ಚಿಕ್ಕಮಗಳೂರು: ಶೃಂಗೇರಿ, ಹೊರನಾಡಿನಲ್ಲಿ ಶರನ್ನವರಾತ್ರಿಗೆ ಚಾಲನೆ, ದೇವಿ ದರ್ಶನ ಪಡೆದ ಭಕ್ತರು!

ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಇಂದು ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಇಂದು ಶ್ರೀ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ಜಗಜ್ಜನನೀ ದುರ್ಗಾದೇವಿಯ ಮೊದಲನೆ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು.

Driving to Sringeri Horanadu for Sharannavaratri in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.03):  ನಾಡಿನೆಲ್ಲಡೆ ನವರಾತ್ರಿ ಉತ್ಸವಕ್ಕೆ ಇಂದು(ಗುರುವಾರ) ಚಾಲನೆ ಸಿಕ್ಕಿದೆ. ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ ಹಾಗೂ ಹೊರನಾಡಿನಲ್ಲೂ ಶರನ್ನವರಾತ್ರಿಯ ಅದ್ಧೂರಿ ಆಚರಣೆ, ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ನವರಾತ್ರಿ ಮುಗಿಯುವರೆಗೂ ಎರಡು ಧಾರ್ಮಿಕ ಕೇಂದ್ರಗಳಲ್ಲೂ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುಲಿದೆ. ಇಂದು ನವರಾತ್ರಿ ಮೊದಲ ದಿನ  ಶೃಂಗೇರಿಯ ಶಾರದಾ ಪೀಠದಲ್ಲಿ ಶಾರದಾದೇವಿ ಹಂಸವಾಹನಾರೂಢಳಾಗಿ ಭಕ್ತರಿಗೆ ದರ್ಶನ ನೀಡಿದ್ರೆ ಹೊರನಾಡಿನಲ್ಲಿ ಅನ್ನಪೂಣೇಶ್ವರಿ ಹಂಸಾರೂಢಾ ಸರಸ್ವತೀ ರೂಪದಲ್ಲಿ ಭಕ್ತರಿಗೆ ದರ್ಶನದ ಭಾಗ್ಯ ನೀಡಿದ್ದಾಳೆ.

ಹಂಸವಾಹನಾರೂಢಳಾಗಿ ಶಾರದೆ ದರ್ಶನ: 

ನವರಾತ್ರಿ ಸಮಯದಲ್ಲಿ ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳಿಗೆ ಸಾಕ್ಷಿ ಆಗಲಿದೆ. ನವರಾತ್ರಿ ಹಿನ್ನೆಲೆಯಲ್ಲಿ ಇಂದು ಶೃಂಗೇರಿಯ ಶಾರದಾ ಪೀಠದ ಮಾತೆ ಶಾರದೆ ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆ ಧರಿಸಿ ಹಂಸವಾಹನಾರೂಢಳಾಗಿ ಬ್ರಹ್ಮನ ಪಟ್ಟದ ರಾಣಿಯಾಗಿ ಭಕ್ತರನ್ನು ಅನುಗ್ರಹಿಸಿದಳು. ಬೀದಿ ಉತ್ಸವದಲ್ಲಿ ಅಡ್ಡಗದ್ದೆ ಗ್ರಾ.ಪಂ ಭಕ್ತಾಧಿಗಳು ಭಾಗವಹಿಸಿದರು. ಶ್ರೀಮಠದಲ್ಲಿ ರಾತ್ರಿ ನಡೆದ ದರ್ಬಾರನಲ್ಲಿ ಕಿರಿಯಶ್ರೀಗಳು ಭಾಗಿಯಾದರು.ದರ್ಬಾರ್  ನಡೆಯುವ ಮುನ್ನ ದೇವಾಲಯದ ಒಳಭಾಗದಲ್ಲಿ  ಚಿನ್ನದ ರಥದಲ್ಲಿ  ಶಾರದಾ ದೇವಿಯ ಉತ್ಸವ ಮೂರ್ತಿ ಅಲಂಕಾರ ಪ್ರತಿಷ್ಠಾಪನೆ ಮಾಡಿ ಮೂರು ಸುತ್ತು ಪ್ರದಕ್ಷಣೆ ನಡೆಯಿತು. 

3 ರಾಶಿಗೆ 65 ದಿನ ಐಷಾರಾಮಿ ಜೀವನ, ಮಂಗಳ ನಿಂದ ಅದೃಷ್ಟ

ನವರಾತ್ರಿಯ ಸಂದರ್ಭದಲ್ಲಿ ಶ್ರೀಮಠದಲ್ಲಿ ಪಾರಾಯಣಗಳು, ಸೂರ್ಯನಮಸ್ಕಾರ. ಶ್ರೀಸೂಕ್ತ ಜಪ, ಭುವನೇಶ್ವರಿ -ಜಪ, ದುರ್ಗಾಜಪ, ಮೊದಲಾದ, ಜಪಗಳು ನಡೆದ್ರೆ, ಶ್ರೀಚಂದ್ರಮೌಳೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಜಗನಾತೆಯ ಆವಾಸಸ್ಥಾನವಾದ ಶ್ರೀಚಕ್ರಕ್ಕೆ ನವಾವರಣ ಪೂಜೆ ನಡೆಯಿತು. ನವರಾತ್ರಿ ಸಮಯದಲ್ಲಿ  ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸುವಾಸಿನಿ ಪೂಜೆ, ಕುಮಾರೀ ಪೂಜೆ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಇತ್ಯಾದಿಗಳು ನಡೆಯುತ್ತವೆ.ಪ್ರತಿನಿತ್ಯ ಸಂಜೆ 6.30 ಕ್ಕೆ ಶ್ರೀಶಾರದಾಂಬೆಗೆ ರಾಜಬೀದಿಯಲ್ಲಿ ಬೀದಿ ಉತ್ಸವ ನಡೆಯುಲಿದೆ. 

ಹೊರನಾಡಿನಲ್ಲೂ ಸಂಭ್ರಮದಿಂದ ನವರಾತ್ರಿ ಚಾಲನೆ:

ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಇಂದು ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.ಇಂದು ಶ್ರೀ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ಜಗಜ್ಜನನೀ ದುರ್ಗಾದೇವಿಯ ಮೊದಲನೆ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು.

ಬುಧ ಶನಿಯಿಂದ ಮಾರಕ ಯೋಗ, 5 ರಾಶಿಗೆ ಬಿಕ್ಕಟ್ಟು, ಹಣದ ಸಮಸ್ಯೆ ಎಚ್ಚರ

ಬೆಳಿಗ್ಗೆ 9.30 ಸಮಯಕ್ಕೆ ಸರಿಯಾಗಿ ನವರಾತ್ರಿಯ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ಪೂಜೆಗಳು ನೆರವೇರಿದವು. ಬೆಳಿಗ್ಗೆ 8.30ಕ್ಕೆ ಶ್ರೀ ಪಂಚದುರ್ಗಾ ಹೋಮ ನಡೆಯಿತು. ಹೋಮದ ಪೂರ್ಣಾಹುತಿಯನ್ನು ದೇವಸ್ಥಾನದ ಧರ್ಮಕರ್ತರಾದ ಡಾ|ಜಿ.ಭೀಮೇಶ್ವರ ಜೋಷಿ ದಂಪತಿಗಳು ನೆರವೇರಿಸಿದರು.

ದೇವಿ ದರ್ಶನ ಪಡೆಯುಲು ಆಗಮಿಸಿದ ಭಕ್ತರು: 

ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ರಾಜ್ಯ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾತೆ ಅನ್ನಪೂರ್ಣೇಶ್ವರಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕು|| ಪ್ರಭಾ ಮತ್ತು ತಂಡ ಬೆಂಗಳೂರು ಇವರಿಂದ ಗಾಯನ ಮತ್ತು ವೀಣಾ ವಾದನ. ಸಂಜೆ ಶ್ರೀಕಂಠೇಶ್ವರ ಭರತನಾಟ್ಯ ಕಲಾ ಶಾಲಾ ಬೆಂಗಳೂರು ಇವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.ನಾಳೆ ಗಜಾರೂಢಾ ಬ್ರಹ್ಮಚಾರಿಣೀ ಅಲಂಕಾರ ಪೂಜೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ ನಡೆಯಲಿದೆ.

Latest Videos
Follow Us:
Download App:
  • android
  • ios