Mahashivratri 2022: ಶಿವನ ಕೃಪೆಗೆ ರಾಶಿಯನುಸಾರ ಮಾಡಿ ರುದ್ರಾಭಿಷೇಕ

ಮಹಾಶಿವರಾತ್ರಿ ದಿನದಂದು ಶಿವನ ಆಶೀರ್ವಾದ ಪಡೆದರೆ ಬಹಳ ಒಳಿತು ಎಂದು ಶಿವಪುರಾಣ ಸಹಿತ ಎಲ್ಲ ಪುರಾಣಗಳಲ್ಲೂ ಉಲ್ಲೇಖವಾಗಿದೆ. ಅಲ್ಲದೆ, ಈ ದಿನ ಶಿವನಿಗೆ ಪ್ರಿಯವಾಗುವಂತೆ ಶ್ರದ್ಧಾ, ಭಕ್ತಿಯಿಂದ ಉಪವಾಸ ಮಾಡಿ ಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ. ಇದಲ್ಲದೆ, ರಾಶಿಗಳಿಗೆ ಅನುಗುಣವಾಗಿ ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಿದರೆ ಬಹಳ ಒಳ್ಳೆಯದಾಗಿದ್ದು, ಪುಣ್ಯ ಲಭ್ಯವಾಗುತ್ತದೆ.

Do Rudrabhishek of Lord Shiva according to the zodiac on Mahashivratri

ಶಿವರಾತ್ರಿಯಂದು (Shivaratri) ರಾಶಿಯನುಸಾರ ರುದ್ರಾಭಿಷೇಕ (Rudrabhisheka) ಮಾಡಿಸಿದರೆ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಶಿವರಾತ್ರಿಯು ಶಿವನ ಕೃಪೆ (Blessings) ಪಡೆಯಲು ಪ್ರಶಸ್ತವಾದ ದಿನವಾಗಿದೆ. ಹಾಗಾಗಿ ಈ ದಿನ ಶಿವನಿಗೆ ಪ್ರಿಯವಾದ ರುದ್ರಾಭಿಷೇಕ ಮಾಡಿಸುವುದರಿಂದ ಸಕಲ ಪಾಪಗಳು ನಾಶವಾಗಿ, ಆರೋಗ್ಯ ಆಯಸ್ಸು ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಶಿವನ ಕೃಪೆ ಪಡೆಯಲು ಅನೇಕ ವ್ರತ, ಅನುಷ್ಠಾನ, ಮಂತ್ರ ಪಠಣ, ಬಿಲ್ವಾರ್ಚನೆ, ಅಭಿಷೇಕಗಳನ್ನು ಮಾಡಿಸುತ್ತಾರೆ. ಹಾಗೆಯೇ ಶಿವನಿಗೆ ಪ್ರಿಯವಾದ ರುದ್ರಾಭಿಷೇಕವನ್ನು ಮಾಡುವುದರಿಂದ ಈಶ್ವರನನ್ನು (Lord Shiva) ಬೇಗ ಒಲಿಸಿಕೊಳ್ಳಬಹುದಾಗಿದೆ.

ರುದ್ರಾಭಿಷೇಕ ಮಾಡಿಸಿದರೆ ಏನು ಫಲ..?
ಶಿವನ ಕೃಪೆಗೆ ಪಾತ್ರರಾಗಲು ಮಾಡುವ ಪೂಜೆ (Pooja), ಅಭಿಷೇಕಗಳಲ್ಲಿ (Abhisheka) ರುದ್ರಾಭಿಷೇಕವು ಶಿವನಿಗೆ ಅತ್ಯಂತ ಪ್ರಿಯವಾದದ್ದಾಗಿದೆ. ಹಾಗೆಯೇ ರುದ್ರಾಭಿಷೇಕಕ್ಕೆ ವಿಶೇಷ ಮಹತ್ವವಿದೆ. ಸಕಾರಾತ್ಮಕ (Possitive) ಶಕ್ತಿ ಹೆಚ್ಚಲು, ಶತ್ರುಗಳ ಮೇಲೆ ವಿಜಯ ಸಾಧಿಸಲು, ಭೂತ, ಪ್ರೇತ ಬಾಧೆಗಳಿಂದ ಮುಕ್ತಿ ಹೊಂದಲು, ವಿದ್ಯೆಯನ್ನು ಹೊಂದಲು, ಆರ್ಥಿಕವಾಗಿ ಸಬಲತೆಯನ್ನು (Economic Growth) ಕಾಣಲು ಮತ್ತು ಜೀವನದಲ್ಲಿ (Life) ಏಳಿಗೆಯನ್ನು ಹೊಂದಲು, ವಿಶೇಷವಾಗಿ ಜನ್ಮ ಜನ್ಮಾಂತರಗಳ ಪಾಪಗಳಿಂದ ಮುಕ್ತಿ ಪಡೆಯಲು ಶ್ರದ್ಧೆ ಮತ್ತು ಭಕ್ತಿಯಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಿಸಬೇಕೆಂದು ಶಾಸ್ತ್ರ ಹೇಳುತ್ತದೆ.

ಅಷ್ಟೇ ಅಲ್ಲದೆ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಾದ ಸಂತಾನ ಸಮಸ್ಯೆ, ಸಾಲಗಳಿಂದ ಮುಕ್ತಿ ಪಡೆಯಲು, ರೋಗ (Disease) ಶಮನಕ್ಕೆ, ಮನೆಯಲ್ಲಿ ನೆಮ್ಮದಿ ನೆಲೆಸಲು ರುದ್ರಾಭಿಷೇಕವನ್ನು ಮಾಡುವರಿಂದ ಒಳಿತಾಗುತ್ತದೆ. ರುದ್ರಾಭಿಷೇಕದಿಂದ ಉತ್ತಮ ಫಲವನ್ನು ಪಡೆಯಬಹುದಾಗಿದೆ. ಅದರಲ್ಲೂ ರುದ್ರಾಭಿಷೇಕದಲ್ಲಿ ಅನೇಕ ವಿಧಗಳಿವೆ. ಅಭಿಷೇಕಕ್ಕೆ ಬಳಸುವ ವಸ್ತುಗಳನ್ನು ರಾಶಿಗನುಗುಣವಾಗಿ (Zodiac Sign) ಬಳಸಿ ರುದ್ರಾಭಿಷೇಕವನ್ನು ಮಾಡಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಹಾಗಾಗಿ ಯಾವ ರಾಶಿಗೆ, ರುದ್ರಾಭಿಷೇಕ ಮಾಡಿಸಲು ಯಾವ್ಯಾವ ವಸ್ತುವನ್ನು ಬಳಸಬೇಕು ಎಂಬುದನ್ನು ತಿಳಿಯೋಣ..

ಮೇಷ ರಾಶಿ (Aries)
ಈ ರಾಶಿಯವರು ಶಿವನ ಕೃಪೆಗೆ ಪಾತ್ರರಾಗಲು ಮತ್ತು ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಜೇನು ತುಪ್ಪ (Honey) ಮತ್ತು ಕಬ್ಬಿನ ರಸದಿಂದ ರುದ್ರಾಭಿಷೇಕವನ್ನು ಮಾಡಿಸಬೇಕು. ಮೇಷ ರಾಶಿಯವರು ರುದ್ರಾಭಿಷೇಕವನ್ನು ಮಾಡಿಸುವುದರಿಂದ ಜೀವನದಲ್ಲಿ ನೆಮ್ಮದಿ ಮತ್ತು ಸಂಪತ್ತನ್ನು ಪಡೆಯಬಹುದಾಗಿದೆ. 

ವೃಷಭ ರಾಶಿ (Taurus)
ಈ ರಾಶಿಯವರು ಹಾಲು (Milk) ಮತ್ತು ಮೊಸರಿನಿಂದ (Curd) ಶಿವನಿಗೆ ಅಭಿಷೇಕ ಮಾಡಿದಲ್ಲಿ ನೆಮ್ಮದಿ ಹಾಗೂ ಐಶ್ವರ್ಯವನ್ನು ಹೊಂದುವುದಲ್ಲದೆ, ಶಿವನ ಕೃಪೆ ಪಡೆಯಬಹುದಾಗಿದೆ. 

ಮಿಥುನ ರಾಶಿ (Gemini)
ಈ ರಾಶಿಯವರು ದೂರ್ವೆ(ಗರಿಕೆ)ಯಿಂದ ರುದ್ರಾಭಿಷೇಕವನ್ನು ಮಾಡವುದರಿಂದ ಶಿವನ ವಿಶೇಷ ಕೃಪೆ ಪ್ರಾಪ್ತವಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ (Economic Status) ಬಲವಾಗುತ್ತದೆ.

ಕರ್ಕಾಟಕ ರಾಶಿ (Cancer)
ಈ ರಾಶಿಯವರು ಶಿವನ ಕೃಪೆ ಪಡೆಯಲು ಹಾಲು ಮತ್ತು ಜೇನುತುಪ್ಪದಿಂದ ರುದ್ರಾಭಿಷೇಕವನ್ನು ಮಾಡಿಸಬೇಕು. ಇದರಿಂದ ಲಕ್ಷ್ಮೀ ದೇವಿಯ (Goddess Laxmi) ಕೃಪೆ ಸಹ ಲಭಿಸುತ್ತದೆ. 

ಸಿಂಹ ರಾಶಿ (Leo)
ಈ ರಾಶಿಯವರು ಶಿವನ ಕೃಪೆಯಿಂದ ಸುಖ-ಸಂಪತ್ತನ್ನು (Happiness and wealth) ಹೊಂದಲು ಜೇನುತುಪ್ಪ ಮತ್ತು ಕಬ್ಬಿನ ರಸದಿಂದ ರುದ್ರಾಭಿಷೇಕವನ್ನು ಮಾಡಿಸಬೇಕು. 

ಇದನ್ನು ಓದಿ:  Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ಕನ್ಯಾ ರಾಶಿ (Virgo)
ಈ ರಾಶಿಯವರು ದೂರ್ವೆ ಮತ್ತು ಮೊಸರಿನಿಂದ ಶಿವನಿಗೆ ರುದ್ರಾಭಿಷೇಕ ಮಾಡಿದರೆ ಒಳಿತು. ಇದರಿಂದ ಸಮಸ್ಯೆಗಳಿಂದ (Problems) ಮುಕ್ತಿ ಹೊಂದಬಹುದಾಗಿದೆ.

ತುಲಾ ರಾಶಿ (Libra)
ಈ ರಾಶಿಯವರು ಸಕಲ ಸಂಪತ್ತನ್ನು, ಶತ್ರುಗಳ (Enemies) ಕಾಟದಿಂದ ಮುಕ್ತಿಯನ್ನು ಪಡೆಯಲು ಹಾಲು ಮತ್ತು ಜೇನು ತುಪ್ಪದೊಂದಿಗೆ ರುದ್ರಾಭಿಷೇಕವನ್ನು ಮಾಡಿಸಬೇಕು. 

ವೃಶ್ಚಿಕ ರಾಶಿ (Scorpio)
ಈ ರಾಶಿಯವರು ಜೇನುತುಪ್ಪ, ಕಬ್ಬಿನ ರಸ (Sugarcane juice) ಮತ್ತು ಮೊಸರು ಇವುಗಳಿಂದ ರುದ್ರಾಭಿಷೇಕವನ್ನು ಮಾಡಬೇಕು. ಇದರಿಂದ ಉತ್ತಮ ಫಲಗಳನ್ನು ಹೊಂದುವುದಲ್ಲದೇ, ನೆಮ್ಮದಿಯನ್ನು ಪಡೆಯಬಹುದಾಗಿದೆ.

ಧನು ರಾಶಿ (Sagittarus)
ಈ ರಾಶಿಯವರು ಜೇನುತುಪ್ಪ ಮತ್ತು ಹಾಲಿನಿಂದ ರುದ್ರಾಭಿಷೇಕವನ್ನು ಮಾಡುವುದರಿಂದ ಶಿವನನ್ನು ಪ್ರಸನ್ನಗೊಳಿಸಿಕೊಳ್ಳಬಹುದಾಗಿದೆ. ಶಿವನ ಕೃಪೆಯಿಂದ ಬಯಸಿದ್ದನ್ನು ಹೊಂದಬಹುದಾಗಿದೆ.

ಮಕರ ರಾಶಿ (Capricorn)
ಈ ರಾಶಿಯವರು ಜೀವನದಲ್ಲಿ ಉತ್ತಮ ಅಭಿವೃದ್ಧಿಯನ್ನು ಹೊಂದಲು ಗಂಗಾಜಲಕ್ಕೆ ಬೆಲ್ಲವನ್ನು (Jiggery) ಸೇರಿಸಿ, ಸಿಹಿಯಾದ ಪವಿತ್ರ ಜಲದಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು.   

ಕುಂಭ ರಾಶಿ (Aquarius)
ಈ ರಾಶಿಯವರು ಮೊಸರಿನಿಂದ ಶಿವನಿಗೆ ರುದ್ರಾಭಿಷೇಕವನ್ನು ಮಾಡಬೇಕು. ಇದರಿಂದ ಪಾಪಗಳಿಂದ ಮುಕ್ತಿಹೊಂದಿ ಪುಣ್ಯಫಲವನ್ನು ಕಾಣಬಹುದಾಗಿದೆ.

ಇದನ್ನು ಓದಿ: Festive Tips: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!

ಮೀನ ರಾಶಿ (Pisces)
ಈ ರಾಶಿಯವರು ಮೊಸರು, ಹಾಲು ಮತ್ತು ಕಬ್ಬಿನ ರಸದಿಂದ ಶಿವನಿಗೆ  ರುದ್ರಾಭಿಷೇಕವನ್ನು ಮಾಡಬೇಕು. ಇದರಿಂದ ಸಕಲ ಸಂಪತ್ತನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಇಷ್ಟಾರ್ಥಗಳು ಸಿದ್ಧಿಸುತ್ತವೆ.

Latest Videos
Follow Us:
Download App:
  • android
  • ios