ದೀಪಾವಳಿ ಕೃಷಿ ಬದುಕಿನ ಸಂಭ್ರಮದ ಬೆಳಕಿನ ಹಬ್ಬ: ಡಾ. ಕೈರೋಡಿ
- ದೀಪಾವಳಿ ಕೃಷಿ ಬದುಕಿನ ಸಂಭ್ರಮದ ಬೆಳಕಿನ ಹಬ್ಬ: ಡಾ. ಕೈರೋಡಿ
- ಮೂಡುಬಿದಿರೆ ಸಮಾಜ ಮಂದಿರ ಸಭಾ, ಯುವವಾಹಿನಿ ಘಟಕದಿಂದ ಬೆದ್ರ ಗೂಡುದೀಪ ಸ್ಪರ್ಧೆ
ಮೂಡುಬಿದಿರೆ (ಅ.24) : ದೀಪಾವಳಿ ನಮ್ಮ ನೆಲದ, ಕೃಷಿ ಬದುಕಿನ ಸಂಭ್ರಮದ ಬೆಳಕಿನ ಹಬ್ಬ. ಕೃಷಿ ಬದುಕಿನಿಂದ ವಿಮುಖವಾಗಿರುವ ನಮ್ಮಲ್ಲಿ ದೀಪಾವಳಿಯ ಜತೆಗಿರುವ ಭಾವತಾತ್ಮಕತೆಯೂ ಸಡಿಲಗೊಂಡಿದೆ. ಇಂದು ಸಾರ್ವಜನಿಕ ನೆಲೆಯಲ್ಲಿ ಬೆಳಕಿನ ಹಬ್ಬ ಆಚರಿಸಲ್ಪಡುವುದು ಉತ್ತಮ ಬೆಳವಣಿಗೆ. ಈ ಬೆಳಕು ನಮ್ಮ ಮನೆ, ಮನದ ಕತ್ತಲು, ದ್ವೇಷ, ಮತ್ಸರಾದಿಗಳನ್ನು ತೊಲಗಿಸುವಂತಾಗಲಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ ಕೈರೋಡಿ ಹೇಳಿದರು.
ದೀಪಾವಳಿಯಂದು ಇವುಗಳನ್ನು ನೋಡಿದ್ರೆ ಹಣೆಬರಹವೇ ಬದಲಾಗುತ್ತೆ!
ಅವರು ಸಮಾಜ ಮಂದಿರ ಸಭಾ ಮೂಡುಬಿದಿರೆ ಹಾಗೂ ಯುವವಾಹಿನಿ ಘಟಕದ ಜಂಟಿ ಆಶ್ರಯದಲ್ಲಿ ಶನಿವಾರ ಸಂಜೆ ಸಮಾಜ ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ಜರುಗಿದ ಬೆದ್ರ ಗೂಡು ದೀಪ ಸ್ಪರ್ಧೆ 2022 ಸಭಾ ಕಾರ್ಯಕ್ರಮದಲ್ಲಿ ದೀಪಾವಳಿ ಸಂದೇಶ ನೀಡಿದರು.
ಸಮಾಜ ಮಂದಿರ ಸಭಾದ ಉಪಾಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ ಸಮಾರಂಭವನ್ನು ಉದ್ಘಾಟಿಸಿದರು. ಯುವವಾಹಿನಿ ಅಧ್ಯಕ್ಷ ನವಾನಂದ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ರೋಟರಿ ಮಿಡ್ ಟೌನ್ ಅಧ್ಯಕ್ಷ ಪುಷ್ಪರಾಜ್ ಜೈನ್, ಉದ್ಯಮಿ ರಾಜೇಶ್ ಎಂ. ಕೋಟ್ಯಾನ್. ಸಮಾಜ ಮಂದಿರ ಸಭಾ ಕಾರ್ಯದರ್ಶಿ ಎಚ್. ಸುರೇಶ ಪ್ರಭು ಯುವವಾಹಿನಿ ಕಾರ್ಯದರ್ಶಿ ರಮೇಶ್ ಅಮೀನ್ ಉಪಸ್ಥಿತರಿದ್ದರು. ಶಂಕರ ಕೋಟ್ಯಾನ್, ಕು. ಸೌಮ್ಯಾ ಕೋಟ್ಯಾನ್‌ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಒಟ್ಟು 48 ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಸಾಂಪ್ರದಾಯಿಕ ಗೂಡುದೀಪ: ಪ್ರಥಮ: ರಕ್ಷಿತ್ ಕೋಟೆಬಾಗಿಲು, ದ್ವಿತೀಯ: ಸುರೇಂದ್ರ ಬಿಜೈ, ತೃತೀಯ- ದಕ್ಷತ್ ಕಟೀಲು. ಆಧುನಿಕ ಗೂಡುದೀಪ: ಪ್ರಥಮ: ವಿಠಲ್ ಭಟ್ ಮಂಗಳೂರು, ದ್ವಿತೀಯ- ಜಗದೀಶ್ ಅಮೀನ್ ಸುಂಕದಕಟ್ಟೆ, ತೃತೀಯ- ಕ್ಯಾಪ್ಸಿ ಫ್ರೆಂಡ್‌್ಸ ಕಾಶಿಪಟ್ನ. ಮಾದರಿ ಗೂಡುದೀಪ: ಪ್ರಥಮ- ವಿಠಲ ಭಂಡಾರಿ ನೀರುಮಾರ್ಗ, ದ್ವಿತೀಯ- ರತ್ನಾಕರ ಪದವಿನಂಗಡಿ, ತೃತೀಯ- ಪ್ರನೀದಿ ಬೆಟ್ಕೇರಿ. ತೀರ್ಪುಗಾರರರಾಗಿ ಶಿಕ್ಷಕರಾದ ಗೋಪಾಲಕೃಷ್ಣ ಜಿ.ಕೆ. ಜಯಪ್ರಕಾಶ್, ನಾಗೇಶ್, ಯೋಗೀಶ್ ಬಿಜೈ ಸಹಕರಿಸಿದರು.
ಸೃಜನಶೀಲತೆಗೆ ವೇದಿಕೆಯಾದ ಗೂಡು ದೀಪೋತ್ಸವ!
ತುಳು ನಾಡಿನ ದೈವ, ದೈವಸ್ಥಾನ, ಕ್ಯಾಪ್ಸಿ ಫ್ರೆಂಡ್‌್ಸ ರೂಪಿಸಿದ ಸೌಹಾರ್ದತೆಯ ಗೂಡುದೀಪ ಸ್ಪರ್ಧೆಯಲ್ಲಿ ವಿವಿಧ ಮಾದರಿಯ ಗೂಡುದೀಪಗಳು ಕಂಡುಬಂದವು. ಮಾದರಿ ವಿಭಾಗದಲ್ಲಿ ಅರಳಿದ ಮೂಡುಬಿದಿರೆಯ ಸಮಾಜ ಮಂದಿರ, ಬಿದಿರು ಕಡ್ಡಿಗಳಲ್ಲಿ ಅರಳಿದ ಶ್ರೀರಾಮ, ಪೇಪರ್ ಕಪ್‌ಗಳಲ್ಲಿ ಅರಳಿದ ಗೂಡು ದೀಪಗಳು, ತರಕಾರಿ ಬೀಜಗಳಿಂದ ಮೂಡಿದ ಗೂಡು ದೀಪ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದವು. ಆಧುನಿಕ ಗೂಡು ದೀಪ ವಿಭಾಗದಲ್ಲಿ ರತ್ನಗಂಧಿ ಹೂವಿನ ಬೀಜದ ಸಿಪ್ಪೆ, ನೇರಳೆ ಕಾರಂಜಿ ಹುಲ್ಲಿನ ಕಸದಿಂದ ಮಂಗಳೂರು ರಥ ಬೀದಿಯ ವಿಠಲ ಭಟ್ ಅವರು ರೂಪಿಸಿದ ಗೂಡು ದೀಪ ವಿಶೇಷವಾಗಿ ಗಮನ ಸೆಳೆಯಿತು.
ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?
ಕಳೆದ ಐದು ವರ್ಷಗಳಿಂದ ತನ್ನ ವೈವಿಧ್ಯತೆಯ ಗೂಡುದೀಪಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿರುವ ವಿಠಲ ಭಟ್ ಈ ಗೂಡುದೀಪದಲ್ಲಿ ಮಾವನ ಜೀವಮಾನದಲ್ಲಿ ಬರುವ ಹವನಾದಿ ದೇವತೆಗಳ ಮಂಡಲ, ಕಟೀಲು ದೇವಿ, ಗಣಪತಿ ಹೀಗೆ ದೇವರುಗಳನ್ನೂ ಮೂಡಿಸಿದ್ದಾರೆ. ಅಡಕೆ ಹಾಳೆಯಲ್ಲಿ ಈ ಹಿಂದೆ ಅವರು ರಚಿಸಿದ್ದ ಕಲಾತ್ಮಕ ಗೂಡುದೀಪ ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಗ್ರಹಾಲಯಕ್ಕೆ ತಲುಪಿರುವುದೂ ವಿಶೇಷ.