Asianet Suvarna News Asianet Suvarna News

Eid-ul-Adha 2022: ಬಕ್ರೀದ್ ಯಾವಾಗ? ಏಕೆ ಆಚರಿಸಲಾಗುತ್ತದೆ?

ಈ ವರ್ಷ ಜುಲ್ ಹಿಜ್ಜಾ/ಧು ಅಲ್-ಹಿಜ್ಜಾ ತಿಂಗಳಲ್ಲಿ ನಡೆಯುವ ‘ತ್ಯಾಗದ ಹಬ್ಬ’ ಅಥವಾ ಬಕ್ರೀದ್‌ನ ದಿನಾಂಕ, ಇತಿಹಾಸ, ಮಹತ್ವ ಮತ್ತು ಆಚರಣೆಯ ಕುರಿತು ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ..

Date history significance celebration of Bakrid festival skr
Author
Bangalore, First Published Jul 9, 2022, 12:16 PM IST | Last Updated Jul 9, 2022, 12:17 PM IST

ಈದ್(Eid) ಅಥವಾ ರಂಜಾನ್ ಈದ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈದ್ ಉಲ್-ಫಿತರ್(Eid al-Fitr), ಪವಿತ್ರ ರಂಜಾನ್(Ramadan) ತಿಂಗಳ ಅಂತ್ಯವನ್ನು ಸೂಚಿಸುತ್ತದೆ. ರಂಜಾನಲ್ಲಿ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ ಮತ್ತು ಪವಿತ್ರ ಕುರಾನ್ ಅನ್ನು ಪಠಿಸುತ್ತಾರೆ. ಈದ್ ಉಲ್-ಅಧಾ (ಹೀಗೂ ಕರೆಯಲಾಗುತ್ತದೆ) ಬಕ್ರಾ ಈದ್, ಬಕ್ರೀದ್, ಈದ್ ಅಲ್-ಅಧಾ, ಈದ್ ಕುರ್ಬಾನ್ ಅಥವಾ ಕುರ್ಬಾನ್ ಪ್ರಪಂಚದಾದ್ಯಂತ ಮುಸ್ಲಿಮರು(Muslims) ಆಚರಿಸುವ ಎರಡನೇ ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದೆ. ಇದನ್ನು ಅಲ್ಲಾಗೆ ಪ್ರವಾದಿ ಇಬ್ರಾಹಿಂ(Prophet Ibrahim) ಅವರ ಸಂಪೂರ್ಣ ಸಮರ್ಪಣೆಯ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ ಮತ್ತು ಇಸ್ಲಾಮಿಕ್ ಅಥವಾ ಚಂದ್ರನ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಜುಲ್ ಹಿಜ್ಜಾ / ಧು ಅಲ್-ಹಿಜ್ಜಾ ತಿಂಗಳಲ್ಲಿ ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ.

ದಿನಾಂಕ
ಜೂನ್ 30, 2022ರಂದು ಅರ್ಧಚಂದ್ರಾಕಾರದ ಧುಲ್ ಹಿಜ್ಜಾ ಚಂದ್ರನ ದರ್ಶನವನ್ನು ದೃಢಪಡಿಸಿದ ನಂತರ, ಸೌದಿ ಅರೇಬಿಯಾವು ಜುಲೈ 9, 2022ರ ಶನಿವಾರದಂದು ಈದ್ ಅಲ್ ಅಧಾ ಆಚರಣೆಯನ್ನು ಘೋಷಿಸಿದೆ. ಆಸ್ಟ್ರೇಲಿಯನ್ ನ್ಯಾಷನಲ್ ಇಮಾಮ್ಸ್ ಕೌನ್ಸಿಲ್ (ANIC) ಮತ್ತು ಮುಸ್ಲಿಂ ಅಸೋಸಿಯೇಷನ್ ​​ಆಫ್ ಕೆನಡಾ (MAC) ಈದ್ ಅಲ್ ಅಧಾವನ್ನು ಶನಿವಾರ ಜುಲೈ 9,2022ರಂದು ಆಚರಿಸಲಾಗುವುದು ಎಂದು ಘೋಷಿಸಿದೆ.
ಭಾರತವು ಸಾಮಾನ್ಯವಾಗಿ ಸೌದಿ ಅರೇಬಿಯಾದ ಒಂದು ದಿನದ ನಂತರ ಈದ್-ಉಲ್-ಫಿತ್ರಾ ಮತ್ತು ಈದ್-ಎರಡೂ ಹಬ್ಬಗಳನ್ನು ಆಚರಿಸುತ್ತದೆ.  

ಇದನ್ನೂ ಓದಿ: Chaturmas 2022: ವಿಷ್ಣು ಈ ನಾಲ್ಕು ತಿಂಗಳು ಯೋಗನಿದ್ರೆಗೆ ಹೋಗುವುದೇಕೆ?

ಇತಿಹಾಸ(History)
ಅಬ್ರಹಾಂ ಅಥವಾ ಪ್ರವಾದಿ ಇಬ್ರಾಹಿಂ(Prophet Ibrahim) ಅವರಿಗೆ ದೇವರ ಇಚ್ಛೆಗಳನ್ನು ಪೂರೈಸಲು ತನ್ನ ಪ್ರೀತಿಯ ಮಗ ಇಸ್ಮಾಯಿಲ್ ಅನ್ನು ವಧಿಸುವ ಕನಸು ಬೀಳತೊಡಗಿತು. ಇಬ್ರಾಹಿಂ ತಮ್ಮ ಮಗನಿಗೆ ಈ ಕನಸಿನ ಬಗ್ಗೆ ಹೇಳುತ್ತಾ, ದೇವರು ತಾನು ಹೇಗೆ ತ್ಯಾಗವನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಎಂದು ಅವನಿಗೆ ವಿವರಿಸಿದರು. ಇದನ್ನು ಕೇಳಿದ ಇಸ್ಮಾಯಿಲ್,  ಅಲ್ಲಾಹನ ಇಚ್ಛೆಗೆ ಅನುಗುಣವಾಗಿ ನಡೆಯಿರಿ ಎಂದು ತನ್ನ ತಂದೆಗೆ ಹೇಳಿದನು. 

ಶೈತಾನ್ ಇಬ್ರಾಹಿಂನನ್ನು ಪ್ರಚೋದಿಸಿ ತ್ಯಾಗ ಮಾಡುವುದನ್ನು ತಡೆಯಲು ಪ್ರಯತ್ನಿಸಿದನು. ಆದರೆ, ವಿಫಲನಾದನು. ಅಲ್ಲಾಹನು ಇಬ್ರಾಹಿಂನ ಸಂಪೂರ್ಣ ಭಕ್ತಿಯನ್ನು ನೋಡಿದನು ಮತ್ತು ಜಿಬ್ರೀಲ್ (ಏಂಜೆಲ್ ಗೇಬ್ರಿಯಲ್), ಪ್ರಧಾನ ದೇವದೂತ, ಮತ್ತು ವಧೆಗಾಗಿ ಕುರಿಯನ್ನು ಕಳುಹಿಸಿದನು.

ಜಿಬ್ರೀಲ್ ಇಬ್ರಾಹಿಂಗೆ ಅವನ ಭಕ್ತಿಗೆ ದೇವರು ಮೆಚ್ಚಿದ್ದು, ಮಗನ ಬದಲಿಗೆ ಕುರಿಗಳನ್ನು ವಧಿಸಲು ಕಳುಹಿಸಿರುವುದಾಗಿ ತಿಳಿಸಿದನು. ಅಂದಿನಿಂದ, ಜಾನುವಾರು ಬಲಿಯು ಈದ್-ಉಲ್-ಅಧಾ ಆಚರಣೆಯ ಪ್ರಮುಖ ಭಾಗವಾಗಿದೆ. ಇದು ಪ್ರವಾದಿ ಇಬ್ರಾಹಿಂ ಮತ್ತು ಇಸ್ಮಾಯಿಲ್ ಅವರಿಗೆ ಅಲ್ಲಾಹನ ಮೇಲಿನ ಪ್ರೀತಿಯನ್ನು ಸ್ಮರಿಸುತ್ತದೆ. 

ಮಹತ್ವ(Significance)
ತ್ಯಾಗದ ಕ್ರಿಯೆಗಿಂತ ಹೆಚ್ಚಾಗಿ, ಈದ್ ಅಲ್-ಅಧಾ ಎಂಬುದು ಇಬ್ರಾಹಿಂ ಮತ್ತು ಇಸ್ಮಾಯಿಲ್ ಅವರ ಅಲ್ಲಾ ಮೇಲಿನ ಪ್ರೀತಿಯ ಆಚರಣೆಯಾಗಿದೆ. ಅವರು ಅಲ್ಲಾಗಾಗಿ ಅಂತಿಮ ತ್ಯಾಗವನ್ನು ಮಾಡಲು ಸಿದ್ಧರಿದ್ದಾರೆ ಎಂದು ತೋರಿಸುವ ಸೂಚಕವಾಗಿದೆ. ಜಿಬ್ರೀಲ್ ಮೂಲಕ ಅಲ್ಲಾಹನು ಕಳುಹಿಸಿದ ಕುರಿಗಳ ಸ್ಮರಣಾರ್ಥವಾಗಿ, ಜಗತ್ತಿನಾದ್ಯಂತ ಮುಸ್ಲಿಮರು ತ್ಯಾಗದ ಉತ್ಸಾಹದಲ್ಲಿ ಒಂದು ಮೇಕೆ ಅಥವಾ ಕುರಿಯನ್ನು ಈ ದಿನ ಬಲಿ ನೀಡುತ್ತಾರೆ.

ಇದನ್ನೂ ಓದಿ: ಇಂಥ ನಾಣ್ಯ ಮನೆಯಲ್ಲಿಟ್ಟರೆ ಹಣದ ಸಮಸ್ಯೆ ಇರೋದಿಲ್ಲ!

ತ್ಯಾಗದಿಂದ ತಯಾರಿಸಿದ ಭೋಜನವನ್ನು ಮೂರು ಸಮಾನ ಭಾಗಗಳಲ್ಲಿ ವಿತರಿಸುವುದು ಕಡ್ಡಾಯವಾಗಿದೆ. ಅಲ್ಲಿ ಒಂದು ಭಾಗವು ಕುಟುಂಬವನ್ನು ಪೋಷಿಸುತ್ತದೆ, ಎರಡನೆಯದು ಸಂಬಂಧಿಕರನ್ನು ಪೋಷಿಸುತ್ತದೆ ಮತ್ತು ಮೂರನೆಯದು ಬಡವರು ಮತ್ತು ನಿರ್ಗತಿಕರಿಗೆ ಹೋಗುತ್ತದೆ. ಮಾಂಸವಾಗಲಿ, ರಕ್ತವಾಗಲಿ ಅಲ್ಲಾಹನನ್ನು ತಲುಪದಿದ್ದರೂ ಜನರ ಭಕ್ತಿಯು ಆತನನ್ನು ತಲುಪುತ್ತದೆ ಎಂದು ನಂಬಲಾಗಿದೆ.

ಆಚರಣೆಗಳು(Celebrations)
ಈ ತಿಂಗಳ ಹತ್ತನೇ ದಿನದಂದು, ಪ್ರಪಂಚದಾದ್ಯಂತದ ಮುಸ್ಲಿಮರು ಸೂರ್ಯ ಸಂಪೂರ್ಣವಾಗಿ ಉದಯಿಸಿದ ನಂತರ ಮತ್ತು ಜುಹ್ರ್ ಸಮಯಕ್ಕೆ (ಮಧ್ಯಾಹ್ನ ಪ್ರಾರ್ಥನೆ ಸಮಯ) ಪ್ರವೇಶಿಸುವ ಮೊದಲು ಮಸೀದಿಯಲ್ಲಿ ಈದ್ ಅಲ್-ಅಧಾ ನಮಾಜನ್ನು ಮಾಡುತ್ತಾರೆ. ಬಳಿಕ ಇಮಾಮ್‌ನಿಂದ ಧರ್ಮೋಪದೇಶ ನಡೆಯುತ್ತದೆ. ಮಹಿಳೆಯರು ಮೆಹಂದಿ ಹಚ್ಚಿಕೊಳ್ಳುತ್ತಾರೆ. 

ಹಜ್ ಯಾತ್ರೆ ಕೂಡ ಇದೇ ಸಮಯದಲ್ಲಿ ನಡೆಯುತ್ತದೆ. ಇದು ಪ್ರತಿಯೊಬ್ಬ ಮುಸ್ಲಿಮನು ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಬಲನಾಗಿದ್ದರೆ ತನ್ನ ಜೀವನದಲ್ಲಿ ಒಮ್ಮೆಯಾದರೂ ಮಾಡಬೇಕಾದ ತೀರ್ಥಯಾತ್ರೆಯಾಗಿದೆ. 
 

Latest Videos
Follow Us:
Download App:
  • android
  • ios