Asianet Suvarna News Asianet Suvarna News

ನವರಾತ್ರಿಯಲ್ಲಿ ಈ ವಸ್ತುಗಳನ್ನು ದಾನ ಮಾಡಿ, ಧನ ಲಾಭ ಪಡೆಯಿರಿ..!

ಜಗನ್ಮಾತೆಯ ಕೃಪೆ ಪಡೆಯಲು ಅತ್ಯಂತ ಪ್ರಶಸ್ತವಾದ ಕಾಲವೇ ನವರಾತ್ರಿ. ದೇವಿಯ ಒಂಭತ್ತು ಸ್ವರೂಪಗಳ ಪೂಜೆ, ಆರಾಧನೆ ನಡೆಯುವ ಸಮಯ. ಈ ಸಮಯದಲ್ಲಿ ದೇವಿಯನ್ನು ಭಕ್ತಿಯಿಂದ ಭಜಿಸಿದರೆ ಆಶಿಸಿದ್ದು ಈಡೇರುತ್ತದೆ ಎಂಬ ನಂಬಿಕೆ ಇದೆ. ದೇವಿಯ ಕೃಪೆಗೆ ಪಾತ್ರರಾಗಬೇಕೆಂದರೆ ಭಜನೆ, ಆರಾಧನೆ, ಪೂಜೆ, ಸ್ತುತಿಗಳ ಜೊತೆಗೆ ದೇವಿಗೆ ಪ್ರಿಯವಾದ ಕೆಲವು ವಸ್ತುಗಳನ್ನು ದಾನ ಮಾಡುವುದು. ನಿರ್ಗತಿಕರಿಗೆ ಭೋಜನ ನೀಡುವುದು ಇಂಥ ಕಾರ್ಯಗಳನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹಾಗಾದರೆ ಯಾವ್ಯಾವ ವಸ್ತುಗಳನ್ನು ದಾನ ಮಾಡಬೇಕೆಂಬುದನ್ನು ನೋಡೋಣ..

Donate these things on Navaratri to get financial benefits
Author
Bangalore, First Published Oct 17, 2020, 4:21 PM IST
  • Facebook
  • Twitter
  • Whatsapp

ನವರಾತ್ರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ಜಗನ್ಮಾತೆಯನ್ನು ಆರಾಧಿಸಿದರೆ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಭಕ್ತಿ ಮತ್ತು ಶ್ರದ್ಧೆಯ ಜೊತೆಗೆ ದೇವಿಗೆ ಪ್ರಿಯವಾದ ಕೆಲವು ವಸ್ತುಗಳನ್ನು ದಾನ ನೀಡುವುದರಿಂದ ಜಗನ್ಮಾತೆಯು ಸಂತೃಪ್ತಳಾಗಿ ಇಷ್ಟಾರ್ಥವನ್ನು ಈಡೇರಿಸುತ್ತಾಳೆಂಬ ನಂಬಿಕೆ ಇದೆ. ನವರಾತ್ರಿಯ ಒಂಭತ್ತು ದಿನಗಳು ದೇವಿಯ ಸ್ತುತಿ, ಭಜನೆ, ವ್ರತ, ಆರಾಧನೆ ಮತ್ತು ದಾನ-ಧರ್ಮಗಳನ್ನು ಮಾಡುವುದರಿಂದ ದೇವಿಯ ಕೃಪೆ ಪಡೆಯಬಹುದಾಗಿದೆ.

ನವರಾತ್ರಿಯ ಪ್ರತಿ ದಿನವೂ ಮಹತ್ವದ್ದಾಗಿದೆ. ಪ್ರತಿ ದಿನವೂ ಒಂದೊಂದು ದೇವಿಯ ಆರಾಧನೆ ನಡೆಸಲಾಗುತ್ತದೆ. ಜಗನ್ಮಾತೆಯ ಅವತಾರಗಳನ್ನು ಪೂಜಿಸುವ ಈ ಸುಸಂದರ್ಭದಲ್ಲಿ ಕೆಲವು ವಿಶೇಷವಾದ ದಾನ ಮಾಡುವುದರಿಂದ ಅಪಾರ ಧನ ಲಾಭ ಪಡೆಯಬಹುದೆಂಬ ನಂಬಿಕೆ ಇದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭವೆಂದು ತಿಳಿಯೋಣ...

ಕೆಂಪು ಬಳೆ
ನವರಾತ್ರಿಯ ಪವಿತ್ರ ದಿನಗಳಲ್ಲಿ 8 ಅಥವಾ 9 ವರ್ಷದ ಕನ್ಯೆಯರಿಗೆ ಕೆಂಪು ಬಳೆಗಳನ್ನು ದಾನವಾಗಿ ನೀಡಬೇಕು. ಕನ್ಯೆಯರು ದೇವಿಯ ಸ್ವರೂಪವೆಂದು ಹೇಳಲಾಗುತ್ತದೆ. ಹಾಗಾಗಿ ಕೆಂಪು ಬಳೆಗಳನ್ನು ನೀಡುವುದರಿಂದ ದೇವಿಯು ಪ್ರಸನ್ನಳಾಗುತ್ತಾಳೆಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ನೆಲೆಸುವುದಲ್ಲದೆ ಸಂಪತ್ತು ಅಭಿವೃದ್ಧಿಯಾಗುತ್ತದೆ.

ಇದನ್ನು ಓದಿ: ರಾಶಿಗನುಣವಾಗಿ ನಿಮ್ಮ ಲಕ್ಕಿ ನಂಬರ್ ಯಾವುದೆಂದು ತಿಳಿಯಿರಿ..!? 

ಮುತ್ತೈದೆಯರಿಗೆ ಬಾಗಿನ ಮತ್ತು ಶೃಂಗಾರ ಸಾಮಗ್ರಿ
ಮುತ್ತೈದೆಯರಿಗೆ ಶೃಂಗಾರದ ವಸ್ತುಗಳ ದಾನ ನೀಡುವುದರಿಂದ ನವರಾತ್ರಿ ದೇವಿಯು ಪ್ರಸನ್ನಳಾಗುತ್ತಾಳೆ. ದೇವಿಯ ಮುಂದೆ ಬಾಗಿನವನ್ನಿಟ್ಟು ನಂತರ ಅದನ್ನು ಏಳು ಮುತ್ತೈದೆಯರಿಗೆ ಅರಿಶಿನ-ಕುಂಕುಮ ಮತ್ತು ಹೂವನ್ನು ನೀಡಿ, ನಂತರ ಬಾಗಿನ ಕೊಡುವುದರಿಂದ ದೇವಿಯ ಕೃಪೆ ಲಭಿಸುತ್ತದೆ. 

Donate these things on Navaratri to get financial benefits

ಭಾರತದ ಹಲವು ಕಡೆಗಳಲ್ಲಿ ವಿವಿಧ ರೀತಿಯ ಆಚರಣೆಗಳಿವೆ. ಉತ್ತರ ಭಾರತದ ಕಡೆ ಮದರಂಗಿಯನ್ನು ದೇವಿಗೆ ಅರ್ಪಿಸಿ ಅದನ್ನು ಏಳು ಜನ ಮಹಿಳೆಯರಿಗೆ ನೀಡುವ ಆಚರಣೆ ಇದೆ. ಇದರಿಂದ ದೇವಿಯು ಪ್ರಸನ್ನಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಧನ-ಧಾನ್ಯ ವೃದ್ಧಿಯಾಗಲೆಂದು ಆಶೀರ್ವದಿಸುತ್ತಾಳೆಂಬ ನಂಬಿಕೆ ಇದೆ. ಹೀಗೆ ದೇವಿಯನ್ನು ಪ್ರಸನ್ನಗೊಳಿಸಲು ಹಲವು ಕಡೆ ಭಿನ್ನ ರೀತಿಯ ಆಚರಣೆಗಳನ್ನು ಕಾಣಬಹುದಾಗಿದೆ.

ಬಾಳೆ ಹಣ್ಣನ್ನು ದಾನವಾಗಿ ನೀಡಬೇಕು
ಬಾಳೆಹಣ್ಣನ್ನು ದಾನವಾಗಿ ನೀಡುವುದರಿಂದ ಮನೆಯಲ್ಲಿ ಧನ-ಧಾನ್ಯಗಳು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಯಾವ ವ್ಯಕ್ತಿಯು ನವರಾತ್ರಿಯ ಒಂಭತ್ತು ದಿನಗಳು ಬಾಳೆ ಹಣ್ಣನ್ನುದಾನವಾಗಿ ನೀಡುವುದರಿಂದ ಮನೆಗೆ ಶುಭವಾಗುತ್ತದೆ. ಅಷ್ಟೇ ಅಲ್ಲದೇ ದರಿದ್ರ ದೂರವಾಗಿ ಸಂಪತ್ತು ಸಮೃದ್ಧಿ ವೃದ್ಧಿಸುತ್ತದೆ ಎಂಬ ನಂಬಿಕೆ ಸಹ ಇದೆ.

ಇದನ್ನು ಓದಿ: ಈ ನವರಾತ್ರಿಯ ದುರ್ಲಭ ಯೋಗದ ಪ್ರಭಾವ ಯಾವ ರಾಶಿಗೆ, ಹೇಗಿದೆ ಗೊತ್ತಾ..? 

ಪುಸ್ತಕಗಳ ದಾನ
ದಾನಗಳಲ್ಲಿ ಶ್ರೇಷ್ಠದಾನ ವಿದ್ಯಾ ದಾನವೆಂದು ಹೇಳಲಾಗುತ್ತದೆ. ಹಾಗಾಗಿ ವಿದ್ಯಾರ್ಜನೆಗೆ ಮತ್ತು ಜ್ಞಾನಾರ್ಜನೆಗೆ ಅನುಕೂಲವಾಗುವಂಥ ಗ್ರಂಥಗಳನ್ನು, ಪುಸ್ತಕಗಳನ್ನು ದಾನವಾಗಿ ನೀಡಿದರೆ ಸರಸ್ವತಿಯ ಆಶೀರ್ವಾದದೊಂದಿಗೆ ಲಕ್ಷ್ಮೀದೇವಿಯ ಕೃಪೆ ಸಹ ಸಿಗಲಿದೆ. ಪುಸ್ತಕ ದಾನ ಮಾಡಿದವರ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆಂಬ ನಂಬಿಕೆ ಇದೆ. ಪುಸ್ತಕ ದಾನ ಮಾಡಿದವರಿಗೆ ಬಡತನ ದೂರವಾಗಿ ಸುಖ-ಸಮೃದ್ಧಿ ನೆಲೆಸುತ್ತದೆ.

ಫಲ-ಪುಷ್ಪ ಮತ್ತು ವಸ್ತ್ರ
ನವರಾತ್ರಿಯ ದಿನಗಳಲ್ಲಿ ಪ್ರತಿ ದಿನವೂ ಶಕ್ತಿಯ ಅನುಸಾರ ಫಲ-ಪುಷ್ಪ ಮತ್ತು ವಸ್ತ್ರಗಳನ್ನು ದಾನವಾಗಿ ನೀಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವುದಲ್ಲದೇ, ಅಂದುಕೊಂಡದ್ದು ಆಗುತ್ತದೆ ಎಂಬ ನಂಬಿಕೆ ಇದೆ.

ಇದನ್ನು ಓದಿ: ನವರಾತ್ರಿಯಲ್ಲಿ ರಾಶಿಯನುಸಾರ ಈ ಮಂತ್ರಗಳನ್ನು ಪಠಿಸಿದರೆ ಲಕ್ ಗ್ಯಾರಂಟಿ...

ಅಕ್ಕಿ, ಗೋಧಿ, ಬೇಳೆಗಳ ದಾನ
ನವರಾತ್ರಿಯ ಸಮಯದಲ್ಲಿ ನಿರ್ಗತಿಕರಿಗೆ ಹಣವನ್ನು ದಾನ ಮಾಡಬೇಕು. ಸಾಧ್ಯವಾಗದೇ ಇದ್ದಲ್ಲಿ ಭೋಜನಕ್ಕೆ ಉಪಯುಕ್ತವಾಗುವ ಸಾಮಗ್ರಿಗಳಾದ ಅಕ್ಕಿ, ಗೋಧಿ, ಬೇಳೆ, ಇತ್ಯಾದಿ ಧಾನ್ಯಗಳು ಮತ್ತು ಎಣ್ಣೆಯನ್ನು ದಾನ ಮಾಡುವುದರಿಂದ ಆರ್ಥಿಕ ಸಮಸ್ಯೆಯು ದೂರವಾಗುವುದಲ್ಲದೇ, ಮನೆಯಲ್ಲಿ ಶಾಂತಿ, ನೆಮ್ಮದಿ, ಸುಖ-ಸಮೃದ್ಧಿ ನೆಲೆಸುತ್ತದೆ.  ಅಷ್ಟೇ ಅಲ್ಲದೇ ವಿದ್ಯಾ ಕ್ಷೇತ್ರದಲ್ಲಿ ಯಶಸ್ಸು ಲಭಿಸುತ್ತದೆ. 

Follow Us:
Download App:
  • android
  • ios