ಒಮ್ಮೆ ಗಂಧ, ಚಂದನ, ಮತ್ತೊಮ್ಮೆ ಕುಂಕುಮ; ಹಣೆ ಮೇಲೆ ತಿಲಕ ಇಡೋದ್ಯಾಕೆ? ಎಲ್ಲ ತಿಲಕವೂ ಒಂದೇನಾ?

ಹಿಂದು ಧರ್ಮದಲ್ಲಿ ತಿಲಕ ಧರಿಸುವ ಸಂಪ್ರದಾಯ ವ್ಯಾಪಕವಾಗಿದೆ. ಪ್ರತಿದಿನವೂ ಮಹಿಳೆಯರು ಕೆಂಪು ಬಿಂದಿ ಧರಿಸುವ ಜತೆಗೇ, ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಯ ತಿಲಕವನ್ನು ಹಚ್ಚಿಕೊಳ್ಳಲಾಗುತ್ತದೆ. ಪ್ರತಿಯೊಂದಕ್ಕೂ ವಿಭಿನ್ನ ಕಾರಣಗಳು ಹಾಗೂ ಪರಿಣಾಮಗಳಿವೆ. 
 

Different kind of tilak and its significance is special in Hindu religion sum

ಹಿಂದು ಧರ್ಮದಲ್ಲಿ ತಿಲಕಕ್ಕೆ ಮಹತ್ವದ ಸ್ಥಾನವಿದೆ. ಇವುಗಳ ಸ್ವರೂಪ ಹಿಂದಿಗಿಂತ ಇಂದು ಬದಲಾಗಿದ್ದರೂ ಇಂದಿಗೂ ಬಹುತೇಕ ಮಹಿಳೆಯರು ಬಿಂದಿ ಧರಿಸುತ್ತಾರೆ. ಶುಭ ಸಮಾರಂಭಗಳಲ್ಲಿ ದೊಡ್ಡ ತಿಲಕ ಇಟ್ಟುಕೊಳ್ಳುತ್ತಾರೆ.  ವಿವಿಧ ಸಂದರ್ಭಗಳಿಗೆ ತಕ್ಕಂತೆ ತಿಲಕಗಳೂ ಬದಲಾಗುತ್ತವೆ. ಮಹಿಳೆಯರು ಮಾತ್ರವಲ್ಲ, ಪುರುಷರೂ ಸಹ ತಿಲಕ ಧರಿಸುವ ಸಂಪ್ರದಾಯವಿದೆ. ಎಲ್ಲ ರೀತಿಯ ತಿಲಕಗಳೂ ಒಂದೇ ರೀತಿಯಲ್ಲಿ ಇರುವುದಿಲ್ಲ ಅಥವಾ ಒಂದೇ ರೀತಿಯ ಪ್ರಭಾವ ಹೊಂದಿರುವುದಿಲ್ಲ. ಪ್ರತಿಯೊಂದೂ ವಿಭಿನ್ನ ಪ್ರಭಾವ ಹೊಂದಿದ್ದು, ವಿಶೇಷ ರೀತಿಯಲ್ಲಿ ಸಹಕಾರಿಯಾಗುತ್ತವೆ. ಅಷ್ಟಕ್ಕೂ ತಿಲಕ ಧರಿಸುವುದು ಕೇವಲ ಸಂಪ್ರದಾಯವಲ್ಲ. ಇದಕ್ಕೂ ಕಾಸ್ಮಿಕ್ ಎನರ್ಜಿಗೂ ಸಂಬಂಧವಿದೆ. ತಿಲಕ ಧರಿಸುವುದು ಹಲವು ಸಂಪ್ರದಾಯ, ನಂಬಿಕೆ ಮತ್ತು ಪದ್ಧತಿಗಳನ್ನು ಬಿಂಬಿಸುತ್ತವೆ. ಬೇರೆ ಬೇರೆ ತಿಲಕಗಳು ಯಾವ ರೀತಿಯ ಪ್ರಭಾವ ಹೊಂದಿರುತ್ತವೆ ಎನ್ನುವುದನ್ನು ಅರಿತುಕೊಳ್ಳುವುದು ಅಗತ್ಯ. ಅಂದಹಾಗೆ, ತಿಲಕವನ್ನು ಹೆಬ್ಬೆರಳಿನಿಂದಲೇ ಹಚ್ಚಿಕೊಳ್ಳಬೇಕು.

•    ಗಂಧ-ಚಂದನದ (Chandana) ತಿಲಕ (Tilak)
ಚಂದನದ ತಿಲಕ ಪ್ರಶಾಂತತೆ ಮತ್ತು ಶುದ್ಧತೆಯ (Purity) ಸಂಕೇತವಾಗಿದೆ. ಗಂಧವನ್ನು (Sandalwood) ಪ್ರತಿದಿನ ತೇಯ್ದು ದೇವರಿಗೆ ಅರ್ಪಿಸುವ ಸಂಪ್ರದಾಯ ಹಲವೆಡೆ ಇದೆ. ಈ ಸಮಯದಲ್ಲಿ ಗಂಧವನ್ನು ಹಣೆಗೆ (Forehead) ಧರಿಸಲಾಗುತ್ತದೆ. ಚಂದನದ ತಿಲಕವನ್ನೂ ಧರಿಸುವುದು ಸಾಮಾನ್ಯ. ಇವೆರಡೂ ಮನಸ್ಸನ್ನು (Mind) ಶಾಂತಗೊಳಿಸುವ ಪರಿಮಳವನ್ನು ಹೊಂದಿದ್ದು, ಶುದ್ಧತೆಯನ್ನು ಬಿಂಬಿಸುತ್ತವೆ. ಪ್ರಾರ್ಥನೆ (Prayer), ಧ್ಯಾನ (Meditation) ಮತ್ತು ವಿಶಿಷ್ಟ ಸಮಯದಲ್ಲಿ ಇವುಗಳನ್ನು ಧರಿಸಲಾಗುತ್ತದೆ. ಗಂಧದ ತಿಲಕವು ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಒತ್ತಡವನ್ನು (Stress) ಕಡಿಮೆ ಮಾಡುತ್ತದೆ. ಆಧ್ಯಾತ್ಮಿಕ (Spiritual) ಅರಿವು ಹೆಚ್ಚಿಸಲು ಉತ್ತೇಜನ ನೀಡುತ್ತದೆ. 

•    ಕುಂಕುಮದ (Kunkum) ತಿಲಕ
ಕುಂಕುಮದ ತಿಲಕ ಇರಿಸಿಕೊಳ್ಳುವುದು ಅತಿ ಸಾಮಾನ್ಯ. ಇದು ದೈವಿಕ (Devine) ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಿಂದುಗಳಲ್ಲಿ (Hindu) ಕುಂಕುಮದ ತಿಲಕ ಧರಿಸುವ ಸಂಪ್ರದಾಯ ಎಲ್ಲ ಪ್ರಮುಖ ಸಂದರ್ಭಗಳಲ್ಲೂ ಇದೆ. ದೇವತೆಯ ಆರಾಧನೆಯ ಸಮಯದಲ್ಲಿ ಧರಿಸುವುದು ಅಗತ್ಯ. ಕೆಂಪು ತಿಲಕ ಶಕ್ತಿ, ಧೈರ್ಯದ (Courage) ಪ್ರತೀಕವಾಗಿದ್ದು, ಮಂಗಳಕರವಾಗಿದೆ. ಆಂತರಿಕ ಸೌಂದರ್ಯ, ಧೈರ್ಯವನ್ನು ಹೆಚ್ಚಿಸುತ್ತದೆ.

ಹೊಳೆಯುವ ಚರ್ಮ ಹೊಂದಬೇಕೆ? ಜ್ಯೋತಿಷ್ಯಶಾಸ್ತ್ರದ ಟಿಪ್ಸ್ ಫಾಲೋ ಮಾಡಿ

•    ಅರಿಶಿಣದ ತಿಲಕ
ಹಲವು ಸಮಯದಲ್ಲಿ ಅರಿಶಿಣದ ತಿಲಕವನ್ನು ಧರಿಸಲಾಗುತ್ತದೆ. ಅರಿಶಿಣವನ್ನು ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ವೈಜ್ಞಾನಿಕವಾಗಿ ಅರಿಶಿಣವು ಚರ್ಮವನ್ನು ಶುದ್ಧೀಕರಿಸುತ್ತದೆ. ಅರಿಶಿಣದ ತಿಲಕ ಧರಿಸುವುದರಿಂದ ಆತ್ಮವಿಶ್ವಾಸ (Confidence) ಹೆಚ್ಚುತ್ತದೆ. ದೇವತೆಗಳ ಆಶೀರ್ವಾದ ದೊರೆಯುತ್ತದೆ ಎಂದೂ ಹೇಳಲಾಗುತ್ತದೆ. 

•    ವಿಭೂತಿ (Vibhuti) ತಿಲಕ
ಹಲವು ಜನ ಹಣೆಯ ಮೇಲೆ ವಿಭೂತಿ ಅಥವಾ ಭಸ್ಮದಿಂದ ತಿಲಕ ಇಟ್ಟುಕೊಳ್ಳುತ್ತಾರೆ. ಪವಿತ್ರ ಭಸ್ಮದಿಂದ ಧರಿಸುವ ಈ ತಿಲಕ ತ್ಯಜಿಸುವಿಕೆ ಮತ್ತು ವಿರಕ್ತಿಯ ಸಂಕೇತವೂ ಹೌದು. ಆಧ್ಯಾತ್ಮಿಕ ಜಾಗೃತಿಗೆ (Awareness) ಕೊಡುಗೆ ನೀಡುತ್ತದೆ. ಜೀವನದ ನಶ್ವರತೆಯನ್ನು ತಿಳಿಸುತ್ತದೆ. ಪ್ರಜ್ಞೆ ಹೆಚ್ಚಿಸಲು ನೆರವಾಗುತ್ತದೆ. ವಿಭೂತಿ ತಿಲಕ ಧರಿಸುವುದುದ ಆತ್ಮಾವಲೋಕನಕ್ಕೆ ಅನುಕೂಲ.

•    ಗೋಪಿಚಂದನದ (Gopichandana) ತಿಲಕ
ಭಕ್ತಿ (Devotion) ಮತ್ತು ಪ್ರೀತಿಯ (Love) ಸಂಕೇತವಾಗಿರುವ ಗೋಪಿಚಂದನವನ್ನು ಹಳದಿ ಬಣ್ಣದ ಮಣ್ಣಿನಿಂದ ಮಾಡಲಾಗುತ್ತದೆ. ಇದು ಕೃಷ್ಣ ಮತ್ತು ಗೋಪಿಯರನ್ನು ಪ್ರತಿನಿಧಿಸುತ್ತದೆ. ಭಕ್ತ ಮತ್ತು ದೇವರ ನಡುವಿನ ದೈವಿಕ ಸಂಪರ್ಕವನ್ನು ಸೂಚಿಸುತ್ತದೆ. 

12 ವರ್ಷಗಳ ನಂತರ ಶುಕ್ರ ಗುರು ಸಂಯೋಗ 'ಈ' ರಾಶಿಗೆ ಸುವರ್ಣ ದಿನ ಆರಂಭ, ಯಶಸ್ಸು

•    ನವರತ್ನ (Navaratna) ತಿಲಕ
ಒಂಬತ್ತು ರೀತಿಯ ಹರಳುಗಳಿಂದ ಮಾಡಲ್ಪಡುವ ತಿಲಕಕ್ಕೆ ಕಾಸ್ಮಿಕ್ ಎನರ್ಜಿಯ (Cosmic Energy) ಪ್ರಭಾವವಿದೆ. ಆಕಾಶಕಾಯಗಳೊಂದಿಗೆ ಇದರ ಸಂಬಂಧವನ್ನು ಗುರುತಿಸಲಾಗುತ್ತದೆ. ಬ್ರಹ್ಮಾಂಡದ ಎನರ್ಜಿ ಮತ್ತು ನಮ್ಮ ದೇಹದೊಂದಿಗೆ ಸಮತೋಲನ, ಕ್ಷೇಮಕ್ಕೆ ಅನುಕೂಲವಾಗುತ್ತದೆ. ಇದನ್ನು ಆಗಾಗ ಧರಿಸುವುದರಿಂದ ಬ್ರಹ್ಮಾಂಡದೊಂದಿಗೆ ನಮ್ಮ ಸಂಪರ್ಕ ಹೆಚ್ಚಿಸಿಕೊಳ್ಳಲು ಸಾಧ್ಯ. 
 

Latest Videos
Follow Us:
Download App:
  • android
  • ios