Asianet Suvarna News Asianet Suvarna News

ಹರಳು, ರತ್ನಗಳನ್ನು ಧರಿಸಿದೋರು ಈ ತಪ್ಪನ್ನೆಲ್ಲಾ ಮಾಡಲೇಬಾರದು!

ಮುತ್ತು, ರತ್ನ, ವಜ್ರ, ವೈಢೂರ್ಯಗಳು ನಮ್ಮ ಮೇಲೆ ಗಾಢ ಪ್ರಭಾವ ಬೀರುತ್ತವೆ, ಅವುಗಳ ಪರಿಣಾಮಗಳನ್ನು ಅರಿತೇ ಧರಿಸಬೇಕು. ಅದರಲ್ಲೂ ಕೆಲವು ರತ್ನಗಳು ವಿಶೇಷ ಪ್ರಭಾವ ಹೊಂದಿರುತ್ತವೆ. ಅವುಗಳನ್ನು ಸುಮ್ಮನೆ ಧರಿಸಬಾರದು. ಜತೆಗೆ, ಧರಿಸಿದ ಬಳಿಕವೂ ಕೆಲವು ತಪ್ಪುಗಳನ್ನು ಮಾಡಬಾರದು. 
 

Do not do these mistakes when you wear gemstones sum
Author
First Published Sep 22, 2023, 5:00 PM IST

ವಜ್ರ, ಹವಳ, ಮುತ್ತು, ರತ್ನಗಳಂತಹ ಹರಳುಗಳನ್ನು ಧರಿಸುವುದು ಮನುಷ್ಯನಿಗೆ ಎಂದಿನಿಂದಲೂ ವಿಶೇಷ ಸಂಗತಿ. ಅವುಗಳ ಸೌಂದರ್ಯ ಒಂದು ಕಾರಣವಾದರೆ, ಅವುಗಳಿಗಿರುವ ವಿಶಿಷ್ಟ ಶಕ್ತಿ, ಆಧ್ಯಾತ್ಮಿಕತೆ ಮತ್ತೊಂದು ಪ್ರಮುಖ ಕಾರಣ. ಹೀಗಾಗಿ, ಯಾವುದೇ ರತ್ನಗಳನ್ನು ಸುಖಾಸುಮ್ಮನೆ ಚೆಂದಕ್ಕಾಗಿ ಧರಿಸಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರತ್ನಗಳಿಗೂ ಅವುಗಳದ್ದೇ ಆದ ವಿಶೇಷತೆಯಿದೆ. ಅವು ನಮ್ಮ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ನಾವು ಜನಿಸಿದ ರಾಶಿ, ನಕ್ಷತ್ರಗಳು, ಗ್ರಹಗತಿಗೆ ಅನುಗುಣವಾಗಿ ಅವುಗಳನ್ನು ಧರಿಸಬೇಕಾಗುತ್ತದೆ. ರತ್ನ, ಹರಳುಗಳನ್ನು ಧರಿಸುವ ಮೂಲಕ ಹಲವು ಎನರ್ಜಿಗಳನ್ನು ಸೆಳೆಯಲು ಸಾಧ್ಯ. ನಮ್ಮ ಭವಿಷ್ಯ, ಕ್ಷೇಮ, ಆರೋಗ್ಯದ ಮೇಲೆಯೂ ಅವು ಪರಿಣಾಮ ಬೀರುವುದರಿಂದ ಧರಿಸುವಾಗ ಎಚ್ಚರಿಕೆ ವಹಿಸಬೇಕು. ಹಣವಿದೆ ಎಂದು ಯಾವುದನ್ನಾದರೂ ಖರೀದಿ ಮಾಡುವುದರಿಂದಲೂ ಹಾನಿ ಸಂಭವಿಸುತ್ತದೆ. ಆದರೂ ಅನೇಕರು ರತ್ನಗಳನ್ನು ಧರಿಸುವಾಗ ತಿಳಿದೋ ತಿಳಿಯದೆಯೋ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಅವುಗಳನ್ನು ಧರಿಸಿದ ಫಲ ದೊರೆಯುವುದಿಲ್ಲ, ನಿರೀಕ್ಷಿತ ಪರಿಣಾಮಗಳೂ ಸಾಧ್ಯವಾಗುವುದಿಲ್ಲ. ನೀವೂ ಈ ತಪ್ಪುಗಳನ್ನು ಮಾಡಬೇಡಿ.

•    ಪದೇ ಪದೆ ತೆಗೆಯುವುದು (Removing)
ರಕ್ಷಾ ಕವಚವನ್ನು ಆಗಾಗ ತೆಗೆಯುವುದರಿಂದ ಏನು ಪರಿಣಾಮವಾಗುತ್ತದೆ ಊಹಿಸಿ. ಹಾಗೆಯೇ, ಕ್ಷೇಮ, ಪ್ರಗತಿಗೆಂದು ಧರಿಸುವ ಹರಳುಗಳನ್ನು (Gemstones) ಪದೇ ಪದೆ ತೆಗೆಯುವುದರಿಂದಲೂ ಹೆಚ್ಚಿನ ಪ್ರಭಾವ (Effect) ಉಂಟಾಗುವುದಿಲ್ಲ. ಕೆಲವರು ಸ್ನಾನ ಮಾಡುವಾಗ, ಮಲಗುವಾಗ, ಏನಾದರೂ ಬೇರೆ ಕೆಲಸಗಳಲ್ಲಿ ತೊಡಗುವಾಗ ಹರಳಿನ ಉಂಗುರವನ್ನೋ, ಧರಿಸಿದ ಸರವನ್ನೋ ತೆಗೆಯುವುದು ವಾಡಿಕೆ. ಇದರಿಂದ ಎನರ್ಜಿ (Energy) ಸರಾಗವಾಗಿ ಹರಿಯಲು ಧಕ್ಕೆಯಾಗುತ್ತದೆ. ಸಂಪೂರ್ಣ ಪ್ರಭಾವ ಬೇಕೆಂದರೆ, ಹರಳುಗಳನ್ನು ತೆಗೆಯುತ್ತಿರಬೇಡಿ. ಅವುಗಳ ಶಕ್ತಿ (Power) ನಿಮ್ಮಲ್ಲೇ ಉಳಿಯಲು ಇದರಿಂದ ಸಾಧ್ಯವಾಗುತ್ತದೆ.

ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ ಉಂಟಾಗುವ ಸಮಸ್ಯೆಗಳಿಗೆ ಈ ಪರಿಹಾರ ಮಾಡಿ..

•    ಚಂದ್ರನ (Moon) ಬದಲಾವಣೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರನಲ್ಲಾಗುವ ಬದಲಾವಣೆ (Change) ಹರಳುಗಳ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಚಂದ್ರ ಬೆಳೆಯುತ್ತಿರುವ ಸಮಯದಲ್ಲಿ ಅಂದರೆ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ರತ್ನಗಳು ಎನರ್ಜಿಯನ್ನು ಹೀರಿಕೊಳ್ಳುತ್ತವೆ. ನಂತರ ಹುಣ್ಣಿಮೆಯಿಂದ ಅಮಾವಾಸ್ಯೆಯ ಅವಧಿಯಲ್ಲಿ ಅದನ್ನು ಬಿಡುಗಡೆ ಮಾಡುತ್ತವೆ. ಇದನ್ನು ಅರಿಯದೇ ಯಾವಾಗೆಂದರೆ ಆಗ ಕಳಚಿಡುವುದು ಕ್ಷೇಮವಲ್ಲ.

•    ಶುಚಿಗೊಳಿಸುವುದು (Cleansing)
ರತ್ನಗಳನ್ನು ಶುಚಿಯಾಗಿಟ್ಟುಕೊಳ್ಳುವುದು ಮುಖ್ಯ. ಅವು, ಧನಾತ್ಮಕ (Positive) ಮತ್ತು ಋಣಾತ್ಮಕ (Negative) ಎರಡೂ ರೀತಿಯ ಎನರ್ಜಿಯನ್ನು ಹೀರಿಕೊಳ್ಳಬಲ್ಲವು. ಧರಿಸಿದ ಕೆಲ ಸಮಯದ ನಂತರ ಅವು ಮಸುಕಾಗಿ (Dull) ಹೊಳಪನ್ನು ಕಳೆದುಕೊಳ್ಳಬಲ್ಲವು. ಆಗ ಅವುಗಳಲ್ಲಿ ಸ್ಪಂದಿಸುವ (Vibration) ಗುಣ ಕಡಿಮೆಯಾಗಿ, ಪ್ರಭಾವ ಕುಂದುತ್ತದೆ. ಅವುಗಳ ಸಾಮರ್ಥ್ಯ ನಿರಂತರವಾಗಿರಲು ಉಪ್ಪುನೀರು, ಚಂದ್ರನ ಬೆಳಕು ಹಾಗೂ ಪರಿಮಳಯುಕ್ತ ಧೂಮದಿಂದ ಶುದ್ಧಗೊಳಿಸಬೇಕು. 

•    ಹರಳುಗಳ ಮಿಕ್ಸ್‌ (Mix)
ಅಚ್ಚುಕಟ್ಟುತನವಿಲ್ಲದೆ ಹೇಗೆಂದರೆ ಹಾಗೆ ವಿವಿಧ ರತ್ನಗಳನ್ನು ಮಿಕ್ಸ್‌ ಮಾಡಿ ಏಕಕಾಲದಲ್ಲಿ ಧರಿಸುವುದು ಅಪಾಯಕ್ಕೆ ನಾಂದಿಯಾಗಬಹುದು. ಅವುಗಳಲ್ಲಿ ಹೊಂದಾಣಿಕೆ (Alignment) ಇರಬೇಕಾಗುತ್ತದೆ. ಹರಳುಗಳಿಂದ ಪ್ರಯೋಜನ ದೊರೆಯಬೇಕು ಎಂದಾದಲ್ಲಿ ಜ್ಯೋತಿಷ್ಯ ವಿದ್ವಾಂಸರನ್ನು ಕಂಡು ಅವರು ಸೂಚಿಸಿದ ಹರಳನ್ನೇ ಧರಿಸುವುದು ಸೂಕ್ತ. ನಿಮ್ಮ ನಿರ್ದಿಷ್ಟ ಅಗತ್ಯಗಳ (Need) ಪೂರೈಕೆಗೆ ನಿರ್ದಿಷ್ಟ ಹರಳುಗಳನ್ನೇ ಧರಿಸಬೇಕಾಗುತ್ತದೆ. ಹಲವು ರತ್ನಗಳನ್ನು ಏಕಕಾಲದಲ್ಲಿ ಧರಿಸುವುದು ಸರಿಯಲ್ಲ.

ಲಬಕ್ಕನೆ ಲವ್ವಲ್ಲಿ ಬೀಳಿಸೋ ರಾಶಿಗಳಿವು! ಆದರೆ ಇವರನ್ನು ಪೂರ್ತಿ ನಂಬೋದು ಕಷ್ಡ..

•    ಪ್ರೊಗ್ರಾಮ್‌ (Program) ಮಾಡಬೇಕು
ಅಚ್ಚರಿ ಬೇಡ. ನೀವು ಯಾವ ಉದ್ದೇಶಕ್ಕೆ ಹರಳನ್ನು ಧರಿಸುತ್ತೀರೋ ಅದನ್ನು ಪ್ರೊಗ್ರಾಮ್‌ ಮಾಡುವುದು ಅತ್ಯವಶ್ಯ. ಇಲ್ಲವಾದಲ್ಲಿ ಅವು ಪರಿಣಾಮಕಾರಿಯಾಗದೇ ಹೋಗಬಹುದು. ಧರಿಸುವ ಮುನ್ನ, ನಿಮ್ಮ ಉದ್ದೇಶವನ್ನು ಕ್ಷಣಕಾಲ ಮನದಲ್ಲಿ ಸ್ಮರಿಸಿ, ನಿರ್ದಿಷ್ಟ ಕಾರ್ಯವನ್ನು ನೆನೆದು, ನಿಮ್ಮ ಆಸೆಯನ್ನು (Desire) ಈಡೇರಿಸುವಂತೆ ಪ್ರೊಗ್ರಾಮ್‌ ಮಾಡಬೇಕು. ಇದರಿಂದ ರತ್ನಗಳ ಸಾಮರ್ಥ್ಯ ಹೆಚ್ಚುತ್ತದೆ. ಜತೆಗೆ, ನಿಯಮಿತವಾಗಿ ಕ್ಲೀನ್‌ ಮಾಡಿ ಪುನಃ ಧರಿಸುವ ಸಮಯದಲ್ಲೂ ನಿಮ್ಮ ಉದ್ದೇಶಗಳನ್ನು ಫೋಕಸ್‌ ಮಾಡಬೇಕು.

•    ಅಸಮರ್ಪಕ ಸ್ಥಳ (Place)
ಕೈ ಬೆರಳ ಉಂಗುರದಲ್ಲಿ ಧರಿಸಬೇಕಾದ ಹರಳನ್ನು ಕೊರಳಿನ ಹಾರದ ಪೆಂಡೆಂಟ್‌ ಮಾಡಿ ಧರಿಸಿದರೆ ಪರಿಣಾಮ ವಿಪರೀತವಾಗಬಹುದು. ಎದೆಯ ಮಧ್ಯಭಾಗದಲ್ಲಿರುವ ಹೃದಯ ಚಕ್ರದ (Heart Chakra) ಮೇಲೆ ಪರಿಣಾಮವುಂಟಾಗಿ ಭಾವನಾತ್ಮಕ ಏರಿಳಿತ ಉಂಟಾಗಬಹುದು.

•    ಶೇರ್‌ (Share) ಮಾಡಿಕೊಳ್ಳುವುದು
ರತ್ನಗಳ ಹಾರವನ್ನೋ, ಉಂಗುರವನ್ನೋ ಯಾರ ಜತೆಯಾದರೂ ಶೇರ್‌ ಮಾಡಿಕೊಳ್ಳಬಾರದು. ಅವುಗಳನ್ನು ಧರಿಸುವುದು ಚೆಂದಕ್ಕಲ್ಲ. ಇದರಿಂದ ಎನರ್ಜಿ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುತ್ತದೆ. ಒಂದೊಮ್ಮೆ ಶೇರ್‌ ಮಾಡಿದರೂ ವಾಪಸ್‌ ಪಡೆದ ಬಳಿಕ ಅವುಗಳನ್ನು ಶುದ್ಧೀಕರಿಸಿ, ಪ್ರೊಗ್ರಾಮ್‌ ಅನ್ನು ರಿಚಾರ್ಜ್‌ (Recharge) ಮಾಡಿಯೇ ಧರಿಸಬೇಕು. 
 

Follow Us:
Download App:
  • android
  • ios