ಈ ನಾಲ್ಕು ರಾಶಿಯವರಿಗೆ ಸಮೃದ್ಧಿ ತಂದ ನಾಗರ ಪಂಚಮಿ..!
ಹಿಂದೂ ಧರ್ಮದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನವು ಶಿವನಿಗೆ ಅತ್ಯಂತ ಪ್ರಿಯವಾದದ್ದು. ಈ ದಿನದಂದು ಬೋಲೆನಾಥನನನ್ನು ಪೂಜಿಸುವುದರಿಂದ ದುಃಖ ನಿವಾರಣೆಯಾಗುತ್ತದೆ. ಈ ವರ್ಷ ನಾಗರ ಪಂಚಮಿಯಿಂದ ನಾಲ್ಕು ರಾಶಿಯವರಿಗೆ ಸಮೃದ್ಧಿ ಸಿಗಲಿದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಹಿಂದೂ ಧರ್ಮದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನವು ಶಿವನಿಗೆ ಅತ್ಯಂತ ಪ್ರಿಯವಾದದ್ದು. ಈ ದಿನದಂದು ಬೋಲೆನಾಥನನನ್ನು ಪೂಜಿಸುವುದರಿಂದ ದುಃಖ ನಿವಾರಣೆಯಾಗುತ್ತದೆ. ಈ ವರ್ಷ ನಾಗರ ಪಂಚಮಿಯಿಂದ ನಾಲ್ಕು ರಾಶಿಯವರಿಗೆ ಸಮೃದ್ಧಿ ಸಿಗಲಿದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಭಾರತದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ನಾಗ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಅಥವಾ ಶ್ರಾವಣ ಮಾಸದ ಶುಕ್ಲ ಪಂಚಮಿ ದಿನಾಂಕದಂದು ಆಚರಿಸಲಾಗುತ್ತದೆ. ಇದು ಶಿವನ ನೆಚ್ಚಿನ ತಿಂಗಳು.ಈ ವರ್ಷ ನಾಗ ಪಂಚಮಿ ಹಬ್ಬವನ್ನು ಆಗಸ್ಟ್ 21 ರಂದು ಆಚರಿಸಲಾಗುತ್ತದೆ.
ನಾಗ ಪಂಚಮಿಯ ದಿನದಂದು ನಾಗದೇವತೆ ಅಥವಾ ಸರ್ಪ ದೇವರನ್ನು ಪೂಜಿಸುವ ಸಂಪ್ರದಾಯವಿದೆ. ಹೀಗೆ ಮಾಡುವುದರಿಂದ ಕಾಲ ಸರ್ಪದೋಷದಿಂದ ಮುಕ್ತಿ ಸಿಗುತ್ತದೆ ಮತ್ತು ಅವರ ಜೀವನದಲ್ಲಿ ಸಮೃದ್ಧಿಯೂ ಇರುತ್ತದೆ ಎಂದು ನಂಬಲಾಗಿದೆ. ನಾಗದ ಪಂಚಮಿಯಂದು ಯಾವ ರಾಶಿಯವರಿಗೆ ಹೆಚ್ಚು ಲಾಭಗಳು ಸಿಗುತ್ತದೆ ಎಂದು ತಿಳಿಯೋಣ.
ವೃಶ್ಚಿಕ ರಾಶಿ (Scorpio)
ಈ ದಿನವು ನಿಮ್ಮ ಪರವಾಗಿ ಇರುವುದರಿಂದ ನೀವು ತುಂಬಾ ಅದೃಷ್ಟವಂತರು. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಪ್ರೀತಿಯ ಜೀವನದಲ್ಲೂ ಹೊಂದಾಣಿಕೆ ಇರುತ್ತದೆ. ಸಂಬಂಧ ಮತ್ತು ಸಂವಹನವು ಉತ್ತಮವಾಗಿರುವುದರಿಂದ ಸಂಗಾತಿಯೊಂದಿಗಿನ ಸಂಬಂಧಗಳು ಸುಧಾರಿಸುವ ನಿರೀಕ್ಷೆಯಿದೆ. ಉದ್ಯಮಿಗಳು ಇಂದು ದೊಡ್ಡ ವ್ಯವಹಾರವನ್ನು ಪಡೆಯುತ್ತಾರೆ.
ಧನು ರಾಶಿ (Sagittarius)
ಇಂದು ಅದೃಷ್ಟ ನಿಮ್ಮ ಪರವಾಗಿರುತ್ತದೆ ಮತ್ತು ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ವೃತ್ತಿ ಜೀವನದ ವಿಷಯದಲ್ಲಿ ವೃತ್ತಿಪರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಮತ್ತು ಯಶಸ್ಸನ್ನು ಸಾಧಿಸುತ್ತಾರೆ. ತಮ್ಮ ವ್ಯಾಪರವನ್ನು ವಿಸ್ತರಿಸಲು ಮತ್ತು ಹೊಸ ಉದ್ಯಮಿಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿರುವ ಉದ್ಯಮಿಗಳಿಗೆ, ಈ ಸಮಯವು ಅನುಕೂಲಕರವಾಗಿರುತ್ತದೆ. ನಿಮ್ಮ ಪ್ರೀತಿಯ ಜೀವನದಲ್ಲೂ ಹೊಂದಾಣಿಕೆ ಇರುತ್ತದೆ.
Numerology Today: ಈ ಸಂಖ್ಯೆ ಇದ್ದವರಿಗೆ ಸಹೋದರನೇ ಶತ್ರು ಆಗುವನು..!
ಮಕರ ರಾಶಿ ( Capricorn )
ಇದು ನಿಮಗೆ ಶುಭ ಫಲಿತಾಂಶಗಳು ಬರಲಿವೆ. ನಿಮ್ಮ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಈ ಅವಧಿಯಲ್ಲಿ ನೀವು ಪ್ರಾರಂಭಿಸುವ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಕುಟುಂಬದ ವಾತಾವಣವು ತುಂಬಾ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಆನಂದಿಸುವಿರಿ.
ಕುಂಭ ರಾಶಿ ( Aquarius)
ನೀವು ಧನಾತ್ಮಕ ಪ್ರಭಾವವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ವೃತ್ತಿಪರರ ಒತ್ತಡ ಕಡಿಮೆ ಇರುತ್ತದೆ. ನೀವು ಕಚೇರಿಯಲ್ಲಿ ಅನುಕೂಲಕರ ವಾತಾವರಣವನ್ನು ಪಡೆಯುತ್ತೀರಿ, ಅದು ನಿಮಗೆ ಸಮಾಧಾನವನ್ನು ನೀಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ಅವಧಿಯಲ್ಲಿ ನೀವು ಇದ್ದಕ್ಕಿದ್ದಂತೆ ಬಹಳಷ್ಟು ಹಣವನ್ನು ಪಡೆಯಬಹುದು.
30 ವರ್ಷಗಳ ನಂತರ ಯೋಗ ತಂದ ಶನಿದೇವ; ಈ ಮೂರು ರಾಶಿಯವರು ಇದೀಗ ರಾಜರು..!
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.