Asianet Suvarna News Asianet Suvarna News

ಗೋಕುಲಾಷ್ಟಮಿ 18ಕ್ಕೋ 19ಕ್ಕೋ? ಶುಭ ಮುಹೂರ್ತ, ಪೂಜಾ ವಿಧಿ ವಿವರಗಳಿಲ್ಲಿವೆ..

ಕೃಷ್ಣ ಜನ್ಮಾಷ್ಟಮಿಯು 18ಕ್ಕೆ ಎಂದು ಕೆಲವರೆಂದರೆ 19 ಎನ್ನುತ್ತಿದ್ದಾರೆ ಮತ್ತೆ ಕೆಲವರು. ನಿಜವಾಗಿಯೂ ಕೃಷ್ಣ ಜನ್ಮಾಷ್ಟಮಿಯ ದಿನಾಂಕವೇನು? ಜ್ಯೋತಿಷ್ಯ ಏನನ್ನುತ್ತೆ? ಆಚರಣೆಯ ವಿಧಾನವೇನು?

Date shubh muhurat puja vidhi and Krishna Janmashtami importance skr
Author
Bangalore, First Published Aug 17, 2022, 12:13 PM IST

ಜನ್ಮಾಷ್ಟಮಿಯ ಹಬ್ಬವನ್ನು ದೇಶದೆಲ್ಲೆಡೆ, ಅದರಲ್ಲೂ ವಿಶೇಷವಾಗಿ ವೃಂದಾವನ, ಬರ್ಸಾನಾ, ಮಥುರಾ ಮತ್ತು ದ್ವಾರಕಾದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಶ್ರೀಕೃಷ್ಣನ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಮತ್ತು ಭಕ್ತರು ಕೃಷ್ಣನ ಜನ್ಮದಿನವನ್ನು ಆಚರಿಸಲು ಮಧ್ಯರಾತ್ರಿಯವರೆಗೆ ಪ್ರಾರ್ಥಿಸುತ್ತಾರೆ.  ಈ ವರ್ಷ, ಜನ್ಮಾಷ್ಟಮಿಯ ದಿನಾಂಕದ ಬಗ್ಗೆ ಗೊಂದಲಗಳೆದ್ದಿವೆ. ಕೆಲವರು ಆಗಸ್ಟ್ 18ರಂದು ಜನ್ಮಾಷ್ಟಮಿ ಎಂದರೆ ಮತ್ತೆ ಕೆಲವರು 19ಕ್ಕೆ ಎನ್ನುತ್ತಿದ್ದಾರೆ. ಈ ಬಗ್ಗೆ ಜ್ಯೋತಿಷ್ಯ ಏನನ್ನುತ್ತದೆ, ಜನ್ಮಾಷ್ಟಮಿಯ ಶುಭ ಮುಹೂರ್ತವೇನು, ಪೂಜಾ ವಿಧಾನವೇನು, ಗೋಕುಲಾಷ್ಟಮಿಯ ಮಹತ್ವವೇನು ನೋಡೋಣ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭಗವಾನ್ ಕೃಷ್ಣ ಜನಿಸಿದನು. ಆ ಸಮಯದಲ್ಲಿ ರೋಹಿಣಿ ನಕ್ಷತ್ರವಿತ್ತು. ಸೂರ್ಯನು ಸಿಂಹ ರಾಶಿಯಲ್ಲಿ ಮತ್ತು ಚಂದ್ರನು ವೃಷಭ ರಾಶಿಯಲ್ಲಿದ್ದನು. ಈ ರಾಶಿ ನಕ್ಷತ್ರಗಳಿದ್ದ ಸಂದರ್ಭವೇ ನಿಜವಾದ ಜನ್ಮಾಷ್ಟಮಿ ಆಚರಿಸಬೇಕು. ಆ ಲೆಕ್ಕದಲ್ಲಿ ನೋಡಿದಾಗ ಆಗಸ್ಟ್ 18 ಮತ್ತು 19 ಎರಡೂ ದಿನಗಳ ಅಷ್ಟಮಿ ತಿಥಿ ಇರಲಿದೆ. 

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಮಯ ಮತ್ತು ಪೂಜಾ ವಿಧಾನವನ್ನು ತಿಳಿಯಿರಿ.

ಜನ್ಮಾಷ್ಟಮಿ 2022: ಶುಭ ಮುಹೂರ್ತ
ಜನ್ಮಾಷ್ಟಮಿ ದಿನಾಂಕ - 18 ಆಗಸ್ಟ್ 2022

ಅಷ್ಟಮಿ ತಿಥಿ ಆರಂಭ: ಆಗಸ್ಟ್ 18, ಗುರುವಾರ ರಾತ್ರಿ 9:21ಕ್ಕೆ
ಅಷ್ಟಮಿ ತಿಥಿ ಅಂತ್ಯ: ಆಗಸ್ಟ್ 19 ರಾತ್ರಿ 10:59ಕ್ಕೆ

ಹಾಗಾಗಿ ಜನರು ಜನ್ಮಾಷ್ಟಮಿ ಉಪವಾಸವನ್ನು ಅಷ್ಟಮಿ ತಿಥಿಯಂದೇ ಗುರುವಾರ ರಾತ್ರಿಯಿಂದ ಆಚರಿಸಬೇಕು.

ಈ ಅವಧಿಯು ಜನ್ಮಾಷ್ಟಮಿ ಪೂಜೆಗೆ ವಿಶೇಷವಾಗಿದೆ-
ಪುರಾಣಗಳ ಪ್ರಕಾರ, ಭಗವಾನ್ ಕೃಷ್ಣನು ಭಾದ್ರಪದ ಮಾಸದ ಅಷ್ಟಮಿ ತಿಥಿಯ ಮಧ್ಯರಾತ್ರಿಯಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಆದ್ದರಿಂದ, ಜನ್ಮಾಷ್ಟಮಿಯನ್ನು ಮಧ್ಯರಾತ್ರಿಯಲ್ಲಿ ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ವರ್ಷ, ಆಗಸ್ಟ್ 18ರಂದು, ನಿಶಿತ ಕಾಲವು 12:03ರಿಂದ 12:47ರವರೆಗೆ ಇರುತ್ತದೆ. ಒಟ್ಟು ಅವಧಿ 44 ನಿಮಿಷಗಳು ಶ್ರೀಕೃಷ್ಣ ಪೂಜೆಗೆ ಉತ್ತಮವಾಗಿದೆ. 

Janmashtami 2022: ಸಂಪತ್ತು, ಸಮೃದ್ಧಿಗಾಗಿ ಈ ದಿನ ಮನೆಗೆ ತರಲೇಬೇಕಾದ ವಸ್ತುಗಳಿವು..

ಜನ್ಮಾಷ್ಟಮಿ ಪೂಜಾ ವಿಧಿ
ಜನ್ಮಾಷ್ಟಮಿಯ ದಿನ ಸ್ನಾನ ಮಾಡಿ ಉಪವಾಸ ಆಚರಿಸಿ.
ಮುಹೂರ್ತ ಕಾಲದಲ್ಲಿ ಶ್ರೀಕೃಷ್ಣನ ಮೂರ್ತಿಗೆ ಗಂಗಾಜಲ ಮತ್ತು ಹಾಲಿನಿಂದ ಅಭಿಷೇಕ ಮಾಡಿ.
ನಂತರ ಅವನಿಗೆ ಹೊಸ ಬಟ್ಟೆಗಳನ್ನು ಹಾಕಿ ನವಿಲುಗರಿಯ ಕಿರೀಟ, ಕೊಳಲು, ವೈಜಯಂತಿ ಮಾಲೆ, ತುಳಸಿ ದಳ, ಕುಂಡಲ ಇತ್ಯಾದಿಗಳಿಂದ ಅಲಂಕರಿಸಿ.
ಶ್ರೀಕೃಷ್ಣನ ಉಯ್ಯಾಲೆಯನ್ನು ಹೂವಿನ ಮಾಲೆಗಳಿಂದ ಅಲಂಕರಿಸಿ.
ಅದರ ನಂತರ, ಪೂಜಿಸುವಾಗ ಶ್ರೀಕೃಷ್ಣನಿಗೆ ಹಣ್ಣುಗಳು, ಹೂವುಗಳು, ಬೆಣ್ಣೆ ಮತ್ತು ಸಕ್ಕರೆ (ಮಖನ್ ಮಿಶ್ರಿ), ಸಿಹಿತಿಂಡಿಗಳು, ಬೀಜಗಳು ಇತ್ಯಾದಿಗಳನ್ನು ಅರ್ಪಿಸಿ ಮತ್ತು ಧೂಪ ದೀಪಗಳನ್ನು ಬೆಳಗಿಸಿ.
ಇದರ ನಂತರ, ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಿ, ಅವನನ್ನು ಉಯ್ಯಾಲೆಯಲ್ಲಿ ಬೀಸಿ ಆರತಿ ಮಾಡಿ.
ಪೂಜೆಯ ನಂತರ ಎಲ್ಲರಿಗೂ ಪ್ರಸಾದ ವಿತರಿಸಿ.

Krishna Janmashtami: ರಾಶಿಗನುಗುಣವಾಗಿ ಮಾಡಿ ದಾನ

ಜನ್ಮಾಷ್ಟಮಿಯ ಮಹತ್ವ
ಹಿಂದೂ ಧರ್ಮದಲ್ಲಿ ಜನ್ಮಾಷ್ಟಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಂತಕಥೆಗಳ ಪ್ರಕಾರ, ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಅತ್ಯಂತ ಶಕ್ತಿಶಾಲಿ ಮಾನವ ಅವತಾರಗಳಲ್ಲಿ ಒಂದಾಗಿದೆ. ಶ್ರೀ ಕೃಷ್ಣನು ಮಾನವ ರೂಪದಲ್ಲಿ ಭೂಮಿಯಲ್ಲಿ ಜನಿಸಿದಾಗಿನಿಂದ, ಜನರು ಅವನನ್ನು ದೇವರ ಮಗನೆಂದು ಪೂಜಿಸಲು ಪ್ರಾರಂಭಿಸಿದರು. ಆತನ ಲೀಲೆಗಳೇ ಅವನನ್ನು ಮಾನವರಿಂದ ಪ್ರತ್ಯೇಕವಾಗಿಸಿವೆ. 

ಅಂದ ಹಾಗೆ ಕೃಷ್ಣ ಹುಟ್ಟಿ ಬೆಳೆದ ಮಥುರಾ ಮತ್ತು ವೃಂದಾವನಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 19ರಂದು ಆಚರಿಸಲಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios