ಪಿತೃದೋಷ, ನಾಗದೋಷ ನಿವಾರಣೆಗಾಗಿ ನಾಗಪಂಚಮಿ ದಿನದಂದು ಮಾಡಿ ಈ 6 ಕೆಲಸ

ಈ ವರ್ಷ ನಾಗ ಪಂಚಮಿ ಹಬ್ಬವನ್ನು 9ನೇ ಆಗಸ್ಟ್ 2024ರಂದು ಆಚರಣೆ ಮಾಡಲಾಗುತ್ತದೆ. ಹಬ್ಬದ ತಿಥಿ ಅಥವಾ ಮುಹೂರ್ತ ಆಗಸ್ಟ್ 9ರ ಬೆಳಗ್ಗೆ 8.15ರಿಂದ ಆರಂಭವಾಗಿ ಆಗಸ್ಟ್ 10ರ ಬೆಳಗ್ಗೆ 6 ಗಂಟೆ 9 ನಿಮಿಷಕ್ಕೆ ಅಂತ್ಯಗೊಳ್ಳಲಿದೆ.

do these six remedies for pitru dosha at naga Panchami day mrq

ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ನಾಗ ದೇವರುಗಳಿಗೆ ಅರ್ಚನೆ ಮಾಡಲಾಗುತ್ತದೆ. ಈ  ಸಮಯದಲ್ಲಿ ನಾಗನ ಜೊತೆ ಪರಮೇಶ್ವರನನ್ನು ಸಹ ಆರಾಧಿಸಲಾಗುತ್ತದೆ. ವಿಧಿ ವಿಧಾನಗಳೊಂದಿಗೆ ನಾಗ ಹಾಗೂ ಶಿವನನ್ನು ಪೂಜೆ ಮಾಡಲಾಗುತ್ತದೆ.  ನಾಗ ದೇವರನ್ನು ಹೇಗೆ ಪೂಜೆ ಮಾಡಬೇಕು ಮತ್ತು ವಿಧಿ ವಿಧಾನಗಳ ಪಾಲನೆ ಹೇಗಿರಬೇಕು ಎಂಬುದರ ಬಗ್ಗೆ  ಮಹಾಭಾರತ, ನಾರದ ಪುರಾಣ ಮತ್ತು ಸ್ಕಂದ ಪುರಾಣ ಇತ್ಯಾದಿಗಳಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ನಾಗ ಪೂಜೆಯ ಮಾಹಿತಿ ಇಲ್ಲದಿದ್ರೆ ಅರ್ಚಕರನ್ನು ಭೇಟಿಯಾಗಿ ತಿಳಿದುಕೊಳ್ಳಬಹುದು. 

ಈ ವರ್ಷ ನಾಗ ಪಂಚಮಿ ಹಬ್ಬವನ್ನು 9ನೇ ಆಗಸ್ಟ್ 2024ರಂದು ಆಚರಣೆ ಮಾಡಲಾಗುತ್ತದೆ. ಹಬ್ಬದ ತಿಥಿ ಅಥವಾ ಮುಹೂರ್ತ ಆಗಸ್ಟ್ 9ರ ಬೆಳಗ್ಗೆ 8.15ರಿಂದ ಆರಂಭವಾಗಿ ಆಗಸ್ಟ್ 10ರ ಬೆಳಗ್ಗೆ 6 ಗಂಟೆ 9 ನಿಮಿಷಕ್ಕೆ ಅಂತ್ಯಗೊಳ್ಳಲಿದೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ನಾಗದೋಷ ಅಥವಾ ಪಿತೃದೋಷವಿದ್ರೆ ಅದರ ದುಷ್ಪರಿಣಾಮದ ತೀವ್ರತೆಯನ್ನು ನಾಗಪಂಚಮಿಯಂದು ಕಡಿಮೆ ಮಾಡಿಕೊಳ್ಳಲು ಅವಕಾಶಗಳಿವೆ. ಈ ಶುಭ ದಿನದಂದು ಕೆಲವು ವಿಶೇಷ ಆಚರಣೆಗಳನ್ನು ಕ್ರಮಕೈಗೊಳ್ಳುವ ಮೂಲಕ ನಾಗದೋಷ ಹಾಗೂ ಪಿತ್ರುದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಾರೆ. ಹಾಗಾದ್ರೆ ಆ ವಿಶೇಷ ಕ್ರಮಗಳು ಏನು ಅನ್ನೋದರ ಮಾಹಿತಿ ಇಲ್ಲಿದೆ. 

1.ಯಾರ ಜಾತಕದಲ್ಲಿ ಕಾಳಸರ್ಪ ಯೋಗ ಮತ್ತು ಪಿತೃದೋಷ ಇದೆಯೋ ಅಂತಹವರ ಜೀವನ ಸಮಸ್ಯೆಗಳಿಂದ ತುಂಬಿರುತ್ತದೆ. ಈ ಸಮಸ್ಯೆಗಳ ತೀವ್ರತೆ ಕಡಿಮೆಗೊಳಿಸಲು ಅಥವಾ ಮುಕ್ತಿ ಪಡೆಯಲು ನಾಗಪಂಚಮಿಯ ದಿನದಂದು ಶ್ರೀ ಸರ್ಪಸೂಕ್ತವನ್ನು ಪಠಣೆ ಮಾಡಬೇಕು. 

2.ಪಿತೃದೋಷ ನಿವಾರಣೆಗಾಗಿ ನಾಗಪಂಚಮಿಯ ದಿನದಂದು ಎಲ್ಲಾ ಪೂಜೆಯ ಬಳಿಕ ಶ್ರೀಮದ್ ಭಗವದ್ ಪುರಾಣ ಮತ್ತು ಶ್ರೀ ಹರಿವಂಶ ಪುರಾಣದ ಪಠಣೆ ಮಾಡಬೇಕು. ಈ ಪಠಣೆಯಿಂದ ಪಿತೃದೋಷದ ತೊಂದರೆಗಳು ಕ್ಷೀಣಿಸಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

3.ನಾಗಪಂಚಮಿಯ ಪೂಜೆಯ ಸಂದರ್ಭದಲ್ಲಿ ಶಿವ ಆಥವಾ ಶಿವಲಿಂಗಕ್ಕೆ ಶ್ರಿಗಂಧದ ಅರ್ಪಣೆ ಮಾಡಬೇಕು. ಹಾಗೆಯೇ ನೀವೂ ಸಹ ಹಣೆಗೆ ಶ್ರೀಗಂಧದ ತಿಲಕವನ್ನು ಇರಿಸಿಕೊಳ್ಳಬೇಕು. ಹಾಗೆ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಕರ್ಪೂರ ಬೆಳಗುವದರಿಂದ ಪಿತೃದೋಷ ನಿವಾರಣೆಯಾಗುತ್ತದೆ. 

4.ನಾಗಪಂಚಮಿಯ ದಿನದಂದು ಮನೆಯ ಮುಖ್ಯ ದ್ವಾರದ ಬಳಿ ಗೋವಿನ ಸಗಣಿ ಅಥವಾ ಶುದ್ಧವಾದ ಮಣ್ಣಿನಿಂದ ಹಾವಿನ ಆಕೃತಿಯನ್ನು ರಚಿಸಬೇಕು. ನಂತರ ಈ ಆಕೃತಿಗೆ ವಿಧಿವಿಧಾನದಿಂದ ಪೂಜೆ ಸಲ್ಲಿಸಬೇಕು. ಹೀಗೆ ಮಾಡೋದರಿಂದ ಆರ್ಥಿಕ ಲಾಭ ಸಿಗುತ್ತೆ ಮತ್ತು ನಿಮ್ಮ ಪೂರ್ವಜರ ಆಶೀರ್ವಾದವೂ ಸಹ ನಿಮಗೆ ಲಭ್ಯವಾಗುತ್ತದೆ. 

ಆಗಸ್ಟ್ ಶುಕ್ರ ಗೋಚರ; ನಾಲ್ಕು ರಾಶಿಯವರಿಗೆ ಬಂಪರ್ ಲಾಟರಿ, ತೆರೆಯಲಿದೆ ಅದೃಷ್ಟದ ಬಾಗಿಲು

5.ನಾಗಪಂಚಮಿ ದಿನದಂದು ಬೆಳ್ಳಿಯಿಂದ ಮಾಡಿರುವ ನಾಗರಾಜ-ನಾಗಿಣಿ ಜೋಡಿಯ ಆಕೃತಿ ಮಾಡಿಸಿ ಸಮೀಪದ ದೇವಸ್ಥಾನಕ್ಕೆ ದಾನವಾಗಿ ನೀಡಿ. ಹೀಗೆ ಮಾಡುವದರಿಂದ ಶುಭ ಗಳಿಗೆಗಳು ಜೀವನದಲ್ಲಿ ಬರಲಿವೆ. ಹಾಗೆ ಸಂಪತ್ತು ಅರಿಸಿ ಬರುವ ಸಾಧ್ಯತೆಗಳಿರುತ್ತವೆ.

6.ನಾಗಪಂಚಮಿ ದಿನದಂದು ಸೂರ್ಯಾಸ್ತದ ವೇಳೆ ಹಾಲು ಬಳಸಿ ಮಣ್ಣಿನಲ್ಲಿ ತಯಾರಿಸಿರುವ ಹಣತೆಯಲ್ಲಿ ದೀಪ ಬೆಳಗಬೇಕು. ಸಂಜೆ ದೇವಸ್ಥಾನ ಅಥವಾ ಮನೆಯ ಮೂಲೆಗಳಲ್ಲಿ ಹಣತೆ ಇರಿಸಿ ದೀಪ ಬೆಳಗಬೇಕು. ಹೀಗೆ ಮಾಡುವದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹೆಚ್ಚಳ ಆಗುತ್ತದೆ. 

Surya Ketu Yuti 2024: 18 ವರ್ಷಗಳ ನಂತರ ಸೂರ್ಯ-ಕೇತುವಿನ ಸಂಯೋಗ, ಬದಲಾಗಲಿದೆ 5 ರಾಶಿಚಕ್ರದವರ ಜೀವನ

ನಾಗಪಂಚಮಿಯಂದು ನಾಗ ಮೂರ್ತಿ ಅಥವಾ ನಾಗದೇವನ ಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ. ಕೆಲವು ಕಡೆ ಹಾವಿನ ಹುತ್ತಗಳಿಗೆ ಹಾಲು ಎರೆಯಲಾಗುತ್ತದೆ. ಈ ದಿನದಂದು ನಾಗ ದೇವಸ್ಥಾನಗಳಲ್ಲಿ ಅದ್ಧೂರಿಯಾಗಿ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. 

Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥ, ನಂಬಿಕೆ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರೋ ವಿಷಯವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

Latest Videos
Follow Us:
Download App:
  • android
  • ios