Asianet Suvarna News Asianet Suvarna News

Maha Shivratri 2022: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!

ಶಿವರಾತ್ರಿ ಹಬ್ಬದ ಆಚರಣೆಗೆ ವಿಶೇಷವಾದ ಮಹತ್ವವಿದೆ. ಶಿವನಿಗೆ ಪ್ರಿಯವಾದ ರುದ್ರಾಕ್ಷಿಯನ್ನು ಧರಿಸುವುದಕ್ಕೂ ಸಹ ಅಷ್ಟೇ ವಿಶೇಷತೆ ಇದೆ. ಶಿವನ  ಕೃಪೆಗೆ ಪಾತ್ರರಾಗಲು ಶಿವರಾತ್ರಿ ಪ್ರಶಸ್ತವಾದ ದಿನವಾಗಿದೆ. ಈ ದಿನ ಉದ್ಯೋಗಕ್ಕೆ ಅನುಸಾರವಾಗಿ ಆಯಾ ರುದ್ರಾಕ್ಷಿಯನ್ನು ಧರಿಸುವದರಿಂದ ಹೆಚ್ಚಿನ ಯಶಸ್ಸನ್ನು ಕಾಣಬಹುದಾಗಿದೆ.
 

Wearing these rudraksh according to your job will bring you luck...
Author
Bangalore, First Published Feb 25, 2022, 6:56 PM IST

ಶಿವ ಪಾರ್ವತಿಯರ (Lord Shiva - Parvathi) ವಿವಾಹವಾದ (Marriage) ದಿನವನ್ನೇ ಮಹಾ ಶಿವರಾತ್ರಿಯಂದು (Shivarathri) ಆಚರಿಸಲಾಗುತ್ತದೆ. ಈ ದಿನ ಭಕ್ತಿ ಶ್ರದ್ಧೆಗಳಿಂದ ಶಿವನಿಗೆ ಪೂಜೆ (Pooja) ಸಲ್ಲಿಸುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ.  ವೃತ್ತಿ ಕ್ಷೇತ್ರದಲ್ಲಿ (Carrer) ತೊಂದರೆಗಳನ್ನು ಅನುಭವಿಸುತ್ತಿದ್ದರೆ ಅಂಥವರು ವೃತ್ತಿಗೆ ಅನುಸಾರವಾಗಿ ರುದ್ರಾಕ್ಷಿಯನ್ನು (Rudraksha) ಧರಿಸುವುದರಿಂದ (Wearing) ವೃತ್ತಿಗೆ ಸಂಬಂಧಿಸಿದ ಎಲ್ಲಾ ತೊಂದರೆಗಳು ನಿವಾರಣೆಯಾಗಿ, ವೃತ್ತಿಯಲ್ಲಿ ಯಶಸ್ಸು (Success) ದೊರೆಯುತ್ತದೆ. ಹಾಗಾದರೆ ಯಾವ ವೃತ್ತಿಯವರು ಯಾವ ವೃತ್ತಿಯವರು,ಯಾವ ರುದ್ರಾಕ್ಷಿಯನ್ನು  ಧರಿಸಬೇಕು ಎಂಬುದನ್ನು ತಿಳಿಯೋಣ... ಈ ಬಾರಿ ಮಾರ್ಚ್ 1ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ಪುಣ್ಯ ಕಾಲದಲ್ಲಿ ವೃತ್ತಿಗೆ ತಕ್ಕ ರುದ್ರಾಕ್ಷಿಯನ್ನು ಧರಿಸುವುದರಿಂದ ತೊಂದರೆ ತಾಪತ್ರಯಗಳು ದೂರವಾಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ರುದ್ರಾಕ್ಷಿಯ ಮಹಿಮೆ ಅಪಾರ. ರುದ್ರಾಕ್ಷಿಯ ಅನೇಕ ಸಕಾರಾತ್ಮಕ ಗುಣಗಳನ್ನು (Positive energy) ಹೊಂದಿದ್ದು ಇದರಿಂದ ಅನೇಕ ಪ್ರಯೋಜನಗಳು ಉಂಟಾಗುತ್ತವೆ. ಹಾಗಾಗಿ ರುದ್ರಾಕ್ಷಿ ಧಾರಣೆ ಬಗ್ಗೆ ತಿಳಿಯೋಣ...

ಪೊಲೀಸ್ ಅಥವಾ ಸೇನಾ ವೃತ್ತಿಯವರು : 
ಆರಕ್ಷಕ ಮತ್ತು ಸೇನಾ ವೃತ್ತಿಯಲ್ಲಿ ತೊಡಗಿಕೊಂಡವರು ನವಮುಖಿ ಮತ್ತು ಚತುರ್ಮುಖಿ  ರುದ್ರಾಕ್ಷಿಯನ್ನು ಧರಿಸಬೇಕು. ಇದನ್ನು ಧರಿಸುವುದರಿಂದ ಕೆಲಸದಲ್ಲಿ ಹೊಸ ಉತ್ಸಾಹವನ್ನು ನೀಡುವುದಲ್ಲದೆ, ವೃತ್ತಿಯಲ್ಲಿ ಉತ್ತಮ ಏಳ್ಗೆಯನ್ನು ಕಾಣಬಹುದಾಗಿದೆ.

ಮೆಡಿಕಲ್‌ಗೆ ಸಂಬಂಧಿಸಿದ ವೃತ್ತಿಯವರು (Medical) :
ಮೆಡಿಕಲ್ ಕ್ಷೇತ್ರದಲ್ಲಿ ತೊಡಗಿರುವ ವ್ಯಕ್ತಿಗಳು ನವ ಮುಖಿ ಮತ್ತು ಏಕಾದಶ ಮುಖಿ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ. ಹನುಮಂತನು ಮಹಾದೇವನ ಹನ್ನೊಂದನೆಯ ಅವತಾರವೆಂದು ಹೇಳಲಾಗುತ್ತದೆ. ಹಾಗಾಗಿ ಏಕಾದಶ ಮುಖಿ ರುದ್ರಾಕ್ಷಿಯು ಈ ಕ್ಷೇತ್ರದವರಿಗೆ ಹೆಚ್ಚಿನ ಅದೃಷ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನು ಓದಿ : Astro Mantra: ಶುಕ್ರವಾರ ಲಲಿತಾ ಸಹಸ್ರನಾಮವ ಜಪಿಸಿದರೆ ಫಲ ಹೆಚ್ಚು!

ರಾಜಕಾರಣಿಗಳು (Politician) : 
ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಮತ್ತು ರಾಜಕಾರಣಿಗಳು ಆಗಬೇಕೆಂಬ ಬಯಕೆ ಇಟ್ಟುಕೊಂಡವರು ಏಕಮುಖಿ ಅಥವಾ ಚತುರ್ದಶ ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಇದರಿಂದ ನಾಯಕತ್ವದ ಕ್ಷಮತೆ ಹೆಚ್ಚುತ್ತದೆ. ಜನರ ನಡುವೆ ಪ್ರಶಂಸೆಗೂ ಪಾತ್ರರಾಗುತ್ತಾರೆ. ಇದರಿಂದ ಗೌರವ, ಪ್ರತಿಷ್ಠೆ ಮತ್ತಷ್ಟು ಹೆಚ್ಚುತ್ತದೆ.

ಸರ್ಕಾರಿ ಸೇವೆಯಲ್ಲಿರುವವರು (Government  job) :
ಸರ್ಕಾರಿ ಕೆಲಸದಲ್ಲಿ ತೊಡಗಿಕೊಂಡವರು ಏಕ ಮುಖಿ ಅಥವಾ ಏಕಾದಶ ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಈ ರೀತಿಯ ವೃತ್ತಿಯಲ್ಲಿರುವವರಿಗೆ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ ಹೆಚ್ಚಿರಬೇಕಾಗುತ್ತದೆ. ಹಾಗಾಗಿ ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಉಪಯೋಗವಾಗುತ್ತದೆ.

ವಕೀಲ ವೃತ್ತಿ ಅಥವಾ ನ್ಯಾಯಾಲಯಕ್ಕೆ ಸಂಬಂಧಿಸಿದ ವೃತ್ತಿ : (Lawyer) 
ಈ ವೃತ್ತಿಯಲ್ಲಿರುವವರು ದ್ವಿಮುಖಿ ಅಥವಾ ದ್ವಾದಶ ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಇದನ್ನು ಧರಿಸುವುದರಿಂದ ತರ್ಕ ಶಕ್ತಿ ಹೆಚ್ಚುತ್ತದೆ. ಇದರಿಂದ ಈ ಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆ ದೊರೆಯುತ್ತದೆ.

ಇದನ್ನು ಓದಿ : Rahu Kaal: ಈ ಕೆಲಸಗಳನ್ನು ರಾಹು ಕಾಲದಲ್ಲಿಯೇ ಮಾಡಿ!

ವ್ಯಾಪಾರಸ್ಥರು (Business) :  
ವ್ಯಾಪಾರಸ್ಥರಾಗಿ ಹೆಚ್ಚಿನ ಯಶಸ್ಸು ಮತ್ತು ಹಣವನ್ನು ಗಳಿಸಬೇಕೆಂದು ಕೊಂಡಿದ್ದರೆ ತ್ರಯೋದಶ ಮುಖಿ ಮತ್ತು ಚತುರ್ದಶ ಮುಖಿ ರುದ್ರಾಕ್ಷಿಯನ್ನು ಧರಿಸಬೇಕು. ಇದು ಧರಿಸುವ ವ್ಯಕ್ತಿಗಷ್ಟೇ ಅಲ್ಲದೆ ಅವರ ಸಂತಾನಕ್ಕೂ ಭಾಗ್ಯವನ್ನು ತಂದುಕೊಡುತ್ತದೆ.

ರುದ್ರಾಕ್ಷಿ ಧಾರಣೆಯ ನಿಯಮಗಳು : (Wearing Rudraksha)
ರುದ್ರಾಕ್ಷಿಯನ್ನು ಯಾವಾಗಲೂ ಗಂಗಾಜಲದಿಂದ ಶುದ್ಧ ಮಾಡಬೇಕು. ಅಷ್ಟೇ ಅಲ್ಲದೆ ಶಿವಲಿಂಗವನ್ನು ಸ್ಪರ್ಶಿಸಿ, ಪೂಜಿಸಿದ ರುದ್ರಾಕ್ಷಿಯನ್ನೇ ಧರಿಸಬೇಕು. ಇದನ್ನು ಕುತ್ತಿಗೆಗೆ, ಕೈಗೆ,ಮತ್ತು ಹೃದಯಕ್ಕೆ ತಾಗುವಂತೆ ಧರಿಸಬೇಕು. ರುದ್ರಾಕ್ಷಿಯನ್ನು ಧರಿಸಿದ ನಂತರ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು. ರುದ್ರಾಕ್ಷಿಯು ಮಹಾದೇವನ ಸಾಕ್ಷಾತ್  ಸ್ವರೂಪವೆಂದೇ ಹೇಳಲಾಗುತ್ತದೆ.

Follow Us:
Download App:
  • android
  • ios