Asianet Suvarna News Asianet Suvarna News

Rishi Panchami 2022: ಈ ವಸ್ತುಗಳನ್ನು ದಾನ ಮಾಡಿದ್ರೆ ಪಾಪಬಾಧೆ ಇರದು..

ಇಂದು ಋಷಿ ಪಂಚಮಿ. ಈ ದಿನ ಉಪವಾಸ ಮತ್ತು ದಾನಕ್ಕೆ ಮಹತ್ವವಿದೆ. ಯಾವೆಲ್ಲ ವಸ್ತುಗಳನ್ನು ಇಂದು ದಾನ ಮಾಡಬೇಕು, ಉಪವಾಸ ಕೈಗೊಂಡಾಗ ಯಾವೆಲ್ಲ ಎಚ್ಚರಿಕೆ ಬೇಕು ತಿಳಿಯಿರಿ..

Donate these things on Rishi Panchami take these precautions while fasting skr
Author
First Published Sep 1, 2022, 10:34 AM IST

ಭಾದ್ರಪದ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಋಷಿ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸಪ್ತ ಋಷಿಗಳನ್ನು ಪೂಜಿಸುವ ಸಂಪ್ರದಾಯವಿದೆ. ಭೂಮಿಯಿಂದ ದುಷ್ಟರನ್ನು ಕೊಲ್ಲಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮತ್ತು ಜನರ ಒಳಿತಿಗಾಗಿ ಶ್ರಮಿಸಿದ ಸಪ್ತಋಷಿಗಳಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ಪಾಪಗಳನ್ನು ಕಳೆದುಕೊಳ್ಳಲು ಕೋರಿ ಉಪವಾಸವನ್ನು ಮಾಡಲಾಗುತ್ತದೆ. ಈ ದಿನದಂದು ವ್ರತವನ್ನು ಆಚರಿಸುವ ಸ್ತ್ರೀಯರು ತಿಳಿದೋ ತಿಳಿಯದೆಯೋ ತಪ್ಪಿಗೆ ಕ್ಷಮೆ ಕೋರುತ್ತಾರೆ. ಇದರಿಂದ ಅವರು ಮಾಡಿರಬಹುದಾದ ಪಾಪಗಳು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಋಷಿ ಪಂಚಮಿಯಂದು ಗಂಗಾ ಸ್ನಾನಕ್ಕೆ ಹಾಗೂ ದಾನಕ್ಕೆ ವಿಶೇಷ ಮಹತ್ವವಿದೆ. ಋಷಿ ಪಂಚಮಿಯ ಶುಭ ಮುಹೂರ್ತ, ದಾನಧರ್ಮ ಮತ್ತು ಈ ದಿನ ಯಾವ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಋಷಿ ಪಂಚಮಿ(Rishi Panchami 2022), ಹೇಗೆ ಪೂಜಿಸಬೇಕು?
ಪಂಚಾಂಗದ ಪ್ರಕಾರ, ಋಷಿ ಪಂಚಮಿಯ ಪೂಜೆಯ ಶುಭ ಸಮಯವು ಸೆಪ್ಟೆಂಬರ್ 1ರಂದು ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1:37 ರವರೆಗೆ ಇರುತ್ತದೆ. ಈ ದಿನ ಸೂರ್ಯೋದಯಕ್ಕೆ ಮುನ್ನ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಉತ್ತಮ. ಹೀಗೆ ಮಾಡಲಾಗದವರು ಮನೆಯಲ್ಲಿನ ನೀರಿಗೆ ಗಂಗಾಜಲವನ್ನು ಸೇರಿಸಿ ಸ್ನಾನ ಮಾಡಿ.
ಶುಭ ಮುಹೂರ್ತದಲ್ಲಿ ಪೂಜಿಸುವ ಸ್ಥಳದಲ್ಲಿ ಗೋಮೂತ್ರವನ್ನು ಹಚ್ಚಿ ಚೌಕಾಕಾರದ ವೃತ್ತವನ್ನು ಮಾಡಿ ಅದರ ಮೇಲೆ ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ ಎಂಬ ಸಪ್ತ ಋಷಿಗಳನ್ನು ಪ್ರತಿಷ್ಠಾಪಿಸಬೇಕು. ಈ ಮಹಾನ್ ಋಷಿಗಳು ಜನರಿಗೆ ಒಳ್ಳೆಯತನ ಮತ್ತು ಮಾನವೀಯತೆಯ ಸರಿಯಾದ ಮಾರ್ಗವನ್ನು ಅನುಸರಿಸಲು ಕಲಿಸಿದವರು. ಪುರಾತನ ಗ್ರಂಥಗಳ ಪ್ರಕಾರ, ಅವರು ತಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ತಮ್ಮ ಭಕ್ತರಿಗೆ ವರ್ಗಾಯಿಸಿದರು, ಇದರಿಂದ ಪ್ರತಿಯೊಬ್ಬರೂ ದಾನ, ಮಾನವೀಯತೆ, ಜ್ಞಾನ ಮತ್ತು ಒಳ್ಳೆಯತನದ ಮಾರ್ಗವನ್ನು ಅನುಸರಿಸಲು ಕರೆ ನೀಡಿದವರು. ಈ ಸಪ್ತರ್ಷಿಗಳಿಗೆ ಷೋಡಶೋಪಚಾರದ ಜೊತೆ ಪೂಜೆ ಮಾಡಬೇಕು. ಅವರಿಗೆ ಹೂವುಗಳು, ಜೇನು, ಸಿಹಿತಿಂಡಿಗಳು, ಹಣ್ಣುಗಳನ್ನು ಅರ್ಪಿಸಿ.

ಮುಟ್ಟಾದ ಮಹಿಳೆಯರು ಋಷಿ ಪಂಚಮಿ ಆಚರಿಸಬೇಕು. ಯಾಕೆ ಗೊತ್ತಾ?

ಇಡೀ ವರ್ಷದಲ್ಲಿ, ಋತುಸ್ರಾವದ ಸಮಯದಲ್ಲಿ ಧರ್ಮಕ್ಕೆ ಸಂಬಂಧಿಸಿದ ಕೆಲಸದಲ್ಲಿ ಏನಾದರೂ ತಪ್ಪಾಗಿದ್ದರೆ, ಅದಕ್ಕಾಗಿ ಮಹಿಳೆಯರು ಈ ದಿನ ಕ್ಷಮೆ ಯಾಚಿಸಬೇಕಾಗಿದೆ ಮತ್ತು ವ್ರತ ಕಥೆಯನ್ನು ಓದಬೇಕು.

ಋಷಿ ಪಂಚಮಿಯಂದು ಈ ತಪ್ಪನ್ನು ಮಾಡಬೇಡಿ
ಧಾರ್ಮಿಕ ನಂಬಿಕೆಯ ಪ್ರಕಾರ, ಮಹಿಳೆಯರು ಉಪವಾಸ(Fasting)ದಲ್ಲಿ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಉಪವಾಸ ಆಚರಿಸುವ ಮಹಿಳೆಯರು ಋಷಿ ಪಂಚಮಿಯ ದಿನದಂದು ನೆಲದಲ್ಲಿ ಬಿತ್ತಿದ ಧಾನ್ಯಗಳಿಂದ ತಯಾರಿಸಿದ ಆಹಾರ ತೆಗೆದುಕೊಳ್ಳಬಾರದು. ಈ ಉಪವಾಸದ ಸಮಯದಲ್ಲಿ ಒಂದು ಹೊತ್ತಿನ ಊಟ(ಒಪ್ಪೊತ್ತು) ಮಾಡಬೇಕೆಂಬ ನಿಯಮವಿದೆ. ಅಂದರೆ ರಾತ್ರಿಯ ಹೊತ್ತು ಊಟ ಮಾಡಬಹುದು. ಫಲಾಹಾರ ಸೇವಿಸುವುದು ಉತ್ತಮ. ಅಲ್ಲದೆ, ಬ್ರಹ್ಮಚರ್ಯವನ್ನು ಅನುಸರಿಸಬೇಕು.

Car Vastu Tips: ಸುಖಕರವಾದ ಪ್ರಯಾಣ ನಿಮ್ಮದಾಗಲು ನಿಮ್ಮ ಕಾರಿಗೂ ವಾಸ್ತು ಇರಲಿ!

ಋಷಿ ಪಂಚಮಿ ದಾನ
ಋಷಿ ಪಂಚಮಿಯ ದಿನದಂದು, ಉಪವಾಸ ಮಾಡುವ ಮಹಿಳೆಯರು ಸಪ್ತಋಷಿಗಳನ್ನು(7 sages) ಪೂಜಿಸಿದ ನಂತರ ದಾನಗಳನ್ನು ಮಾಡಬೇಕು, ಆಗ ಉಪವಾಸವು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ದಿನ ಬಡವರಿಗೆ ತುಪ್ಪ, ಸಕ್ಕರೆ, ಬಾಳೆಹಣ್ಣುಗಳನ್ನು ದಾನ ಮಾಡಿ. ಅಲ್ಲದೆ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಕ್ಷಿಣೆಯನ್ನು ನೀಡಿ.

Follow Us:
Download App:
  • android
  • ios