Vijayapura: ವಿಶಿಷ್ಟ ರೀತಿಯಲ್ಲಿ ದೇವರ ಹರಕೆ ತೀರಿಸಿದ ಯುವಕರು!
⦁ ಯುವಕರ ಭಕ್ತಿ-ಸಾಹಸ ಕಂಡು ಮಲಘಾಣ ಗ್ರಾಮಸ್ಥರೇ ತಬ್ಬಿಬ್ಬು.
⦁ ಒಬ್ಬನಿಂದ ಮರಗಾಲ ಕಟ್ಟಿ ಬೀರೇಶ್ವರನಿಗೆ ದೀಡ್ ನಮಸ್ಕಾರ.
⦁ ಕ್ವಿಂಟಾಲ ಜೋಳದ ಚೀಲ ಹೊತ್ತು ದೇವರಿಗೆ ಬಂದ ಮತ್ತೊಬ್ಬ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಏ.03): ವಿಜಯಪುರ ಜಿಲ್ಲೆಯಲ್ಲಿ ಸಾಲು-ಸಾಲು ಜಾತ್ರೆಗಳು ನಡೆಯುತ್ತಿವೆ. ಅದರಲ್ಲೂ ಕೋವಿಡ್ ಆರ್ಭಟದಿಂದಾಗಿ (Covid19) 2 ವರ್ಷಗಳ ಕಾಲ ಜಾತ್ರೆಗಳೆ ರದ್ದಾಗಿದ್ದವು. ಕೋವಿಡ್ ನಿಯಮಾವಳಿಯಂತೆ ಸಂಕ್ಷಿಪ್ತವಾಗಿ ಜಾತ್ರೆಗಳನ್ನ ನಡೆಸಲಾಗಿತ್ತು. 2 ವರ್ಷಗಳ ಬಳಿಕ ಈಗ ಅದ್ದೂರಿಯಾಗಿ ಜಾತ್ರೆಗಳನ್ನ ನಡೆಸಲಾಗ್ತಿದೆ.
ಅದ್ದೂರಿಯಾಗಿ ನಡೆಯುತ್ತಿರುವ ಜಾತ್ರೆಗಳಲ್ಲಿ ಭಕ್ತರು ವಿಶಿಷ್ಟ ರೀತಿಗಳಲ್ಲಿ ತಮ್ಮ ಭಕ್ತಿಯನ್ನ ದೇವರಿಗೆ ಸಮರ್ಪಿಸುತ್ತಿದ್ದಾರೆ. ಅದ್ರಲ್ಲು ಸಿಂದಗಿ (Sindagi) ತಾಲೂಕಿನ ಮಲಘಾಣ (Malagan Village) ಗ್ರಾಮದಲ್ಲಿ ನಡೆದ ಶ್ರೀ ಬೀರಲಿಂಗೇಶ್ವರ ಜಾತ್ರೆಯಲ್ಲಿ ಇಬ್ಬರು ಯುವಕರು ವಿಶೇಷ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಜನರ ಗಮನ ಸೇಳೆದಿದ್ದಾರೆ. ಒಬ್ಬ ಕಾಲಿಗೆ ಮರಗಾಲು ಕಟ್ಟಿ ದೀಡ್ ನಮಸ್ಕಾರ ಹಾಕಿದ್ರೆ, ಇನ್ನೊಬ್ಬ ಯುವಕ ಕ್ವಿಂಟಾಲ್ ನಷ್ಟು ಬಾರದ ಚೀಲಗಳನ್ನ ಹಿಡಿದು ನಡೆದು ದೇವರ ದರ್ಶನಕ್ಕೆ ಬಂದಿದ್ದಾನೆ.
ವಿಜಯಪುರದ ಸಿದ್ದರಾಮೇಶ್ವರ ದೇಗುಲದಲ್ಲಿ ಯುಗಾದಿ ಸಂಭ್ರಮ, ರೈತರ ಒಳಿಗಾಗಿ ಹೋಮ..!
ಕಾಲಿಗೆ ಮರಗಾಲು ಕಟ್ಟಿ ದೀಡ್ ನಮಸ್ಕಾರ: ಉತ್ತರ ಕರ್ನಾಟಕ ಭಾಗದಲ್ಲಿ ಭಕ್ತರು ದೇವರಿಗೆ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸೋದು ಕಾಮನ್.. ಅದ್ರಲ್ಲು ಮಹಿಳೆಯರು (Women) ಹೆಚ್ಚಿನ ಸಂಖ್ಯೆಯಲ್ಲಿ ದೇವರ ಗುಡಿಯ ಸುತ್ತ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸೋದುಂಟು. ಹಾಗೇ ಯುವಕರು (Youth) ಕಿ.ಮೀ ಗಟ್ಟಲೇ ದೀಡ್ ನಮಸ್ಕಾರ ಹಾಕಿ ದೇವರಿಗೆ (God) ತಮ್ಮ ಭಕ್ತಿ (Devotion) ಸಮರ್ಪಿಸೋದು ಇದೆ. ಆದ್ರೆ ಮಲಘಾಣ ಗ್ರಾಮದ ಯುವಕನೊಬ್ಬ ಕಾಲಿಗೆ ಮರಗಾಲು (ಕಟ್ಟಿಗೆಯ ಕೋಲು) ಕಟ್ಟಿಕೊಂಡು ದೇವರಿಗೆ ದೀಡ್ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆದಿದ್ದಾನೆ.
ಸಿಂದಗಿ ತಾಲೂಕಿನ ಮಲಘಾಣ ಬೀರಲಿಂಗೇಶ್ವರ ದೇವರ ಜಾತ್ರೆಯಲ್ಲಿ (Fair) ಈ ರೀತಿಯಾಗಿ ಗ್ರಾಮದ ಯುವಕ ತನ್ನ ಭಕ್ತಿಯನ್ನ ಸಮರ್ಪಿಸಿದ್ದಾನೆ. ದೇವರಿಗೆ ದೀಡ್ ನಮಸ್ಕಾರ (ಸಾಷ್ಟಾಂಗ ನಮಸ್ಕಾರ ರೀತಿ) ಹಾಕೊದೆ ಕೊಂಚ ಭಾರದ ಕೆಲಸ ಅದ್ರಲ್ಲು ಯುವಕ ವಿಠ್ಠಲ್ ಗರಸಂಗಿ ತನ್ನ ಕಾಲಿಗೆ 2 ಅಡಿಯ ಮರಗಾಲ ಕಟ್ಟಿಕೊಂಡು ದೀಡ್ ನಮಸ್ಕಾರ ಹಾಕುವ ಮೂಲಕ ಭಕ್ತಿ ಸಮರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ. ತನ್ನ ಮನೆಯಿಂದ ಬೀರಲಿಂಗೇಶ್ವರ ದೇಗುಲದ ವರೆಗೆ ಮರಗಾಲ ಕಟ್ಟಿ ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ.
ಕ್ವಿಂಟಾಲ್ ಚೀಲಗಳ ಎತ್ತಿಕೊಂಡು ದೇವರಿಗೆ ಬಂದ ಯುವಕ: ಅತ್ತ ವಿಠ್ಠಲ್ ಗರಸಂಗಿ ಕಾಲಿಗೆ ಮರಗಾಲು ಕಟ್ಟಿಕೊಂಡು ದೀಡ್ ನಮಸ್ಕಾರ ಹಾಕಿ ಗಮನ ಸೆಳೆದರೆ, ಇತ್ತ ಇದೆ ಮಲಘಾಣ ಗ್ರಾಮದ ಸುನೀಲ್ ಸಾವಳಗಿ ಒಂದು ಕ್ವಿಂಟಾಲ್ ತೂಕದ ಎರೆಡು ಚೀಲಗಳನ್ನ ಎರೆದು ಕೈಗಳಿಂದ ಹಿಡಿದುಕೊಂಡು ದೇವರ ದರ್ಶನಕ್ಕೆ ಬರುವ ಮೂಲಕ ಸಾಹಸ ಮೆರೆದಿದ್ದಾನೆ. 100 KG ತೂಕದ ಎರೆಡು ಜೋಳದ (Corn) ಚೀಲಗಳನ್ನ ಎರೆದು ಕಡೆಗಳಲ್ಲಿ ಬರೀ ಕೈಗಳಿಂದನೇ ಎತ್ತಿಕೊಂಡು ಸುನೀಲ್ 500 ಮೀಟರ್ ನಡೆದುಕೊಂಡು ಬೀರಲಿಂಗೇಶ್ವರ ದರ್ಶನಕ್ಕೆ ಬಂದಿದ್ದಾನೆ. ಮಲಘಾಣ ಗ್ರಾಮದ ಬಸವೇಶ್ವರ ದೇಗುಲದಿಂದ ಬೀರಲಿಂಗೇಶ್ವರ ದೇವಸ್ಥಾನದ ವರೆಗೆ ನಡೆದುಕೊಂಡು ಬಂದು ಸಾಹಸ ಮೆರೆದಿದ್ದಾನೆ. ಈ ಮೂಲಕ ಜಾತ್ರೆಯಲ್ಲಿ ಬೀರೇಶ್ವರ ದೇವರಿಗೆ ತನ್ನ ಹರಕೆಯನ್ನ ತೀರಿಸಿದ್ದಾನೆ.
ವಿಜಯಪುರದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಜಾತ್ರೆಗಳು!
ಇವರ ಭಕ್ತಿಗೆ ಸಾಟಿಯುಂಟೆ: ಮಲಘಾಣ ಗ್ರಾಮದಲ್ಲಿ ಬೀರೇಶ್ವರ ಜಾತ್ರೆ ಅದ್ದೂರಿಯಾಗಿ ಸಾಗ್ತಿದೆ. ವಿಠ್ಠಲ್ ಗರಸಂಗಿ ಹಾಗೂ ಸುನೀಲ್ ಸಾವಳಗಿ ವಿಶಿಷ್ಟ ರೀತಿಯಲ್ಲಿ ತಮ್ಮ ಭಕ್ತಿಯನ್ನ ಪ್ರದರ್ಶಿಸಿದ್ದಾರೆ. ಇಬ್ಬರ ಭಕ್ತಿ-ಸಾಹಸವನ್ನ ಕಂಡ ಇಡೀ ಮಲಘಾಣ ಗ್ರಾಮಸ್ಥರು (Villagers) ಅಚ್ಚರಿ (Surprise) ವ್ಯಕ್ತ ಪಡೆಸಿದ್ದಾರೆ. ಇಬ್ಬರಿಗು ಹೌದ್ದೋ ಹುಲಿಗಳಾ ಅಂತಾ ಹೋಗಳಿ ಇಬ್ಬರ ಕಾರ್ಯವನ್ನ ಶ್ಲಾಘಿಸಿದ್ದಾರೆ.