Shani Jayantiಯ ದಿನ ರಾಶಿ ಪ್ರಕಾರ ದಾನ ಮಾಡಿ, ಸಮಸ್ಯೆಗಳಿಂದ ಮುಕ್ತಿ ಹೊಂದಿ
ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಆಚರಿಸಲಾಗುವ ಶನಿ ಜಯಂತಿ ಈ ವರ್ಷ ಮೇ 30 ರಂದು ಬರುತ್ತದೆ. ಶನಿ ಜಯಂತಿಯ ದಿನದಂದು ಯಾವ ರಾಶಿಯವರು ಏನು ದಾನ ಮಾಡಿದರೆ ಅವರ ಬದುಕಿನ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ನೋಡೋಣ.
Aries
ಮೇಷ ರಾಶಿ(Aries)
ಶನಿ ಜಯಂತಿಯ ದಿನದಂದು ಎಣ್ಣೆ ಮತ್ತು ಕಪ್ಪು ಎಳ್ಳನ್ನು ದಾನ ಮಾಡುವುದು ಮೇಷ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.
Taurus Zodiac
ವೃಷಭ ರಾಶಿ(Taurus)
ಶನಿದೇವನ ಆಶೀರ್ವಾದ ಪಡೆಯಲು ವೃಷಭ ರಾಶಿಯವರು ಶನಿ ಜಯಂತಿಯ ದಿನದಂದು ಶನಿ ಚಾಲೀಸವನ್ನು ಪಠಿಸುವ ಜೊತೆಗೆ ಕಂಬಳಿಗಳನ್ನು ದಾನ ಮಾಡಬೇಕು.
Gemini Zodiac
ಮಿಥುನ ರಾಶಿ(Gemini)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯ ಜನರು ಶನಿ ಜಯಂತಿಯ ದಿನದಂದು ನಿರ್ಗತಿಕರಿಗೆ ಕಪ್ಪು ಬಟ್ಟೆಯನ್ನು ದಾನ ಮಾಡಬೇಕು.
ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರು ಉದ್ದಿನಬೇಳೆ, ಎಣ್ಣೆ ಮತ್ತು ಎಳ್ಳನ್ನು ದಾನ ಮಾಡುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು.
Leo Zodiac
ಸಿಂಹ (Leo)
ಸಿಂಹ ರಾಶಿಯ ಜನರು ಶನಿ ಜಯಂತಿಯ ದಿನದಂದು 'ಓಂ ವರೇಣ್ಯೈ ನಮಃ' ಎಂಬ ಮಂತ್ರವನ್ನು ಪಠಿಸುವ ಜೊತೆಗೆ ನೀಲಮಣಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
Virgo Zodiac
ಕನ್ಯಾ ರಾಶಿ(Virgo)
ಜೀವನದ ತೊಂದರೆಗಳನ್ನು ತೊಡೆದುಹಾಕಲು ಮತ್ತು ಸಂತೋಷ ಮತ್ತು ಸಮೃದ್ಧಿಗಾಗಿ, ಶನಿ ಜಯಂತಿಯ ದಿನದಂದು, ಕನ್ಯಾ ರಾಶಿಯ ಜನರು ಬಡ ವ್ಯಕ್ತಿಗೆ ಪಾದರಕ್ಷೆ ಅಥವಾ ಚಪ್ಪಲಿಯನ್ನು ದಾನ ಮಾಡಬೇಕು.
Libra Zodiac
ತುಲಾ(Libra)
ತುಲಾ ರಾಶಿಯವರು ಈ ದಿನ ಕಪ್ಪು ಬಟ್ಟೆ ಮತ್ತು ಎಣ್ಣೆಯನ್ನು ದಾನ ಮಾಡಬೇಕು. ಇದರಿಂದ ಶನಿಯ ಕೃಪೆ ಇವರಿಗೆ ಒದಗುತ್ತದೆ.
.
Scorpio
ವೃಶ್ಚಿಕ ರಾಶಿ(Scorpio)
ಶನಿದೇವನ ಆಶೀರ್ವಾದ ಪಡೆಯಲು ವೃಶ್ಚಿಕ ರಾಶಿಯ ಜನರು ಈ ದಿನ ಕಬ್ಬಿಣದ ವಸ್ತುವನ್ನು ದಾನ ಮಾಡಬೇಕು
ಧನು ರಾಶಿ(Sagittarius)
ಶನಿ ಜಯಂತಿಯಂದು, ಧನು ರಾಶಿಯ ಜನರು ಶನಿ ದೇವರಿಗೆ ಅಭಿಷೇಕವನ್ನು ಮಾಡಬೇಕು ಮತ್ತು ಹಳದಿ ಬಟ್ಟೆ ಅಥವಾ ಅರಿಶಿನವನ್ನು ದಾನ ಮಾಡಬಹುದು.
ಮಕರ ರಾಶಿ(Capricorn)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಜಯಂತಿಯ ದಿನದಂದು ಹಸುವನ್ನು ದಾನ ಮಾಡುವುದು ಮಕರ ರಾಶಿಯವರಿಗೆ ಫಲದಾಯಕವೆಂದು ಪರಿಗಣಿಸಲಾಗಿದೆ. ಆದರೆ ನಿಮಗೆ ಗೋವನ್ನು ದಾನ ಮಾಡಲು ಸಾಧ್ಯವಾಗದಿದ್ದರೆ, ನೀವು ಬೆಳ್ಳಿ ಹಸುವನ್ನು ದಾನ ಮಾಡಬಹುದು.
Aquarius
ಕುಂಭ ರಾಶಿ(Aquarius)
ಈ ಬಾರಿ ಶನಿ ಜಯಂತಿಯ ಶುಭ ಸಂದರ್ಭದಲ್ಲಿ ನೀವು ಕೊಂಚವಾದರೂ ಸರಿ, ಚಿನ್ನವನ್ನು ದಾನ ಮಾಡಬೇಕು. ಇದರಿಂದ ಶನಿ ನಿಮ್ಮ ಕಷ್ಟಗಳನ್ನು ಪರಿಹರಿಸುತ್ತಾನೆ.
Pisces Zodiac
ಮೀನ ರಾಶಿ(Pisces)
ಮೀನ ರಾಶಿಯವರು ಶನಿ ಜಯಂತಿಯ ಶುಭ ಸಂದರ್ಭದಲ್ಲಿ ತುಪ್ಪ, ಹಳದಿ ಬಟ್ಟೆ ಅಥವಾ ಅರಿಶಿನವನ್ನು ದಾನ ಮಾಡಬಹುದು.