಇತರರ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. 
ಅಪಾರ ಸಹಾನುಭೂತಿ ಮತ್ತು ಅಂಗೀಕಾರದೊಂದಿಗೆ ಜೀವನವನ್ನು ನಡೆಸುವವರಿವರು.

ಸಂಖ್ಯೆ 2: ಪ್ರಮುಖ ದೌರ್ಬಲ್ಯಗಳು(Major weaknesses)
ದೊಡ್ಡ ಸಾಮರ್ಥ್ಯಗಳೊಂದಿಗೆ ಕೆಲವು ದೌರ್ಬಲ್ಯಗಳೂ ಬರುತ್ತವೆ. ಸಂಖ್ಯೆ 2ರ ದೌರ್ಬಲ್ಯಗಳಿವು.

ಅತಿಯಾದ ಭಾವನಾತ್ಮಕ ವರ್ತನೆ: ಜನರು ಸುಲಭವಾಗಿ ಇವರನ್ನು ನೋಯಿಸಬಹುದು! ಇವರಿಗೆ ಜನರಿಂದ ನಿರೀಕ್ಷೆ ಹೆಚ್ಚು. ಆದರೆ, ಅವು ಈಡೇರದೆ ಹೋದಾಗ ನೋವನುಭವಿಸುತ್ತಾರೆ. ಚಂದ್ರನು ಆಡಳಿತ ಗ್ರಹವಾಗಿರುವುದರಿಂದ ಯಾವುದೇ ಭಾವನೆಯ ಸ್ವಲ್ಪ ತಪ್ಪಾದ ಚಿತ್ರಣವು ಇವರನ್ನು ಸೆಕೆಂಡುಗಳಲ್ಲಿ ಕೆಟ್ಟದಾಗಿ ಚಿತ್ರಿಸಬಹುದು ಮತ್ತು ಇವರ ಜೀವನದ ಸಮತೋಲನ ತಪ್ಪಿಸಬಹುದು.
ಸಂದೇಹ: ಇದು ಅಥವಾ ಅದು? ಯಾವುದು ಉತ್ತಮವಾಗಿರುತ್ತದೆ? ನಾನು ಆರಿಸಿಕೊಂಡದ್ದು ನನಗೆ ಸರಿಯೋ ಇಲ್ಲವೋ? ಈ ರೀತಿಯ ಗೊಂದಲಗಳು ಇವರಲ್ಲಿ ಸದಾ ಮನೆ ಮಾಡಿರುತ್ತದೆ. ಅನುಮಾನಾಸ್ಪದತೆ ಅಥವಾ ಅನಿರ್ದಿಷ್ಟತೆಯು ಇವರ ಪ್ರಮುಖ ದೌರ್ಬಲ್ಯವಾಗಿದೆ. 

ಜಾತಕದ ಮೊದಲ ಮನೆಯಲ್ಲಿದ್ದರೆ ಸೂರ್ಯ, ಸಿಗುತ್ತೆ ಐಶಾರಾಮಿ ಸೌಕರ್ಯ!

ಅದೃಷ್ಟದ ದಿನ
ಸಂಖ್ಯೆ 2ಕ್ಕೆ ಹೊಂದುವ ಸಂಖ್ಯೆಯು 1, 2, 4 ಮತ್ತು 7 ಆಗಿರುತ್ತದೆ. ಭಾನುವಾರ, ಸೋಮವಾರ ಮತ್ತು ಶುಕ್ರವಾರ ಇವರ ಅದೃಷ್ಟದ ವಾರದ ದಿನಗಳು. ಜುಲೈ ಮತ್ತು ನವೆಂಬರ್ ತಿಂಗಳು ಸಂತೋಷದ ತಿಂಗಳು. 

ಅದೃಷ್ಟದ ಬಣ್ಣಗಳು ಮತ್ತು ರತ್ನ
ಸಂಖ್ಯೆ 2 ಜನ್ಮ ಸಂಖ್ಯೆಯಿದ್ದರೆ, ಬಿಳಿ, ಹಸಿರು ಮತ್ತು ಹಳದಿ ಬಣ್ಣಗಳು ಇವರ ಅದೃಷ್ಟದ ಬಣ್ಣಗಳಾಗಿವೆ. ಇನ್ನು ಕ್ಯಾಟ್ಸ್ ಐ ಮತ್ತು ಮುತ್ತು ಇವರ ಅದೃಷ್ಟ ರತ್ನಗಳು. ಮೂನ್‌ಸ್ಟೋನ್ ಮತ್ತು ಜೇಡ್ ಅನ್ನು ಕೂಡಾ ರತ್ನವಾಗಿ ಬಳಸಬಹುದು.
 

Latest Videos
Follow Us:
Download App:
  • android
  • ios