ನಾಳೆ ನರಕ ಚತುರ್ದಶಿ ಶುಭ ಮುಹೂರ್ತ, ಪೂಜೆ ವಿಧಾನ
ನರಕ ಚತುರ್ದಶಿಯ ಪುರಾಣವು ಬೆಳಕಿನ ಶಕ್ತಿಯಿಂದ ಅಥವಾ ದೈವಿಕ ಒಳ್ಳೆಯತನದಿಂದ ಕತ್ತಲೆ ಅಥವಾ ಕೆಟ್ಟತನದ ನಿರ್ಮೂಲನೆಯನ್ನು ಸಂಕೇತಿಸುತ್ತದೆ. ಅದಕ್ಕಾಗಿಯೇ ಈ ದಿನದಂದು ಭಾರತದಾದ್ಯಂತ ದೀಪಗಳನ್ನು ಬೆಳಗಿಸಲಾಗುತ್ತದೆ.

ನರಕ ಚತುರ್ದಶಿಯ ಪುರಾಣವು ಬೆಳಕಿನ ಶಕ್ತಿಯಿಂದ ಅಥವಾ ದೈವಿಕ ಒಳ್ಳೆಯತನದಿಂದ ಕತ್ತಲೆ ಅಥವಾ ಕೆಟ್ಟತನದ ನಿರ್ಮೂಲನೆಯನ್ನು ಸಂಕೇತಿಸುತ್ತದೆ. ಅದಕ್ಕಾಗಿಯೇ ಈ ದಿನದಂದು ಭಾರತದಾದ್ಯಂತ ದೀಪಗಳನ್ನು ಬೆಳಗಿಸಲಾಗುತ್ತದೆ. ನರಕ ಚತುರ್ದಶಿ ಅಂದರೆ ನರಕ ಚೌಡವನ್ನು ಆಚರಿಸುವುದರ ಹಿಂದೆ ಪೌರಾಣಿಕ ಕಥೆಯಿದೆ. ದಂತಕಥೆಯ ಪ್ರಕಾರ, ನರಕಾಸುರ ಎಂಬ ರಾಕ್ಷಸನು ತನ್ನ ಶಕ್ತಿಗಳಿಂದ ದೇವತೆಗಳು ಮತ್ತು ಋಷಿಗಳನ್ನು ಬಹಳಷ್ಟು ಕಿರುಕುಳ ನೀಡುತ್ತಾನೆ. 16 ಸಾವಿರ ಮಹಿಳೆಯರನ್ನು ಬಂಧಿಯಾಗಿಸಿದ್ದನು. ನರಕಾಸುರನ ಭೀಭತ್ಸದಿಂದ ತೊಂದರೆಗೀಡಾದ ಎಲ್ಲಾ ದೇವತೆಗಳು ಮತ್ತು ಋಷಿಗಳು ಸಹಾಯ ಬೇಡಿ ಶ್ರೀಕೃಷ್ಣನ ಬಳಿಗೆ ಹೋದರು. ನರಕಾಸುರನಿಗೆ ಮಹಿಳೆಯ ಕೈಯಲ್ಲಿ ಬಿಟ್ಟು ಮತ್ತಾರದೇ ಕೈಲಿ ಸಾವಿಲ್ಲ ಎಂಬ ವರವಿರುತ್ತದೆ.
ಹೀಗಾಗಿ ಶ್ರೀಕೃಷ್ಣನು ತನ್ನ ಪತ್ನಿ ಸತ್ಯಭಾಮೆ ಮತ್ತು ಕಾಳಿಯ ಸಹಾಯದಿಂದ ಅವನನ್ನು ಕೊಂದು ಎಲ್ಲಾ ಬಂಧಿತ ಸ್ತ್ರೀಯರನ್ನು ಮುಕ್ತಗೊಳಿಸುತ್ತಾನೆ. ಈ ಸಂತೋಷದಲ್ಲಿ ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತಾರೆ. ನರಕಾಸುರನನ್ನು ಕೊಂದ ದಿನ ಕಾರ್ತಿಕ ಮಾಸದ ಅಮಾವಾಸ್ಯೆ. ಇದು ದಕ್ಷಿಣ ಭಾರತದಲ್ಲಿ ಆಶ್ವೀಜ ಮಾಸದಲ್ಲಿ ಬರುತ್ತದೆ.
ಸಾಮಾನ್ಯವಾಗಿ, ಈ ದಿನ ಜನರು ಸಾಮಾನ್ಯಕ್ಕಿಂತ ಮುಂಚೆಯೇ ಏಳುತ್ತಾರೆ. ವಿಶೇಷವಾದ ಗಿಡಮೂಲಿಕೆಗಳ ತೈಲಗಳಿಂದ ಎಲ್ಲರೂ ದೇಹಕ್ಕೆ ಮಸಾಜ್ ಮಾಡಿಕೊಳ್ಳುತ್ತಾರೆ ಮತ್ತು ಧಾರ್ಮಿಕ ಸ್ನಾನ ಮಾಡುತ್ತಾರೆ. ಇದನ್ನು ಅಭ್ಯಂಗ ಸ್ನಾನ ಎಂದೂ ಕರೆಯುತ್ತಾರೆ, ಇದನ್ನು ಚಂದ್ರನ ಉಪಸ್ಥಿತಿಯಲ್ಲಿ ಸೂರ್ಯೋದಯಕ್ಕೆ ಮೊದಲು ಮಾಡಬೇಕು. ಈ ಸ್ನಾನಕ್ಕೆ ಬಳಸುವ ಎಳ್ಳಿನ ಎಣ್ಣೆಯು ವ್ಯಕ್ತಿಯನ್ನು ಬಡತನ ಮತ್ತು ದುರದೃಷ್ಟದಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಈ ದಿನ ಸಂಜೆ ಶ್ರೀಕೃಷ್ಣನ ಪೂಜೆ ಮಾಡಿ ಮನೆಯ ಮುಖ್ಯ ದ್ವಾರದಲ್ಲಿ ಎಣ್ಣೆಯ ದೀಪವನ್ನು ಹಚ್ಚಿ. ಈ ದಿನ ದಾನ ಮಾಡುವುದು ಕೂಡ ಮಂಗಳಕರ. ಶ್ರೀಕೃಷ್ಣನನ್ನು ಆರಾಧಿಸಿ. ಹಾಗೆಯೇ ಯಮರಾಜನ ಹೆಸರಿನಲ್ಲಿ ದೀಪವನ್ನು ಹಚ್ಚಿ. ಈ ದಿನ ಯಮರಾಜನನ್ನು ಪೂಜಿಸುವುದರಿಂದ ಅಕಾಲಿಕ ಮರಣದ ಭಯ ದೂರವಾಗುತ್ತದೆ.
ದೀಪಾವಳಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಚತುರ್ದಶಿ ತಿಥಿಯು ನವೆಂಬರ್ 11, 2023 ರಂದು ಮಧ್ಯಾಹ್ನ 01:57 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 12, 2023 ರಂದು ಮಧ್ಯಾಹ್ನ 02:44 ರವರೆಗೆ ಇರುತ್ತದೆ ಎಂದು ಪಂಚಾಂಗ ಹೇಳುತ್ತದೆ.
ನರಕ ಚತುರ್ದಶಿ 2023 ಮುಹೂರ್ತ:
ಅಭ್ಯಂಗ ಸ್ನಾನ ಮುಹೂರ್ತ - 2023 ರ ನವೆಂಬರ್ 12 ರಂದು ಮುಂಜಾನೆ 05.28 ರಿಂದ 06:41 ರವರೆಗೆ
ದೀಪದಾನ ಸಮಯ - 2023 ರ ನವೆಂಬರ್ 12 ರಂದು ಸಂಜೆ 05.29 ರಿಂದ ರಾತ್ರಿ 08.07 ರವರೆಗೆ