Asianet Suvarna News Asianet Suvarna News

ಶನಿ ಮಾರ್ಗಿ; ಈ 3 ರಾಶಿಯವರಿಗೆ ದೂರಾಯ್ತು ಸಂಕಷ್ಟ, ಮುಟ್ಟಿದ್ದೆಲ್ಲಾ ಚಿನ್ನ..!

ಜ್ಯೋತಿಷ್ಯದಲ್ಲಿ ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಆದರೆ ಶನಿಯು ಯಾವಾಗಲೂ ಅಶುಭ ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಈಗ ಶನಿಯು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಇದರಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

shani margi 2023 shani dev will change  Taurus Cancer Virgo zodiac signs time till november 4 suh
Author
First Published Aug 29, 2023, 2:39 PM IST

ಜ್ಯೋತಿಷ್ಯದಲ್ಲಿ ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗಿದೆ. ಆದರೆ ಶನಿಯು ಯಾವಾಗಲೂ ಅಶುಭ ಫಲಿತಾಂಶಗಳನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಈಗ ಶನಿಯು ತನ್ನ ಪಥವನ್ನು ಬದಲಾಯಿಸಲಿದ್ದಾನೆ. ಇದರಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

ಶನಿ ಗ್ರಹವನ್ನು ಜ್ಯೋತಿಷ್ಯದಲ್ಲಿ ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ನ್ಯಾಯದ ಅಧಿಪತಿ ಎಂದು ಕರೆಯಲ್ಪಡುವ ಶನಿಯು ಈಗ ತನ್ನ ಪಥವನ್ನು ಬದಲಾಯಿಸಲು ತಯಾರಿ ನಡೆಯುತ್ತಿದ್ದಾನೆ. ಮತ್ತು ಈ ಬದಲಾವಣೆಯು ಕೆಲವು ಅದೃಷ್ಟದ ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯ ಸುದ್ದಿಯನ್ನು ತರಲಿದೆ. ಶನಿಯು ನವೆಂಬರ್ 4ರಂದು ನೇರವಾಗುತ್ತದೆ. ಇದರಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯಿರಿ.

ವೃಷಭ ರಾಶಿ (Taurus) 

ಶನಿಯ ನೇರ ಸಂಚಾರದಿಂದ ವೃಷಭ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುವುದು. ಏನೇ ಪ್ರಯತ್ನ ಮಾಡಿದರೂ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಅಂತಿಮವಾಗಿ ಫಲ ನೀಡುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ. ಶನಿಯ ಸಂಚಾರವು ಉದ್ಯೋಗಾವಕಾಶಗಳಿಗೆ ದಾರಿಯನ್ನು ತೆರೆಯುತ್ತದೆ. ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.

hanumanji : ಪಂಚಮುಖಿ ಹನುಮನ ಯಾವ ರೂಪ ಪೂಜಿಸಬೇಕು? ಇದರಿಂದ ಏನಾಗಲಿದೆ..?

 

ಕಟಕ ರಾಶಿ (Cancer) 

ಶನಿ ಮಾರ್ಗಿಯನ್ನು ಕರ್ಕಾಟಕ ರಾಶಿಯವರಿಗೆ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಸ್ನೇಹಿತರು ಮತ್ತು ಕುಟುಂಬದವರ ಅಚಲ ಬೆಂಬಲವಿರುತ್ತದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಯಶಸ್ಸು ದೊರೆಯಲಿದೆ ಮತ್ತು ಹೊಸ ಉದ್ಯೋಆವಕಾಶಗಳು ಸಿಗಬಹುದು. ಈ ರಾಶಿಯವರು ಶಾಂತಿ ಮತ್ತು ಸಂತೋಷವನ್ನು ಅನಿಭವಿಸುತ್ತಾರೆ ಮತ್ತು ಅವರ ಶ್ರಮವು ಯಶಸ್ವಿಯಾಗುತ್ತದೆ.

ಕನ್ಯಾ ರಾಶಿ (Virgo) 

ಶನಿ ಮಾರ್ಗಿ ಕನ್ಯಾ ರಾಶಿಯವರಿಗೆ ಉತ್ತಮ ದಿನಗಳ ಆರಂಭವನ್ನು ಸೂಚಿಸುತ್ತದೆ. ಕೆಲಸದ ಸ್ಥಳದಲ್ಲಿ ಹಿರಿಯರಿಂದ ಹೆಚ್ಚಿನ ಬೆಂಬಲ ಇರುತ್ತದೆ. ವೃತ್ತಿಪರ ಕ್ಷೇತ್ರದಲ್ಲಿ ಧನಾತ್ಮಕ ಬದಲಾವಣೆಗಳು ಗೋಚರಿಸುತ್ತವೆ. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಕನ್ಯಾ ರಾಶಿಯವರಿಗೆ ಆರ್ಥಿಕ ಸುಧಾರಣೆಯ ಸಾಧ್ಯತೆಗಳೂ ಇವೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮ್ಮ ಹುಡುಕಾಟ ಯಶಸ್ವಿಯಾಗುವ ಸಮಯ ಇದಾಗಿದೆ. ನಿಮ್ಮ ಕುಟುಂಬದಲ್ಲಿ ಶಾಂತಿಯನ್ನು ನಿರೀಕ್ಷಿಸಿ.

Follow Us:
Download App:
  • android
  • ios