Asianet Suvarna News Asianet Suvarna News

Donate And Get: ಸಂಕ್ರಾಂತಿ ದಿನ ಇವನ್ನು ದಾನ ಮಾಡಿದ್ರೆ ವರ್ಷವಿಡೀ ದುಡ್ಡಿಗೆ ಎಂದೂ ಬರವಿರೋಲ್ಲ!

ಮಕರ ಸಂಕ್ರಾಂತಿ ಸುಗ್ಗಿ ಕಾಲ. ಈ ದಿನ ನೀವು ಮಾಡುವ ದಾನದಿಂದ ಮಹಾಲಕ್ಷ್ಮೀ ಒಲಿಯುತ್ತಾಳೆ. ಇದರಿಂದ ವರ್ಷವಿಡೀ ಹಣದ ಕೊರತೆಯಿಲ್ಲದ ಜೀವನ ನಡೆಸಬಹುದು. 

Donating on Sankranti brings money luck skr
Author
Bangalore, First Published Jan 10, 2022, 3:42 PM IST

ಸಂಕ್ರಾಂತಿ(Makar Sankranti) ಎಂದರೆ ಸುಗ್ಗಿ ಕಾಲ. ರೈತರ ಬೆಳೆಯ ಕೊಯ್ಲನ್ನು ಆಚರಿಸುವ ಹಬ್ಬ. ಈ ದಿನ ಸೂರ್ಯ(Sun God)ನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇಂದಿನ ಸ್ನಾನ ಹಾಗೂ ದಾನಕ್ಕೆ ವಿಶೇಷ ಮಹತ್ವವಿದೆ. ಸುಗ್ಗಿಯ ದಿನ ಮಾಡುವ ದಾನ ಹಿಗ್ಗಿ ಬರುವುದೆಂಬ ನಂಬಿಕೆ ಇದೆ. ಇಂದು ಉತ್ತರಾಯಣ ಆರಂಭದ ದಿನವಾದ್ದರಿಂದ ದೇವಾನುದೇವತೆಗಳಿಗೆಲ್ಲ ಬೆಳಗಾಗುತ್ತದೆ. ಅವರೆಲ್ಲ ಎದ್ದ ದಿನ ಮಾಡಿದ ದಾನ ಅವರು ಗಮನಿಸದೆ ಇರಲು ಸಾಧ್ಯವೇ? ಹಾಗಾಗಿ, ಇಂದು ಮಾಡಿದ ದಾನಕ್ಕೆ ದೇವರ ಆಶೀರ್ವಾದ ಫಲ ಬೇಗ ಸಿಗಲಿದೆ. ಇಂದು ಈ ಕೆಳಗಿನ ವಸ್ತುಗಳನ್ನು ದಾನ ಮಾಡುವುದರಿಂದ ವರ್ಷವಿಡೀ ಹಣದ ಕೊರತೆಯಿಲ್ಲದ ಜೀವನ ಸಾಗಿಸಬಹುದು.

ಎಲ್ಲದಕ್ಕೂ ಮೊದಲು ಹೇಗೆ ದಾನ ಮಾಡಬೇಕು ನೋಡೋಣ. ಮೊದಲು ದಾನ ಕೊಡುವ ವಸ್ತುಗಳನ್ನು ದೇವರ ಎದುರಿನಲ್ಲಿಡಿ. ಸ್ನಾನ ಮಾಡಿ ಬಂದು ಆ ದಾನದ ವಸ್ತುಗಳ ಮೇಲೆ ನೀರಿನ ಪ್ರೋಕ್ಷಣೆ ಮಾಡಿ ಶುದ್ಧ ಮನಸ್ಸಿನಿಂದ ಅವುಗಳನ್ನು ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದು, ದಾನ ತೆಗೆದುಕೊಂಡವರ ಉನ್ನತಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ವರ್ಷವಿಡೀ ದಾನ ಮಾಡದವರು ಇದೊಂದು ದಿನ ಮಾಡಿದರೂ ಪುಣ್ಯ ವೃದ್ಧಿಯಾಗಲಿದೆ.

ಕಿಚಡಿ(Khichdi)
ಮಕರ ಸಂಕ್ರಾಂತಿಯ ದಿನ ಎಲ್ಲ ಹಿಂದೂಗಳ ಮನೆಯಲ್ಲಿ ಕಿಚಡಿ ತಯಾರಿಸಲಾಗುತ್ತದೆ. ಇಂದು ಕಿಚಡಿ ತಿನ್ನುವುದು ಒಳ್ಳೆಯದು ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ, ಕಿಚಡಿಯನ್ನು ದಾನ ಮಾಡುವುದು, ಹಸಿದವರಿಗೆ ಕಿಚಡಿ ಬಡಿಸುವುದು ಕೂಡಾ ಬಹಳ ಶುಭ(auspicious)ವನ್ನು ತರಲಿದೆ. 

ಬೆಲ್ಲ(Jaggery)
ಸಂಕ್ರಾಂತಿಯ ದಿನ ಬೆಲ್ಲ ತಿನ್ನುವುದಕ್ಕೆ ಕೂಡಾ ವಿಶೇಷ ಮಹತ್ವವಿದೆ. ದೇಹಕ್ಕೆ ಕಬ್ಬಿಣಾಂಶ ನೀಡುತ್ತದೆ ಬೆಲ್ಲ. ಈ ದಿನ ಕೇವಲ ನಾವು ತಿನ್ನುವುದಲ್ಲ, ಕಾರ್ಮಿಕರ ಮಕ್ಕಳು, ಕಷ್ಟಜೀವಿಗಳಿಗೆ ಕೂಡಾ ಬೆಲ್ಲ ದಾನ ಮಾಡಬೇಕು. ಇದರಿಂದ ದೇವರು ಸಂತುಷ್ಟನಾಗುವುದು ಖಚಿತ.

ಎಣ್ಣೆ(Oil)
ಸಂಕ್ರಾಂತಿಯ ದಿನ ಎಣ್ಣೆ ದಾನ ಮಾಡುವುದರಿಂದ ಶನಿ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರವಾಗಬಹುದು. 

Past Life: ಹಿಂದಿನ ಜನ್ಮದಲ್ಲಿ ನೀವೇನಾಗಿದ್ದಿರಿ ಅಂತ ತಿಳ್ಕೋಬೇಕಾ?

ಎಳ್ಳು(Til)
ಮಕರ ಸಂಕ್ರಾಂತಿ ಎಂದರೆ ಎಳ್ಳು ಬೆಲ್ಲ ಮಾಡೇ ಮಾಡುತ್ತೇವೆ. ಇಂದು ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಬೇಕು ಎನ್ನಲಾಗುತ್ತದೆ. ಹಾಗೆಯೇ ಎಳ್ಳುಬೆಲ್ಲವನ್ನು ಸುತ್ತಮುತ್ತಲಿನ ಜನರಿಗೆ ಹಂಚುವ ಪದ್ಧತಿಯೂ ಇದೆ. ಇದರ ಹೊರತಾಗಿ ಎಳ್ಳನ್ನು ದಾನ ನೀಡುವುದರಿಂದ ಕೂಡಾ ಶನಿಯ ಕಾಟದಿಂದ ಮುಕ್ತರಾಗಬಹುದು. 

ತುಪ್ಪ(Ghee)
ಸಂಕ್ರಾಂತಿಯ ದಿನ ತುಪ್ಪ ದಾನ ನೀಡುವುದರಿಂದ ವೃತ್ತಿ ಜೀವನ, ವ್ಯಾಪಾರದಲ್ಲಿ ಅಭಿವೃದ್ಧಿ ಹೆಚ್ಚುತ್ತದೆ. 

Hindu Festivals: ನಾವೇಕೆ ಮಕರ ಸಂಕ್ರಾಂತಿ ಆಚರಿಸಲೇಬೇಕು ಎಂಬುದಕ್ಕೆ 5 ಕಾರಣಗಳು..

ಧಾನ್ಯಗಳು(grains)
ಈ ಹಬ್ಬದಲ್ಲಿ ಐದು ರೀತಿಯ ಧಾನ್ಯಗಳನ್ನು ದಾನ ಮಾಡುವುದು ಕೂಡಾ ಅತ್ಯಂತ ಒಳಿತೆನ್ನಲಾಗುತ್ತದೆ. ಇದರಿಂದ ನಮ್ಮೆಲ್ಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ. ತೊಗರಿಬೇಳೆ, ಅಕ್ಕಿ, ಎಳ್ಳು, ಉದ್ದಿನಬೇಳೆ, ಕಡಲೆ - ಈ ಐದನ್ನು ದಾನ ಮಾಡಬಹುದು. 

ಉಪ್ಪು(Salt)
ಸಂಕ್ರಾಂತಿಯ ದಿನ ಉಪ್ಪಿನ ಹೊಸ ಪ್ಯಾಕೆಟ್ ತಂದು ದಾನ ನೀಡುವುದರಿಂದ ಶುಕ್ರ ಗ್ರಹದ ಅನುಗ್ರಹ ದೊರೆಯಲಿದೆ. ಶುಕ್ರನು ಬದುಕಿನ ಎಲ್ಲ ಲಕ್ಷುರಿಗಳಿಗೆ ಕಾರಣಕಾರಕನಾಗಿದ್ದಾನೆ. 

ಹಚ್ಚಡ(Blanket)
ಹೊದಿಯುವ ಹೊದಿಕೆಯನ್ನು ಸಂಕ್ರಾಂತಿಯ ದಿನ ಬಡವರಿಗೆ ನೀಡುವುದರಿಂದ ರಾಹು-ಕೇತು ದೋಷಗಳು ನಿವಾರಣೆಯಾಗುತ್ತವೆ. 

ಹೊಸ ಬಟ್ಟೆ(New clothes)
ಹಬ್ಬ ಎಂದ ಮೇಲೆ ನಾವೆಲ್ಲ ಹೊಸ ಬಟ್ಟೆಗಳನ್ನು ಧರಿಸುತ್ತೇವೆ. ಅಂತೆಯೇ ಹಬ್ಬದ ದಿನ ದಾನ ಮಾಡುವ ಹೊಸ ಬಟ್ಟೆಗೂ ವಿಶೇಷ ಮಹತ್ವವಿದೆ. ಇದು ನಿಮ್ಮ ಕಷ್ಟಗಳನ್ನು ನೀಗಿಸಲಿದೆ. 

Follow Us:
Download App:
  • android
  • ios