Asianet Suvarna News Asianet Suvarna News

Hanumadvratha 2022: ಇಷ್ಟಾರ್ಥ ಸಿದ್ಧಿಗೆ ಆಂಜನೇಯನ ಜನ್ಮದಿನ ಈ ಕೆಲಸಗಳನ್ನು ಮಾಡಿ..

ನಾಳೆ ಕರ್ನಾಟಕದಲ್ಲೆಡೆ ಹನುಮ ಜಯಂತಿ ಸಂಭ್ರಮ. ಹನುಮಂತನ ಹುಟ್ಟಿನ ಪುರಾಣ ಕತೆಯೇನು, ಹನುಮದ್ವ್ರತದಂದು ಯಾವ ಕ್ರಮ ಕೈಗೊಳ್ಳುವುದರಿಂದ ವರ ಸಿದ್ಧಿಯಾಗುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ. 

Do this special remedy on the day of Hanuman Jayanti tol get rid of all problems skr
Author
First Published Dec 4, 2022, 10:07 AM IST

ಕರ್ನಾಟಕದಲ್ಲಿ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಹನುಮದ್ವ್ರತ (Hanumadvratha 2022)ಯನ್ನು ಆಚರಿಸಲಾಗುತ್ತದೆ. ಈ ಬಾರಿ ಹನುಮದ್ವ್ರತವನ್ನು ಡಿಸೆಂಬರ್ 5ರಂದು ಕರ್ನಾಟಕದೆಲ್ಲೆಡೆ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ದಿನ ಪವನ ಪುತ್ರ ಹನುಮಂತನನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಆತನನ್ನು ಸಂಕಟ ಮೋಚನ ಎಂದೇ ಕರೆಯಲಾಗುತ್ತದೆ. ಭಕ್ತರ ಕರೆಗೆ ಬೇಗ ಓಗೊಡುವವನು ಹನುಮಂತ. ಈಶ್ವರನ ಸ್ವರೂಪ. ಈ ಬಾರಿಯ ಹನುಮದ್ವ್ರತ ವಿಶೇಷವಾಗಿದೆ. ಏಕೆಂದರೆ, ಈಶ್ವರ(Lord Shiva)ನ ದಿನವಾದ ಸೋಮವಾರ ಈ ವಿಶೇಷ ದಿನ ಬರುತ್ತಿದೆ. 

ಈ ದಿನದಂದು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಭಜರಂಗ ಬಲಿಯನ್ನು ಪೂಜಿಸುವ ಜೊತೆಗೆ ಈ ಕ್ರಮಗಳನ್ನು ಮಾಡುವುದು ಮಂಗಳಕರವಾಗಿರುತ್ತದೆ. ಪ್ರತಿ ಕೆಲಸದಲ್ಲಿ ಯಶಸ್ಸು ಪಡೆಯಲು ಮತ್ತು ಸಂತೋಷ ಮತ್ತು ಸಮೃದ್ಧಿಗೆ ಹನುಮದ್ವ್ರತದ ಪರಿಹಾರ ಕ್ರಮಗಳು(remedies) ಪ್ರಯೋಜನಕಾರಿಯಾಗಿವೆ.

ಹನುಮದ್ವ್ರತ ದಿನದಂದು ಈ ವಿಶೇಷ ಕ್ರಮಗಳನ್ನು ಕೈಗೊಳ್ಳಿ..

 • ಜಾತಕ(Horoscope)ದಲ್ಲಿ ಶನಿ ದೋಷವಿದ್ದರೆ ಅದರಿಂದ ಮುಕ್ತಿ ಹೊಂದಲು ಹನುಮ ಜಯಂತಿಯ ದಿನ ಸುಂದರಕಾಂಡ ಪಠಿಸಬೇಕು.
 • ಹನುಮದ್ವ್ರತ ದಿನದಂದು, ಮಲ್ಲಿಗೆ ಎಣ್ಣೆ ಅಥವಾ ತುಪ್ಪದಲ್ಲಿ ಸಿಂಧೂರವನ್ನು ಬೆರೆಸಿ ಹನುಮಂತನಿಗೆ ಏರಿಸಬೇಕು. ಅವನು ಇದರಿಂದ ಸಂತುಷ್ಟನಾಗಿ ತನ್ನ ಭಕ್ತನ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ.
 • ಹನುಮದ್ವ್ರತ ದಿನದಂದು, ತುಪ್ಪ ಮತ್ತು ಸಿಂಧೂರವನ್ನು ಬೆರೆಸಿ ಮತ್ತು ಅದರಿಂದ ಮನೆಯ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ್ ಮತ್ತು ಓಂ ಚಿಹ್ನೆಯನ್ನು ಮಾಡಿ. ಈ ಕಾರಣದಿಂದಾಗಿ, ನಕಾರಾತ್ಮಕ ಶಕ್ತಿಗಳು(negative energy) ಮನೆಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.

  Tarot Readings: ಈ ರಾಶಿಗೆ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣದೆ ಆತಂಕ
 • ಹನುಮದ್ವ್ರತ ದಿನ ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರ ಮುಂದೆ ತುಪ್ಪ ಅಥವಾ ಸಾಸಿವೆ ದೀಪವನ್ನು ಹಚ್ಚಿ. ಹನುಮಾನ್ ಚಾಲೀಸಾ(Hanuman Chalisa)ವನ್ನು 5-11 ಬಾರಿ ಪಠಿಸಿ. ಇದರಿಂದ ಜೀವನದ ಪ್ರತಿಯೊಂದು ಸಮಸ್ಯೆ ದೂರವಾಗುತ್ತದೆ.
 • ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಲು, ಈ ದಿನ 11 ಅಶ್ವತ್ಥ ಎಲೆಗಳನ್ನು ಕಿತ್ತು ನೀರಿನಿಂದ ತೊಳೆದು ಒರೆಸಿಕೊಳ್ಳಿ. ಇದಾದ ನಂತರ ಅದರಲ್ಲಿ ಶ್ರೀರಾಮ ಎಂದು ಶ್ರೀಗಂಧ, ಕುಂಕುಮ ಇತ್ಯಾದಿಗಳನ್ನು ಬಳಸಿ ಬರೆದು ಮಾಲೆಯನ್ನು ಮಾಡಿ. ಇದರ ನಂತರ ಅದನ್ನು ಹನುಮಂತನಿಗೆ ಏರಿಸಿ.
 • ಈ ದಿನ, ಹನುಮಾನ್ ದೇವಸ್ಥಾನಕ್ಕೆ ಹೋಗಿ ವಿಧಿ ವಿಧಾನಗಳೊಂದಿಗೆ ಭಗವಂತನನ್ನು ಪೂಜಿಸಿ ಮತ್ತು ಅಲ್ಲಿ ಕುಳಿತು ಭಜರಂಗ ಬಾಣವನ್ನು ಪಠಿಸಿ. ಇದರೊಂದಿಗೆ ಹನುಮಂತನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.
 • ಈ ದಿನ ಹನುಮ ದೇವಾಲಯಕ್ಕೆ ಹೋಗಿ ಭಜರಂಗ ಬಲಿಗೆ ಕೆಂಪು ಬಟ್ಟೆ ಅರ್ಪಿಸಿ. ಜೊತೆಗೆ ಕಪ್ಪು ಉದ್ದು, ಕುಂಕುಮ, ಮಲ್ಲಿಗೆ ಎಣ್ಣೆ, ಹೂವುಗಳು, ಲಾಡನ್ನು ಅರ್ಪಿಸಿ. ಬಳಿಕ ಹನುಮಾನ್ ಚಾಲೀಸಾ ಹೇಳಿಕೊಳ್ಳಿ. ಜಾತಕದ ದೋಷಗಳು(Doshas in horoscope) ಇದರಿಂದ ನಿವಾರಣೆಯಾಗುತ್ತವೆ.

  Hanuman Jayanti 2022: ಹನುಮ ಜಯಂತಿ ದಿನಾಂಕ, ಮುಹೂರ್ತ, ಪೂಜಾ ವಿಧಿ ಇಲ್ಲಿದೆ..

ಹನುಮಂತನ ಜನನದ ಕತೆ(Birth story of Lord Hanuman)
ಭಗವಾನ್ ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದೆ ಮತ್ತು ಅವನ ಜನ್ಮ ವೃತ್ತಾಂತವನ್ನು ಪುರಾಣಗಳಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಹನುಮಂತನ ಜನ್ಮ ಕಥೆಯ ಪ್ರಕಾರ, ಅಗ್ನಿದೇವನು ರಾಜ ದಶರಥ ಮತ್ತು ಅವನ ಮೂವರು ಹೆಂಡತಿಯರಿಗೆ ಅವರ ಯಜ್ಞದಿಂದ ಸಂತೋಷಗೊಂಡ ನಂತರ ಖೀರ್ ಅನ್ನು ಅರ್ಪಿಸಿದಾಗ, ಪಾಯಸದ ಒಂದು ಭಾಗವನ್ನು ಹದ್ದು ತೆಗೆದುಕೊಂಡು ಹಾರುತ್ತದೆ.

ಈ ವೇಳೆ ಅಂಜನಾ ಮಾತೆ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಳು. ಹದ್ದಿನಿಂದ ತಪ್ಪಿ ಬಿದ್ದ ಖೀರು ಆಕೆಯ ಬಾಯನ್ನು ಸೇರುತ್ತದೆ. ಖೀರ್ ಸೇವಿಸಿದ ನಂತರ, ಅವಳು ಗರ್ಭಿಣಿಯಾದಳು ಮತ್ತು ಶಿವನ 11ನೇ ರೂಪವಾದ ಹನುಮಂತನಿಗೆ ಜನ್ಮ ನೀಡಿದಳು.

Follow Us:
Download App:
 • android
 • ios