ಈ ರಾಶಿಯವರಿಗೆ ಎರಡನೇ ಸಂಬಂಧದ ಸೆಳೆತ ಹೆಚ್ಚು!
ಕೆಲವು ಜನ್ಮರಾಶಿಯ ವ್ಯಕ್ತಿಗಳು ದಾಂಪತ್ಯದಲ್ಲಿ ಬೋರಾಗುವುದರಿಂದಲೋ, ಬೇರೊಂದು ಕಡೆಯ ಸೆಳೆತ ಹೆಚ್ಚುವುದರಿಂದಲೋ, ವಿವಾಹೇತರ ಸಂಬಂಧಗಳಿಗೆ ಕೈ ಚಾಚುತ್ತಾರೆ. ಯಾರು ಅಂಥವರು?
ಕೆಲವರು ದಾಂಪತ್ಯದಲ್ಲೂ ಚೆನ್ನಾಗಿದ್ದು, ದಾಂಪತ್ಯದ ಆಚೆಗೂ ಇನ್ನೊಂದು ಸಂಬಂಧವನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಮೇಂಟೇನ್ ಮಾಡಿಕೊಂಡು ಇರುತ್ತಾರೆ. ಇನ್ನು ಕೆಲವರು ಎರಡನೇ ಮೂರನೇ ಸಂಬಂದಗಳಿಗೆ ಹಾತೊರೆದು ದಾಂಪತ್ಯವನ್ನೂ ನರಕ ಮಾಡಿಕೊಳ್ಳುತ್ತಾರೆ, ಇನ್ನೊಬ್ಬರಿಂದಲೂ ಸುಖ ಪಡೆಯುವುದಿಲ್ಲ. ಇನ್ನು ಕೆಲವರು ದಾಂಪತ್ಯವನ್ನೂ ಎರಡನೇ ಸಂಬಂಧವನ್ನೂ ರಾಜಾರೋಷವಾಗಿ, ಲೀಲಾಜಾಲವಾಗಿ ನಿಭಾಯಿಸುತ್ತ ಇರುತ್ತಾರೆ. ಏನಿದರ ಸೀಕ್ರೆಟ್? ಈ ಸಂಬಂಧಗಳು ಜನ್ಮರಾಶಿ ಪ್ರಕಾರ ಇರುತ್ತವಾ? ಹೌದು. ಕೆಲವು ಜನ್ಮರಾಶಿಯಲ್ಲಿ ಹುಟ್ಟಿದವರಿಗೆ ವಿವಾಹೇತರ ಸಂಬಂಧಗಳ ಸೆಳೆತ ಜಾಸ್ತಿ ಇರುತ್ತದೆ.
ಮಿಥುನ ರಾಶಿ
ಇವರು ತುಂಬ ಸೋಶಿಯಲ್ ಸ್ವಭಾವದವರು. ಹೆಸರೇ ಹೇಳುವಂತೆ ಇವರದು ಮಿಥುನ. ಮಿಥುನ ಎಂದರೆ ಜೋಡಿ, ಲೈಂಗಿಕ ಕ್ರಿಯೆ ಎಂದೆಲ್ಲ ಅರ್ಥವಿದೆ. ದಾಂಪತ್ಯದಲ್ಲಿ ಚೆನ್ನಾಗಿಯೇ ಇರುತ್ತಾರೆ. ಆದರೆ ನಾಲ್ಕು ವರ್ಷ ದಾಂಪತ್ಯ ನಡೆಸಿದ ಬಳಿಕ, ಆಫೀಸಿನಲ್ಲೋ ವೃತ್ತಿಕ್ಷೇತ್ರದಲ್ಲೋ ಇನ್ನೊಂದು ವ್ಯಕ್ತಿಯ ಸಾಂಗತ್ಯ ಇವರನ್ನು ಸೆಳೆಯತೊಡಗುತ್ತದೆ. ಅದರಿಂದ ಪಾರಾಗುವ ಇಚ್ಛೆಯೂ ಇವರಿಗೆ ಇರುವುದಿಲ್ಲ. ಅಂದರೆ ಸ್ನೇಹವನ್ನು ಕ್ಯಾಶುವಲ್ ಆಗಿಯೇ ಆರಂಭ ಮಾಡಿದರೂ, ಅದು ಪ್ರೇಮದತ್ತಲೋ ಸಂಬಂಧದ ಕಡೆಗೋ ತಿರುಗುವುದನ್ನು ತಪ್ಪಿಸಲು ಇವರಿಂದ ಆಗುವುದಿಲ್ಲ.
ಕನ್ಯಾ ರಾಶಿ
ಕನ್ಯಾ ರಾಶಿಯ ಗ್ರಹದೇವತೆ ಬುಧ. ಈತ ಇವರ ಜನ್ಮರಾಶಿಯಲ್ಲಿ ಇರುವುದರಿಂದ ಇವರಿಗೆ ನಾನಾ ಬಗೆಯ ಚಪಲತೆಗಳು ಇರುವುದು ಸಹಜ. ಅಂದರೆ ತಿನ್ನುವುದರಲ್ಲಿ, ಉಡುವುದರಲ್ಲಿ, ವಸ್ತುಸಾಧನಗಳನ್ನು ಹೊಂದುವುದರಲ್ಲಿ ಇವರು ವೈವಿಧ್ಯವನ್ನೂ ಅತಿ ರಂಜನೀಯತೆಯನ್ನೂ ಬಯಸುತ್ತಾರೆ. ಹೀಗಾಗಿ ದಾಂಪತ್ಯ ಕೂಡ ಒಂದೇ ಬಗೆಯದಾಗಿದ್ದರೆ ಇವರಿಗೆ ಬೋರ್ ಉಂಟುಮಾಡುತ್ತದೆ. ಹೀಗಾಗಿ ಅನ್ಯ ಸಂಬಂಧಗಳ ಕಡೆಗೆ ಕೈ ಚಾಚುತ್ತಾರೆ. ಹಾಂ, ಅನ್ಯ ಸಂಬಂಧ ಅಂದರೆ ದೈಹಿಕ ಸಂಬಂದ ಎಂದೇ ತಿಳಯಬೇಕಾಗಿಲ್ಲ. ಅದು ಕೆಲವೊಮ್ಮೆ ಬರೀ ಭಾವನಾತ್ಮಕ ಸಂಬಂಧವೂ ಆಗಿರಬಹುದು. ಆದರೆ ಮಾನಸಿಕವಾಗಿ ಇವರು ಹಲವು ಸಂಗಾತಿಗಳನ್ನು ಹೊಂದಿದ್ದರೆ ಅದು ಅಸಹಜವೇನಲ್ಲ.
ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ? ...
ಸಿಂಹ ರಾಶಿ
ಈ ರಾಶಿಯ ಅಧಿದೇವತೆ, ಗ್ರಹದೇವತೆ ಸೂರ್ಯ. ಈತ ಅಧಿಕಾರಯುತ ಸ್ವಭಾವದವನು, ಇವನಿದ್ದರೆ ಎಲ್ಲ ಗ್ರಹಗಳೂ ನಡೆಯುತ್ತವೆ. ಈತನಿಲ್ಲದೆ ಉಳಿದ ಗ್ರಹಗಳಿಗೆ ಆಧಾರವೇ ಇಲ್ಲ. ಕುಟುಂಬದಲ್ಲೂ ಇವರು ಆಡಿದ್ದೇ ವೇದವಾಕ್ಯ, ಹೀಗಾಗಿ, ಇವರು ಅನ್ಯ ಸಂಬಂಧಗಳತ್ತ ಕೈ ಚಾಚಿದರೂ ಅವರು ವಿರುದ್ಧ ದನಿಯೆತ್ತುವ ಛಾತಿ ಇನ್ಯಾರಲ್ಲೂ ಇರುವುದಿಲ್ಲ. ತಮ್ಮ ಇತರ ಸಂಬಂಧಗಳನ್ನು ಲೀಲಾಜಾಲವಾಗಿ ಸಮರ್ಥಿಸಿಕೊಳ್ಳುವ ಭಂಡತನವೂ ಇವರಲ್ಲಿ ತುಂಬಿರುತ್ತದೆ. ಈ ಮಾತುಗಳಿಗೆ ಪುರಾಣ ವೇದೋಪನಿಷತ್ತುಗಳಿಂದ ಸಾಕಷ್ಟು ಉದಾಹರಣೆಗಳನ್ನು ಎತ್ತಿ ಕೊಡಬಲ್ಲರು.
ದಿನಾಲೂ ಗಾಯತ್ರಿ ಮಂತ್ರ ಜಪಿಸಿದರೆ ಕೋಟಿ ಫಲ! ...
ತುಲಾ ರಾಶಿ
ಈ ರಾಶಿಯ ಅಧಿದೇವತೆಯು ಶುಕ್ರ. ಶುಕ್ರ ಎಂದರೆ ಧಾತು ಎಂದೂ, ವೀರ್ಯವೆಂದೂ ಅರ್ಥವಿದೆ. ಈ ಜನ್ಮರಾಶಿಯ ಗಂಡಸರು ಹೆಚ್ಚಿನ ವೀರ್ಯವಂತರಾಗಿದ್ದರೆ ಅಸ್ವಭಾವಿಕವೇನಲ್ಲ. ಇವರ ಗಮನ ಅತ್ತಿತ್ತ ಚಲಿಸುತ್ತಿರುತ್ತದೆ. ಹಾಗೇ ಮಹಿಳೆಯರಾಗಿದ್ದರೆ, ಹೆಚ್ಚಿನ ಭಾವನಾತ್ಮಕ ಚಪಲತೆಯನ್ನು ಹೊಂದಿರಬಹುದು. ಇವರು ಅನ್ಯಸಂಗಾತಿಗಳನ್ನು ಬಯಸಿದರೆ ಆಶ್ಚರ್ಯವಿಲ್ಲ. ಆದರೆ ದಾಂಪತ್ಯದಲ್ಲಿ ಹೆಚ್ಚಿನ ವೈವಿಧ್ಯಮಯತೆಯು ತುಂಬಿದ್ದರೆ ಇವರು ಬೇರೆ ಸಂಬಂಧಗಳ ಕಡೆಗೆ ಗಮನ ಕೊಡುವುದಿಲ್ಲ.
ಚಂದ್ರ ಗ್ರಹಣ: ಗರ್ಭಿಣಿ ಮಹಿಳೆಯರು ಪಾಲಿಸಬೇಕಾದ ನಿಯಮಗಳು ...
ವೃಷಭ ರಾಶಿ
ವೃಷಭ ಎಂಬುದು ಗೂಳಿಯ ಇನ್ನೊಂದು ಹೆಸರು. ಗೂಳಿಯು ಹೇಗೆ ಬಯಲಲ್ಲಿ ಅಲೆದಾಡುತ್ತಾ ಮೇಯುತ್ತ ಇರಲು ಇಷ್ಟಪಡುತ್ತದೋ, ಹಾಗೇ ಇವರೂ ಒಂದು ಗೂಟಕ್ಕೆ ಕಟ್ಟುಬೀಳಲು ಬಯಸುವುದಿಲ್ಲ. ಗೂಟಕ್ಕೆ ಕಟ್ಟಿಹಾಕಿದರೆ ಕಿತ್ತುಕೊಂಡು ಓಡಲು ಇಷ್ಟಪಡುತ್ತಾರೆ. ಇವರನ್ನು ದಾಂಪತ್ಯದ ಬಂಧನದಲ್ಲಿ ಕಟ್ಟಿಹಾಕುವುದು ಬಹಳ ಕಷ್ಟ.
ಇಲ್ಲಿ ನೀಡಿರುವ ಸೂಚನೆಗಳೆಲ್ಲವನ್ನೂ ನೋಡಿ ಈ ರಾಶಿಯವರು ಅನ್ಯ ಸಂಬಂಧವನ್ನು ಖಂಡಿತವಾಗಿಯೂ ಹೊಂದಿರುತ್ತಾರೆ ಎಂದು ಭಾವಿಸಬಾರದು. ಈ ರಾಶಿಯವರು ಹಾಗೆ ಮಾಡುವ ಸಾಧ್ಯತೆ ಇದೆ ಎಂದಷ್ಟೇ ಇದರ ಅರ್ಥ. ಜನ್ಮಜಾತಕನ ಜಾತಕದಲ್ಲಿ ಇತರ ಯಾವ ಗ್ರಹಗಳು ಎಲ್ಲೆಲ್ಲಿವೆ, ಗ್ರಹಗಳ ನಕ್ಷತ್ರಪಾದ, ಗ್ರಹಗಳ ನೇರ- ವಕ್ರ ಚಲನೆ ಇವೆಲ್ಲವನ್ನೂ ಗಮನಿಸಿ ಪ್ರತ್ಯೇಕವಾಗಿ ಅವರ ಸ್ವಭಾವವನ್ನು ನಿರ್ಣಯಿಸುವುದು ಹೆಚ್ಚು ಖಚಿತವಾದುದು.