ಸಂಭೋಗದ ಸಮಯದಲ್ಲಿ ರುದ್ರಾಕ್ಷಿ ಧರಿಸಿದರೆ ಏನಾಗುತ್ತದೆ?
ರುದ್ರಾಕ್ಷಿಯನ್ನು ಧರಿಸುವುದರಿಂದ ಅನೇಕ ಶಾರೀರಿಕ ಸಮಸ್ಯೆಗಳು ದೂರಾಗುತ್ತವೆ ಎಂಬ ವಿಷಯ ವೈಜ್ಞಾನಿಕವಾಗಿಯೂ ನಿಜವೆಂದು ಸಾಬೀತಾಗಿದೆ. ಹೃದಯಕ್ಕೆ ಸಂಬಂಧಿಸಿದ ರೋಗಕ್ಕೆ ರಾಮಬಾಣ ರುದ್ರಾಕ್ಷಿ ಧಾರಣೆ ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ನೆಮ್ಮದಿ ಮತ್ತು ಆರೋಗ್ಯ ಲಭಿಸುತ್ತದೆ. ಆದರೆ ಧರಿಸಿದಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಯಾವ ಸಮಯದಲ್ಲಿ ರುದ್ರಾಕ್ಷಿ ಧರಿಸಿದ್ದರೆ ಅಶುಭ ಎನ್ನುವುದನ್ನು ತಿಳಿದಿದ್ದರೆ, ರುದ್ರಾಕ್ಷಿ ಧಾರಣೆಯ ಲಾಭ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಶಿವನ ಆಭರಣವಾದ ರುದ್ರಾಕ್ಷಿಯ ಮಹತ್ವ ಅಸಾಧಾರಣವಾದದ್ದು. ರುದ್ರಾಕ್ಷಿಯನ್ನು ಸಾಕ್ಷತ್ ಶಿವನ ಅಂಶವೆಂದೇ ಹೇಳಲಾಗುತ್ತದೆ. ಶಿವನ ಕಣ್ಣೀರಿನಿಂದ ರುದ್ರಾಕ್ಷಿಯನ್ನು ಮಾಡಲಾಗಿದೆ ಎಂಬ ಪ್ರತೀತಿ ಇದೆ. ಸತಿಯ ದೇಹತ್ಯಾಗದ ನಂತರ ಶಿವ ಸಿಟ್ಟಿಗೊಳಗಾಗಿ ರುದ್ರನರ್ತನ ಮಾಡುವಾಗ ಕಣ್ಣೀರು ಭೂಮಿಯ ಮೇಲೆ ಹಲವು ಕಡೆ ಬಿದ್ದು ರುದ್ರಾಕ್ಷಿಯಾಯಿತೆಂದು ಸಹ ಹೇಳುತ್ತಾರೆ.
ಈಗ ರುದ್ರಾಕ್ಷಿ ಧಾರಣೆಯಿಂದ ಒಳಿತಾಗುವುದರಿಂದ ಎಲ್ಲರೂ ಅದನ್ನು ಧರಿಸುಲು ಶುರುವಿಟ್ಟುಕೊಂಡಿದ್ದಾರೆ. ರುದ್ರಾಕ್ಷಿಯನ್ನು ಧರಿಸಲು ಕೆಲವು ನಿಯಮಗಳಿವೆ. ಹೇಗೆ ಬೇಕಾದರೆ ಹಾಗೆ ಧರಿಸುವಂತಿಲ್ಲ. ಹಾಗೆ ಧರಿಸಿದಲ್ಲಿ ಅದರಿಂದ ಯಾವುದೇ ಲಾಭವಾಗುವ ಸಾಧ್ಯತೆಗಳಿಲ್ಲ.
ಶಾಸ್ತ್ರ ಮತ್ತು ಪುರಾಣದ ಅನುಸಾರ ರುದ್ರಾಕ್ಷಿಯನ್ನು ಧರಿಸುವುದೆಂದರೆ ಶಿವನ ದಿವ್ಯ ಸ್ವರೂಪವನ್ನೇ ಧರಿಸಿದಂತೆ. ಇದನ್ನು ಧರಿಸುವುದರಿಂದ ಆರೋಗ್ಯ ವೃದ್ಧಿಸುವುದು, ನೆಮ್ಮದಿ ಲಭಿಸುವುದು ಎಂಬ ವಿಚಾರವನ್ನು ವಿಜ್ಞಾನವು ಒಪ್ಪಿಕೊಂಡಿದೆ. ಅದನ್ನು ಧರಿಸುವುದರಿಂದ ಸರಾಕಾತ್ಮಕ ಶಕ್ತಿ ಹೆಚ್ಚುತ್ತದೆ.
ಇದನ್ನು ಓದಿ: ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!
ನಿಯಮ ಪಾಲನೆ ಮಾಡಲೇಬೇಕು
ಮನಸ್ಸಿನ ಆರೋಗ್ಯ ಚೆನ್ನಾಗಿರಲು ರುದ್ರಾಕ್ಷಿ ಧಾರಣೆ ಸಹಾಯಕ. ಆದರೆ ಹೇಗೆಂದರೆ ಹಾಗೆ ಮನಸ್ಸಿಗೆ ಬಂದಾಗ ಧರಿಸುವುದನ್ನು ಮಾಡಿದರೆ ಪ್ರಯೋಜನವಿಲ್ಲ. ರುದ್ರಾಕ್ಷಿಯನ್ನು ಧರಿಸಿದ ಮೇಲೂ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಅನುಕೂಲಕ್ಕಾಗಿ ರುದ್ರಾಕ್ಷಿ ಧರಿಸಿದ್ದರೆ ಅಥವಾ ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ, ಆ ನಿಯಮಗಳನ್ನು ಪಾಲಿಸಿ ರುದ್ರಾಕ್ಷಿ ಧಾರಣೆಯಿಂದ ಸಂಪೂರ್ಣ ಲಾಭವನ್ನು ಪಡೆಯಬಹುದು.
ರುದ್ರಾಕ್ಷಿ ಧರಿಸಿ ಈ ಜಾಗಗಳಿಗೆ ಹೋಗಬಾರದು
ರುದ್ರಾಕ್ಷಿಯನ್ನು ಧರಿಸಿ ಸ್ಮಶಾನಕ್ಕೆ ಹೋಗುವುದು ಒಳ್ಳೆಯದಲ್ಲ. ಹಾಗೆಯೇ ಯಾರಾದರೂ ತೀರಿಕೊಂಡಿದ್ದರೆ ನೋಡಲು ಹೋಗುವಾಗಲೂ ರುದ್ರಾಕ್ಷಿ ಧರಿಸುವಂತಿಲ್ಲ.
ರುದ್ರಾಕ್ಷಿ ಧರಿಸುವುದರಿಂದ ಏನು ಲಾಭವೇನು?
ಮನೆಗೆ ಹೊಸ ಅತಿಥಿಯ ಆಗಮನವಾದಾಗ
ಮನೆಯಲ್ಲಿ ಶಿಶುವಿನ ಜನನವಾದಾಗ ರುದ್ರಾಕ್ಷಿ ಧರಿಸುವಂತಿಲ್ಲ. ಹನ್ನೊಂದು ದಿನಗಳವರೆಗೆ ಅಶೌಚವಿರುವ ಕಾರಣ ಆ ಸಮಯದಲ್ಲಿ ರುದ್ರಾಕ್ಷಿ ಧಾರಣೆ ನಿಷಿದ್ಧವಾಗಿದೆ. ಮಗುವಿನ ಜಾತಕರ್ಮ ಅಥವಾ ನಾಮಕರಣವಾಗುವ ತನಕ ಧರಿಸದಿದ್ದರೆ ಒಳ್ಳೆಯದು. ಶಿವ ಲಯಕರ್ತ, ಜೀವನ ಮತ್ತು ಮರಣ ಎರಡು ವಿಷಯಗಳನ್ನು ಶಿವನ ಪಾತ್ರವಿರುತ್ತದೆ. ಹಾಗಾಗಿ ಶಿವನ ಅಂಶಿಸ್ವರೂಪವಾದ ರುದ್ರಾಕ್ಷಿಯನ್ನು ಜನನ ಮತ್ತು ಮತ್ಯು ಸ್ಥಳಗಳಲ್ಲಿ ಧರಿಸುವುದು ಶುಭವಲ್ಲ. ಇದರಿಂದ ರುದ್ರಾಕ್ಷಿಯು ನಿಸ್ಥೇಜವಾಗುತ್ತದೆ.
ಇದನ್ನು ಓದಿ: ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!
ಮಲಗುವ ಸಮಯದಲ್ಲಿ ರುದ್ರಾಕ್ಷಿಯನ್ನು ತೆಗೆದಿಡಬೇಕು
ಮಲಗಿರುವಾಗ ಶರೀರ ನಿಸ್ಥೇಜ ಮತ್ತು ಅಶುದ್ಧವಾಗಿರುತ್ತದೆ. ಹಾಗಾಗಿ ಆ ಸಮಯದಲ್ಲಿ ರುದ್ರಾಕ್ಷಿಯನ್ನು ತೆಗೆದಿಡಬೇಕು. ಮಲಗಿದಾಗ ರುದ್ರಾಕ್ಷಿ ಒಡೆದು ಹೋಗುವ ಸಾಧ್ಯತೆಯೂ ಇರುತ್ತದೆ. ದಿಂಬಿನ ಕೆಳಗೆ ರುದ್ರಾಕ್ಷಿಯನ್ನು ಇಟ್ಟಕೊಂಡು ಮಲಗುವುದರಿಂದ ಆಧ್ಯಾತ್ಮಿಕ ಶಾಂತಿ ದೊರೆಯುತ್ತದೆ ಮತ್ತು ಕೆಟ್ಟ ಕನಸುಗಳಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ.
ಸಂಭೋಗದ ಸಮಯದಲ್ಲಿ ರುದ್ರಾಕ್ಷಿ ಧರಿಸಿರಬಾರದು
ಸ್ತ್ರೀ ಮತ್ತು ಪುರುಷ ಸೇರುವ ಸಮಯದಲ್ಲೂ ರುದ್ರಾಕ್ಷಿಯನ್ನು ತೆಗೆದಿಡಬೇಕು. ಪವಿತ್ರವಾದ ರುದ್ರಾಕ್ಷಿಯನ್ನು ಈ ಸಮಯದಲ್ಲಿ ಧರಿಸಿದ್ದರೆ ಅದರ ಶಕ್ತಿ ಕುಂಠಿತವಾಗುತ್ತದೆ. ಸ್ತ್ರೀಯರು ಋತುಸ್ರಾವದ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸಿರಬಾರದು. ಪ್ರತಿ ಮಾಸಿಕ ಧರ್ಮದ ಸಮಯದಲ್ಲಿ ರುದ್ರಾಕ್ಷಿಯನ್ನು ತೆಗೆದಿರಿಸುವುದು ಉತ್ತಮ.
ತಾಮಸಿಕ ಭೋಜನ ಮಾಡುವಾಗ ರುದ್ರಾಕ್ಷಿ ಬೇಡ
ರುದ್ರಾಕ್ಷಿಯನ್ನು ಧರಿಸುವವರು ಮಾಂಸಾಹಾರವನ್ನು, ಮದ್ಯಪಾನ ಮಾಡುವುದು ನಿಷಿದ್ಧ. ಆದರೂ ರುದ್ರಾಕ್ಷಿಯನ್ನು ಧರಿಸುವವರು ತಾಮಸ ಭೋಜನ ಮಾಡುವ ಸಮಯದಲ್ಲಿ ತೆಗೆದಿಡಬೇಕು. ಮದ್ಯಪಾನ ಮಾಡುವಾಗಲೂ ಇದನ್ನು ಧರಿಸಿರುವುದು ಅಶುಭ ಫಲವನ್ನು ನೀಡುತ್ತದೆ.
ಇದನ್ನು ಓದಿ: ವಿವಾಹದ ಬಳಿಕ ಕುಜ ದೋಷವಿದ್ದದ್ದು ತಿಳಿದರೆ ಈ ರೀತಿ ಮಾಡಿ!
ಯಾವಾಗ ಧರಿಸಿದ್ದರೆ ಶುಭಫಲ ಸಿಗುತ್ತೆ?
ಗ್ರಹಣಕಾಲದಲ್ಲಿ, ಸಂಕ್ರಾಂತಿ ಸಂದರ್ಭದಲ್ಲಿ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಂದರ್ಭದಲ್ಲಿ ಧರಿಸುವುದು ಶುಭ. ಅಷ್ಟೇ ಅಲ್ಲದೇ ಶಿವರಾತ್ರಿ, ಚತುರ್ದಶಿ, ಶ್ರಾವಣ ಸೋಮವಾರದಂದು ರುದ್ರಾಕ್ಷಿಯನ್ನು ಧರಿಸಿದರೆ ಹೆಚ್ಚು ಶುಭದಾಯಕ.