Asianet Suvarna News Asianet Suvarna News

ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ದ್ರೌಪತಮ್ಮ ಕರಗ ಉತ್ಸವ: ಇದರ ವಿಶೇಷತೆ ಏನು ಗೊತ್ತಾ?

ಎಲ್ಲೆಡೆ ಕರಗ ಸಂಭ್ರಮಗಳು ನಡೆಯೋದು ಕಾಮನ್. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕರಗ ಬಹಳ ಸ್ಪೆಷಲ್ ಆಗಿರುತ್ತೆ. ಸಾಮಾನ್ಯವಾಗಿ ಪುರುಷರು ಕರಗ ಹೊರುವುದ ರೂಢಿ. ಆದ್ರೆ ಇಲ್ಲಿ ಮಹಿಳೆ ಕರಗ ಹೊರೊದು ವಿಶೇಷ. 

Draupadamma Karaga Mahotsava at chikkaballapur district gvd
Author
Bangalore, First Published May 30, 2022, 11:31 PM IST

ವರದಿ: ರವಿಕುಮಾರ್ ವಿ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಮೇ.30): ಎಲ್ಲೆಡೆ ಕರಗ ಸಂಭ್ರಮಗಳು ನಡೆಯೋದು ಕಾಮನ್. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕರಗ ಬಹಳ ಸ್ಪೆಷಲ್ ಆಗಿರುತ್ತೆ. ಸಾಮಾನ್ಯವಾಗಿ ಪುರುಷರು ಕರಗ ಹೊರುವುದ ರೂಢಿ. ಆದ್ರೆ ಇಲ್ಲಿ ಮಹಿಳೆ ಕರಗ ಹೊರೊದು ವಿಶೇಷ. ಚಿಕ್ಕಬಳ್ಳಾಪುರ ಅರುಂಧತಿ ಹರಿಜನ ಅಭಿವೃದ್ದಿ ಕರಗ ಸಮಿತಿಯಿಂದ ಕಳೆದ 60 ವರ್ಷಗಳಿಂದ ಕರಗ ಮಹೋತ್ಸವ ಹಮ್ಮಿಕೊಂಡು ಬರುತಿದ್ದು, ಈ ಬಾರಿ ಕೂಡ ಈ ಕರಗ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೇರೆಲ್ಲಾ ಕಡೆ ಪುರುಷರು ಕರಗ ಹೊರುವುದನ್ನು ನಾವು ಕಾಣುತ್ತೇವೆ. ಇಲ್ಲಿ ಹಲವು ವರ್ಷಗಳಿಂದ ಮಹಿಳೆಯೇ ಕರಗ ಹೊರುವುದು ಇಲ್ಲಿನ ವಿಶೇಷ. 

ಹೌದು! ತಮಿಳುನಾಡು ಮೂಲದ ಪುಟ್ಟಮ್ಮ ಎಂಬುವರು ಕರಗವನ್ನು ಹೊರುತ್ತಾರೆ. ರಾತ್ರಿ 11 ಘಂಟೆಗೆ ಕರಗ ಹೊರಲು ಶುರು ಮಾಡಿದ್ರೆ ಬೆಳಿಗ್ಗೆ 11 ಘಂಟೆವರೆಗೂ ನಗರದ ಮನೆ ಮನೆಗೂ ತೆರಳಿ ಬರುತ್ತಾರೆ. ಮಹಿಳೆಯಾದರು, ಬೆಳಿಗ್ಗೆವರೆಗೂ ನಗರದ ಹಲವು ಪ್ರದೇಶಗಳಿಗೆ ತೆರಳಿ ಪುರುಷನಿಗಿಂತ ಕಡಿಮೆಯಿಲ್ಲದಂತೆ ಕರಗ ಹೊರುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನೂ ರಾತ್ರಿಯಿಡಿ 300ಕ್ಕೂ ಹೆಚ್ಚು ಕಲಾವಿದರ ತಂಡಗಳ ಭಾಗವಹಿಸಿದ್ದು, ಈ ಕರಗದ ಮತ್ತೊಂದು ವಿಶೇಷ. ಇನ್ನೂ ಈ ಕರಗ ಶುರುವಾಗಿದ್ದೆ ಒಂದು ರೋಚಕ. ಮಾಜಿ ಶಾಸಕ ಎ ಮುನಿಯಪ್ಪ ಅವರು ಈ ಕರಗವನ್ನು ಶುರು ಮಾಡಿದ್ರು.

ದೇಶ ಮೊದಲು, ದೇಶಕ್ಕಾಗಿ ನಾನಿದ್ದೇನೆ ಎಂಬ ಭಾವನೆ ಮೂಡಲಿ: ಕಾಗೇರಿ

ಸ್ವಾಭಿಮಾನದಿಂದ ಕರಗ ಆರಂಭಿಸಿದ ಮಾಜಿ ಶಾಸಕ ಎ ಮುನಿಯಪ್ಪ: 1960ರ ದಶಕದಲ್ಲಿ ಚಿಕ್ಕಬಳ್ಳಾಪುರದಲ್ಲಿ ಕರಗ ನಡೆದುಕೊಂಡು ಬರುತಿತ್ತು, ಆದ್ರೆ ಆ ದಿನ ಕರಗ ದಲಿತರು ಹಾಗೂ ಬಡವರಿದ್ದ ಪ್ರದೇಶಗಳಿಗೆ ತೆರಳದೇ ಅವರನ್ನು ಪ್ರತ್ಯೇಕವಾಗಿ ಕಾಣುತಿತ್ತು. ಇದರಿಂದ ನಾವು ಯಾರಿಗಿಂತ ಕಡಿಮೆಯೇನಿಲ್ಲ, ನಾವೇ ಒಂದು ಕರಗ ನಡೆಸೋಣ ಎಂದು ಮಾಜಿ ಶಾಸಕ ಎ ಮುನಿಯಪ್ಪ 1961-62 ರಿಂದಲೇ ಕರಗವನ್ನು ನಡೆಸಿದ್ರು. ಬಳಿಕ ಇವರ ಮಗ ಮಾಜಿ ಶಾಸಕ ಎಂ.ಶಿವಾನಂದ  ಇಂದಿಗೂ ಕೂಡ ಕಳೆದ 60 ವರ್ಷಗಳಿಂದ ಕರಗವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

ದಕ್ಷಿಣ ಭಾರತದಲ್ಲೆ ಮಹಿಳೆ ಕರಗ ಹೊರುವ ಏಕೈಕ ಕರಗ: ಕರಗ ಅಂದ ಕೂಡಲೇ ಎಲ್ಲರನ್ನು ಆಕರ್ಷಿಸುವ ಒಂದು ಸಂಪ್ರದಾಯದ ಹಬ್ಬ. ಆದ್ರೆ ಕರಗವನ್ನು ಪುರುಷರು ಹೊರೋದು ಸಹಜ. ಆದ್ರೆ ಚಿಕ್ಕಬಳ್ಳಾಪುರದ ಈ ಕರಗದಲ್ಲಿ ಮಹಿಳೆ ಕರಗ ಹೊತ್ತು, ಇಡೀ ರಾತ್ರಿ ಮನೆ ಮನೆಗೆ ತೆರಳಿ ಪುರುಷನಗಿಂತ ಏನು ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕಿ ಗಮನ ಸೆಳೆಯುತ್ತಾರೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮಹಿಳೆಯೊಬ್ಬರು ಕರಗ ಹೊರುವ ಏಕೈಕ ಕರಗ ಮಹೋತ್ಸವ ಅರುಂಧತಿ ಹರಿಜನ ಕರಗ ಮಹೋತ್ಸವದ ವಿಶೇಷ. ತಮಿಳುನಾಡು ಮೂಲದ ಪುಟ್ಟಮ್ಮ ಎಂಬಾಕೆ ಕಳೆದ ಹಲವು ವರ್ಷಗಳಿಂದ ಕರಗ ಹೊರೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Chikkaballapur: ನಗರಸಭೆಯ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ

300ಕ್ಕೂ ಹೆಚ್ಚು ಪ್ರಸಿದ್ದ ಕಲಾವಿದರಿಂದ ಪ್ರದರ್ಶನ: ಇನ್ನೂ ಮಹಿಳೆ ಕರಗ ಹೊರೋದು ಒಂದೆಡೆಯಾದ್ರೆ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡಿನ ವಿವಿಧ ಕಲಾ ತಂಡಗಳು ನೆರದಿದ್ದ ಜನರನ್ನು ಮನರಂಜಿಸುವಂತೆ ಮಾಡಿತು. ಸುಮಾರು 300ಕ್ಕೂ ಹೆಚ್ಚು ಕಲಾವಿದರ ವಿವಧ ವೇಷ ಭೂಷಣಗಳಿಂದ ಇಡೀ ರಾತ್ರಿ ಎಲ್ಲರನ್ನು ರಂಜಿಸಿದ್ರು. ತಮಟೆ ವಾದ್ಯ, ಕೇರಳ, ತಮಿಳುನಾಡಿದ ಕಲಾವಿದರ ಕಲಾ ಪ್ರದರ್ಶನ ಎಲ್ಲರನ್ನು ಆಕರ್ಷಣೆ ಮಾಡುವಂತಿತ್ತು.

Follow Us:
Download App:
  • android
  • ios