Asianet Suvarna News Asianet Suvarna News

Hanuman Jayantiಯಂದು ಹೀಗೆ ಮಾಡಿದ್ರೆ ಅದೃಷ್ಟ ನಿಮ್ಮದೇ

ಹನುಮ ಜಯಂತಿ ಹತ್ತಿರ ಬಂದಿದೆ. ಆಂಜನೇಯ ಧೈರ್ಯದ ಸಂಕೇತ. ಆತ್ಮಬಲವನ್ನು ನೀಡುವ ದೇವರು. ನಂಬಿದವರ ಪಾಲಿಗೆ ಸಕಲವನ್ನೂ ಕೊಡುವ ರಾಮನ ಬಂಟನನ್ನು ಈ ದಿನದಂದು ಜಪಿಸುವುದರಿಂದ, ಪೂಜೆ ಮಾಡುವುದರಿಂದ, ಧ್ಯಾನ ಮಾಡುವುದರಿಂದ, ಹನುಮಂತನಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳುವುದರಿಂದ ಯಾವ ರೀತಿಯ ಶುಭ ಫಲವನ್ನು ಪಡೆಯಬುಹುದು ಎಂಬ ಬಗ್ಗೆ ನೋಡೋಣ....

Do this on Hanuman Jayanti and get lucky!
Author
Bangalore, First Published Apr 7, 2022, 9:20 AM IST

ಶ್ರೀರಾಮನ (Lord Shrirama) ಬಂಟ ಹನುಮಂತನನ್ನು ನೆನೆದರೆ ಸಕಲ ಕಷ್ಟಗಳು (Problems) ದೂರಾಗುತ್ತವೆ ಎಂಬ ಮಾತಿದೆ. ಕಾರಣ, ಆಂಜನೇಯ (Hanuman) ಭಕ್ತಿಯಿಂದ ಬೇಡಿಕೊಂಡರೆ ಭಕ್ತರ ಇಷ್ಟಾರ್ಥವನ್ನು ಈಡೇರಿಸುತ್ತಾನೆ. ಮಾನಸಿಕ ಸ್ಥೈರ್ಯವನ್ನು (Mental Strength) ಕೊಡುತ್ತಾನೆ. ಇನ್ನು ಆರ್ಥಿಕತೆಗೆ (Economy) ಸಂಬಂಧಿಸಿ ಸಮಸ್ಯೆಗಳಿಗೂ ಪರಿಹಾರ (Solution) ಸಿಗಲಿದೆ. ಹನುಮಾನ್ ಜಯಂತಿಯಂದು (Hanuman Jayanti) ಕೆಲವು ಆಚರಣೆಗಳನ್ನು ಮಾಡಿದರೆ ಹನುಮಂತನ ಕೃಪೆಗೆ ಪಾತ್ರವಾಗಿ ತೊಂದರೆಗಳಿಂದ ಹೊರಬರಬಹುದು. 

ಹಿಂದೂ ಧರ್ಮದಲ್ಲಿ (Hindu Religion) ಎಲ್ಲ ಹಬ್ಬಗಳಿಗೂ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಜೊತೆಗೆ ಕೆಲವು ಪ್ರಾಂತ್ಯದಲ್ಲಿ ಕೆಲವಷ್ಟು ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಚೈತ್ರ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ರಾಮನ ಭಕ್ತ ಹನುಮಂತ ಜನಿಸಿದನು. ಹನುಮಾನ್ ಜಯಂತಿಗೆ ಬಹಳ ವಿಶೇಷವಾದ (Special) ಮಹತ್ವವಿದೆ. ಈ ದಿನದಂದು, ಹನುಮಂತನ ಭಕ್ತರು ಉಪವಾಸ (Fasting) ಮಾಡುವುದರ ಜೊತೆಗೆ ಶ್ರದ್ಧಾ – ಭಕ್ತಿಯಿಂದ ಪೂಜಿಸುತ್ತಾರೆ. 

ಆಂಜನೇಯನ ವಿಶೇಷ ಕೃಪೆಗೆ ಪಾತ್ರರಾಗಬೇಕು ಎಂದರೆ ಹನುಮಾನ್ ಜಯಂತಿಯು ಪ್ರಶಸ್ತವಾದ ದಿನವಾಗಿದೆ. ಈ ದಿನ ಮಾಡುವ ಪೂಜೆ – ಪುನಸ್ಕಾರಗಳಿಂದ ಎಲ್ಲ ಅಡೆತಡೆಗಳು ದೂರವಾಗಿ ಅಪೇಕ್ಷಿತ ಫಲವನ್ನು ಪಡೆಯಬಹುದಾಗಿದೆ. ಯಾವ ಆಚರಣೆಗಳನ್ನು ಮಾಡುವುದರಿಂದ ಯಾವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ? ಹಾಗಾದರೆ ಈ ದಿನ ಏನೇನು ಮಾಡಬೇಕು..? ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ... 

ಇದನ್ನು ಓದಿ: Astro Profit: ಮಂಗಳನಿಂದ ಈ ನಾಲ್ಕು ರಾಶಿಯವರಿಗೆ ಧನಲಾಭ...!

ಅರಳಿ ಎಲೆ (Peepal leaf) ಪರಿಹಾರ
ನೀವು ಯಾವುದಾದರೂ ತೊಂದರೆಯಿಂದ ಬಳಲುತ್ತಿದ್ದರೆ 11 ಅರಳಿ ಎಲೆಗಳನ್ನು ತೆಗೆದುಕೊಂಡು ಶುದ್ಧ ನೀರಿನಿಂದ ತೊಳೆದು, ಈ ಎಲೆಗಳ ಮೇಲೆ ಚಂದನ ಅಥವಾ ಕುಂಕುಮದಿಂದ ಶ್ರೀರಾಮ ಎಂದು ಬರೆಯಬೇಕು. ಬಳಿಕ ಆ ಎಲೆಗಳಿಂದ  ಹಾರವನ್ನು ಮಾಡಿ ಆಂಜನೇಯನಿಗೆ ಸಮರ್ಪಿಸಬೇಕು. ಇದು ಮನಸ್ಸಿನ ದುಃಖ- ದುಗುಡಗಳನ್ನು (Sadness)  ಹೋಗಲಾಡಿಸುವುದಲ್ಲದೆ, ಹಣಕ್ಕೆ (Money) ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. 

ದೀಪ ಬೆಳಗಿ ಧ್ಯಾನ ಮಾಡಿ
ಹನುಮಾನ್ ಜಯಂತಿಯ ದಿನದಂದು ಆಂಜನೇಯನ ದೇಗುಲಕ್ಕೆ ಹೋಗಿ ದೇವರಿಗೆ ಸಾಸಿವೆ ಎಣ್ಣೆ ಮತ್ತು ಶುದ್ಧ ತುಪ್ಪದ ದೀಪವನ್ನು (Light a lamp) ಬೆಳಗಿಸಬೇಕು. ಬಳಿಕ ಧ್ಯಾನಾಸಕ್ತರಾಗಿ ಹನುಮಂತನನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಆಂಜನೇಯನ ಆಶೀರ್ವಾದ (Blessing) ಲಭಿಸಲಿದೆ. ಅಲ್ಲದೆ, ಹನುಮಾನ್ ಚಾಲೀಸಾವನ್ನು (Hanuman Chalisa) 11 ಬಾರಿ ಪಠಿಸಬೇಕು. ಹೀಗೆ ಮಾಡುವುದರಿಂದ ಸಕಲ ಸಂಕಷ್ಟಗಳು ದೂರವಾಗಿ, ಸಮಸ್ಯೆಗಳಿಂದ ಮುಕ್ತರಾಗಬಹುದು. 

ಜಾತಕ ದೋಷ ನಿವಾರಣೆಗೆ ಪರಿಹಾರ
ಈ ದಿನದಂದು ಹನುಮಂತನ ದೇಗುಲಕ್ಕೆ ಭೇಟಿ ನೀಡಿ ಕಪ್ಪು ಉದ್ದಿನ 11 ಕಾಳುಗಳು, ಸಿಂಧೂರ ಮಲ್ಲಿಗೆ, ಎಣ್ಣೆ, ಹೂವುಗಳು, ಪ್ರಸಾದ ಇತ್ಯಾದಿಗಳನ್ನು ಅರ್ಪಿಸಬೇಕು. ಅಲ್ಲದೆ, ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಈ ರೀತಿ ಮಾಡುವುದರಿಂದ ಜಾತಕದಲ್ಲಿ ದೋಷಗಳಿದ್ದರೆ (Horoscope Defect) ನಿವಾರಣೆಯಾಗುತ್ತವೆ. 

ಇದನ್ನು ಓದಿ: Saturn Effect: ಶನಿ ಸಾಡೇಸಾತಿ ಈ ರಾಶಿಯವರಿಗೆ ಕಷ್ಟಕಾಲ!

ಪಾದರಸದಿಂದ ಮಾಡಿದ ಹನುಮಂತನ ವಿಗ್ರಹವನ್ನು ಪೂಜಿಸಿದರೆ ಶುಭ ಫಲ ದೊರೆಯುತ್ತದೆ. ಜೊತೆಗೆ "ಓಂ ರಾಮದೂತಾಯ ನಮಃ" ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಬೇಕು. ಇದಕ್ಕಾಗಿ ರುದ್ರಾಕ್ಷಿಯ (Rudraksha) ಹಾರವನ್ನು ಸಮರ್ಪಿಸಬೇಕು. ಈ ಪರಿಹಾರದಿಂದ ಎಲ್ಲಾ ದುಃಖಗಳು ನಿವಾರಣೆಯಾಗುತ್ತವೆ. ಅಲ್ಲದೆ, ಹನುಮಂತನಿಗೆ ಪ್ರಿಯವಾದ ಗುಲಾಬಿಗಳ ಹಾರವನ್ನು ಸಮರ್ಪಣೆ ಮಾಡಿದರೆ ಬಹಳ ಒಳ್ಳೆಯದಾಗುತ್ತದೆ. ಇದಲ್ಲದೆ ಸಿಹಿ ಖಾದ್ಯವಾಗಿರುವ (Sweets) ಬೂಂದಿ ಲಾಡುಗಳನ್ನು ನೈವೇದ್ಯಕ್ಕಾಗಿ ನೀಡಬೇಕು. ಹೀಗೆ ಮಾಡುವುದರಿಂದ ಹನುಮಂತ ಪ್ರಸನ್ನವಾಗುವುದಲ್ಲದೆ, ಅನುಗ್ರಹದಿಂದ ಸಕಲ ಕಷ್ಟಗಳು ನಿವಾರಣೆಯಾಗಲಿದೆ. 

Follow Us:
Download App:
  • android
  • ios