Asianet Suvarna News Asianet Suvarna News

ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಕಳೆಗಟ್ಟುತ್ತಿದೆ ದೀಪಾವಳಿ ಸಂಭ್ರಮ

ಬೆಳಕಿನ ಹಬ್ಬ ದೀಪಾವಳಿಗೆ ಬಾಳೆಹೊನ್ನೂರು ಹೋಬಳಿಯಾದ್ಯಂತ ಸಂಭ್ರಮ ಕಳೆಗಟ್ಟಿದ್ದು, ಹಬ್ಬ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳು ತಲೆಯೆತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಾರ ಆರಂಭಿಸಿವೆ.

Diwali celebrations are fading in Balehonur rav
Author
First Published Oct 23, 2022, 8:41 AM IST | Last Updated Oct 23, 2022, 8:41 AM IST

ಬಾಳೆಹೊನ್ನೂರು (ಅ.23) : ಬೆಳಕಿನ ಹಬ್ಬ ದೀಪಾವಳಿಗೆ ಬಾಳೆಹೊನ್ನೂರು ಹೋಬಳಿಯಾದ್ಯಂತ ಸಂಭ್ರಮ ಕಳೆಗಟ್ಟಿದ್ದು, ಹಬ್ಬ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳು ತಲೆಯೆತ್ತಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಾರ ಆರಂಭಿಸಿವೆ. ಪಟ್ಟಣದ ವಿವಿಧ ಅಂಗಡಿಗಳಲ್ಲಿ ದೀಪಾವಳಿಗೆ ತೂಗುದೀಪಗಳ ಮಾರಾಟವೂ ಭರದಿಂದ ನಡೆದಿದೆ. ಅಂಗಡಿಗಳ ಮುಂದೆ ತೂಗು ಹಾಕಿರುವ ತೂಗು ದೀಪಗಳು ನೋಡುಗರ ಗಮನ ಸೆಳೆಯುತ್ತಿದೆ.

ಕಳೆದ ಹತ್ತು ಹದಿನೈದು ದಿನಗಳ ಹಿಂದಿನಿಂದಲೇ ಪಟ್ಟಣದ ಸುತ್ತಮುತ್ತ ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ಪ್ರತಿ ವರ್ಷದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿವೇಷ, ಸಿಂಹವೇಷಧಾರಿಗಳ ತಂಡ, ಶಿವಮೊಗ್ಗದಿಂದ ಆಂಜನೇಯ ವೇಷಧಾರಿ, ಸ್ಥಳೀಯ ವಿವಿಧ ಕಲಾತಂಡಗಳು ಆಗಮಿಸಿದ್ದು, ಮನೆ ಮನೆಗಳಿಗೆ ಭೇಟಿ ನೀಡಿ ಮನರಂಜನೆ ನೀಡುತ್ತಿವೆ. ವಿವಿಧೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿಕುಣಿತ, ಕೊರಗನ ನೃತ್ಯ ಹಾಗೂ ಸ್ಥಳೀಯ ಗ್ರಾಮೀಣ ಪ್ರದೇಶದವರ ಜನಪದ ಹಾಡಿನ ಕಾರ್ಯಕ್ರಮವೂ ಎಲ್ಲ ಭಾಗಗಳಲ್ಲಿ ನಡೆಯುತ್ತಿದೆ.

ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?

ಗ್ರಾಮೀಣ ಭಾಗಗಳಲ್ಲಿ ಭಾನುವಾರ ನೀರು ತುಂಬುವ ಹಬ್ಬ ನಡೆಯುವುದರೊಂದಿಗೆ ದೀಪಾವಳಿಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಸೋಮವಾರ ಮುಂಜಾನೆ ಅಭ್ಯಂಜನ ಸ್ನಾನ ಹಾಗೂ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಹಾಕುವ ಕಾರ್ಯ ನಡೆಯಲಿದೆ. ಈ ಬಾರಿ ಅಮಾವಾಸ್ಯೆಯ ದಿನ ಮಂಗಳವಾರ ಸೂರ್ಯಗ್ರಹಣ ಬಂದಿರುವ ಕಾರಣ ಸೋಮವಾರವೇ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷಿ ್ಮೕಪೂಜೆ, ಬುಧವಾರ ಗೋ ಪೂಜೆ, ಬಲಿಪಾಡ್ಯಮಿ ನಡೆಯಲಿದೆ. ಗುರುವಾರ ಕರಿಸಿರಿ, ಶುಕ್ರವಾರ ವರ್ಷದ ತೊಡಕು, ಕದಿರು ತರುವ ಹಬ್ಬ ನಡೆಯಲಿದೆ. ಒಟ್ಟಾರೆ ಬೆಳಕಿನ ಹಬ್ಬದ ಸ್ವಾಗತಕ್ಕೆ ಜನ ಕಾತರದಿಂದಿದ್ದಾರೆ.

Latest Videos
Follow Us:
Download App:
  • android
  • ios