ಹೊಸ ದಾಖಲೆ ಬರೆದ ಮುಂಬೈ ಗಣೇಶ ಹಬ್ಬ, ಲಾಲ್‌ಬೌಗುಚಾ ರಾಜಾನಿಗೆ 26. 5 ಕೋಟಿ ವಿಮೆ!
ಗಣೇಶ ಹಬ್ಬ ಆಚರಣೆಯಲ್ಲಿ ಮುಂಬೈನಲ್ಲಿ ಆಚರಣೆ ಬಹಳ ವಿಶೇಷ. ಹಲವು ಗಣೇಶೋತ್ಸವ ಸಮಿತಿಗಳು ಗಣೇಶನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತದೆ. ಇದೀಗ ಮುಂಬೈ ಪ್ರಖ್ಯಾತ ಲಾಲ್‌ಬೌಗುಚಾ ರಾಜಾ ಗಣೇಶ ಹಬ್ಬ ಮತ್ತೆ ಸಂಚಲನ ಸೃಷ್ಟಿಸಿದೆ. ಈ ಬಾರಿ ಲಾಲ್‌ಬೌಗುಚಾ ರಾಜನಿಗೆ ಬರೋಬ್ಬರಿ 26.5 ಕೋಟಿ ರೂಪಾಯಿ ಇನ್ಶುರೆನ್ಸ್ ಮಾಡಲಾಗಿದೆ
ದೇಶದಲ್ಲಿ ಗಣೇಶೋತ್ಸವ ಆಚರಣೆ ತಯಾರಿ ಆರಂಭಗೊಂಡಿದೆ. ಮಾರುಕಟ್ಟೆಯಿಂದ ಗಣೇಶನ ಮೂರ್ತಿಯನ್ನು ತಂದು ಕೂರಿಸಿ ಪೂಜೆಗಳು ಆರಂಭಗೊಳ್ಳುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಗಣೇಶ ಹಬ್ಬದ ಆಚರಣೆ ಆರಂಭಗೊಂಡಿದೆ.
ಮುಂಬೈನಲ್ಲಿ ಗಣೇಶ ಹಬ್ಬ ಆಚರಣೆ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಮುಂಬೈನಲ್ಲಿ ಪ್ರತಿ ವಲಯ, ಗಲ್ಲಿಯಲ್ಲಿ ಗಣೇಶ ಹಬ್ಬ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಹಲವು ಸಮಿತಿಗಳು ಆಯೋಜನೆ ಮಾಡುತ್ತದೆ.
ಈ ಪೈಕಿ ಲಾಲ್‌ಬೌಗುಚಿ ರಾಜಾ ಗಣೇಶ ಅತ್ಯಂತ ಪ್ರಸಿದ್ಧಿ. ಮುಂಬೈನ ಲೋವರ್ ಪರೇಲ್ ಭಾಗದಲ್ಲಿ ಈ ಗಣೇಶನ ಮೂರ್ತಿ ಅತೀ ದೊಡ್ಡ ಗಾತ್ರ ಮಾತ್ರವಲ್ಲ, ಲಕ್ಷಾಂತರ ಜನ ಸೇರಿಆಚರಣೆ ಮಾಡಲಾಗುತ್ತದೆ.
ಈ ಬಾರಿ ಲಾಲ್‌ಬೌಗುಚಿ ರಾಜಾ ಗಣೇಶನಿಗೆ ಬರೋಬ್ಬರಿ 26.5 ಕೋಟಿ ರೂಪಾಯಿ ವಿಮೆ ಮಾಡಲಾಗಿದೆ. ಅದ್ಧೂರಿಯಾಗಿ ನಡೆಯುವ ಗಣೇಶನ ಪೂಜೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಈ ದುಬಾರಿ ಮೊತ್ತದ ವಿಮೆ ಮಾಡಲಾಗಿದೆ. ಈ ವಿಮೆಯ ಪ್ರತಿ ಹಂತ ಹಾಗೂ ವಿಭಾಗಗಳ ವಿವರ ಇಲ್ಲಿದೆ.
ಲಾಲ್‌ಬೌಗುಚಿ ರಾಜಾ ಗಣೇಶ ಹಬ್ಬದ ವೇಳೆ ಅವಘಡ ಸಂಭವಿಸಿದರೆ ಆಗಮಿಸಿದ ಭಕ್ತರು, ಟ್ರಸ್ಟ್ ಸದಸ್ಯರು, ಕಾರ್ಯಕರ್ತರು, ಸ್ವಯಂ ಸೇವಕರು, ಸ್ಥಳೀಯರು, ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ಈ ಅವಘಡದಲ್ಲಿ ಸಿಲುಕಿದರೆ ಪರಿಹಾರಕ್ಕಾಗಿ 12 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಲಾಲ್‌ಬೌಗುಚಿ ರಾಜಾ ಗಣೇಶ ಹಬ್ಬದ ವೇಳೆ ಅವಘಡ ಸಂಭವಿಸಿ ಮೃತಪಟ್ಟರೆ, ಗಣೇಶೋತ್ಸವ ಸಮಿತಿ ನೀಡಿರುವ ಗುರುತಿನ ಚೀಟಿ ಹೊಂದಿರುವ ಭಕ್ತರು ಅಥವಾ ಯಾವುದೇ ಸದಸ್ಯರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ
ಪ್ರಸಾದದಲ್ಲಿನ ವಿಷಕಾರಿ ಅಂಶದಿಂದ ಅವಘಡ, ಥರ್ಡ್ ಪಾರ್ಟಿ ಲಯಬಿಲಿಟಿ ಸೇರಿದಂತೆ ಇತರ ಪರಿಹಾರಕ್ಕಾಗಿ 5 ಕೋಟಿ ರೂಪಾಯಿ ವಿಮೆ ಮೊತ್ತ ಸಿಗಲಿದೆ.
ಗಣೇಶನ ಮೂರ್ತಿ ಡ್ಯಾಮೇಜ್, ಮಂಟಪ, ಮುಖ್ಯದ್ವಾರ, ಪೂಜಾಸ್ಥಳಗಳಲ್ಲಿನ ಡ್ಯಾಮೇಜ್‌ಗೆ ವಿಮೆಯಲ್ಲಿ 2.5 ಕೋಟಿ ರೂಪಾಯಿ ಪರಿಹಾರ ಪಡೆದುಕೊಳ್ಳಲು ಸಾಧ್ಯವಿದೆ.
ಲಾಲ್‌ಬೌಗುಚಿ ರಾಜಾ ಗಣೇಶನಿಗೆ ತೊಡಿಸಿರುವ ಚಿನ್ನಾಭರಣಗಳ ಮೇಲೆ 7.04 ಕೋಟಿ ರೂಪಾಯಿ ವಿಮೆ ಮಾಡಲಾಗಿದೆ. ಲಾಲ್‌ಬೌಗುಚಿ ರಾಜಾ ಗಣೇಶನ26.5 ಕೋಟಿ ರೂಪಾಯಿ ಮೊತ್ತದ ವಿಮೆಗೆ ಸಮಿತಿ 5.2 ಲಕ್ಷ ರೂಪಾಯಿ ವಿಮೆ ಪಾವತಿ ಮಾಡಿದೆ.