Swapna Shastra: ಕನಸಿನಲ್ಲಿ ಹಳೆ ಮನೆ ಕಂಡ್ರೆ ಏನು ಅರ್ಥ?

ಪ್ರತಿಯೊಬ್ಬರೂ ರಾತ್ರಿ ಕನಸು ಕಾಣ್ತಾರೆ. ಕೆಲವು ಕನಸು ಆಶ್ಚರ್ಯಕರವಾಗಿರುತ್ತವೆ. ಹಳೆಯ ಮನೆಯ ಬಗ್ಗೆ ನಿಮಗೆ ಕಾಣುವು ಕನಸು ಮಿಶ್ರ ಪರಿಣಾಮಗಳನ್ನು ಹೊಂದಿರುತ್ತದೆ. ಈ ಕನಸು ಎಲ್ಲರಿಗೂ ಒಂದೇ ಸೂಚನೆಯನ್ನು ನೀಡಬೇಕೆಂದೇನಿಲ್ಲ. ಕನಸು ಕಲ್ಪನೆಯನ್ನು ಅವಲಂಭಿಸಿದೆ. 
 

Dream Of Old House Meaning

ಕನಸಿನಲ್ಲಿ ನಾವು ಊಹಿಸಿಕೊಳ್ಳದ ವಿಷ್ಯಗಳೆಲ್ಲ ಬಂದು ಹೋಗಿರುತ್ತದೆ. ಅತಿ ಅಪರೂಪದ ವ್ಯಕ್ತಿ ಅಥವಾ ಚಿತ್ರವಿಚಿತ್ರ ಸ್ಥಳ, ದೇವಸ್ಥಾನ, ಮನೆ ಹೀಗೆ ನಾವು ಒಮ್ಮೆಯೂ ನೋಡದ ಜಾಗಗಳು ಕೂಡ ಕನಸಿನಲ್ಲಿ ಕಾಣುತ್ತವೆ. ಕೆಲ ಕನಸುಗಳು ಭಯಾನಕವಾಗಿರುತ್ತವೆ. ಮತ್ತೆ ಕೆಲ ಕನಸುಗಳು ಮನಸ್ಸಿಗೆ ಹಿತ ನೀಡುತ್ತವೆ. ಕನಸಿನಲ್ಲಿ ಕಂಡ ಸಂಗತಿಯನ್ನು ಬೆಳಿಗ್ಗೆ ಬಹುತೇಕರು ಮರೆಯುತ್ತಾರೆ. ಆದ್ರೆ ನೀವು ಕಾಣುವ ಕನಸಿಗೂ ನಿಮ್ಮ ಭವಿಷ್ಯ, ನಿಮ್ಮ ಮನಸ್ಥಿತಿಗೂ ಸಂಬಂಧವಿದೆ. ಇಡೀ ದಿನ ಆ ವಿಷ್ಯದ ಬಗ್ಗೆ ನಾನು ಆಲೋಚನೆ ಮಾಡಿಲ್ಲ, ಆ ವ್ಯಕ್ತಿಯನ್ನು ನೆನಪಿಸಿಕೊಂಡಿಲ್ಲ, ಅದಾಗ್ಯೂ ಆತ ಹೇಗೆ ಬಂದ ಎಂದು ನಾವು ಆಲೋಚನೆ ಮಾಡ್ತೇವೆ. ಆದ್ರೆ ಅದಕ್ಕೂ ಕನಸಿನಲ್ಲಿ ಅರ್ಥವಿದೆ. ನಾವಿಂದು ಕನಸಿನಲ್ಲಿ ಹಳೆ ಮನೆ ಕಂಡ್ರೆ ಏನು ಅರ್ಥ ಎಂಬುದನ್ನು ನಿಮಗೆ ಹೇಳ್ತೆವೆ.  

ಹಳೆ (Old) ಮನೆಯಲ್ಲಿ ವಾಸಿಸುವಂತೆ ಕನಸು (Dream) ಬಿದ್ರೆ? :  ಕನಸಿನಲ್ಲಿ ನಿಮ್ಮ ಹಳೆಯ ಮನೆ (House) ಯಲ್ಲಿ ನೀವು ವಾಸಿಸಿರುವಂತೆ ಕಂಡ್ರೆ ಇಂದು ಒಳ್ಳೆಯ ಸಂಕೇತವಾಗಿದೆ.  ಶೀಘ್ರದಲ್ಲೇ ಹಳೆಯ ಸಂಬಂಧಿ ಅಥವಾ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ನಿಮಗೆ ಸಿಗಲಿದೆ. ಇದ್ರಿಂದ ನಿಮಗೆ ಪ್ರಯೋಜನವಾಗಲಿದೆ. ಅನೇಕ ದಿನಗಳ ನಂತ್ರ ಕುಟುಂಬಸ್ಥರ ಜೊತೆ ಸಮಯ ಕಳೆಯುವ ಅವಕಾಶ ನಿಮಗೆ ಸಿಗಲಿದೆ. 

ಹಳೆಯ ಮನೆಯನ್ನು ಮಾರಾಟ (Sale) ಮಾಡಿದಂತೆ ಕನಸು ಬಿದ್ರೆ ಏನು ಸೂಚನೆ? : ಕನಸಿನಲ್ಲಿ ನಿಮ್ಮ ಹಳೆಯ ಮನೆಯನ್ನು ಮಾರಾಟ ಮಾಡಿದಂತೆ ಕಂಡ್ರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಳೆ ನೋವಿನ ವಿಷ್ಯವನ್ನು ಕೈಬಿಟ್ಟು, ಹೊಸ ಜೀವನ ಶುರು ಮಾಡಲು ಹೊರಟಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ಹಾಗಾಗಿಯೇ ಈ ಕನಸು ಮಂಗಳಕರ ಸಂಕೇತವಾಗಿದೆ.

ಹಳೆ ಮನೆ ಒಡೆದಂತೆ ಕನಸು : ಕನಸಿನಲ್ಲಿ ಹಳೆಯ ಮನೆಯನ್ನು ಒಡೆಯುವುದನ್ನು ನೀವು ನೋಡಿದ್ರೆ ಇದು ಒಳ್ಳೆಯದಲ್ಲ. ಹಾನಿಯ ಸಂಕೇತ ಇದಾಗಿದೆ. ಕುಟುಂಬಸ್ಥರಿಂದ ನಿಮಗೆ ನಷ್ಟವಾಗುವ ಸಾಧ್ಯತೆಯಿರುತ್ತದೆ.  

Nails Astrology: ಉದ್ದ ಉಗುರಿದ್ರೆ ಶನಿ ಕಾಟವೂ ಹೆಚ್ಚು!

ಕನಸಿನಲ್ಲಿ ನಿಮ್ಮ ಹಳೆ ಮನೆ ಕಂಡ್ರೆ  : ಸ್ವಪ್ನದಲ್ಲಿ ಹಳೆಯ ಮನೆ ಕಂಡ್ರೆ ಅದು ನಿಮ್ಮ ಭಾವನೆಯ ಜೊತೆ ಸಂಬಂಧ ಹೊಂದಿದೆ. ನೀವು ನಿಮ್ಮ ಭಾವನೆಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ಸೂಚಿಸುತ್ತದೆ. ಆ ಮನೆಯಲ್ಲಿ ವಾಸಿಸುವ ಯಾವುದೇ ಕುಟುಂಬದ ಸದಸ್ಯರ ಬಗ್ಗೆ ನಿಮಗೆ ವಿಶೇಷ ವಾತ್ಸಲ್ಯವಿದೆ. ಆದ್ರೆ ಅದನ್ನು ನೀವು ತೋರಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ ನೀವು ಸಮಸ್ಯೆಯಲ್ಲಿದ್ದೀರಿ, ಪೂರ್ವಜರ ಸಹಾಯ ಬಯಸುತ್ತಿದ್ದೀರಿ ಎಂಬುದನ್ನು ಕೂಡ ಸೂಚಿಸುತ್ತದೆ. ಈ ರೀತಿಯ ಕನಸು ನಿಮ್ಮ ಭವಿಷ್ಯಕ್ಕೆ ತುಂಬಾ ಒಳ್ಳೆಯದಲ್ಲ. ಇದು ನಿಮ್ಮನ್ನು ಉದ್ವಿಗ್ನ ಸ್ಥಿತಿಗೆ ಕರೆದೊಯ್ಯಬಹುದು. 

ಕೆಟ್ಟ ಸ್ಥಿತಿಯಲ್ಲಿರುವ ಹಳೆ ಮನೆ :  ಕನಸಿನಲ್ಲಿ ನಿಮ್ಮ ಹಳೆಯ ಮನೆ ಕೆಟ್ಟ ಸ್ಥಿತಿಯಲ್ಲಿದ್ದಂತೆ ಕಂಡ್ರೆ ನಿಮ್ಮ ಜೀವನದಲ್ಲಿ ಸಂತೋಷದ ಕೊರತೆಯಿದೆ ಎಂದರ್ಥ. ನೀವು ಹೊಸ ಹೆಜ್ಜೆ ಇಡಲು ಯೋಚಿಸುತ್ತಿದ್ದು, ಅದ್ರ ಬಗ್ಗೆ ನಿಮಗೆ ಭಯವೂ ಇದೆ ಎಂಬುದನ್ನು ಸೂಚಿಸುತ್ತದೆ.  

Vastu Tips : ಕ್ರಿಸ್ಮಸ್ ಹಬ್ಬದಲ್ಲಿ ಅದೃಷ್ಟ ತರುವ ಈ ಉಡುಗೊರೆ ನೀಡಿ

ಮನೆಯ ಅವಶೇಷ ಕನಸಿನಲ್ಲಿ ಕಂಡ್ರೆ ಏನು ಅರ್ಥ ?: ಕನಸಿನಲ್ಲಿ ನೀವು ಹಿಂದೆಂದೂ ನೋಡಿರದ ಮನೆ ನೋಡಿದರೆ ಅಥವಾ ತುಂಬಾ ಶಿಥಿಲಾವಸ್ಥೆಯಲ್ಲಿರುವ ಮನೆ ಕನಸಿನಲ್ಲಿ ಕಂಡ್ರೆ ಮುಂದಿನ ದಿನಗಳಲ್ಲಿ ನಿಮಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಶಿಥಿಲಗೊಂಡಿರುವ ಮನೆ ಕನಸಿನಲ್ಲಿ ಕಂಡ್ರೆ ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನ ಹರಿಸುತ್ತಿಲ್ಲ ಎಂದು ಸೂಚಿಸುತ್ತದೆ. ಹಾಗಾಗಿ ನೀವು ಕೆಲವು ಕಾಯಿಲೆಯ ಲಕ್ಷಣಗಳಿಗೆ ತುತ್ತಾಗುವ ಸಾಧ್ಯತೆಯಿರುತ್ತದೆ. ಇಂಥ ಕನಸು ಬಿದ್ರೆ ನೀವು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರವಹಿಸಿ.  
 

Latest Videos
Follow Us:
Download App:
  • android
  • ios