Asianet Suvarna News Asianet Suvarna News

ಗಣೇಶನನ್ನು ಪೂಜಿಸುವಾಗ ಈ ತಪ್ಪನ್ನೆಲ್ಲಾ ಮಾಡಲೇಬೇಡಿ, ಅಷ್ಟಕ್ಕೂ ಅವನಿಗೇಕೆ ತುಳಸಿ ವರ್ಜ್ಯ?

ಗಣೇಶನ ಪೂಜೆಗೆ ಎಂದಿಗೂ ತುಳಸಿಯನ್ನು ಬಳಕೆ ಮಾಡಬಾರದು. ಗಣೇಶನ ಪೂಜೆಗೆ ದೂರ್ವೆ ಶ್ರೇಷ್ಠ. ತುಳಸಿಯನ್ನು ಯಾಕೆ ಬಳಸಬಾರದು ಎನ್ನುವುದಕ್ಕೆ ಒಂದು ರೋಚಕವಾದ ಪೌರಾಣಿಕ ಕತೆಯೇ ಇದೆ. ಇದು, ಬ್ರಹ್ಮಚಾರಿ ಗಣೇಶ ಇಬ್ಬರು ಪತ್ನಿಯರ ಕಾಂತನಾಗುವ ಕತೆಯೂ ಹೌದು.  

Do not use tulsi for lord Ganesha worship in this festival sum
Author
First Published Sep 14, 2023, 5:28 PM IST

ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಬೇಕು ಎನ್ನುವುದು ಎಲ್ಲರ ಆಶಯ. ಈ ಸಂಭ್ರಮಾಚರಣೆಯಲ್ಲಿ ಕೆಲವೊಮ್ಮೆ ಏನಾದರೊಂದು ಲೋಪಗಳೂ ಉಂಟಾಗಿಬಿಡಬಹುದು. ಗಣೇಶ ಕೃಪೆಗೆ ಪಾತ್ರರಾಗಬೇಕು ಎನ್ನುವ ಮನಸ್ಸುಳ್ಳವರು ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಈ ಸಮಯದಲ್ಲಿ ಅಪ್ಪಿತಪ್ಪಿಯೂ ಕೆಲವು ಕಾರ್ಯಗಳನ್ನು ಮಾಡಬಾರದು ಎನ್ನುವ ನಿಯಮಗಳಿವೆ. ಇವು ನಂಬಿಕೆಯೂ ಆಗಿದ್ದಿರಬಹುದು. ಆದರೆ, ಇವುಗಳನ್ನು ನಿಯಮಬದ್ಧವಾಗಿ ಅನುಸರಿಸುವುದರಿಂದ ಯಾವುದೇ ಹಾನಿಯಿಲ್ಲ. ಉದಾಹರಣೆಗೆ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಎನ್ನುವ ನಂಬಿಕೆಯಿದೆ. ಇದಕ್ಕೆ ಪೌರಾಣಿಕ ಕಥೆಯೂ ಇದೆ. ಅದನ್ನು ಸಾಮಾನ್ಯವಾಗಿ ನಾವೆಲ್ಲರೂ ಪಾಲಿಸುತ್ತೇವೆ. ಹಾಗೆಯೇ, ಗಣೇಶನನ್ನು ತುಳಸಿಯಿಂದ ಪೂಜಿಸಬಾರದು ಎನ್ನುವ ನಿಯಮವಿದೆ. ಅದನ್ನೂ ಸಹ ಪಾಲನೆ ಮಾಡುವುದರಿಂದ ಒಳಿತಾಗುತ್ತದೆ. ಗಣೇಶನ ಕೃಪೆಗೆ ಪಾತ್ರರಾಗಲು ಸಾಧ್ಯವಾಗುತ್ತದೆ. 

ಗಣೇಶನನ್ನು (Ganesha Lord) ಅರ್ಚನೆ ಮಾಡಲು ಅಕ್ಷತೆ, ಹಣ್ಣು (Fruits), ದೂರ್ವೆ ಮತ್ತು ಮೋದಕಗಳನ್ನು ಇರಿಸಲಾಗುತ್ತದೆ. ದೂರ್ವೆ, ಮೋದಕಗಳು ಗಣೇಶನಿಗೆ ಭಾರೀ ಇಷ್ಟದ (Like) ವಸ್ತುಗಳು ಎನ್ನಲಾಗುತ್ತದೆ. ಆದರೆ, ಸಾಮಾನ್ಯ ದಿನಗಳಲ್ಲೂ ಹಾಗೂ ಚತುರ್ಥಿ ಹಬ್ಬದಲ್ಲೂ ಸಹ ಗಣೇಶನಿಗೆ ತುಳಸಿಯನ್ನಿಟ್ಟು (Tulsi) ಅರ್ಚನೆ ಮಾಡಬಾರದು. ಇದರಿಂದ ಆತನಿಗೆ ಕೋಪ (Angry) ಬರುತ್ತದೆ ಎನ್ನಲಾಗುತ್ತದೆ. ಇದಕ್ಕೂ ಒಂದು ಪೌರಾಣಿಕ ಹಿನ್ನೆಲೆಯ ಕತೆಯಿದೆ. 

ಗಣೇಶನ ಮಹಿಮೆಗೆ ಹೆಸರಾದ ರಾಜ್ಯದ ಪ್ರಮುಖ ಗಣಪತಿ ದೇವಾಲಯಗಳು

ತುಳಸಿ ವರ್ಜ್ಯವೇಕೆ?
ಗಣೇಶ ಅವಿವಾಹಿತ, ಬ್ರಹ್ಮಚಾರಿ (Unmarried) ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ನಂಬಿಕೆ ಗಾಢವಾಗಿದೆ. ಆದರೆ, ಶಿವಪುರಾಣದ ಪ್ರಕಾರ, ಗಣೇಶನಿಗೆ ಪತ್ನಿಯರಿದ್ದಾರೆ. ಅವರೇ ರಿದ್ಧಿ (Riddhi) ಮತ್ತು ಸಿದ್ಧಿ (Siddhi). ಇವರನ್ನು ಸಿದ್ಧಿ ಮತ್ತು ಬುದ್ಧಿ ಎಂದೂ ಹೇಳಲಾಗುತ್ತದೆ. ಅದಕ್ಕೂ ಮುನ್ನ, ಗಣೇಶನಿಗೆ ಒಮ್ಮೆ ತುಳಸಿಯ ವಿವಾಹ ಪ್ರಸ್ತಾಪ (Marriage Proposal) ಬಂತಂತೆ. ಆದರೆ, ಆತ ತುಳಸಿಯನ್ನು ವಿವಾಹವಾಗುವ ಪ್ರಸ್ತಾವವನ್ನು ನಿರಾಕರಿಸಿದನಂತೆ. “ತಾನು ಬ್ರಹ್ಮಚಾರಿ’ ಎಂದು ಹೇಳಿದನಂತೆ. ಇದರಿಂದ ಅಪಮಾನಿತಳಾದ ತುಳಸಿ ಕೋಪಗೊಂಡು ಆತನಿಗೆ ಶಾಪ (Curse) ನೀಡಿದಂತೆ. ಗಣೇಶ ಎರಡು ಮದುವೆಯಾಗುವಂತೆ ಶಾಪ ನೀಡಿದಳಂತೆ. ಗಣೇಶ ಸಹ ಕೋಪಗೊಂಡು “ನೀನು ಗಿಡವಾಗು’ ಎಂದು ಶಾಪ ನೀಡಿದ ಫಲವಾಗಿ ಆಕೆ ಗಿಡವಾದಳಂತೆ.

ಹೊಸ ದಾಖಲೆ ಬರೆದ ಮುಂಬೈ ಗಣೇಶ ಹಬ್ಬ, ಲಾಲ್‌ಬೌಗುಚಾ ರಾಜಾನಿಗೆ 26. 5 ಕೋಟಿ ವಿಮೆ!

ಈ ಘಟನೆಯಾದ ಬಳಿಕ ಗಣೇಶ ಕೋಪದಿಂದ ಎಲ್ಲ ಕಾರ್ಯಗಳಿಗೂ ವಿಘ್ನವನ್ನು (Disturb) ಉಂಟುಮಾಡುತ್ತಿದ್ದನಂತೆ. ಇದಕ್ಕೆ ಪರಿಹಾರವಾಗಿ ಅವನಿಗೆ ಮದುವೆ ಮಾಡುವುದೇ ಉಚಿತ ಎಂದು ಬಗೆದು ಆತನನ್ನು ರಿದ್ಧಿ ಮತ್ತು ಸಿದ್ಧಿಯರ ಜತೆಗೆ ಮದುವೆ ಮಾಡಲಾಗುತ್ತದೆ. ಶಿವಪುರಾಣದ (Shiv Purana) ಪ್ರಕಾರ, ಇವರು ಪ್ರಜಾಪತಿ ವಿಶ್ವಕರ್ಮನ ಮಕ್ಕಳು. ಬ್ರಹ್ಮನ ಮಾನಸ ಪುತ್ರಿಯರು ಎಂದೂ ಹೇಳಲಾಗುತ್ತದೆ. ಬ್ರಹ್ಮ (Lord Brahma) ಉಪಾಯ ಹೂಡಿ ರಿದ್ಧಿ ಮತ್ತು ಸಿದ್ಧಿಯರಿಗೆ ಪಾಠ ಹೇಳಲು ಗಣೇಶನಲ್ಲಿ ಮನವಿ ಮಾಡಿದರು. ಒಟ್ಟಿನಲ್ಲಿ ಮುಂದೆ ಬ್ರಹ್ಮಚಾರಿ ಗಣೇಶ ಇಬ್ಬರು ಪತ್ನಿಯರ ಕಾಂತನಾದ. ಬಳಿಕ ಆತನಿಗೆ, ಇಬ್ಬರು ಮಕ್ಕಳು ಜನಿಸಿದರಂತೆ. ಅವರೇ ಶುಭ ಮತ್ತು ಲಾಭ. ಹೀಗಾಗಿಯೇ, ಗಣೇಶ ಇರುವಲ್ಲಿ ಶುಭ-ಲಾಭ (Shubh-Labh) ಎಂದು ಬರೆಯಲಾಗುತ್ತದೆ. ಹಾಗೆಯೇ, ಎಂದಿಗೂ ತುಳಸಿಯಿಂದ ಗಣೇಶನನ್ನು ಪೂಜೆ ಮಾಡುವುದಿಲ್ಲ. ನೀವೂ ಸಹ ಗಣೇಶನ ಪೂಜೆಗೆ ತುಳಸಿಯನ್ನು ಎಂದಿಗೂ ಬಳಸಬೇಡಿ. 

Follow Us:
Download App:
  • android
  • ios