Asianet Suvarna News Asianet Suvarna News

ನಿರ್ಧಾರ ತಗೋಳೋಕೆ ಈ ರಾಶಿಗಳ ಜನರೇ ಸೈ; ಸ್ಪೆಷಲ್ ತಾಕತ್ತು ಇವ್ರಲ್ಲಿದೆ

ನಿರ್ಧಾರ ಕೈಗೊಳ್ಳುವುದು ಜೀವನದ ಒಂದು ಪ್ರಮುಖ ಭಾಗ. ಯಾವುದೇ ಹಂತದಲ್ಲಿ, ದೈನಂದಿನ ಜೀವನದಲ್ಲಿ ಆಗಾಗ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಕೆಲವು ರಾಶಿಗಳ ಜನ ಅರ್ಥವತ್ತಾದ ನಿಲುವಿನೊಂದಿಗೆ ಮುನ್ನಡೆಯುತ್ತಾರೆ. 6 ರಾಶಿಗಳ ಜನರಲ್ಲಿ ನಿರ್ಧಾರ ಕೈಗೊಳ್ಳುವಿಕೆಗೆ ಸಂಬಂಧಿಸಿ ವಿಭಿನ್ನ ಧೋರಣೆ ಕಾಣಬಹುದು.
 

Different decision making capacity of some zodiac signs
Author
First Published Sep 1, 2023, 2:52 PM IST | Last Updated Sep 1, 2023, 2:52 PM IST

ನಿರ್ಧಾರ ಕೈಗೊಳ್ಳುವಿಕೆಗೆ ಮಹತ್ವವಿದೆ. ಮಹತ್ವದ ನಿರ್ಧಾರ ಕೈಗೊಳ್ಳುವಾಗಲಂತೂ ಹಲವು ವಿಭಿನ್ನ ಆಯಾಮಗಳಲ್ಲಿ ವಿಚಾರಿಸಿ ಮುಂದುವರಿಯುತ್ತೇವೆ. ಹಾಗೆಯೇ, ದೈನಂದಿನ ಜೀವನದಲ್ಲಿ ಕೈಗೊಳ್ಳುವ ಚಿಕ್ಕಪುಟ್ಟ ನಿರ್ಧಾರಗಳೂ ಕೆಲವೊಮ್ಮೆ ಬಹುದೊಡ್ಡ ಪರಿಣಾಮಗಳಿಗೆ ಕಾರಣವಾಗುತ್ತವೆ. ಹೀಗಾಗಿ, ಸಣ್ಣದ್ದೇ ಆಗಲಿ, ದೊಡ್ಡದೇ ಆಗಲಿ, ನಿರ್ಧಾರ ತೆಗೆದುಕೊಳ್ಳುವ ಹಂತ ಭಾರೀ ಪ್ರಮುಖವಾದದ್ದು. ಕೆಲವು ರಾಶಿಗಳು ಇದಕ್ಕೆ ಅತ್ಯುತ್ತಮ ಅರಿವನ್ನು ನೀಡಬಲ್ಲವು. ಕೆಲವು ರಾಶಿಗಳ ಜನರಲ್ಲಿ ನಿರ್ಧಾರ ಕೈಗೊಳ್ಳುವಾಗಿನ ನಿಲುವುಗಳು ವಿಶಿಷ್ಟವಾಗಿರುತ್ತವೆ. ಒಂದೊಂದು ರಾಶಿಗಳ ಜನರಲ್ಲಿ ಒಂದೊಂದು ಬಗೆಯ ನಿಲುವು, ದೃಷ್ಟಿಕೋನಗಳನ್ನು ಕಾಣಬಹುದು. ಇವೆಲ್ಲವನ್ನೂ ಅಳವಡಿಸಿಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸು ಖಂಡಿತ. ಉದಾಹರಣೆಗೆ, ಜೀವನದ ಆಯ್ಕೆ ಮತ್ತು ಸವಾಲುಗಳನ್ನು ಎದುರಿಸುವಾಗ ದೃಢವಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ. ಹಿಂಜರಿಯುವ ಧೋರಣೆ ಇದ್ದಾಗ ನಿರೀಕ್ಷಿತ ಫಲ ದೊರೆಯುವುದಿಲ್ಲ. ಅಂತಹ ಸಮಯದಲ್ಲಿ ಮೇಷ ರಾಶಿಯ ಧೋರಣೆ ಅನುಸರಿಸಬೇಕು. ಈ ರಾಶಿಯ ಜನರಿಗೆ ದೃಢ ನಿರ್ಧಾರ ಕೈಗೊಳ್ಳಲು ಯಾವುದೇ ಅಂಜಿಕೆ ಇರುವುದಿಲ್ಲ. ಇವರಂತೆಯೇ ಇನ್ನೂ 5 ರಾಶಿಗಳ ಜನ ಅತ್ಯಂತ ವಿಶಿಷ್ಟ ರೀತಿಯಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ. 

•    ಮೇಷ (Aries)-ಅಂಜಿಕೆಯಿಲ್ಲದ (Bold) ಪ್ರವೃತ್ತಿ
ಮೇಷ ರಾಶಿಯ ಜನ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ತಮ್ಮ ಆಂತರಿಕ ಪ್ರವೃತ್ತಿಯನ್ನು (Instinct) ಹೆಚ್ಚು ನೆಚ್ಚುತ್ತಾರೆ. ಇವರು ಸಹಜವಾಗಿ ತೀವ್ರತೆ (Impulsive) ಮತ್ತು ಸಾಹಸಿ ಧೋರಣೆ ಹೊಂದಿರುವುದರಿಂದ ದೈನಂದಿನ ಜೀವನದಲ್ಲಿ ಅತ್ಯಂತ ಧೈರ್ಯವಾಗಿ, ಆತ್ಮವಿಶ್ವಾಸದಿಂದ (Confident) ನಿರ್ಧಾರ ಕೈಗೊಳ್ಳುತ್ತಾರೆ. ಮನಸ್ಸು ಹೇಗೆ ಹೇಳುತ್ತದೆಯೋ ಅದರಂತೆ ಮಾಡುತ್ತಾರೆ. ತಮ್ಮ ಕರುಳಿನ ಭಾವನೆಗೆ ಬೆಲೆ ನೀಡುವುದರಿಂದ ಚುರುಕು ಹಾಗೂ ಪರಿಣಾಮಕಾರಿ ನಿರ್ಧಾರ ಕೈಗೊಳ್ಳಬಲ್ಲರು.

ಬಹಿರ್ಮುಖಿಯೂ ಹೌದು, ಅಂತರ್ಮುಖಿಯೂ ಹೌದು; ಎರಡೂ ಹದವಾಗಿ ಬೆರೆತ ವ್ಯಕ್ತಿತ್ವ ಈ ರಾಶಿಗಳ ಜನರದ್ದು

•    ವೃಷಭ (Taurus)-ಪ್ರಾಯೋಗಿಕ (Practical) ವಿಮರ್ಶೆ
ಪ್ರಾಯೋಗಿಕ ಮತ್ತು ತಾಳ್ಮೆಯ ಗುಣದಿಂದ ಕೂಡಿರುವ ವೃಷಭ ರಾಶಿಯ ಜನ ನಿರ್ಧಾರ ಕೈಗೊಳ್ಳುವ (Decision Making) ಮುನ್ನ ಎಲ್ಲ ಆಯ್ಕೆಗಳನ್ನೂ ಅತ್ಯಂತ ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಾರೆ. ಮುಂದಾಗುವ ಪರಿಣಾಮಗಳನ್ನು ಲೆಕ್ಕ ಹಾಕುತ್ತಾರೆ. ಹಣಕಾಸು ಭದ್ರತೆ (Financial Security) ಮತ್ತು ಸ್ಥಿರತೆ ಒದಗಿಸುವ ಆಯ್ಕೆಗಳನ್ನು ಮಾಡುತ್ತಾರೆ. ದೀರ್ಘಕಾಲದ ಪರಿಣಾಮಗಳನ್ನು ಗಮನಿಸಿ ನಿರ್ಧರಿಸುತ್ತಾರೆ. 

•    ಮಿಥುನ (Gemini)-ಮಾಹಿತಿ (Information) ವಿವರಣೆ 
ಮಿಥುನ ರಾಶಿಯ ಜನ ಅತ್ಯಂತ ಕುತೂಹಲಿಗಳು (Curious) ಮತ್ತು ಜಿಜ್ಞಾಸೆಯ ಗುಣ ಹೊಂದಿರುವವರು. ನಿರ್ಧಾರ ಕೈಗೊಳ್ಳುವಾಗ ಹೆಚ್ಚಿನ ವಿವರಣೆ ಹಾಗೂ ವಿಭಿನ್ನ ದೃಷ್ಟಿಕೋನಗಳನ್ನು ಪರಿಶೀಲಿಸುತ್ತಾರೆ. ಮಾನಸಿಕ ಉತ್ತೇಜನಕ್ಕೆ (Mental Stimuli) ಕಾರಣವಾಗುವ ಆಯ್ಕೆಗಳನ್ನು ಮಾಡುತ್ತಾರೆ. ಹೊಸತೇನಾದರೂ ಅರಿಯುವ ಅವಕಾಶವಿದ್ದರೆ ಬಿಡುವುದಿಲ್ಲ. 

•    ಕರ್ಕಾಟಕ (Cancer)-ಭಾವನಾತ್ಮಕ ಅಂತಃಪ್ರಜ್ಞೆ (Emotional Intuition)
ಕರ್ಕಾಟಕ ರಾಶಿಯ ಜನ ತಮ್ಮ ಭಾವನೆಗಳೊಂದಿಗೆ ಅತ್ಯಂತ ದೃಢ ಬಾಂಧವ್ಯ ಹೊಂದಿರುತ್ತಾರೆ. ಪರಿಸ್ಥಿತಿ ಅಥವಾ ಆಯ್ಕೆಗಳ ಬಗ್ಗೆ ತಮಗೆ ಯಾವ ಭಾವನೆ (Feelings) ಇದೆಯೋ ಅದನ್ನಾಧರಿಸಿ ನಿರ್ಧಾರ ಕೈಗೊಳ್ಳುತ್ತಾರೆ. ತಮ್ಮ ಅಂತಃಪ್ರಜ್ಞೆಯನ್ನು ಹೆಚ್ಚು ನಂಬುತ್ತಾರೆ. ಭಾವನಾತ್ಮಕ ಕ್ಷೇಮಕ್ಕೆ ಆದ್ಯತೆ ನೀಡುವ ಆಯ್ಕೆ ಮಾಡುತ್ತಾರೆ.

ಶನಿ ಮಾರ್ಗಿ; ಈ 3 ರಾಶಿಯವರಿಗೆ ದೂರಾಯ್ತು ಸಂಕಷ್ಟ, ಮುಟ್ಟಿದ್ದೆಲ್ಲಾ ಚಿನ್ನ..!

•    ಸಿಂಹ (Leo)-ಆತ್ಮವಿಶ್ವಾಸದ ನೇತಾರ (Leader)
ನಿರ್ಧಾರ ಕೈಗೊಳ್ಳುವಾಗ ನಾಯಕತ್ವದ ಪಾತ್ರ ನಿಭಾಯಿಸುತ್ತಾರೆ ಸಿಂಹ ರಾಶಿಯ ಜನ. ತಮ್ಮದೇ ವಿವೇಚನೆಯನ್ನಾಧರಿಸಿ (Judgement) ಸಶಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಗುರುತಿಸಿಕೊಳ್ಳುವುದಕ್ಕೆ ಹೆಚ್ಚಿನ ಮೌಲ್ಯ ನೀಡುತ್ತಾರೆ. ಹಾಗೆಯೇ, ಮುಂದಾಳುತ್ವ ವಹಿಸುವುದಕ್ಕೆ ಹೆಮ್ಮೆ ಪಡುತ್ತಾರೆ. 

•    ಕನ್ಯಾ (Virgo)-ವಿಮರ್ಶಾತ್ಮಕ (Analytical) ವಿಚಾರ
ಕನ್ಯಾ ರಾಶಿಯ ಜನ ಅತ್ಯಂತ ಸೂಕ್ಷ್ಮ ಹಾಗೂ ವಿಮರ್ಶಾತ್ಮಕ ನಿಲುವು ಹೊಂದಿರುತ್ತಾರೆ. ನಿರ್ಧಾರ ಕೈಗೊಳ್ಳುವಾಗಲೂ ಇದೇ ಗುಣ ಪ್ರದರ್ಶಿಸುತ್ತಾರೆ. ಆಯ್ಕೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ರಾಯೋಗಿಕವಾದ ಪರಿಹಾರಗಳ ಬಗ್ಗೆ ಯೋಚಿಸುತ್ತಾರೆ. ಲಾಭ-ನಷ್ಟಗಳ ಬಗ್ಗೆ ವಿಮರ್ಶೆ ಮಾಡುತ್ತಾರೆ. ಶಿಸ್ತು ಮತ್ತು ದಕ್ಷತೆಗೆ ಆದ್ಯತೆ ನೀಡುತ್ತಾರೆ.   
 

Latest Videos
Follow Us:
Download App:
  • android
  • ios