Diwali 2022: ದೀಪಾವಳಿ ಲಕ್ಷ್ಮಿ ಪೂಜೆಯಲ್ಲಿ ಅವಶ್ಯ ಬಳಸಿ ಈ ವಸ್ತು

ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗುವುದು ಸುಲಭವಲ್ಲ. ಆಕೆಯ ಪ್ರಿಯವಾದ ವಸ್ತುಗಳನ್ನು ಇಟ್ಟು ಭಕ್ತರು ಭಕ್ತಿಯಿಂದ ಪೂಜೆ ಮಾಡಬೇಕಾಗುತ್ತದೆ. ದೀಪಾವಳಿಯ ಅಮವಾಸ್ಯೆ ನಡೆಯುವ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ.
 

Diwali 2022 Lakshmi Puja Vidhi

ಹಿಂದೂ ಪಂಚಾಂಗದ ಪ್ರಕಾರ, ದೀಪಾವಳಿಯ ಲಕ್ಷ್ಮಿ ಪೂಜೆಯನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಮಾಡಲಾಗುತ್ತದೆ. ಈ ದಿನ ಪ್ರದೋಷ ಕಾಲದಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುವ ನಿಯಮವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾವಳಿಯಂದು ಲಕ್ಷ್ಮಿ ಕಾಣಿಸಿಕೊಂಡಳಂತೆ. ಕಾರ್ತಿಕ ಅಮಾವಾಸ್ಯೆಯ ತಿಥಿಯಂದು ಲಕ್ಷ್ಮಿ ದೇವಿ ಭೂಮಿಗೆ ಬಂದಿದ್ದಳು ಎಂಬ ನಂಬಿಕೆ ಇದೆ.  ದೀಪಾವಳಿಯನ್ನು ಐದು ದಿನಗಳ ಆಚರಣೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಮನೆ ತುಂಬ ದೀಪಗಳನ್ನು ಹಚ್ಚಲಾಗುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಮೂಲಕ  ಅಜ್ಞಾನದಿಂದ ಜ್ಞಾನದ ಕಡೆಗೆ ಹೆಜ್ಜೆಯಿಡುವ ಸಂಕೇತ ಇದಾಗಿದೆ.  ದೀಪಾವಳಿಯ ಅಮವಾಸ್ಯೆ ರಾತ್ರಿ ತಾಯಿ ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. 

ದೀಪಾವಳಿ (Diwali) ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಲಕ್ಷ್ಮಿ (Lakshmi) ಜೊತೆ ಗಣೇಶ ಹಾಗೂ ಕುಬೇರನನ್ನು ಪೂಜಿಸುವ ವಾಡಿಕೆಯಿದೆ. ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಕೆಲ ವಸ್ತುಗಳನ್ನು ಭಕ್ತರು ಬಳಕೆ ಮಾಡಬೇಕಾಗುತ್ತದೆ. ಇದು ಲಕ್ಷ್ಮಿ ಕೃಪೆಗೆ ಪಾತ್ರರಾಗಲು ನಮಗೆ ನೆರವಾಗುತ್ತದೆ. ಲಕ್ಷ್ಮಿ ಪೂಜೆ ವೇಳೆ ಯಾವೆಲ್ಲ ವಸ್ತುಗಳನ್ನು ಬಳಸಬೇಕು ಎಂಬುದನ್ನು ನಾವು ಹೇಳ್ತೇವೆ.

ಲಕ್ಷ್ಮಿ ಪೂಜೆಯಲ್ಲಿರಲಿ ಈ ವಸ್ತು :

ಲಕ್ಷ್ಮಿ ದೇವಿಯ ಪಾದಗಳು : ಲಕ್ಷ್ಮಿ, ಸಂತೋಷ, ಸಮೃದ್ಧಿ, ಸಂಪತ್ತು ಮತ್ತು ಐಶ್ವರ್ಯದ ದೇವತೆ. ತಾಯಿ ಲಕ್ಷ್ಮಿ ನಿಮ್ಮ ಮೇಲೆ ಸಂತೋಷಗೊಂಡಾಗ ನೀವು ಶ್ರೀಮಂತ ಮತ್ತು ಸಮೃದ್ಧರಾಗ್ತೀರಿ,  ಹಣದ ಕೊರತೆ ಜೀವನದಿಂದ ಶಾಶ್ವತವಾಗಿ ದೂರವಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದಾದ್ರೆ ಲಕ್ಷ್ಮಿ ಪೂಜೆ ವೇಳೆ ನೀವು ಆಕೆಯ ಪಾದಗಳನ್ನು ಪೂಜಿಸಬೇಕು. ನೀವು ಚಿನ್ನ, ಬೆಳ್ಳಿ ಅಥವಾ ಲೋಹದಿಂದ ಮಾಡಿದ ಪಾದಗಳನ್ನು ಇಟ್ಟು ಪೂಜೆ ಮಾಡಬಹುದು. ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಪಾದಗಳನ್ನು ಇಡಲು ಸಾಧ್ಯವಿಲ್ಲವೆಂದಾದ್ರೆ ನೀವು ಒಂದು ಕಾಗದದ ಮೇಲೆ ಲಕ್ಷ್ಮಿ ದೇವಿಯ ಪಾದವನ್ನು ಬಿಡಿಸಿ ಅದನ್ನು ಪೂಜೆ ಮಾಡಬಹುದು.  

ದಕ್ಷಿಣ ಮುಖವಿರುವ ಶಂಖದ ಆರಾಧನೆ : ಲಕ್ಷ್ಮಿ ಮತ್ತು ವಿಷ್ಣುವಿನ ಆರಾಧನೆಯಲ್ಲಿ ಶಂಖಕ್ಕೆ ವಿಶೇಷ ಮಹತ್ವವಿದೆ. ಲಕ್ಷ್ಮಿ ಆರಾಧನೆಯು ಶಂಖವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಲಕ್ಷ್ಮಿ ಪೂಜೆ ವೇಳೆ ದಕ್ಷಿಣಾಭಿಮುಖವಾದ ಶಂಖವನ್ನು ಪೂಜಿಸುವ ಮೂಲಕ ಸಂತೋಷ ಮತ್ತು ಸಮೃದ್ಧಿಯನ್ನು ನೀವು ಪಡೆಯಬಹುದು. ಲಕ್ಷ್ಮಿ ಮತ್ತು ದಕ್ಷಿಣ ಮುಖದ ಶಂಖ, ಸಮುದ್ರ ಮಂಥನದ ವೇಳೆ ಹುಟ್ಟಿಕೊಂಡವು. ಇದೇ ಕಾರಣಕ್ಕೆ ದಕ್ಷಿಣ ಮುಖದ ಶಂಖವನ್ನು ಲಕ್ಷ್ಮಿಯ ಸಹೋದರ ಎಂದು ಪರಿಗಣಿಸಲಾಗುತ್ತದೆ.  ಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಶಂಖವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ಪೂಜೆ ಮಾಡಿದ್ರೆ ಲಕ್ಷ್ಮಿ ಬೇಗ ಪ್ರಸನ್ನಳಾಗ್ತಾಳೆ.

ದೀಪಾವಳಿಯಲ್ಲಿ ಪೂಜಿಸಿ ಶ್ರೀಯಂತ್ರ : ದೀಪಾವಳಿಯಲ್ಲಿ ನೀವು ಲಕ್ಷ್ಮಿ ಪೂಜೆ ಮಾಡುವ ವೇಳೆ ಶ್ರೀಯಂತ್ರವನ್ನು ಕೂಡ ಪೂಜೆ ಮಾಡಬೇಕು. ಶ್ರೀಯಂತ್ರವಿಲ್ಲದೆ ಲಕ್ಷ್ಮಿಯ ಆರಾಧನೆ ಅಪೂರ್ಣ.  

SURYA GRAHAN 2022: ಗ್ರಹಣ ಕಾಲದಲ್ಲಿ ನೀವು ಮಾಡಬಾರದ್ದೇನು, ಮಾಡಬೇಕಾದ್ದೇನು?

ಲಕ್ಷ್ಮಿಗೆ ನೀಡಿ ಖೀರ್ : ಲಕ್ಷ್ಮಿ ಪೂಜೆ ಮಾಡುವ ವೇಳೆ ದೇವಿಗೆ ನೀವು ಖೀರ್ ಅರ್ಪಿಸಬೇಕು. ಲಕ್ಷ್ಮಿಗೆ ಪ್ರಿಯವಾದ ಸಿಹಿ ಖೀರ್ ಎಂದು ನಂಬಲಾಗಿದೆ. ಒಣ ಹಣ್ಣುಗಳಿಂದ ಮಾಡಿದ ಖೀರ್ ಅರ್ಪಿಸುವುದು ಹೆಚ್ಚು ಶುಭಕರ.

ಮನೆಯ ಶೃಂಗಾರ ಹೀಗಿರಲಿ : ಮನೆಗೆ ಲಕ್ಷ್ಮಿ ಪ್ರವೇಶವಾಗಬೇಕೆಂದ್ರೆ ಸ್ವಚ್ಛತೆ ಮುಖ್ಯ. ನೀವು ಮನೆಯನ್ನು ಸ್ವಚ್ಛಗೊಳಿಸುವ ಜೊತೆಗೆ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆಗಳ ತೋರಣ ಹಾಕಿ, ಮನೆ ಮುಂದೆ ರಂಗೋಲಿ ಹಾಕಿ, ದೀಪ ಬೆಳಗಬೇಕು. 

ಲಕ್ಷ್ಮಿ ಪೂಜೆಗಿರಲಿ ವೀಳ್ಯದೆಲೆ : ಹಿಂದೂ ಧರ್ಮದಲ್ಲಿ ಪೂಜೆ ಅಂದ್ರೆ ವೀಳ್ಯದೆಲೆ ಇರಲೇಬೇಕು. ನೀವು ಲಕ್ಷ್ಮಿ ಪೂಜೆ ವೇಳೆ ವೀಳ್ಯದೆಲೆ ಬಳಕೆ ಮಾಡಿ. ವೀಳ್ಯದೆಲೆ ಮೇಲೆ ಸ್ವಸ್ತಿಕ್ ಗುರುತು ಹಾಕಿ.  

ಕಬ್ಬು ತರೋದು ಮರಿಬೇಡಿ : ತಾಯಿ ಲಕ್ಷ್ಮಿಯ ವಾಹನ ಐರಾವತ ಆನೆ. ಹಾಗಾಗಿ ಲಕ್ಷ್ಮಿಯನ್ನು ಗಜಲಕ್ಷ್ಮಿ ಎಂದೂ ಕರೆಯುತ್ತಾರೆ. ಐರಾವತ ಆನೆಗೆ ಕಬ್ಬು ಇಷ್ಟ. ಹಾಗಾಗಿ ನೀವು ಲಕ್ಷ್ಮಿ ಪೂಜೆ ವೇಳೆ ಕಬ್ಬಿನ ಬಳಕೆ ಮಾಡಬೇಕು.

ಕೊತ್ತಂಬರಿ ಬೀಜಗಳು : ಲಕ್ಷ್ಮಿ ಪೂಜೆ ವೇಳೆ ಒಂದು ಶುದ್ಧ ಪಾತ್ರೆಯಲ್ಲಿ ಕೊತ್ತಂಬರಿ ಬೀಜವನ್ನು ಹಾಕಿ, ದೇವಿ ಮುಂದೆ ಇಡಬೇಕು. ಇದ್ರಿಂದ ಒಳ್ಳೆಯ ಫಲ ಸಿಗುತ್ತದೆ. ಇದನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.   

Deepavali 2022: ದಾರಿದ್ರ್ಯಕ್ಕೆ ದಾರಿ ಮಾಡುತ್ತೆ ಈ ತಪ್ಪು

ಕಮಲದ ಹೂವು ಇಲ್ಲದೆ ಪೂಜೆಯಿಲ್ಲ : ಲಕ್ಷ್ಮಿ ಯಾವಾಗಲೂ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಕಮಲದ ಹೂ ಆಕೆಗೆ ಪ್ರಿಯವಾದದ್ದು. ಹಾಗಾಗಿ ನೀವು ದೀಪಾವಳಿ ದಿನ ಲಕ್ಷ್ಮಿಗೆ ಕಮಲದ ಹೂವನ್ನು ಅರ್ಪಿಸಬೇಕು.
 

Latest Videos
Follow Us:
Download App:
  • android
  • ios