Asianet Suvarna News Asianet Suvarna News

ಕಾರ್ತಿಕ ಮಾಸದಲ್ಲಿ ಈ ನಾಲ್ಕು ಕೆಲಸ ಮಾಡಲು ಮರೆಯಬೇಡಿ!

ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸ ಇಂದಿನಿಂದ ಅಂದರೆ ಅಕ್ಟೋಬರ್ 26ರಿಂದ ಪ್ರಾರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವಿನ ಅನುಗ್ರಹ ಪಡೆಯಲು ನಾಲ್ಕು ಕಾರ್ಯಗಳನ್ನು ಮಾಡುವುದು ಮುಖ್ಯವಾಗಿದೆ. 

doing these 4 works gives the blessings of Vishnu in the month of Kartik skr
Author
First Published Oct 26, 2022, 12:14 PM IST

ಅಕ್ಟೋಬರ್ 26ರಂದು, ಬಲಿಪಾಡ್ಯಮಿಯ ದಿನದಿಂದ ಕಾರ್ತಿಕ ಮಾಸ ಆರಂಭವಾಗಿದೆ. ಕಾರ್ತಿಕ ಮಾಸದ ವಿಶೇಷ ಧಾರ್ಮಿಕ ಮಹತ್ವವನ್ನು ಪುರಾಣ ಗ್ರಂಥಗಳಲ್ಲಿ ಹೇಳಲಾಗಿದೆ. ಕಾರ್ತಿಕ ಮಾಸವನ್ನು ಉತ್ತಮ ಮಾಸ ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆಯು ವಿಶೇಷ ಅನುಗ್ರಹವನ್ನು ನೀಡುತ್ತದೆ. ಕಾರ್ತಿಕ ಮಾಸ 2022 ಅಕ್ಟೋಬರ್ 26ರಿಂದ ಆರಂಭವಾಗಿ ನವೆಂಬರ್ 23 ರವರೆಗೆ ಇರುತ್ತದೆ.

ಕಾರ್ತಿಕ ಮಾಸ(karthik maas)ದಲ್ಲಿ ಶಿಸ್ತನ್ನು ಪಾಲಿಸುವವರ ಮತ್ತು ಉತ್ತಮ ಕೆಲಸ ಮಾಡುವವರ ಎಲ್ಲ ತೊಂದರೆಗಳನ್ನು ಶ್ರೀ ಹರಿ ದೂರ ಮಾಡುತ್ತಾನೆ. ಕಾರ್ತಿಕ ಮಾಸದಲ್ಲಿ ಈ ನಾಲ್ಕು ಕೆಲಸಗಳನ್ನು ಮಾಡುವವರಿಗೆ ಭಗವಾನ್ ವಿಷ್ಣು(LOrd Vishnu)ವಿನ ವಿಶೇಷ ಅನುಗ್ರಹವಿದೆ ಎಂದು ನಂಬಲಾಗಿದೆ. ಈ 4 ಕಾರ್ಯಗಳು ಯಾವುವು? ತಿಳಿಯೋಣ.

ಸ್ನಾನ(snan)
ಈ ಬಗ್ಗೆ ವಿವರಣೆಯು ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಕಂಡುಬರುತ್ತದೆ. ಇದರಲ್ಲಿ ಹಿಂದೂ ಕ್ಯಾಲೆಂಡರ್‌ನ ಕಾರ್ತಿಕ ಮಾಸದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಕಾರ್ತಿಕ ಮಾಸದಲ್ಲಿ ಯಮುನಾ ನದಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಇದರೊಂದಿಗೆ ಕಾರ್ತಿಕ ಮಾಸದ ಯಮದ್ವಿತೀಯ ದಿನದಂದು ಯಮುನಾದಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನ ಯಮನ ಸಹೋದರಿ ಯಮುನೆಗೆ ವಿಶೇಷವಾದುದಾಗಿದೆ. ಭಾಯಿ ದೂಜ್ ಕಾರಣಕ್ಕೆ ಆಕೆಯ ಅಣ್ಣ ಮನೆಗೆ ಬಂದು ಆತಿಥ್ಯ ಸ್ವೀಕರಿಸುವ ಸಂತೋಷದಲ್ಲಿರುವ ಆಕೆ, ಅಂದು ತನ್ನಲ್ಲಿ ಸ್ನಾನ ಮಾಡುವವರ ಒಳಿತಿಗಾಗಿ ಹರಸುತ್ತಾಳೆ.

Bhai Dooj 2022: ಅ.27 ಅಣ್ಣನ ಆಯಸ್ಸು ಹೆಚ್ಚಿಸೋ ಯಮದ್ವಿತೀಯ, ಆಚರಣೆ ಹೇಗೆ?

ತುಳಸಿ ಪೂಜೆ(Tulsi puja)
ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆಯ ವಿಶೇಷ ಧಾರ್ಮಿಕ ಮಹತ್ವವನ್ನು ಹೇಳಲಾಗಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಈ ಮಾಸ ಪೂರ್ತಿ ತುಳಸಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ ಎಂದು ನಂಬಲಾಗಿದೆ. ಜೊತೆಗೆ ಭಯದಿಂದ ಮುಕ್ತಿ ಸಿಗುತ್ತದೆ. 

ದೀಪದಾನ (Deepadaan)
ಧಾರ್ಮಿಕ ನಂಬಿಕೆಯ ಪ್ರಕಾರ, ಕಾರ್ತಿಕ ಮಾಸದ ಪ್ರತಿ ಸಂಜೆ ಸಮಯದಲ್ಲಿ, ಪವಿತ್ರ ನದಿ ಅಥವಾ ತುಳಸಿ ಬಳಿ ದೀಪವನ್ನು ದಾನ ಮಾಡಬೇಕು. ದೀಪವನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಬರುತ್ತದೆ. ದೇವರ ಆಶೀರ್ವಾದವೂ ಸಿಗುತ್ತದೆ. ಈ ಬಗ್ಗೆ ಸ್ವತಃ ವಿಷ್ಣುವೇ ಬ್ರಹ್ಮನಿಗೆ ಹೇಳಿದ್ದು, ಬ್ರಹ್ಮನು ನಾರದರಿಗೂ, ನಾರದನು ಮಹಾರಾಜ ಪ್ರತ್ಯುವಿಗೆ ಹೇಳಿದ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ದಲ್ಲದೆ, ಈ ಮಾಸದಲ್ಲಿ ದೀಪವನ್ನು ದಾನ ಮಾಡಬೇಕು. ಹೀಗೆ ದೀಪದಾನ ಮಾಡುವಾಗ ಯಾವುದೇ ಕಾರಣಕ್ಕೂ ಒಂಟಿ ದೀಪ ಕೊಡಬೇಡಿ. ಜೋಡಿ ದೀಪದಲ್ಲಿ ಅರಿಶಿನ ಕುಂಕುಮ ಹಾಕಿ ಸ್ವಲ್ಪ ತುಪ್ಪ ಹಾಕಿ ದಾನ ನೀಡಿ.

1947ರ ಬಳಿಕ ಮೊದಲ ಬಾರಿ ಜಮ್ಮು ಕಾಶ್ಮೀರದ ಶಾರದಾ ದೇಗುಲದಲ್ಲಿ Deepavali

ನೆಲ್ಲಿಕಾಯಿ ಪೂಜೆ (Amla puja)
ಆಯುರ್ವೇದದಲ್ಲಿ, ನೆಲ್ಲಿಕಾಯಿಯನ್ನು ಪ್ರಬಲ ಔಷಧವೆಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಈ ಅಮೃತ ಮರಕ್ಕೆ ವಿಶೇಷ ಪೂಜೆ ಮಾಡಲಾಗುತ್ತದೆ. ಅತ್ಯುತ್ತಮ ಔಷಧಿಯಾಗಿರುವ ಆಮ್ಲಾ ಧಾರ್ಮಿಕ ಮಹತ್ವವನ್ನು ಹೊಂದಿದೆ. ಲಕ್ಷ್ಮಿಯು ಆಮ್ಲಾ ಮರವನ್ನು ಶಿವ ಮತ್ತು ವಿಷ್ಣುವಿನ ಸಂಕೇತವಾಗಿ ಪೂಜಿಸುತ್ತಾಳೆ ಎಂದು ನಂಬಲಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios