ಅಬ್ಬಬ್ಬಾ, ಈ ರಾಶಿಯವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ, ಭಾವನೆಗಳೇ ಇಲ್ಲ ಇವರಿಗೆ!
ದ್ವಾದಶ ರಾಶಿಗಳ ಪೈಕಿ ಒಂದೊಂದು ರಾಶಿಯ ಗುಣಾವಗುಣಗಳು ಒಂದೊಂದು ರೀತಿಯಲ್ಲಿರುತ್ತವೆ. ಇವುಗಳೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ರಾಶಿಚಕ್ರಗಳ ಪೈಕಿ ಕೆಲವು ರಾಶಿಗಳನ್ನು ಕೂಲ್ ಎಂದು ಪರಿಗಣಿಸಬಹುದು. ಈ ರಾಶಿಯ ಜನ ಐಸ್ ನಷ್ಟು ತಣ್ಣಗಿರುತ್ತಾರೆ, ಭಾವನಾತ್ಮಕವಾಗಿ ದೂರದಲ್ಲಿರುವಂತೆ ಭಾಸವಾಗುತ್ತಾರೆ.
ನಾವೆಲ್ಲರೂ ಮನುಷ್ಯರು ಎಂದು ಎಷ್ಟು ಸಹಜವಾಗಿ ಹೇಳಿಕೊಂಡರೂ ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತೇವೆ. ಕೆಲವರು ಪ್ರೀತಿ-ಪ್ರೇಮ, ವಿಶ್ವಾಸದ ವ್ಯಕ್ತಿತ್ವ ಹೊಂದಿದ್ದರೆ, ಕೆಲವರು ನಗೆಬುಗ್ಗೆಗಳಾಗಿರುತ್ತಾರೆ. ಕೆಲವರು ಸಾಹಸಿ ಧೋರಣೆ ಹೊಂದಿದ್ದರೆ ಕೆಲವರಿಗೆ ಮನೆಯಲ್ಲಿ ಗುಬ್ಬಚ್ಚಿಯಂತಿರುವುದೇ ಇಷ್ಟ. ಒಟ್ಟಿನಲ್ಲಿ ಮನುಷ್ಯರದು ಎಲ್ಲರಿಗೂ ಅವರದ್ದೇ ಪ್ರಪಂಚ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನುಷ್ಯನ ಸ್ವಭಾವ, ಗುಣಗಳನ್ನು ರಾಶಿಚಕ್ರಗಳು, ಗ್ರಹಗತಿಗಳು ನಿರ್ಧರಿಸುತ್ತವೆ. ಒಂದೇ ರಾಶಿಯ ಇಬ್ಬರು ವ್ಯಕ್ತಿಗಳನ್ನು ನೋಡಿ, ಅವರೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿರುವಂತೆ ಕಂಡುಬರುತ್ತಾರೆ. ಆದರೆ, ಕೆಲವು ಮೂಲ ಗುಣಗಳು ಒಂದೇ ರೀತಿಯಲ್ಲಿರುತ್ತವೆ. ಕೆಲವು ರಾಶಿಗಳನ್ನು ಅನ್ವೇಷಣೆಯ ಗುಣ ಹೊಂದಿರುವ, ಸಾಹಸಿ ಪ್ರವೃತ್ತಿಯ ರಾಶಿಗಳೆಂದು ಗುರುತಿಸಲಾಗುತ್ತದೆ. ಈ ರಾಶಿಯ ಜನರಲ್ಲಿರುವ ಮೂಲ ಸತ್ವ ಒಂದೇ ಆಗಿರುತ್ತದೆ. ಆದರೆ, ಸ್ವಭಾವ, ಗುಣಗಳಲ್ಲಿ ಭಾರೀ ಭಿನ್ನತೆ ಕಂಡುಬರಬಹುದು. ಹಾಗೆಯೇ, ಕೆಲವು ರಾಶಿಗಳ ಜನ ಅತ್ಯಂತ ಕೂಲಾಗಿರುತ್ತಾರೆ. ಎಷ್ಟು ತಣ್ಣಗೆ ಎಂದರೆ ಐಸ್ ನಷ್ಟು! ರಿಸರ್ವ್ ಸ್ವಭಾವ ಹೊಂದಿದ್ದು, ವಿಮರ್ಶೆ ಮಾಡುವ ಗುಣವಿದ್ದು, ವಿರಕ್ತ ಭಾವನೆಯನ್ನೂ ಒಳಗೂಡಿಸಿಕೊಂಡಿದ್ದು, ಕೂಲಾಗಿರುತ್ತಾರೆ. ಆ ರಾಶಿಗಳು ಯಾವುವು ಎಂದು ನೋಡಿ.
• ಮಕರ (Capricorn)
ಜೀವನದ ಬಗ್ಗೆ ಅತ್ಯಂತ ಪ್ರಾಯೋಗಿಕ (Pragmatic) ಹಾಗೂ ಬ್ಯುಸಿನೆಸ್ (Business) ಮಾದರಿಯ ನಿಲುವು ಹೊಂದಿರುವ ಮಕರ ರಾಶಿಯ ಜನರ ವ್ಯಕ್ತಿತ್ವ (Personality) ಸಾಮಾನ್ಯವಾಗಿ ಯಾವಾಗಲೂ ಕೂಲ್ ಕೂಲ್ (Cool). ಇವರು ತಾರ್ಕಿಕವಾಗಿ ವಿಚಾರ ಮಂಡಿಸುತ್ತಾರೆ, ಭಾವನೆಗಳನ್ನು ಅತಿಯಾದ ಭಾವುಕತೆಯಿಂದ ವ್ಯಕ್ತಪಡಿಸುವುದಿಲ್ಲ. ಸಾಕಷ್ಟು ಪ್ರಾಯೋಗಿಕ ಧೋರಣೆಯನ್ನೇ ಹೊಂದಿರುತ್ತಾರೆ. ಹೀಗಾಗಿ, ಇವರು ರಿಸರ್ವ್ (Reserved) ಪ್ರವೃತ್ತಿ ಹೊಂದಿರುವಂತೆ ಕಂಡುಬರುತ್ತಾರೆ. ಎಲ್ಲರೊಂದಿಗೂ ದೂರ ಮೆಂಟೇನ್ ಮಾಡುತ್ತಾರೆ. ಗುರಿಗಳ ಬಗ್ಗೆ ಹೆಚ್ಚು ಆದ್ಯತೆ ನೀಡುವ ಹಾಗೂ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ನೀಡುವ ಗುಣದಿಂದಾಗಿ ಐಸ್ (Ice) ನಂತೆ ತಣ್ಣಗಿರುವಂತೆ ತೋರುತ್ತಾರೆ. ಈ ಗುಣದಿಂದಾಗಿಯೇ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.
ಈ ನಾಲ್ಕು ರಾಶಿಯವರಿಗೆ ಸಮೃದ್ಧಿ ತಂದ ನಾಗರ ಪಂಚಮಿ..!
• ಕುಂಭ (Aquarius)
ವಿಲಕ್ಷಣ ಎಂದೆನಿಸುವ ಕುಂಭ ರಾಶಿಯ ಜನರ ತಣ್ಣಗಿನ ಧೋರಣೆ ಇವರ ಬೌದ್ಧಿಕ (Intellectual) ಮಟ್ಟ ಮತ್ತು ವಿರಕ್ತ (Detach) ದೃಷ್ಟಿಕೋನದಿಂದ ಮೂಡಿರುತ್ತದೆ. ಯಾವಾಗಲೂ ತಮ್ಮ ಮೌಲ್ಯ ಮತ್ತು ವಿಚಾರಗಳ ಬಗ್ಗೆ ಗಮನ ಹರಿಸುವ ಇವರು ಭಾವನಾತ್ಮಕವಾಗಿ ಎಲ್ಲರಿಂತ ಅಂತರ ಕಾಯ್ದುಕೊಳ್ಳುತ್ತಾರೆ. ಭಾವನೆಗಳ ಬದಲು ತಾರ್ಕಿಕ (Logical) ನಿಲುವು ಪ್ರದರ್ಶಿಸುವುದರಿಂದ ಇವರು ಮಾನಸಿಕವಾಗಿ ತಣ್ಣಗಿರುವ ಭಾವನೆ ಮೂಡಿಸುತ್ತಾರೆ. ಆದರೆ, ಇದು ಅವರ ಅನ್ವೇಷಣಾತ್ಮಕ ಯೋಚನೆಯಾಗಿರುತ್ತದೆ. ಮಾನವೀಯತೆಯ ಹಿನ್ನೆಲೆಯಲ್ಲಿ ಬೇರೊಂದು ನಿಟ್ಟಿನಲ್ಲಿ ಯೋಚನೆ ಮಾಡುತ್ತಾರೆ.
• ಕನ್ಯಾ (Virgo)
ಯಾವುದನ್ನೇ ತಿಳಿಯುವುದಾದರೂ ವಿಸ್ತಾರವಾಗಿ ಅರಿತುಕೊಳ್ಳುವ ಗುಣ ಮತ್ತು ವಿಮರ್ಶೆ (Analysis) ಮಾಡುವ ಧೋರಣೆಯಿಂದಾಗಿ ಇವರು ಹೆಚ್ಚು ಶಾಂತವಾಗಿರುತ್ತಾರೆ. ಹೀಗಾಗಿ, ಇವರು ಭಾವನಾತ್ಮಕವಾಗಿ (Emotion) ಸಂಧಿಸಲು ಸಾಧ್ಯವಿಲ್ಲದವರು ಎನ್ನುವಂತೆ ಭಾಸವಾಗುತ್ತಾರೆ. ಯಾವುದೇ ವಿಚಾರವನ್ನಾದರೂ ಪ್ರಾಯೋಗಿಕವಾಗಿ ಪರಿಗಣಿಸುವ ಮತ್ತು ಸಂಕೀರ್ಣವಾಗಿ ಚಿಂತನೆ ಮಾಡುವ ಸಾಮರ್ಥ್ಯ ಇವರಲ್ಲಿ ಇರುವುದರಿಂದ ಸದಾಕಾಲ ಕೂಲ್ ಆಗಿರುತ್ತಾರೆ.
ಅಧಿಕ ಮಾಸದಲ್ಲಿ ಏನು ಮಾಡಬೇಕು, ಮಾಡಬಾರದು ?
• ವೃಶ್ಚಿಕ (Scorpio)
ತೀವ್ರವಾದ ಛಲದ ಕಾರಣದಿಂದಲೇ ವೃಶ್ಚಿಕ ರಾಶಿಯ ಜನ ಕೂಲಾಗಿರುತ್ತಾರೆ. ಖಾಸಗಿತನಕ್ಕೆ (Private) ಅಧಿಕ ಆದ್ಯತೆ ನೀಡುವ ಈ ಜನ ತಮ್ಮ ಭಾವನೆಗಳ ವಿಚಾರದಲ್ಲಿ ಅತ್ಯಂತ ಸುರಕ್ಷಿತವಾಗಿ ವರ್ತಿಸುತ್ತಾರೆ. ಈ ಗುಣದಿಂದಾಗಿ ಇವರು ಇತರರೊಂದಿಗೆ ಅಂತರ ಹೊಂದಿರುವಂತೆ ಕಂಡುಬರುತ್ತಾರೆ. ತಮ್ಮ ನೈಜವಾದ ಭಾವನೆಗಳನ್ನು ಅಡಗಿಸಿಕೊಳ್ಳುವಲ್ಲಿ ಇವರು ಎತ್ತಿದ ಕೈ. ಹಾಗೂ ಗುಟ್ಟುಗಳನ್ನು ಸಹ ಕಾಪಾಡಿಕೊಳ್ಳುತ್ತಾರೆ. ಈ ಗುಣಗಳು ಇವರು ಕೂಲಾಗಿರುವಂತೆ ಮಾಡುತ್ತವೆ. ಆದರೆ, ತಮ್ಮವರ ಬಗ್ಗೆ ಭಾವನಾತ್ಮಕವಾಗಿ ಗಾಢ (Intense) ಸಂಬಂಧ ಹಾಗೂ ಬದ್ಧತೆ ಹೊಂದಿರುತ್ತಾರೆ.