Asianet Suvarna News Asianet Suvarna News

Dasara 2022: ಈ ದಿನ ಮರೆತೂ ಈ ಕೆಲಸ ಮಾಡ್ಬೇಡಿ, ಮಾಡಿದ್ರೆ ಆಪತ್ತು ತಪ್ಪಿದ್ದಲ್ಲ!

ವಿಜಯದಶಮಿಯ ದಿನ ಕೆಲ ಕೆಲಸಗಳನ್ನು ತಪ್ಪಿಯೂ ಮಾಡಬಾರದು. ಹಾಗೆ ಮಾಡಿದರೆ ಅಮಂಗಳಕರ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ.

Do not do these 5 things on Dussehra skr
Author
First Published Oct 3, 2022, 3:08 PM IST

ಈ ವರ್ಷ ಅಕ್ಟೋಬರ್ 5ರಂದು ದೇಶದಾದ್ಯಂತ ದಸರಾ ಅಂದರೆ ವಿಜಯದಶಮಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಗೆ ನಿಖರವಾಗಿ 20 ದಿನಗಳ ಮೊದಲು ಅಶ್ವಿನ್ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ದಸರಾವನ್ನು ಆಚರಿಸಲಾಗುತ್ತದೆ. ದಸರಾ ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆದ್ದೇ ಗೆಲ್ಲುತ್ತದೆ ಎಂಬ ಸಂದೇಶವನ್ನು ನೀಡುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಈ ದಿನವು ಉತ್ತಮವಾಗಿದೆ. 

ದುರ್ಗ ಮಾತೆ ಮಹಿಷಾಸುರನನ್ನು ಕೊಂದ ಈ ದಿನ. ತ್ರೇತಾಯುಗದಲ್ಲಿ ಶ್ರೀರಾಮನು(Lord Ram) ರಾವಣನನ್ನು ಕೊಂದ ದಿನವೂ ಹೌದು. ಕೆಡುಕಿನ ಮೇಲೆ ಒಳಿತಿನ ವಿಜಯೋತ್ಸವವನ್ನು ಈ ದಿನ ಆಚರಿಸಲಾಗುತ್ತದೆ. ಇಂಥ ಶುಭ ದಿನದಂದು ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ.

1. ದುಷ್ಟರಿಂದ ದೂರವಿರಿ
ದಸರಾ ಅತ್ಯಂತ ಮಂಗಳಕರ ದಿನ. ಈ ದಿನ ತಪ್ಪಿಯೂ ಯಾರಿಗೂ ಹಾನಿ ಮಾಡಬೇಡಿ. ಅಷ್ಟೇ ಏಕೆ, ಮತ್ತೊಬ್ಬರಿಗೆ ಹಾನಿ ಮಾಡುವ ಬಗೆಗೆ ಯೋಚಿಸುವುದೇ ತಪ್ಪಾಗಿದೆ.  ಯಾವುದೇ ತಪ್ಪು ಕೆಲಸ ಮಾಡಬೇಡಿ. ಉದಾಹರಣೆಗೆ ಮದ್ಯಪಾನ ಅಥವಾ ಜೂಜಾಟದಂಥವು ಇಂದು ಬೇಡವೇ ಬೇಡ.

ವಿಜಯ ದಶಮಿಯಂದು ಈ ಕಾರ್ಯ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

2. ಯಾರನ್ನೂ ಅವಮಾನಿಸಬೇಡಿ 
ದಸರಾ ದಿನದಂದು, ಯಾವುದೇ ಮಹಿಳೆ ಅಥವಾ ಹಿರಿಯರನ್ನು ಅವಮಾನಿಸಿದಿರಾದರೆ ತಾಯಿ ಲಕ್ಷ್ಮಿ(Ma Lakshmi) ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಈ ದಿನ ಯಾರನ್ನೂ ಅವಮಾನಿಸಬೇಡಿ, ಟೀಕಿಸಬೇಡಿ ಅಥವಾ ಸುಳ್ಳು ಹೇಳಬೇಡಿ. ಇದಲ್ಲದೆ, ಈ ದಿನ ನೀವು ಯಾರನ್ನೂ ನಿಂದಿಸಬಾರದು. ಈ ದಿನ, ನೀವು ಯಾವುದೇ ಬಡವರನ್ನು ತಪ್ಪಿಯೂ ಅವಮಾನಿಸಬಾರದು. ಹಾಗೆ ಮಾಡಿದರೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ರಾಮನ ಕೋಪಕ್ಕೂ ಭಾಜನವಾಗಬೇಕಾಗುತ್ತದೆ.

3. ಮರಗಳನ್ನು ಕಡಿಯಬೇಡಿ
ದಸರಾದಂದು ಮರಗಳನ್ನು ಕಡಿಯುವುದು(Cutting trees) ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ದಿನ ಮರ ಕಡಿಯುವುದರಿಂದ ವ್ಯಕ್ತಿಯ ಆರೋಗ್ಯ ಹಾಳಾಗುತ್ತದೆ. ವಿಜಯದಶಮಿಯ ದಿನದಂದು ಶಮಿ ವೃಕ್ಷವನ್ನು ಪೂಜಿಸಲಾಗುತ್ತದೆ. ಆದ್ದರಿಂದ ಈ ದಿನ ಯಾವುದೇ ಮರ ಅಥವಾ ಗಿಡವನ್ನು ಕಡಿಯಬಾರದು. ಈ ದಿನದಂದು ಮರವನ್ನು ಕತ್ತರಿಸುವುದರಿಂದ ಮನುಷ್ಯನಿಗೆ ಆರೋಗ್ಯ ಕೆಡುತ್ತದೆ. ಬದಲಿಗೆ ಈ ದಿನ ನೀವು ಕೆಲ ಗಿಡಗಳನ್ನು ನೆಡಬಹುದು.

4. ಜೀವಿಗಳನ್ನು ಕೊಲ್ಲಬೇಡಿ
ವಿಜಯದಶಮಿಯಂದು ಮಾಂಸಕ್ಕಾಗಿ ಯಾವುದೇ ಪ್ರಾಣಿಯನ್ನು ಕೊಲ್ಲುವುದು ನಿಮ್ಮ ಅದೃಷ್ಟವನ್ನು ಕೆಟ್ಟದಾಗಿ ಪರಿವರ್ತಿಸುತ್ತದೆ. ದಸರಾ ದಿನದಂದು ನಿಮ್ಮ ಹವ್ಯಾಸಕ್ಕಾಗಿ ಯಾವುದೇ ಪ್ರಾಣಿಯನ್ನು ಕೊಲ್ಲಬೇಡಿ. ಯಾವುದೇ ರೀತಿಯ ಮಾಂಸಾಹಾರ(Non Veg)ವನ್ನು ಸೇವಿಸಬೇಡಿ. 

5. ಸುಳ್ಳು ಮತ್ತು ಅಸತ್ಯವನ್ನು ಹೇಳಬೇಡಿ
ದಸರಾ ಎಂದರೆ ಸುಳ್ಳಿನ ಮೇಲೆ ಸತ್ಯದ ವಿಜಯದ ದಿನ. ಆದ್ದರಿಂದ ಸುಳ್ಳು ಹೇಳುವುದನ್ನು(telling lie) ಅಥವಾ ಅಸತ್ಯವನ್ನು ಬೆಂಬಲಿಸುವುದನ್ನು ತಪ್ಪಿಸಿ. ಹಾಗೊಂದು ವೇಳೆ ಇಂದು ನೀವು ಸುಳ್ಳು ಹೇಳಿದರೆ ಸಿಕ್ಕಿ ಬೀಳುವಿರಿ ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ.

Navratri 2022: ತಾಯಿ ದುರ್ಗೆಯ 10 ಆಯುಧಗಳ ಕೆಲಸವೇನು ಗೊತ್ತಾ?

6. ಆಯುಧಗಳನ್ನು ಅಲ್ಲಿ ಇಲ್ಲಿ ಎಸೆಯಬೇಡಿ 
ದಸರಾ ದಿನದಂದು ಆಯುಧ ಪೂಜೆಯ ನಿಯಮವೂ ಇದೆ. ಆಯುಧಗಳು ಸಹ ನಿಮ್ಮ ಕರ್ಮದ ಪ್ರತಿನಿಧಿಯಾಗಿದೆ, ಆದ್ದರಿಂದ ಈ ದಿನ ಆಯುಧವೆಂದು ಪರಿಗಣಿಸುವ ಯಾವುದನ್ನೂ ಎಲ್ಲೆಂದರಲ್ಲಿ ಎಸೆಯಬೇಡಿ.

7. ರಾವಣ ದಹನದ ಭಸ್ಮವನ್ನು ಮನೆಗೆ ತರಬೇಡಿ
ದಸರಾ ದಿನದಂದು ರಾವಣ ದಹನದ ಸಮಯದಲ್ಲಿ ಉತ್ಸಾಹವು ಉಂಟಾಗುತ್ತದೆ, ಆದರೆ ರಾವಣ ದಹನದ ನಂತರ ನೀವು ಅವನ ಚಿತಾಭಸ್ಮವನ್ನು ಮನೆಗೆ ತರಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಅದರಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚುತ್ತವೆ.

Follow Us:
Download App:
  • android
  • ios