Asianet Suvarna News Asianet Suvarna News

Gemstones Effect: ರತ್ನ, ಹರಳುಗಳನ್ನು ಯಾಕಾಗಿ ಧರಿಸಲಾಗುತ್ತೆ? ಅವುಗಳ ಪ್ರಭಾವ ತಿಳಿದ್ರೆ ಅಚ್ಚರಿಯಾಗುತ್ತೆ!

ಮುತ್ತುರತ್ನಗಳು ಅನಾದಿ ಕಾಲದಿಂದಲೂ ನಮ್ಮನ್ನು ಸೆಳೆದಿವೆ. ರತ್ನದ ಹರಳುಗಳು ಒಂದೊಂದಕ್ಕೂ ವಿಶಿಷ್ಟ ಶಕ್ತಿ ಸೆಳೆಯುವ ಸಾಮರ್ಥ್ಯವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರತ್ನದ ಹರಳುಗಳನ್ನು ಕೆಲವು ಶಕ್ತಿಗಾಗಿ ಧರಿಸಲಾಗುತ್ತದೆ.

Different types of gemstones and their effects on human life
Author
First Published Sep 3, 2023, 11:59 AM IST | Last Updated Sep 3, 2023, 11:59 AM IST

ಮುತ್ತುರತ್ನಗಳ ಪ್ರಪಂಚ ಮನುಷ್ಯನನ್ನು ಬಹಳ ಹಿಂದಿನಿಂದಲೂ ಸೆಳೆದಿದೆ. ಸಾವಿರಾರು ವರ್ಷಗಳಿಂದಲೂ ಮುತ್ತುರತ್ನಗಳ ಬಳಕೆ ಮಾಡುತ್ತಿದ್ದೇವೆ. ಅವುಗಳ ಮಂತ್ರಮುಗ್ಧಗೊಳಿಸುವ ಸೌಂದರ್ಯದಿಂದ ಮಾತ್ರವಲ್ಲ, ನಿಗೂಢ ಶಕ್ತಿಯ ಬಗ್ಗೆಯೂ ನಮಗೆ ಎಂದಿನಿಂದಲೂ ಆಸಕ್ತಿಯಿದೆ. ಅಮೂಲ್ಯ ಹರಳುಗಳು ಪ್ರತಿಯೊಂದೂ ವಿಶಿಷ್ಟ ಬಣ್ಣ, ರಚನೆ, ಶಕ್ತಿಯನ್ನು ಹೊಂದಿರುತ್ತವೆ. ಶ್ರೀಮಂತರು ವಿವಿಧ ರೀತಿಯ ರತ್ನಗಳನ್ನು ಬಳಕೆ ಮಾಡುತ್ತಾರೆ. ಜತೆಗೆ, ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ವ್ಯಕ್ತಿಯ ಏಳಿಗೆ, ಆರೋಗ್ಯಕ್ಕೆ ಅಗತ್ಯವೆಂಬ ಸಲಹೆ ನೀಡಿದಾಗ ಕೆಲವು ರೀತಿಯ ರತ್ನಗಳನ್ನು ಧರಿಸುವುದು ಕಂಡುಬರುತ್ತದೆ. ಕೆಲ ಹೀಲಿಂಗ್‌ ಥೆರಪಿಗಳಲ್ಲಿ ಹಲವು ರೀತಿಯ ಹರಳುಗಳು ಬಳಕೆ ಮಾಡಲಾಗುತ್ತದೆ. ಹರಳು, ರತ್ನಗಳು ವಿಶಿಷ್ಟ ಶಕ್ತಿ ಹಾಗೂ ಸಾಮರ್ಥ್ಯವನ್ನು ಹೊಂದಿದ್ದು, ವ್ಯಕ್ತಿಯ ವಿಕಸನಕ್ಕೆ ಕಾರಣವಾಗುತ್ತವೆ.

•    ವಜ್ರ (Diamond)
ಹೊಳಪು ಮತ್ತು ಬಾಳಿಕೆ (Durability) ಬರುವಲ್ಲಿ ವಜ್ರ ಶ್ರೇಷ್ಠವಾಗಿದೆ. ಶುದ್ಧತೆ (Purity), ಸಾಮರ್ಥ್ಯ, ಪ್ರೀತಿಯನ್ನು (Love) ಸೂಚಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಜ್ರವು ವಿಚಾರಗಳಲ್ಲಿ ಸ್ಪಷ್ಟತೆ (Clarity) ಮೂಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು (Positive Energy) ಸೆಳೆಯಲು ಅನುಕೂಲವಾಗುತ್ತದೆ.

ನಿರ್ಧಾರ ತಗೋಳೋಕೆ ಈ ರಾಶಿಗಳ ಜನರೇ ಸೈ; ಸ್ಪೆಷಲ್ ತಾಕತ್ತು ಇವ್ರಲ್ಲಿದೆ

•    ನೀಲಮಣಿ (Sapphires)
ನೀಲಿಯ ಬಣ್ಣದ ಈ ಹರಳು (Stone) ಬುದ್ಧಿವಂತಿಕೆ, ಬದ್ಧತೆ, ಶ್ರೇಷ್ಠತೆಯನ್ನು (Nobility) ಸೂಚಿಸುತ್ತದೆ. ನೀಲಮಣಿ ವಿವಿಧ ಬಣ್ಣಗಳಲ್ಲೂ ಲಭ್ಯ. ಪ್ರತಿಯೊಂದೂ ವಿವಿಧ ಶಕ್ತಿಯನ್ನು (Energy) ಸೆಳೆಯುತ್ತವೆ. ಹಳದಿ (Yellow) ಹರಳು ವ್ಯಕ್ತಿಯ ಪ್ರಗತಿ ಮತ್ತು ಗುಲಾಬಿ ಹರಳು ಪ್ರೀತಿಯನ್ನು ಪ್ರತಿನಿಧಿಸುತ್ತವೆ.

•    ಮಾಣಿಕ್ಯ (Ruby)
ಹರಳುರತ್ನಗಳಲ್ಲಿ ರಾಜ ಎನಿಸಿಕೊಂಡಿರುವುದು ರೂಬಿ. ಕೆಂಪು (Red) ಬಣ್ಣದ ಹೊಳೆಯುವ ಈ ಹರಳು ಧೈರ್ಯ (Courage), ಶಕ್ತಿ, ನಾಯಕತ್ವದ ಗುಣವನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಣಿಕ್ಯವು ಸೂರ್ಯನನ್ನು ಪ್ರತಿನಿಧಿಸುತ್ತದೆ ಹಾಗೂ ಯಶಸ್ಸು (Success), ಉತ್ತಮ ಭವಿಷ್ಯವನ್ನು ತರುತ್ತದೆ.

•    ಪಚ್ಚೆ (Emerald)
ಹಸಿರು (Green) ಬಣ್ಣದಲ್ಲಿ ಹೊಳೆಯುವ ಈ ಹರಳು ಮರುಹುಟ್ಟು ಮತ್ತು ಸಂತಾನೋತ್ಪತ್ತಿಯನ್ನು ಸೂಚಿಸುತ್ತದೆ. ಇವು ಹೀಲಿಂಗ್‌ (Healing), ಬೆಳವಣಿಗೆ, ಸಾಮರಸ್ಯವನ್ನು ಮೂಡಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಚ್ಚೆಯು ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ ಹಾಗೂ ಸಂವಹನ ಮತ್ತು ಬುದ್ಧಿವಂತಿಕೆಯನ್ನು ವಿಸ್ತರಿಸುತ್ತದೆ. 

ಬಹಿರ್ಮುಖಿಯೂ ಹೌದು, ಅಂತರ್ಮುಖಿಯೂ ಹೌದು; ಎರಡೂ ಹದವಾಗಿ ಬೆರೆತ ವ್ಯಕ್ತಿತ್ವ ಈ ರಾಶಿಗಳ ಜನರದ್ದು

•    ಪದ್ಮರಾಗ (Amethysts)
ಕೆನ್ನೇರಳೆ ಬಣ್ಣದ ಈ ಹರಳನ್ನು ಆಭರಣಗಳಲ್ಲಿ ಬಳಸಲಾಗುತ್ತದೆ. ಅಂತಃಪ್ರಜ್ಞೆ (Intuition) ಮತ್ತು ಆಧ್ಯಾತ್ಮಿಕತೆಯನ್ನು ಇದು ಸೂಚಿಸುತ್ತದೆ. ಶಾಂತಿ, ಸಮತೋಲನ (Balance) ಮತ್ತು ಮಾನಸಿಕ ಸ್ಪಷ್ಟತೆಗೆ ಇದು ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಪದ್ಮರಾಗವನ್ನು ಮೀನ ರಾಶಿಯ ಜನರು ಆಂತರಿಕ ಶಾಂತಿಗಾಗಿ ಧರಿಸಲು ಸೂಚಿಸಲಾಗುತ್ತದೆ.

•    ಅಕ್ವಾಮರೈನ್‌ ಹರಳು (Aquamarines)
ಇದನ್ನು ಬೆರುಜ್‌ ರತ್ನ ಎಂದೂ ಹೇಳಲಾಗುತ್ತದೆ. ತಿಳಿ ನೀಲಿ ಕಡಲಿನ ಬಣ್ಣದಲ್ಲಿರುವ ಈ ಹರಳು ಧೈರ್ಯಕ್ಕೆ ಉತ್ತೇಜನ ನೀಡುತ್ತದೆ. ರಕ್ಷಣೆ ದೊರಕಿಸುತ್ತದೆ ಮತ್ತು ಭಾವನಾತ್ಮಕ (Emotional) ಸ್ಪಷ್ಟತೆಗೆ ಕಾರಣವಾಗುತ್ತದೆ. ಇದರಲ್ಲೂ ಹಲವು ವಿಧಗಳಿವೆ. ಈ ಹರಳು ವಿಶುದ್ಧಿ ಚಕ್ರ (Throat Chakra) ಅಂದರೆ ಗಂಟಲಿನಲ್ಲಿರುವ ಚಕ್ರಕ್ಕೆ ಸಂಬಂಧಿಸಿದೆ. ಇದನ್ನು ಧರಿಸುವುದರಿಂದ ಉತ್ತಮ ಸಂವಹನ ಕೌಶಲ ಸಿದ್ಧಿಸುತ್ತದೆ.

•    ಮುತ್ತು (Pearl)
ಮುತ್ತುಗಳನ್ನು ಸಾಮಾನ್ಯವಾಗಿ ಎಲ್ಲರೂ ಧರಿಸುತ್ತಾರೆ. ಇದು ನೈಸರ್ಗಿಕ ಪದಾರ್ಥವಾಗಿದ್ದು, ಓಯೆಸ್ಟರ್‌ ಜೀವಿಯೊಳಗೆ ಕಂಡುಬರುತ್ತದೆ. ಮುತ್ತುಗಳು ಶುದ್ಧತೆ, ಮುಗ್ಧತೆ, ಭಾವನಾತ್ಮಕ ಸಮತೋಲನಕ್ಕೆ ಗುರುತಿಸಲ್ಪಡುತ್ತವೆ. ಆಭರಣಗಳಲ್ಲಿ ಇವುಗಳನ್ನು ಧರಿಸುವುದರಿಂದ ಆಂತರಿಕ ಸೌಂದರ್ಯ ಹೆಚ್ಚುತ್ತದೆ.

•    ಕ್ಷೀರಸ್ಫಟಿಕ (Opals)
ಕ್ಷೀರಸ್ಫಟಿಕವು ಕಾಮನಬಿಲ್ಲಿನಂತೆ ವಿವಿಧ ಬಣ್ಣಗಳ ಸಂಯೋಜನೆ ಹೊಂದಿದೆ. ಕ್ರಿಯಾಶೀಲತೆ, ಸ್ಫೂರ್ತಿಯನ್ನು ಇದು ಸೂಚಿಸುತ್ತದೆ. ಇದನ್ನು ಧರಿಸುವವರಿಗೆ ಸಂತೋಷ (Happiness) ಮತ್ತು ಧನಾತ್ಮಕ ಶಕ್ತಿ ಲಭಿಸುತ್ತದೆ.

•    ಪುಷ್ಯರಾಗ (Topaz)
ಇದೂ ಸಹ ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ. ಶಕ್ತಿ, ಆತ್ಮವಿಶ್ವಾಸ (Confidence), ನಿರಂತರತೆಯನ್ನು ಇದು ಸೂಚಿಸುತ್ತದೆ. ನೀಲಿ ಹರಳು ಸಂವಹನ ಶಕ್ತಿಯನ್ನು ಹೆಚ್ಚಿಸಿದರೆ ಹಳದಿ ಹರಳು ಸಿರಿ ಮತ್ತು ಪ್ರಗತಿಯನ್ನು ಆಕರ್ಷಿಸುತ್ತದೆ. 

•   ಗಾರ್ನೆಟ್  (Garnet)
ಕೆಂಪು ಹರಳಾಗಿರುವ ಗಾರ್ನೆಟ್‌ ಶಿಲೆ ವಿವಿಧ ಬಣ್ಣಗಳಲ್ಲಿ ದೊರೆಯುತ್ತದೆ. ದಟ್ಟವಾದ ಕೆಂಪು ಬಣ್ಣ ಇದರ ಸಾಧಾರಣ ರೂಪವಾಗಿದೆ. ಬಲಿಷ್ಠತೆ, ಭದ್ರತೆ, ತೀವ್ರತೆಯನ್ನು ಸೂಚಿಸುತ್ತದೆ. ಆತ್ಮವಿಶ್ವಾಸ ಮತ್ತು ವಿಶಿಷ್ಟತೆಯನ್ನು ಹೆಚ್ಚಿಸುತ್ತದೆ. 

Latest Videos
Follow Us:
Download App:
  • android
  • ios