ಕನಸು ಕಾಣುವಾಗ ನಮ್ಮ ದೇಹ ನಿದ್ದೆಯಲ್ಲಿದ್ದರೂ ಮನಸ್ಸು ಕೆಲಸ ಮಾಡುತ್ತಲೇ ಇರುತ್ತದೆ.
ಜ್ಯೋತಿಷಿಗಳು ಹಾಗೂ ಮನಶಾಸ್ತ್ರಜ್ಞರ ಪ್ರಕಾರ, ಕನಸುಗಳು ನಮ್ಮೆಲ್ಲ ಆಸೆ, ಕನಸು, ನೆನಪುಗಳು, ಯೋಚನೆಗಳು, ಭರವಸೆಗಳ ಸುಪ್ತ ರೂಪ. ಕೆಲವೊಮ್ಮೆ ಕನಸಿನಲ್ಲಿ ಕಾಣಿಸಿಕೊಳ್ಳುವ ಕೆಲ ವಸ್ತುಗಳು, ನಡೆವ ಕೆಲ ಘಟನೆಗಳು ಮುಂದಿನ ಅದೃಷ್ಟದ ಸೂಚಕವಾಗಿರಬಹುದು. ಕನಸಿನಲ್ಲಿ ಏನೆಲ್ಲ ಬಂದರೆ ಅವು ಬರಲಿರುವ ಸಮೃದ್ಧಿಯನ್ನು ಸೂಚಿಸುತ್ತವೆ ಗೊತ್ತಾ?
ರಕ್ತ(blood)
ತಮ್ಮ ದೇಹದಿಂದ ರಕ್ತ ಕೆಳಗೆ ಬೀಳುತ್ತಿರುವಂತೆ ಯಾರಿಗಾದರೂ ಕನಸು ಬಿದ್ದರೆ ಅವರು ಬೆವರಿ ಬೆದರಿ ಭಯ ಬೀಳುವುದು ಖಚಿತ. ಆದರೆ, ಇದು ಶುಭಸೂಚಕ ಎನ್ನುವುದು ನಿಮಗೆ ಅಚ್ಚರಿ ಉಂಟು ಮಾಡಬಹುದು. ಒಂದು ವೇಳೆ ಕನಸಿನಲ್ಲಿ ತಮ್ಮ ದೇಹಕ್ಕೆ ಗಾಯವಾಗಿ ರಕ್ತ ಸುರಿಯುತ್ತಿದ್ದಂತೆ ಕಂಡರೆ ಅದು ಹೆಚ್ಚಲಿರುವ ಅವರ ಆಸ್ತಿಯ ಸೂಚಕ. ಅಷ್ಟೇ ಅಲ್ಲ, ಯಾರನ್ನೋ ಕೊಲೆ ಮಾಡಿದಂತೆ ಕನಸು ಬಿದ್ದರೂ, ಆಸ್ತಿ ಹೆಚ್ಚಾಗಲಿದೆ ಎಂದರ್ಥ.
ಸಮುದ್ರ(ocean)
ಚಲಿಸುವ ಅಲೆಗಳು, ಸಮುದ್ರದ ಹರಿಯುವ ನೀರು ಕಂಡರೆ ಅದು ಲಕ್ಷ್ಮೀ ದೇವಿಯ ಆಶೀರ್ವಾದದ ಸೂಚನೆ. ಸಮುದ್ರವು ಚಂದ್ರ ಹಾಗೂ ಇತರೆ ಗ್ರಹಗಳೊಡನೆ ಸಂವಹಿಸುವುದು. ಹಾಗಾಗಿ ಇನ್ನು ಮುಂದೆ ನಿಮಗೆ ಧನಲಾಭ ಹೆಚ್ಚುವುದು, ಹಣ ಪಡೆವ ಮಾರ್ಗಗಳು ಹೆಚ್ಚುವುವು ಎಂದರ್ಥ.
Traits of Tuesday Born: ಮಂಗಳವಾರ ಹುಟ್ಟಿದವರ ವೃತ್ತಿ, ವೈವಾಹಿಕ ಜೀವನ ಹೇಗೆ?
ಮಳೆ(rainfall)
ಕನಸಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವಂತೆ ಕಂಡು ಬಂದರೆ, ಅದರರ್ಥ ಸಧ್ಯದಲ್ಲೇ ನಿಮ್ಮ ಸ್ನೇಹ ಸಂಬಂಧಗಳಲ್ಲಿ ಬಿರುಕು ಮೂಡಲಿದೆ ಎಂದು. ಹಾಗೆಂದು ಹೆದರುತ್ತಾ ಕೂತರೆ ಅಗತ್ಯವಿಲ್ಲ. ಏಕೆಂದರೆ, ಈ ಕನಸಿನ ಮತ್ತೊಂದು ಸೂಚನೆ ಎಂದರೆ ನಿಮ್ಮ ಉದ್ಯಮದಲ್ಲಿ ಸಧ್ಯದಲ್ಲೇ ಯಶಸ್ಸು ಪಡೆಯುತ್ತೀರಿ ಎಂದೂ ಆಗಿದೆ.
ಮೀನು(fish)
ಮೀನಿಗೆ ವಾಸ್ತುವಿನಲ್ಲೂ ಅದೃಷ್ಟ ಎನ್ನಲಾಗುತ್ತದೆ. ಕನಸಿನಲ್ಲಿ ಕೂಡಾ. ಕನಸಲ್ಲಿ ಮೀನು ಕಂಡರೆ ಅದು ಅದೃಷ್ಟ ಸೂಚಕ. ಅದರಲ್ಲೂ ಮೀನು ಮಾರುವವರು ಕಂಡಿರೆಂದರೆ ಸಧ್ಯದಲ್ಲೇ ನಿಮ್ಮ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳಲಿದೆ ಎಂದರ್ಥ.
Gemstones for Success: ನಿಮ್ಮ ವೃತ್ತಿಗೆ ಯಶಸ್ಸು ತಂದುಕೊಡುವ ರತ್ನ ಯಾವುದು ತಿಳಿಯಿರಿ
ಬಿಳಿ ಗೂಳಿ(white bull)
ಬಿಳಿ ಗೂಳಿ ಸಾಮಾನ್ಯವಾಗಿ ಕನಸಿನಲ್ಲಿ ಕಾಣಲಾರದು. ಒಂದು ವೇಳೆ ಕಂಡರೆ ಅದರರ್ಥ ಭೂಮಿಯಿಂದ ಲಾಭವಿದೆ ಎಂದು. ಭೂಮಿಯಿಂದ ಸಂಪತ್ತು ದೊರೆಯಲಿದೆ ಅಥವಾ ಭೂಮಿಯೂ ದೊರೆಯಲಿದೆ ಎಂದಾಗಿದೆ. ಬಿಳಿ ಗೂಳಿಯೊಂದಿಗೆ ಆಡುವಂತೆ ಕನಸಾದರೆ, ಮುಂದಿನ 5 ದಿನಗಳೊಳಗೆ ಆರ್ಥಿಕ ಲಾಭವಿದೆ ಎಂದರ್ಥ.
ಹಣ್ಣುಗಳು(fruits)
ಕನಸಿನಲ್ಲಿ ಯಾವುದಾದರೂ ಹಣ್ಣನ್ನು ಸ್ವತಃ ತಿನ್ನುತ್ತಿರುವುದು ಕಂಡು ಬಂದರೆ, ಸಧ್ಯದಲ್ಲೇ ಲಕ್ಷ್ಮಿಯ ಅನುಗ್ರಹಕ್ಕೆ ಪಾತ್ರರಾಗುವಿರಿ ಎಂದರ್ಥ. ಸೀತಾಫಲ, ಮಾವು, ವಾಲ್‌ನಟ್, ಈರುಳ್ಳಿ, ಬೆಳ್ಳುಳ್ಳಿ, ಅರಿಶಿನ ಬೇರು, ಕೆನೆ, ಸಕ್ಕರೆ, ಮೊಸರು, ಮಜ್ಜಿಗೆ, ಹಾಲು, ದಾಳಿಂಬೆ, ಕಲ್ಲಂಗಡಿ ಹಣ್ಣಿನಂಥ ಆಹಾರಗಳು ಕನಸಿನಲ್ಲಿ ಬಂದಾಗ ಹಣದ ವಿಷಯವಾಗಿ ಸಿಹಿಸುದ್ಧಿಯನ್ನು ನಿರೀಕ್ಷಿಸಬಹುದು.
ಸ್ನಾನ(Bath)
ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು ಬಿದ್ದರೆ ಆ ವ್ಯಕ್ತಿಯು ಶೀಘ್ರ ಶ್ರೀಮಂತನಾಗಲಿದ್ದಾನೆ ಎಂಬ ಸೂಚನೆ. ತನ್ನದೇ ತಲೆಯ ಮೇಲೆ ಕಿರೀಟ ಇಟ್ಟುಕೊಳ್ಳುವಂತೆ ಕನಸಿನಲ್ಲಿ ಕಂಡರೆ, ಆ ವ್ಯಕ್ತಿಯ ಮಿಲಿಯನೇರ್ ಆಗುವ ಕನಸು ಬಹುತೇಕ ನನಸಾಗಲಿದೆ ಎಂದೇ ಅರ್ಥ.
ನಂಬರ್ 8(number eight)
ಕನಸಿನಲ್ಲಿ ಸಂಖ್ಯೆ 8 ಕಂಡುಬಂದರೆ, ಯಶಸ್ಸು, ಸಂಪತ್ತು, ಹೊಸ ವಸ್ತುಗಳು ನಿಮ್ಮ ಹಾದಿಯಲ್ಲಿವೆ ಎಂದರ್ಥ. ಏಕೆಂದರೆ, ಏಷ್ಯನ್ನರ ಪ್ರಕಾರ ಸಂಖ್ಯೆ 8 ಅದೃಷ್ಟಶಾಲಿಯಾಗಿದೆ.
ಹಣ(money)
ಕನಸಿನಲ್ಲಿ ನೋಟು ಇಲ್ಲವೇ ನಾಣ್ಯ ಕಾಣಿಸಿಕೊಂಡರೆ ಅದು ನಿಮ್ಮ ಹಣ ಹೆಚ್ಚಾಗಲಿರುವುದನ್ನು ಸೂಚಿಸುತ್ತದೆ. ಅದರಲ್ಲೂ ಹಣ ತೆಗೆದುಕೊಳ್ಳುವಂತಿರದೆ, ಕೊಡುವಂತೆ ಕಂಡರೆ ಅಥವಾ ಬೇರಾವುದೇ ರೀತಿಯಲ್ಲಿ ಕಂಡರೆ ನೀವು ಶ್ರೀಮಂತರಾಗುವುದು ಪಕ್ಕಾ ಎಂದರ್ಥ.
