ಪ್ರಯಾಣಿಸುವಾಗ ಅಪಘಾತವಾಗದಂತೆ ಪಾಸಿಟಿವ್ ರಕ್ಷಣೆ ಬೇಕಾ? ಈ ಪದ್ಧತಿ ಫಾಲೋ ಮಾಡಿ
ವಾಹನ ಚಾಲನೆ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗುವುದಿಲ್ಲ. ಸುರಕ್ಷಿತವಾಗಿ ಪ್ರಯಾಣ ಕೈಗೊಳ್ಳಲು, ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಜ್ಯೋತಿಷ್ಯ ಶಾಸ್ತ್ರ ಸೂಚಿಸಿರುವ ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬಹುದು. ಇವುಗಳನ್ನು ಅನುಸರಿಸುವುದರಿಂದ ಅಪಘಾತದ ಭಯ ದೂರವಾಗುತ್ತದೆ.
ವಾಹನ ಚಾಲನೆ ಮಾಡುವುದು ಹಲವರಿಗೆ ಭಾರೀ ಇಷ್ಟ. ಕೆಲವರಿಗೆ ಬೇಸರ. ಹಲವರು ಸಿಕ್ಕಾಪಟ್ಟೆ ವೇಗವಾಗಿ ವಾಹನ ಚಾಲನೆ ಮಾಡುವುದೂ ಇದೆ. ಏನೇ ಆದರೂ, ವಾಹನ ಚಾಲನೆ ಮಾಡುವಾಗ ಎಲ್ಲರೂ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಇಲ್ಲವಾದಲ್ಲಿ ಪ್ರಯಾಣ ಕಷ್ಟವಾಗಬಹುದು. ಸುಲಭವಾಗಿ ಅಪಘಾತಕ್ಕೆ ತುತ್ತಾಗಬಹುದು. ಪ್ರಯಾಣ ಹೊರಟಾಗ ಬಹಳಷ್ಟು ಜನ ಕಾರಿಗೆ ನಮಸ್ಕರಿಸುವುದು, ಗಣೇಶನ ಪುಟ್ಟದೊಂದು ಮೂರ್ತಿ ಇದ್ದರೆ ಅದಕ್ಕೆ ಹೂವನ್ನಿಟ್ಟು ಕೈ ಮುಗಿಯುವುದು ಮಾಡುವುದನ್ನು ನೋಡಿರಬಹುದು. ಪ್ರಯಾಣ ಸುರಕ್ಷಿತವಾಗಿರಲಿ ಎನ್ನುವುದು ಇದರ ಆಶಯ. ಅಷ್ಟಕ್ಕೂ ಇದು ಕೇವಲ ನಂಬಿಕೆಯಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗಣೇಶ ಮೂರ್ತಿಯನ್ನು ಇರಿಸಿಕೊಳ್ಳುವಂತಹ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಪ್ರಯಾಣದ ಸಮಯದಲ್ಲಿ ಸುರಕ್ಷಿತರಾಗಿ ಇರಬಹುದು. ವಾಹನ ಚಾಲನೆ ಮಾಡುವ ಸಮಯದಲ್ಲಿ ಅಪಘಾತದಿಂದ ರಕ್ಷಿಸಿಕೊಳ್ಳಬಹುದು. ನೀವೂ ಸಹ ಕಾರನ್ನು ಚಾಲನೆ ಮಾಡುವವರಾಗಿದ್ದರೆ, ನಿಮ್ಮನ್ನು ನೀವು ಅಪಘಾತದಿಂದ ಸುರಕ್ಷಿತವಾಗಿ ರಕ್ಷಿಸಿಕೊಳ್ಳಬೇಕು ಎಂದಾದರೆ, ಕೆಲವೊಂದು ಮಾರ್ಗಗಳನ್ನು ಅನುಸರಿಸುವುದು ಉತ್ತಮ.
• ಗಣೇಶನ ಪುಟ್ಟ ಮೂರ್ತಿ (Small Ganesha Idol)
ಕಾರಿನ (Car) ಮುಂದಿನ ಸೀಟುಗಳ ಮಧ್ಯದಲ್ಲಿ ಎದುರಿಗೆ ಗಣೇಶನ ಪುಟ್ಟ ಮೂರ್ತಿಯನ್ನು ಬಹಳಷ್ಟು ಜನ ಇರಿಸಿಕೊಳ್ಳುತ್ತಾರೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಗಣೇಶ ದೇವರು ಎಲ್ಲ ರೀತಿಯ ಅಡೆತಡೆಗಳನ್ನು (Obstacle) ನಿವಾರಿಸುತ್ತಾನೆ ಹಾಗೂ ಅದೃಷ್ಟವನ್ನು (Luck) ತರುತ್ತಾನೆ. ಹೀಗಾಗಿ, ಕಾರಿನಲ್ಲಿ ಸಣ್ಣದೊಂದು ಗಣೇಶ ವಿಗ್ರಹ ಇಟ್ಟುಕೊಳ್ಳುವುದರಿಂದ ರಸ್ತೆ ಸಂಚಾರ (Road Travel) ಸುಗಮವಾಗುತ್ತದೆ. ರಸ್ತೆಯ ಅಡೆತಡೆಗಳು ಇಲ್ಲವಾಗುತ್ತವೆ.
ಹಳೆ ಬಟ್ಟೆ ದಾನ ಮಾಡ್ವಾಗ ಈ ತಪ್ಪು ಮಾಡ್ಲೇಬೇಡಿ
• ಸ್ಫಟಿಕ (Crystal) ಇಟ್ಟುಕೊಳ್ಳುವುದು
ಪಿರಾಮಿಡ್ ಆಕಾರದ ಸ್ಫಟಿಕದ ಹರಳನ್ನು (Stone) ಇಟ್ಟುಕೊಳ್ಳುವುದು ಸಹ ಉತ್ತಮ. ಇದರಿಂದ ಉತ್ತಮ ಎನರ್ಜಿ ಮತ್ತು ಕಂಪನಗಳು ಕಾರಿನಲ್ಲಿ ತುಂಬಿಕೊಳ್ಳುತ್ತವೆ. ಸ್ಫಟಿಕದ ಹರಳು ಹೀಲಿಂಗ್ (Healing) ಗುಣ ಹೊಂದಿದ್ದು, ಪರಿಸರದಲ್ಲಿರುವ ನಕಾರಾತ್ಮಕ (Negative) ಶಕ್ತಿಯನ್ನು ಸೆಳೆದುಕೊಂಡು ಸೌಹಾರ್ದ ವಾತಾವರಣ ಮೂಡಿಸುತ್ತದೆ. ವಾಹನಕ್ಕೆ ರಕ್ಷಣಾತ್ಮಕ ಕವಚ ರಚಿಸುತ್ತದೆ. ಧನಾತ್ಮಕ (Positive) ಪ್ರಭೆಯಿಂದ ಅಪಘಾತದ ಸಾಧ್ಯತೆ ದೂರವಾಗುತ್ತದೆ.
• ಅದೃಷ್ಟದ ಯಂತ್ರ (Yantra)
ಇಂದ್ರಿಯಕ್ಕೆ ನಿಲುಕದ ಶಕ್ತಿಗಳಿಂದ ರಕ್ಷಣೆ ಬೇಕಾದಲ್ಲಿ ಯಂತ್ರದ ಮೊರೆ ಹೋಗುವುದು ಉತ್ತಮ. ಇದು ಕಾಸ್ಮಿಕ್ ಪ್ರೊಟೆಕ್ಟರ್ (Cosmic Protector) ಆಗಿದ್ದು, ನಿಮ್ಮ ಎನರ್ಜಿಯನ್ನು ಬ್ರಹ್ಮಾಂಡದ ಎನರ್ಜಿಯೊಂದಿಗೆ (Energy) ಹೊಂದಾಣಿಕೆಗೊಳಿಸುತ್ತದೆ. ಪರಿಣಾಮವಾಗಿ, ಪ್ರಯಾಣ ಸುಗಮವಾಗುತ್ತದೆ. ಶ್ರೀ ಯಂತ್ರ, ನವಗ್ರಹ ಯಂತ್ರದಂತಹ ನಿರ್ದಿಷ್ಟ ಯಂತ್ರಗಳನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಶ್ರೇಯಸ್ಕರ. ಇದರಿಂದ ಆಕಾಶಕಾಯಗಳ ಅನನುಕೂಲಕರ ಪ್ರಭಾವ ಕುಂದಿ ಅಪಘಾತ ಸಂಭವಿಸುವುದಿಲ್ಲ.
• ಹವಳ (Red Coral) ಧರಿಸುವುದು
ಮಂಗಳ ಗ್ರಹವು ಎನರ್ಜಿ ಹಾಗೂ ಧೈರ್ಯದ ಪ್ರತೀಕ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದರ ಪ್ರಭಾವ ಭೂಮಿಗೆ ಅಧಿಕ. ಕೆಂಪು ಗ್ರಹ ಮಂಗಳವನ್ನು ಪ್ರತಿನಿಧಿಸುವ ಹವಳ ಧರಿಸುವುದರಿಂದ ಅಪಘಾತವನ್ನು (Accidents) ದೂರ ಮಾಡಿಕೊಳ್ಳಬಹುದು. ಹವಳದಿಂದ ನಿಮ್ಮ ಡ್ರೈವಿಂಗ್ ಕೌಶಲ್ಯ ಉತ್ತಮವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಸಂಭಾವ್ಯ ಅಪಘಾತಗಳ ಭಯ ಇರುವುದಿಲ್ಲ.
ಮನೆ ತಗೊಳ್ತೆನೆ.. ಪ್ರಮೋಷನ್ ಆಗ್ತಿದೆ ಎಂಬ ಮಾತನ್ನು ಎಲ್ಲರ ಮುಂದೆ ಹೇಳ್ಬೇಡಿ!
• ಲಿಂಬೆಹಣ್ಣು (Lemon) ಮತ್ತು ಹಸಿಮೆಣಸಿನಕಾಯಿ (Green Chilly)
ಹಲವರು ಲಿಂಬೆಹಣ್ಣು ಮತ್ತು ಹಸಿಮೆಣಸಿನಕಾಯಿಯನ್ನು ಕಿಸೆಯಲ್ಲಿಯೂ ಇಟ್ಟುಕೊಂಡು ಓಡಾಡುತ್ತಾರೆ. ಕೆಟ್ಟ ದೃಷ್ಟಿ (Evil Eye) ಇದರಿಂದ ದೂರವಾಗುತ್ತದೆ. ನೆಗೆಟಿವ್ ಎನರ್ಜಿ ಕಡಿಮೆಯಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಲಿಂಬೆಹಣ್ಣು ಮತ್ತು ಹಸಿಮೆಣಸಿನಕಾಯಿಗಳು ಕೆಟ್ಟ ಪ್ರಭಾವದಿಂದ ರಕ್ಷಣೆ ನೀಡುತ್ತವೆ. ಕೆಲವು ಲಿಂಬೆಹಣ್ಣುಗಳು ಮತ್ತು ಹಸಿಮೆಣಸಿನಕಾಯಿಗಳನ್ನು ಕಾರಿನಲ್ಲಿ ಇಟ್ಟುಕೊಳ್ಳುವುದು ಉತ್ತಮ. ಮುಖ್ಯವಾಗಿ ಹಿಂದಿನ ಪ್ರತಿಬಿಂಬ ಕಾಣುವ ರಿಯರ್ ವ್ಯೂ ಮಿರರ್ (Rear view Mirror) ಬಳಿ ಇದನ್ನು ಇಟ್ಟುಕೊಳ್ಳುವುದು ಸುರಕ್ಷಿತ. ಹೀಗೆ ಮಾಡಿದರೆ, ನೆಗೆಟಿವ್ ಶಕ್ತಿಯಿಂದಾಗಿ ಅಪಘಾತ ಸಂಭವಿಸುವ ಸಾಧ್ಯತೆ ದೂರವಾಗುತ್ತದೆ.