ಚಂದ್ರನು ಜಾತಕದವರಿಗೆ ಶುಭ ಮತ್ತು ಅಶುಭವನ್ನು ಕೊಡುತ್ತದೆ. ಕೆಲವು ಅತೀ ಕೆಟ್ಟ ಮತ್ತು ಕೆಲವು ಶುಭ ಫಲವನ್ನು ಕೊಡುತ್ತಾನೆ ಈ ಚಂದ್ರ, ಮದುವೆಗೆ ಚಂದ್ರನ ಸ್ಥಾನ ಮುಖ್ಯವಾಗಿದೆ. ಮಗು ಹುಟ್ಟಿದ ತಕ್ಷಣ ಪಂಚಮಾರಿಷ್ಠ, ಬಾಲಾರಿಷ್ಠವನ್ನು ನೋಡುವುದು ಸಾಮಾನ್ಯ. ಚಂದ್ರನಿರುವ ಸ್ಥಾನದಿಂದ ಪಂಚಮ ಸ್ಥಾನದಲ್ಲಿರುವ ಗ್ರಹದಂತೆ ಪಂಚಮಾರಿಷ್ಠ. ಚಂದ್ರನ ಜೊತೆ ರಾಹು ಕುಜ ಮತ್ತು ಶನಿ ಸೇರಿದರೆ ಅಥವಾ ವೀಕ್ಷಿಸಿದರೆ ಬಾಲಾರಿಷ್ಠ. ಶುಭ ಗ್ರಹಗಳಾದ ಗುರು ಲಗ್ನ ಮತ್ತು ಪಂಚಮವನ್ನು ವೀಕ್ಷಿಸಿದರೆ ಪಂಚಮಾರಿಷ್ಠ, ಬಾಲಾರಿಷ್ಠ ಇರುವುದಿಲ್ಲ.

ಸಾಮಾನ್ಯವಾಗಿ ಚಂದ್ರ ಮನೋಕಾರಕ. ಚಂದ್ರ ಯಾವ ಸ್ಥಾನದಲ್ಲಿರುತ್ತಾನೆ ಅದರಂತೆ ಮನಸ್ಸಿಗೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಮೊದಲು ಚಂದ್ರನನ್ನು ನೋಡಿ ಚಂದ್ರನ ಬಲ ನೋಡಬೇಕು. ಚಂದ್ರ ಕಳಂಕಿತನೇ ಎಂದು ನೋಡಬೇಕು. ಕ್ಷೀಣ ಚಂದ್ರನ ಮೇಲೆ ಶನಿ ದೃಷ್ಟಿ ಇದ್ದರೆ ಅಥವಾ ಒಟ್ಟಿಗೆ ಇದ್ದರೆ ಇವರ ಮೆದುಳಿಗೆ ಪರಿಣಾಮ ಬೀರುತ್ತದೆ. ಚಂದ್ರ ಆರರಲ್ಲಿ ಇದ್ದರೆ ಅದರ ಮೇಲೆ ಶನಿ ದೃಷ್ಟಿ ಇದ್ದರೆ ಇವರಿಗೆ ಮತಿ ಭ್ರಮಣೆ ಇರುತ್ತದೆ. ಆರರ ಚಂದ್ರನ ಮೇಲೆ ಕುಜನ ದೃಷ್ಟಿ ಇದ್ದರೆ ಜಾಸ್ತಿ ಮತಿ ಭ್ರಮಣೆ ಆಗುತ್ತದೆ. ಮಕರ ಅಥವಾ ಕುಂಭದ ಚಂದ್ರನ ಮೇಲೆ ಪಾಪ ಗ್ರಹಗಳ ದೃಷ್ಟಿ ಇದ್ದಲ್ಲಿ ಬಹಳ ತೊಂದರೆ, ಆತ್ಮಹತ್ಯೆಯನ್ನು ಮಾಡುತ್ತಾರೆ.

ಚಂದ್ರನ ಮೇಲೆ ಪಾಪ ಗ್ರಹಗಳ ದೃಷ್ಟಿ:

ಚಂದ್ರನಿಂದ ಹಲವು ಕಾಯಿಲೆಗಳು ಬರುತ್ತದೆ. ವೃಶ್ಚಿಕ ನವಾಂಶದಲ್ಲಿ ಚಂದ್ರನಿಗೆ ಪಾಪಗ್ರಹಗಳ ದೃಷ್ಟಿ ಇದ್ದರೆ ಇವರಿಗೆ ಗುಪ್ತರೋಗ ಬರುತ್ತದೆ. ಕರ್ಕಾಟಕ ಮಕರ ಮೀನ ನವಾಂಶದಲ್ಲಿ ಚಂದ್ರನನ್ನು ಶನಿ ಕುಜ ವೀಕ್ಷಿಸಿದರೆ ಚರ್ಮರೋಗ, ಚಂದ್ರ ಆರರಲ್ಲಿ ಇದ್ದರೆ ಅಜೀರ್ಣದ ತೊಂದರೆ ಇದೆ. ಶುಕ್ರನಿಂದ ಏಳರಲ್ಲಿ ಚಂದ್ರನಿದ್ದರೆ ಕೆಮ್ಮು ಇರುತ್ತದೆ. ರವಿ ಚಂದ್ರರು ತಮ್ಮ ಸ್ವಕ್ಷೇತ್ರದಲ್ಲಿದ್ದರೂ ಅಥವಾ ಪರಸ್ಪರ ಸ್ಥಾನ ಬದಲಾದರೂ ಕ್ಷಯರೋಗ ಬರುತ್ತದೆ.

ನಿಮ್ಮ ಅದೃಷ್ಟದ ಹರಳು, ಸಂಖ್ಯೆ ಯಾವುದು?

ಪಂಚಮದಲ್ಲಿ ರವಿ, ಶನಿ, ಸಪ್ತಮದಲ್ಲಿ ದುರ್ಬಲ ಚಂದ್ರ, ಲಗ್ನದಲ್ಲಿ ರಾಹು, ದ್ವಾದಶ ಗುರು ಪ್ರೇತ ಶಾಪ ಇರುತ್ತದೆ. ಕುಜ ಅಥವಾ ಶನಿಯ ನವಾಂಶವನ್ನು ಚಂದ್ರ ತೆಗೆದುಕೊಂಡಿದ್ದು ಶನಿಯು ನೋಡಿದರೆ ಇದರಿಂದ ಇವರು ಸನ್ಯಾಸಿಯಾಗುತ್ತಾರೆ. ಕ್ಷೀಣ ಚಂದ್ರ ಪಂಚಮದಲ್ಲಿದ್ದು ಲಗ್ನ ಸಪ್ತಮ ದ್ವಾದಶದಲ್ಲಿ ಪಾಪ ಗ್ರಹಗಳು ಇದ್ದರೆ ಪುತ್ರ ಕಳತ್ರಯೋಗ ಬರುತ್ತದೆ. ಹೆಂಡತಿ ಮಕ್ಕಳ ಅಗಲಿಕೆ ಬರುತ್ತದೆ. ಶನಿಯೊಂದಿಗೆ ಚಂದ್ರ ಸಪ್ತಮದಲ್ಲಿದ್ದರೆ ಸಂಸಾರದಲ್ಲಿ ದುಃಖ ಮತ್ತು ಹೆಂಡತಿ ಮರಣವಾಗುತ್ತದೆ.

ಮಂಗಳನೊಂದಿಗಿದ್ದರೆ ಚಂದ್ರ:
ಚಂದ್ರನು ಮಂಗಳನೊಂದಿಗೆ ಕೂಡಿದರೆ ಶನಿ ಮಂಗಳ ಯೋಗ. ಇದು ಅತ್ಯಂತ ಹಣ ಬರುವ ಯೋಗ ಎಂದು ಹೇಳುತ್ತಾರೆ. ಈ ಯೋಗ ಅದು ಇರುವ ಮನೆಯ ಬಲವನ್ನು ಜಾಸ್ತಿಮಾಡುತ್ತದೆ. ಸಂಪತ್ತು ತಂದರೂ ಮನಶಾಂತಿ ಇರುವುದಿಲ್ಲ. ಲಗ್ನ ಕರ್ಕಾಟಕವಾಗಿದ್ದು ಚಂದ್ರ ಲಗ್ನದಲ್ಲಿದ್ದು ಗುರು ಕುಜರು ನೋಡಿದರೆ ಜಾತಕನು ಬಹಳ ಹಣವಂತನಾಗುತ್ತಾನೆ. ಚಂದ್ರನ ಜೊತೆ ಅಥವಾ ಅವನಿಂದ 4-7/10ರಲ್ಲಿ ಗುರು ಇದ್ದರೆ ಪ್ರಖ್ಯಾತವಾದ ಗುರು ಚಂದ್ರ ಯೋಗವಾಗುತ್ತದೆ. ಇವರು ನಿಹರ್ಗಳವಾಗಿ ಮಾತನಾಡುತ್ತಾರೆ. ಶತ್ರು ಜಯ, ಪ್ರಸಿದ್ದ- ದೀರ್ಘಾಯಸ್ಸು ಇರುತ್ತದೆ. ಚಂದ್ರನ ದ್ವಿತೀಯದಲ್ಲಿ ಗ್ರಹ ಇದ್ದರೆ ಶುಭಗ್ರಹ ಇದ್ದರೆ ಸುನಾ ಫಲಯೋಗ ಇವರು ಪ್ರಸಿದ್ಧಿಯಾಗುತ್ತಾರೆ. ಸ್ವಂತ ಸಂಪಾದನೆ ಮಾಡುತ್ತಾರೆ. ಚಂದ್ರನ ದ್ವಾದಶದಲ್ಲಿ ಗ್ರಹಗಳು ಇದ್ದಲ್ಲಿ ಅನಾಫ್ಯ ಯೋಗ-ಸುಪ್ರಸಿದ್ಧಿ, ಜನಪ್ರಿಯರಾಗುತ್ತಾರೆ. ಚಂದ್ರನಿಂದ ದ್ವಿತೀಯ ಹಾಗೂ ದ್ವಾದಶದಲ್ಲಿ ಗ್ರಹಗಳು ಇದ್ದರೆ ಧರಧುರ ಯೋಗವಾಗುತ್ತದೆ. ಇವನು ಜೀವನ ಪೂರ್ತಿ ಆಗರ್ಭ ಶ್ರೀಮಂತರಾಗುತ್ತಾರೆ.

ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸು

ಗುರುವು 5-6 ಅಥವಾ ಹನ್ನೊಂದರಲ್ಲಿ ಯಾವುದಾದರೂ ಇದರ ಅಧಿಪತಿ, ಚಂದ್ರನಿಗೆ ಕೇಂದ್ರವಾಗಿದ್ದರೆ ಇವರು ಅಖಂಡ ಸಾಮ್ರಾಜ್ಯ ಯೋಗ ರಾಜಕೀಯದಲ್ಲಿ ಪ್ರಭಾವಿ ಸ್ಥಾನ ಸಿಗುತ್ತದೆ. ರವಿ ಚಂದ್ರ ಕುಜರು ಪರಸ್ಪರ ಪಂಚಮದಲ್ಲಿ ಇದ್ದರೆ ಇವರಿಗೆ ಅಪಾರ ಬುದ್ಧಿವಂತಿಕೆ ಸುಸಂಪತ್ತು ದೀರ್ಘಾಯುಷ್ಯ ಇರುತ್ತದೆ. ಪುರುಷ ಜಾತಕದಲ್ಲಿ ಜನ್ಮ ಹಗಲಿನಲ್ಲಿ ಆಗಿದ್ದು ರವಿ ಚಂದ್ರ ಲಗ್ನವು ಬೆಸ ಸ್ಥಾನದಲ್ಲಿದ್ದರೆ ಮತ್ತು ಸ್ತ್ರೀ ಜಾತಕದಲ್ಲಿ ಜನ್ಮ ರಾತ್ರಿಯಲ್ಲಿ ಆಗಿದ್ದು ರವಿ ಚಂದ್ರ ಲಗ್ನವು ಸಮ ಸ್ಥಾನದಲ್ಲಿ ಇದ್ದರೆ ಮಹಾ ಭಾಗ್ಯ ಯೋಗ. ಜಾತಕರಿಗೆ ಅದೃಷ್ಟ, ದೀರ್ಘಾಯುಗಳಾದ ಮಕ್ಕಳು ಇರುತ್ತಾರೆ.