Asianet Suvarna News Asianet Suvarna News

Solar Eclipse 2023: ಗ್ರಹಣ ಮುಗೀತಿದ್ದಂಗೆ ಈ ಕೆಲಸ ಮಾಡೋಕೆ ಮರೀಬೇಡಿ!

ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20ರಂದು ನಡೆಯಲಿದೆ. ಗ್ರಹಣ ಮುಗಿದ ತಕ್ಷಣವೇ ಮಾಡಬೇಕಾದ ಕೆಲವು ಕೆಲಸಗಳ ಬಗ್ಗೆ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಗ್ರಹಣದ ನಕಾರಾತ್ಮಕತೆ ಕೊನೆಗೊಳ್ಳುತ್ತದೆ.

Do these five things after the solar eclipse is over skr
Author
First Published Apr 20, 2023, 10:52 AM IST

ವರ್ಷದ ಮೊದಲ ಸೂರ್ಯಗ್ರಹಣವು ಇಂದು ಅಂದರೆ ಏಪ್ರಿಲ್ 20ರಂದು ಬೆಳಿಗ್ಗೆ 7:04ರಿಂದ ಮಧ್ಯಾಹ್ನ 12:29ರವರೆಗೆ ಸಂಭವಿಸುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ ಮತ್ತು ಭೂಮಿಯ ಮೇಲಿನ ಕೆಲವು ಸ್ಥಳಗಳಿಂದ ಸೂರ್ಯನನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಈ ಗ್ರಹಣ ಗೋಚಾರವಾಗುವುದಿಲ್ಲವಾದರೂ, ನೀವು ಕೆಲವೊಂದು ಮುನ್ನೆಚ್ಚರಿಕೆ ಹಾಗೂ ಗ್ರಹಣದ ಬಳಿಕದ ಕ್ರಿಯೆಗಳನ್ನು ಮಾಡುವುದು ಸದಾ ಒಳ್ಳೆಯದು. ಕಾಂಬೋಡಿಯಾ, ಚೀನಾ, ಅಮೆರಿಕ, ಮಲೇಷ್ಯಾ, ಫಿಜಿ, ಜಪಾನ್, ಸಮೋವಾ, ಸೊಲೊಮನ್, ಸಿಂಗಾಪುರ್, ಥೈಲ್ಯಾಂಡ್, ದಕ್ಷಿಣ ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಂತಹ ಸ್ಥಳಗಳಿಂದ ಸೂರ್ಯಗ್ರಹಣ ಗೋಚರಿಸುತ್ತದೆ.

ಗ್ರಹಣದ ಮೊದಲು ಸೂತಕವನ್ನು ಆಚರಿಸಲಾಗುತ್ತದೆ ಮತ್ತು ಗ್ರಹಣದ ಸಮಯದಲ್ಲಿಯೂ ಅನೇಕ ನಿರ್ಬಂಧಗಳಿವೆ. ಆದರೆ ಸೂರ್ಯಗ್ರಹಣ ಮುಗಿದರೂ ಅದರ ದುಷ್ಪರಿಣಾಮಗಳು ಕಡಿಮೆಯಾಗುವುದಿಲ್ಲ. ಅದಕ್ಕಾಗಿಯೇ ಗ್ರಹಣ ಮುಗಿದ ತಕ್ಷಣ ಮಾಡಬೇಕಾದ ಕೆಲವು ಕಾರ್ಯಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರಿಂದ ಗ್ರಹಣದ ನಕಾರಾತ್ಮಕತೆ ಕೊನೆಗೊಳ್ಳುತ್ತದೆ.

  • ಸೂರ್ಯಗ್ರಹಣ ಮುಗಿದ ತಕ್ಷಣ ಮನೆಯನ್ನು ಡಿಸ್‌ಇನ್ಫೆಕ್ಟೆಂಟ್ ಹಾಕಿ ಶುಚಿಗೊಳಿಸಬೇಕು. ನಂತರ ಇಡೀ ಮನೆಗೆ ಗಂಗಾಜಲವನ್ನು ಸಿಂಪಡಿಸಿ. ಇದು ನಕಾರಾತ್ಮಕತೆಯನ್ನು ತೆಗೆದು ಹಾಕುತ್ತದೆ.
  • ಸೂರ್ಯಗ್ರಹಣ ಮುಗಿದ ನಂತರ ಮನೆಯ ಸ್ವಚ್ಛತಾ ಕಾರ್ಯ ಮುಗಿಸಿ, ಮನೆಯ ಸದಸ್ಯರೆಲ್ಲರೂ ಸ್ನಾನ ಮಾಡಬೇಕು. ಏಕೆಂದರೆ ಗ್ರಹಣದ ಪರಿಣಾಮ ವ್ಯಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ, ಸ್ನಾನದ ನೀರಿಗೆ ಕೊಂಚ ತುಳಸಿ, ಅರಿಶಿನ ಹಾಕಿಕೊಂಡು ಸ್ನಾನ ಮಾಡುವುದು ಉತ್ತಮ. ಸ್ನಾನದ ಬಳಿಕ ನೀವು ಧರಿಸಿದ ಬಟ್ಟೆಗಳನ್ನು ಒಗೆದು ತೆಗೆದಿರಿಸಿ.
  • ಗ್ರಹಣ ಮುಗಿದ ನಂತರ ಪೂಜೆಯ ಮನೆಯಲ್ಲಿರುವ ಎಲ್ಲಾ ದೇವ-ದೇವತೆಗಳ ವಿಗ್ರಹಗಳನ್ನು ಸ್ವಚ್ಛಗೊಳಿಸಿ ಮತ್ತು ಗಂಗಾಜಲವನ್ನು ಸಿಂಪಡಿಸಿ. ಗ್ರಹಣದ ನಂತರ ದೇವತೆಗಳನ್ನು ನೋಡುವುದು ಮಂಗಳಕರ.
  • ಗ್ರಹಣ ಮುಗಿದ ನಂತರ, ಆಹಾರ ಮತ್ತು ಪಾನೀಯದಲ್ಲಿ ಹಾಕಿದ ದರ್ಬೆ ಅಥವಾ ತುಳಸಿ ಎಲೆಗಳನ್ನು ಹೊರ ತೆಗೆಯಿರಿ. ಏಕೆಂದರೆ ದರ್ಬೆ ಹುಲ್ಲು ನೈಸರ್ಗಿಕ ಸೋಂಕು ನಿವಾರಕವಾಗಿದೆ. ಇದಾದ ಬಳಿಕ ತಾಜಾ ಆಹಾರವನ್ನು ತಯಾರಿಸಿ ಸೇವಿಸಿ. ಈ ಆಹಾರಕ್ಕೆ ಹೆಚ್ಚಾಗಿ ಅರಿಶಿನ ಬಳಕೆ ಮಾಡಿ. ಹಳೆಯ ಯಾವುದೇ ಆಹಾರ ಬೇಡ. 
  • ಸೂರ್ಯಗ್ರಹಣ ಮುಗಿದ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ, ಗ್ರಹಣದ ನಂತರ ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗೋಧಿ, ಬೇಳೆ, ಕೆಂಪು ಬಟ್ಟೆ, ಉಪ್ಪು, ಬೆಲ್ಲ, ಹತ್ತಿ ಇತ್ಯಾದಿ ವಸ್ತುಗಳನ್ನು ದಾನ ಮಾಡಬಹುದು.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Follow Us:
Download App:
  • android
  • ios