Vastu Tips : ಕ್ರಿಸ್ಮಸ್ ಹಬ್ಬದಲ್ಲಿ ಅದೃಷ್ಟ ತರುವ ಈ ಉಡುಗೊರೆ ನೀಡಿ
ಕ್ರಿಸ್ಮಸ್ ಹತ್ತಿರ ಬರ್ತಿದ್ದಂತೆ ಆಪ್ತರಿಗೆ ಯಾವ ಉಡುಗೊರೆ ನೀಡಬೇಕು ಎಂಬ ಗೊಂದಲ ಮನೆ ಮಾಡುತ್ತದೆ. ಅನೇಕ ಬಾರಿ ಅಪ್ರಯೋಜಕ ಉಡುಗೊರೆಯನ್ನು ನಾವು ನೀಡಿರ್ತೇವೆ. ಅದ್ರ ಬದಲು ವಾಸ್ತು ಶಾಸ್ತ್ರದಲ್ಲಿ ಹೇಳಿದ ಕೆಲ ಉಡುಗೊರೆ ನೀಡಿದ್ರೆ ಸುಖ, ಸಂತೋಷ ಪ್ರಾಪ್ತಿಯಾಗುತ್ತದೆ.
ಈ ವರ್ಷ 2022 ಮುಗಿತಾ ಇದೆ. ಹೊಸ ವರ್ಷ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ವರ್ಷದ ಕೊನೆಯ ಹಬ್ಬ ಕ್ರಿಸ್ಮಸ್ ಗೆ ತಯಾರಿ ಜೋರಾಗಿ ನಡೆದಿದೆ. ಭಾರತ ಸೇರಿದಂತ ವಿಶ್ವದಾದ್ಯಂತ ಅತ್ಯಂತ ಅದ್ಧೂರಿಯಾಗಿ ಆಚರಿಸುವ ಹಬ್ಬ ಕ್ರಿಸ್ಮಸ್. ಕ್ರಿಶ್ಚಿಯನ್ ಸಮುದಾಯದ ದೊಡ್ಡ ಹಬ್ಬ ಇದು. ಜೀಸಸ್ ಕ್ರೈಸ್ತನ ಜನ್ಮದಿನವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಕ್ರಿಸ್ಮಸ್ ಹಬ್ಬದಲ್ಲಿ ಉಳಿದ ಆಚರಣೆಗಳ ಜೊತೆ ಉಡುಗೊರೆಗೂ ವಿಶೇಷ ಮಹತ್ವವಿದೆ. ಪರಸ್ಪರ ಉಡುಗೊರೆಗಳನ್ನು ನೀಡಲಾಗುತ್ತದೆ. ಉಡುಗೊರೆ ಮೂಲಕ ಸಂತೋಷ ಹಂಚಿಕೊಳ್ಳುವ ಈ ಹಬ್ಬದಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ ಎಂದು ನಂಬಲಾಗಿದೆ. ಕ್ರಿಸ್ಮಸ್ ದಿನ ನೀವೂ ನಿಮ್ಮ ಆಪ್ತರಿಗೆ, ಸ್ನೇಹಿತರಿಗೆ ಗಿಫ್ಟ್ ನೀಡುವ ಆಲೋಚನೆಯಲ್ಲಿದ್ದರೆ ಯಾವ ಉಡುಗೊರೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳಿ. ಕ್ರಿಸ್ಮಸ್ ದಿನ ಕೆಲ ಉಡುಗೊರೆಗಳನ್ನು ನೀಡುವುದ್ರಿಂದ ಸಂತೋಷ, ಶಾಂತಿ, ಸಮೃದ್ಧಿ ಮತ್ತು ಪ್ರಗತಿ ನೆಲೆಸುತ್ತದೆ.
ವಾಸ್ತು (Vastu) ಶಾಸ್ತ್ರದ ಪ್ರಕಾರ ಕ್ರಿಸ್ಮಸ್ (Christmas) ದಿನ ನೀಡಿ ಈ ಉಡುಗೊರೆ:
ಕ್ರಿಸ್ಮಸ್ ಟ್ರೀ (Tree) : ಕ್ರಿಸ್ಮಸ್ ದಿನದಂದು ಕ್ರಿಸ್ಮಸ್ ಗಿಡಕ್ಕೆ ಹೆಚ್ಚು ಪ್ರಾಮುಖ್ಯತೆಯಿದೆ. ಅನೇಕರ ಮನೆಗೆ ಕ್ರಿಸ್ಮಸ್ ಟ್ರೀ ತರಲಾಗುತ್ತದೆ. ಮಾಲ್ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಕ್ರಿಸ್ಮಸ್ ಟ್ರೀ ಇಟ್ಟು ಅದಕ್ಕೆ ಲೈಟಿಂಗ್ ಮಾಡಲಾಗುತ್ತದೆ. ನೀವು ಕ್ರಿಸ್ಮಸ್ ದಿನ ಆಪ್ತರಿಗೆ ಗಿಫ್ಟ್ ನೀಡುವ ಪ್ಲಾನ್ ನಲ್ಲಿದ್ದರೆ ಉಡುಗೊರೆಯಾಗಿ ಕ್ರಿಸ್ಮಸ್ ಟ್ರೀ ನೀಡಬಹುದು. ಮನೆಗೆ ಕ್ರಿಸ್ಮಸ್ ಟ್ರೀ ತರುವುದ್ರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಅದೃಷ್ಟ (Good Luck) ಯಾವಾಗಲೂ ಮನೆಯಲ್ಲಿ ನೆಲೆಸಿರುತ್ತದೆ ಎಂದು ನಂಬಲಾಗಿದೆ. ಜೀವನದಲ್ಲಿರುವ ಅಡೆತಡೆಗಳು ದೂರವಾಗಲಿವೆ. ಗೌರವ ಹೆಚ್ಚಾಗಲಿದೆ.
Christmas 2022: ಕ್ರಿಸ್ಮಸ್ ದಿನದ ವಿಶೇಷತೆ, ಸಂಪ್ರದಾಯಗಳೇನು?
ಲಾಫಿಂಗ್ ಬುದ್ಧ (Laughing Buddha) : ಲಾಫಿಂಗ್ ಬುದ್ಧ ಮನೆಯಲ್ಲಿದ್ದರೆ ಅದೃಷ್ಟ ಮನೆಗೆ ಬರುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಲಾಫಿಂಗ್ ಬುದ್ಧನನ್ನು ನಾವೇ ಖರೀದಿ ಮಾಡಬಾರದು. ಲಾಫಿಂಗ್ ಬುದ್ಧನನ್ನು ಉಡುಗೊರೆಯಾಗಿ ನೀಡಬೇಕು ಎನ್ನಲಾಗುತ್ತದೆ. ಕ್ರಿಸ್ಮಸ್ ಸಂದರ್ಭದಲ್ಲಿ ನೀವು ಆಪ್ತರಿಗೆ ಲಾಫಿಂಗ್ ಬುದ್ಧನನ್ನು ಉಡುಗೊರೆ ನೀಡುವುದು ಉತ್ತಮ ಆಯ್ಕೆಯಾಗಿದೆ. ಒಂದ್ವೇಳೆ ನಿಮಗೆ ಲಾಫಿಂಗ್ ಬುದ್ಧ ಉಡುಗೊರೆಯಾಗಿ ಸಿಕ್ಕಿದ್ರೆ ಅದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡಬೇಕು. ಲಾಫಿಂಗ್ ಬುದ್ಧ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಸಿರುತ್ತದೆ.
ಕುದುರೆ ಫೋಟೋ (Horse Photo): ಕ್ರಿಸ್ಮಸ್ ಸಮಯದಲ್ಲಿ ನೀವು ಏಳು ಕುದುರೆ ಇರುವ ಫೋಟೋವನ್ನು ನೀವು ಉಡುಗೊರೆಯಾಗಿ ನೀಡಬೇಕು. ಮನೆಯಲ್ಲಿ ಕುದುರೆ ಫೋಟೋ ಇಡೋದ್ರಿಂದ ಮನೆಯಲ್ಲಿ ಪ್ರಗತಿಗೆ ಹೊಸ ಅವಕಾಶ ತೆರೆದುಕೊಳ್ಳುತ್ತದೆ. ಏಳು ಕುದುರೆಗಳ ಚಿತ್ರವನ್ನು ಸೂರ್ಯನ ರಥದ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಉಡುಗೊರೆಯಾಗಿ ನೀಡಿದ್ರೆ ಜೀವನದಲ್ಲಿ ಸಂತೋಷ ಲಭಿಸುತ್ತದೆ.
ಬಿದಿರಿನ ಗಿಡ (Bamboo Tree) : ವಾಸ್ತು ಶಾಸ್ತ್ರದಲ್ಲಿ ಬಿದಿರಿನ ಗಿಡಕ್ಕೆ ಮಹತ್ವದ ಸ್ಥಾನವಿದೆ. ಬಿದುರಿನ ಗಿಡವನ್ನು ಕೂಡ ನೀವು ಖರೀದಿಸಿ ತರುವುದು ಒಳ್ಳೆಯದಲ್ಲ. ಅದು ಉಡುಗೊರೆ ರೂಪದಲ್ಲಿ ಸಿಗಬೇಕು. ಉಡುಗೊರೆಯಾಗಿ ಸಿಕ್ಕ ಬಿದಿರಿನ ಗಿಡವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮಗೆ ಬಿದುರಿನ ಗಿಡ ಉಡುಗೊರೆಯಾಗಿ ಸಿಕ್ಕರೆ ಅದು ಜೀವನದಲ್ಲಿ ಪ್ರೀತಿ ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಕ್ರಿಸ್ಮಸ್ ಹಬ್ಬದ ಖುಷಿಯಲ್ಲಿ ನೀವು ಬಿದುರಿನ ಗಿಡವನ್ನು ಉಡುಗೊರೆಯಾಗಿ ನೀಡಬಹುದು.
Christmas 2022: ಬಾಯಲ್ಲಿ ನೀರೂರಿಸೋ ಸ್ಪೆಷಲ್ ಕುಕೀಸ್, ಸಿಂಪಲ್ ರೆಸಿಪಿ ಇಲ್ಲಿದೆ
ಪಿರಾಮಿಡ್ : ಫೆಂಗ್ ಶೂಯಿಯಲ್ಲಿ ಪಿರಾಮಿಡ್ ಅನ್ನು ಧನಾತ್ಮಕ ಶಕ್ತಿ ನೀಡುವ ವಸ್ತು ಎಂದು ಪರಿಗಣಿಸಲಾಗುತ್ತದೆ. ಸ್ಫಟಿಕ ಪಿರಾಮಿಡ್ ಅನ್ನು ಉಡುಗೊರೆಯಾಗಿ ನೀಡಬಹುದು. ಕ್ರಿಸ್ಮಸ್ ಹಬ್ಬದಲ್ಲಿ ಪಿರಾಮಿಡ್ ಉಡುಗೊರೆಯಾಗಿ ನೀಡಿದ್ರೆ ಅದೃಷ್ಟ ನಿಮ್ಮದಾಗುತ್ತದೆ.