Hanuman Jayanti 2022: ಹನುಮ ಜಯಂತಿ ದಿನಾಂಕ, ಮುಹೂರ್ತ, ಪೂಜಾ ವಿಧಿ ಇಲ್ಲಿದೆ..
ಭಕ್ತಿ, ಶಕ್ತಿಗೆ ಹೆಸರಾದ ಆಂಜನೇಯನೆಂದರೆ ಮಕ್ಕಳಿಂದ ಮುದುಕರವರೆಗೂ ಅಚ್ಚುಮೆಚ್ಚು. ಆತನ ಜಯಂತಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಆದರೆ, ಒಂದೊಂದು ರಾಜ್ಯದಲ್ಲಿ ಒಂದೊಂದು ದಿನ ಆಚರಿಸಲಾಗುತ್ತದೆ. ಸಧ್ಯ ಕರ್ನಾಟಕದಲ್ಲಿ ಹನುಮ ಜಯಂತಿಗೆ ದಿನ ಸನ್ನಿಹಿತವಾಗಿದೆ.
ಅರೆರೆ, ಇತ್ತೀಚೆಗಷ್ಟೇ ಹನುಮಾನ್ ಜಯಂತಿ ಆಚರಿಸಿದಂತಿದೆ, ಆಗಲೇ ಒಂದು ವರ್ಷವಾಯಿತಾ ಎಂದು ಅಚ್ಚರಿ ಪಡಬೇಡಿ. ಆಗ ಆಗಿದ್ದು ಉತ್ತರ ಭಾರತದ ಹನುಮ ಜಯಂತಿ. ಅಲ್ಲಿ ಚೈತ್ರ ಪೂರ್ಣಿಮೆಯಂದು ಹನುಮ ಜಯಂತಿ ಆಚರಿಸಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷ ತ್ರಯೋದಶಿಯಂದು ಶ್ರೀ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ಬಾರಿ ಕರ್ನಾಟಕದಲ್ಲಿ ಹನುಮ ಜಯಂತಿಯು ಡಿಸೆಂಬರ್‌ನಲ್ಲಿ ಬರಲಿದೆ. ಕರ್ನಾಟಕದಲ್ಲಿ ಈ ದಿನವನ್ನು ಹನುಮಾನ್ ವ್ರತ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.
ಹನುಮ ಜಯಂತಿ ದಿನಾಂಕ(Hanuman Jayanti Date)
ಶ್ರೀ ಹನುಮಾನ್ ಜಯಂತಿ ಕರ್ನಾಟಕ- ಸೋಮವಾರ 5 ಡಿಸೆಂಬರ್ 2022
ಶುಕ್ರವಾರ, ಡಿಸೆಂಬರ್ 23, 2022ರಂದು ತಮಿಳು ಹನುಮತ್ ಜಯಂತಿ
ತೆಲುಗು ಹನುಮಾನ್ ಜಯಂತಿ ಬುಧವಾರ, ಮೇ 25, 2022
ಶನಿವಾರ, ಏಪ್ರಿಲ್ 16, 2022 ರಂದು ಉತ್ತರ ಹನುಮಾನ್ ಜಯಂತಿ
ಇಂದು ಪುಟ್ಟಪರ್ತಿ ಸಾಯಿಬಾಬಾ ಜಯಂತಿ; ಅವರ ಕೆಲ ಪ್ರಸಿದ್ಧ ಕಿವಿಮಾತುಗಳು ಇಲ್ಲಿವೆ..
ಶ್ರೀ ಹನುಮಾನ್ ಜಯಂತಿ ಪೂಜಾ ಮುಹೂರ್ತ(Puja Muhurt)
ತ್ರಯೋದಶಿ ತಿಥಿ ಪ್ರಾರಂಭ: 5-ಡಿಸೆಂಬರ್-2022ರಂದು ಬೆಳಗ್ಗೆ 5:57
ತ್ರಯೋದಶಿ ತಿಥಿ ಮುಕ್ತಾಯ: 6-ಡಿಸೆಂಬರ್-2022ರಂದು ಬೆಳಗ್ಗೆ 6:46
ಜೈ ಬಜರಂಗ್ ಬಲಿ
ಭಗವಾನ್ ಹನುಮಂತನು ಶಕ್ತಿ, ಅಪ್ರತಿಮ ಭಕ್ತಿ ಮತ್ತು ನಿಸ್ವಾರ್ಥ ಸೇವೆಯನ್ನು ಸಂಕೇತಿಸುತ್ತಾನೆ. ಅವನು ಭಗವಾನ್ ರಾಮನ ಶ್ರೇಷ್ಠ ಭಕ್ತ. ಕಠಿಣ ಬ್ರಹ್ಮಚಾರಿಯಾದ ಹನುಮಂತನ ಶ್ರೇಷ್ಠತೆಯನ್ನು ರಾಮಾಯಣದಲ್ಲಿ ವಿವರಿಸಿದ ರಾಮನು ಹನುಮಂತನಿಗೆ ಈ ವರ ನೀಡಿದ್ದಾನೆ,
'ನಾನು ನಿನಗೆ ಸಾವಿಲ್ಲದ ವರವನ್ನು ನೀಡುತ್ತೇನೆ. ಎಲ್ಲರೂ ನಿನ್ನನ್ನು ನನ್ನಂತೆಯೇ ಗೌರವಿಸುತ್ತಾರೆ ಮತ್ತು ಪೂಜಿಸುತ್ತಾರೆ. ನಿನ್ನ ವಿಗ್ರಹವನ್ನು ನನ್ನ ಮಂದಿರದ ಬಾಗಿಲಲ್ಲಿ ಇಟ್ಟು ನಿನ್ನನ್ನು ಮೊದಲು ಪೂಜಿಸಿ ಗೌರವಿಸುತ್ತಾರೆ. ನನ್ನ ಕಥೆಗಳನ್ನು ಪಠಿಸಿದಾಗ ಅಥವಾ ಮಹಿಮೆಗಳನ್ನು ಹಾಡಿದಾಗ, ನಿನ್ನ ಮಹಿಮೆಯು ನನ್ನದಕ್ಕಿಂತ ಮೊದಲು ಹಾಡಲ್ಪಡುತ್ತದೆ. ನೀನು ನನ್ನಿಂದ ಮಾಡಲು ಸಾಧ್ಯವಾಗದ್ದನ್ನು ಸಹ ಮಾಡಲು ಸಾಧ್ಯವಾಗುತ್ತದೆ!’
ಸುಮ್ ಸುಮ್ಮನೆ ಭಯ ಆಗುತ್ತಿದ್ಯಾ? ಈ ಗ್ರಹ ಗತಿಗಳೇ ಆಗಿರಬಹುದು ಕಾರಣ
ಹನುಮ ಜಯಂತಿ ಆಚರಣೆ ವಿಧಿ(Puja vidhi)
ಭಕ್ತರು ಈ ದಿನ ಹನುಮಾನ್ ಚಾಲೀಸಾ ಮತ್ತು ಹನುಮಾನ್ ಅಷ್ಟಕವನ್ನು ಪಠಿಸುತ್ತಾರೆ. ಹೆಚ್ಚಿನ ಭಕ್ತರು ಈ ದಿನ ಉಪವಾಸ ಮಾಡುತ್ತಾರೆ. ಬೆಳಗ್ಗೆ ಎದ್ದು ಸ್ನಾನ ಮಾಡಿ ಕೆಂಪು ಇಲ್ಲವೇ ಹಳದಿ ಬಟ್ಟೆ(Yellow cloth)ಯನ್ನು ಧರಿಸಿ. ನಂತರ ಶಾಂತ ಮನಸ್ಸಿನಲ್ಲಿ ದೇವರ ಕೋಣೆಗೆ ಹೋಗಿ ನಮಸ್ಕರಿಸಿ. ಮೊದಲು ಗಣಪತಿಯನ್ನು ಸ್ಮರಿಸಿ. ಬಳಿಕ, ಹನುಮಂತನನ್ನು ಮೆಚ್ಚಿಸಲು ಈ ದಿನ ಸಾಸಿವೆ ಎಣ್ಣೆಯಿಂದ ನಾಲ್ಕು ಮುಖದ ದೀಪ(diya)ವನ್ನು ಹಚ್ಚಿ. ದೀಪ ಹಚ್ಚುವಾಗ 'ಓಂ ಶ್ರೀ ರಾಮದೂತ ಹನುಮತೇ ನಮಃ ದೀಪಂ ದರ್ಶಯಾಮಿ' ಮಂತ್ರ ಹೇಳಿಕೊಳ್ಳಿ.
ನಂತರ ಹನುಮನಿಗೆ ಸಿಂಧೂರವನ್ನು ಅರ್ಪಿಸಿ. ಬಳಿಕ, ಸಾಸಿವೆ ಎಣ್ಣೆ, ತೆಂಗಿನಕಾಯಿ ಮತ್ತು 21 ವೀಳ್ಯದೆಲೆಗಳಿರುವ ಹಾರವನ್ನು ಅರ್ಪಿಸಿ. ಜೊತೆಗೆ, ದಾಸವಾಳ ಮತ್ತು ಗುಲಾಬಿ ಹೂ ಸೇರಿದಂತೆ ಕೆಂಪು, ಕೇಸರಿ, ಹಳದಿ ಬಣ್ಣದ ಹೂಗಳನ್ನು ಅರ್ಪಿಸಿ.
ಕಡೆಯಲ್ಲಿ ಲಡ್ಡು, ಬಾಳೆಹಣ್ಣು, ಪೇರಲೆ ಹಣ್ಣು(Fruits) ಇತ್ಯಾದಿಯನ್ನು ನೈವೇದ್ಯ ಮಾಡಿ.
ಹನುಮಾನ್ ಚಾಲೀಸಾ ಮತ್ತು ಸುಂದರಕಾಂಡವನ್ನು ಪಠಿಸಿ. ರಾಮಧ್ಯಾನವನ್ನೂ ಮಾಡಿ. ಸಾಧ್ಯವಾದರೆ ಈ ದಿನ ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ ಸೇವೆ ಸಲ್ಲಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.