Chaturmas 2022: ವಿಷ್ಣು ಈ ನಾಲ್ಕು ತಿಂಗಳು ಯೋಗನಿದ್ರೆಗೆ ಹೋಗುವುದೇಕೆ?

ಚಾತುರ್ಮಾಸ ಆಷಾಢ ಶುಕ್ಲ ಪಕ್ಷದ 11 ನೇ ದಿನದಂದು ಏಕಾದಶಿ. ಇಂದು ವಿಷ್ಣುವು ಯೋಗನಿದ್ರೆಗೆ ಜಾರುವ ದಿನ. ಇದಾಗಿ ನಾಲ್ಕು ಮಾಸಗಳ ಕಾಲ ಆತ ವಿಶ್ರಾಂತಿಯಲ್ಲಿರುತ್ತಾನೆ. ಇಷ್ಟಕ್ಕೂ ಆತ ಚಾತುರ್ಮಾಸ ಯೋಗನಿದ್ರೆಗೆ ಜಾರುವುದೇಕೆ?

Why does Lord Vishnu go into yoga-nidra for four months skr

ಚಾತುರ್ಮಾಸ(Chaturmas) ಆಷಾಢ ಶುಕ್ಲ ಪಕ್ಷದ 11 ನೇ ದಿನದಂದು ಪ್ರಾರಂಭವಾಗುತ್ತದೆ. ಇದನ್ನು ದೇವ ಶಯನಿ ಏಕಾದಶಿ(Dev Shayani Ekadashi) ಎಂದು ಕರೆಯಲಾಗುತ್ತದೆ ಮತ್ತು ಕಾರ್ತಿಕ ಮಾಸದ ಶುಕ್ಲ ಪಕ್ಷದ 11 ನೇ ದಿನ ಕೊನೆಗೊಳ್ಳುತ್ತದೆ, ಇದನ್ನು ದೇವ ಉತ್ಥಾನಿ ಏಕಾದಶಿ ಎಂದು ಕರೆಯಲಾಗುತ್ತದೆ.
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಚಾತುರ್ಮಾಸದಲ್ಲಿ ಭಗವಾನ್ ಶಿವನ ಕುಟುಂಬವನ್ನು ಹೊರತುಪಡಿಸಿ, ವಿಷ್ಣು ಸೇರಿದಂತೆ ಎಲ್ಲ ದೇವರುಗಳು ಮತ್ತು ದೇವತೆಗಳು ಯೋಗ-ನಿದ್ರೆಗೆ ಹೋಗುತ್ತಾರೆ. ಭಗವಾನ್ ಶಿವ(Lord Shiva)ನೇ ಈ ನಾಲ್ಕು ತಿಂಗಳು ಸೃಷ್ಟಿಯನ್ನು ನಡೆಸುತ್ತಾನೆ. ಆದ್ದರಿಂದಲೇ ಹಿಂದೂ ಧರ್ಮದಲ್ಲಿ ಚಾತುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಧರ್ಮದ ಹೆಚ್ಚಿನ ಪ್ರಮುಖ ಹಬ್ಬಗಳು ಈ ಚಾತುರ್ಮಾಸದಲ್ಲಿ ಮಾತ್ರ ಬರುತ್ತವೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಈ ವರ್ಷ ದೇವಶಯನಿ ಏಕಾದಶಿ ಉಪವಾಸವನ್ನು ಜುಲೈ 10, ಭಾನುವಾರದಂದು ಆಚರಿಸಲಾಗುತ್ತದೆ.

ಬ್ರಹ್ಮಾಂಡದ ಮೂಲ ನಿರ್ದೇಶಕನಾದ ಶ್ರೀ ಹರಿ ಮತ್ತು ಇತರ ದೇವತೆಗಳು ಯೋಗ ನಿದ್ರೆಗೆ ಜಾರುವುದರಿಂದಾಗಿ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸದ ನಾಲ್ಕು ತಿಂಗಳಲ್ಲಿ ಯಾವುದೇ ರೀತಿಯ ಮಂಗಳಕರ ಮತ್ತು ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯ ದಿನದಂದು ಶ್ರೀ ಹರಿ ಮತ್ತು ಇತರ ದೇವತೆಗಳು ಯೋಗ ನಿದ್ರೆ(Yoga nidra)ಯಿಂದ ಹೊರಬಂದ ನಂತರ ಮದುವೆ ಸೇರಿದಂತೆ ಎಲ್ಲ ಮಂಗಳಕರ ಕಾರ್ಯಗಳನ್ನು ಮತ್ತೊಮ್ಮೆ ಮಾಡಲಾಗುತ್ತದೆ. ಆದರೆ ಇಂದಿಗೂ ಈ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ, ಶ್ರೀ ಹರಿಯು ನಾಲ್ಕು ತಿಂಗಳು ಯೋಗ ನಿದ್ರೆಗೆ ಏಕೆ ಹೋಗುತ್ತಾನೆ? ನಮ್ಮ ಪುರಾಣ ಗ್ರಂಥಗಳಲ್ಲಿ ಈ ಸಂದರ್ಭಕ್ಕೆ ವಿವರಣೆಯಾಗಿ ಎರಡು ಕಥೆಗಳನ್ನು ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ: ಇಂಥ ನಾಣ್ಯ ಮನೆಯಲ್ಲಿಟ್ಟರೆ ಹಣದ ಸಮಸ್ಯೆ ಇರೋದಿಲ್ಲ!

ಮೊದಲ ಕಥೆ(first story)
ಒಮ್ಮೆ ವಿಷ್ಣುವು ಹೋಲಿಸಲಾಗದ ಶಕ್ತಿಶಾಲಿ ರಾಕ್ಷಸ ರಾಜ ಶಂಖಚೂಡ(Shankachooda)ನೊಂದಿಗೆ ಅನೇಕ ವರ್ಷಗಳ ಕಾಲ ಹೋರಾಡಿದನು. ಅಂತಿಮವಾಗಿ, ಆಷಾಢ ಶುಕ್ಲ ಪಕ್ಷದ ಏಕಾದಶಿಯ ದಿನ, ವಿಷ್ಣು ಶಂಖಚೂಡನನ್ನು ಸಂಹರಿಸುವಲ್ಲಿ ಯಶಸ್ವಿಯಾದರು. ಆದರೆ ಇಷ್ಟು ದಿನ ರಾಕ್ಷಸನೊಂದಿಗೆ ನಿರಂತರ ಹೋರಾಡಿದ್ದರಿಂದ, ವಿಷ್ಣುವು ತುಂಬಾ ದಣಿದನು. ಹೀಗಾಗಿ ಎಲ್ಲ ದೇವತೆಗಳು ತಾಯಿ ಲಕ್ಷ್ಮಿ ಅವರೊಂದಿಗೆ ವಿಶ್ರಾಂತಿ ಪಡೆಯಲು ವಿಷ್ಣುವಿಗೆ ಸಲಹೆ ನೀಡಿದರು. ವಿಷ್ಣು ಜೀ ಭಗವಾನ್ ಶಿವನಿಗೆ ಸೃಷ್ಟಿಯ ಆಡಳಿತದ ಜವಾಬ್ದಾರಿಯನ್ನು ಹಸ್ತಾಂತರಿಸಿದರು ಮತ್ತು ವಿಶ್ರಾಂತಿಗಾಗಿ ಪಾತಾಳಕ್ಕೆ ಹೋದರು. ನಾಲ್ಕು ತಿಂಗಳ ನಂತರ ವಿಷ್ಣು ಯೋಗ ನಿದ್ದೆಯಿಂದ ಎಚ್ಚೆತ್ತಾಗ ಆ ದಿನ ಕಾರ್ತಿಕ ಮಾಸದ ಏಕಾದಶಿಯ ದಿನ. ಅಂದಿನಿಂದ ಈ ದಿನವನ್ನು ದೇವುತ್ಥಾನ ಏಕಾದಶಿ ಎಂದು ಕರೆಯಲಾಯಿತು.

ಇದನ್ನೂ ಓದಿ: Chaturmasa Prediction: ಚಾತುರ್ಮಾಸದಲ್ಲಿ ಈ ರಾಶಿಯವರಿಗೆ ವಿಷ್ಣುವಿನ ವಿಶೇಷ ಕೃಪೆ

ಎರಡನೇ ಕಥೆ(second story)
ಒಮ್ಮೆ, ರಾಜ ಬಲಿಯ ಹೆಚ್ಚುತ್ತಿರುವ ಶಕ್ತಿಯನ್ನು ನಿಯಂತ್ರಿಸುವ ಸಲುವಾಗಿ, ಭಗವಾನ್ ವಿಷ್ಣುವು ವಾಮನನ ರೂಪವನ್ನು ತೆಗೆದುಕೊಂಡು ಬಲಿಯ ಬಳಿ ಹೋಗಿ ಮೂರು ಹೆಜ್ಜೆ ಭೂಮಿಯನ್ನು ಕೇಳಿದನು. ಬಲಿ ಹೇಳಿದನು, ನೀನು ಭೂಮಿಯನ್ನು ಮೂರು ಹೆಜ್ಜೆ ಅಳೆಯಬೇಕು. ವಾಮನ, ಮೊದಲ ಹೆಜ್ಜೆಯಲ್ಲಿ ಭೂಮಿಯನ್ನು, ಎರಡನೇ ಹೆಜ್ಜೆಯಲ್ಲಿ ಆಕಾಶವನ್ನು ಅಳೆದ ನಂತರ, ಬಲಿಯನ್ನು ಕೇಳಿದರು, ನಾನು ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕು. ತನ್ನ ದಿವ್ಯ ಶಕ್ತಿಯಿಂದ ಬಲಿ(Bali) ವಾಮನನ್ನು ಭಗವಾನ್ ವಿಷ್ಣುವೆಂದು ಗುರುತಿಸಿ ತನ್ನ ತಲೆಯನ್ನು ಮುಂದಿಟ್ಟನು. ವಾಮನನು ಬಲಿಯ ಶೌರ್ಯದಿಂದ ಸಂತಸಗೊಂಡು ವರವನ್ನು ಕೇಳಲು ಹೇಳಿದ. 
ಬಲಿಯು ಹೇಳಿದನು, 'ಭಗವಂತ, ನೀನು ನಮ್ಮ ಪಾತಾಳದಲ್ಲಿ ಶಾಶ್ವತವಾಗಿ ನೆಲೆಸು'. ವಾಗ್ದಾನ ಮಾಡಿದ ವಿಷ್ಣುವಿಗೆ ನಿರಾಕರಿಸಲಾಗಲಿಲ್ಲ. ಲಕ್ಷ್ಮಿಗೆ ಸಂಪೂರ್ಣ ವಿಷಯ ತಿಳಿದಾಗ, ಪತಿ ಇಲ್ಲದೆ ಆಕೆ ಬಡ ಮಹಿಳೆಯಾದಳು ಮತ್ತು ಬಲಿಯನ್ನು ಭೇಟಿಯಾದಳು. ಲಕ್ಷ್ಮಿಯ ದರಿದ್ರ ಸ್ಥಿತಿಯನ್ನು ಕಂಡು ಬಲಿ ಅವಳನ್ನು ತನ್ನ ತಂಗಿಯನ್ನಾಗಿ ಮಾಡಿಕೊಂಡನು. ಲಕ್ಷ್ಮಿಯು ಬಲಿಗೆ ಹೇಳಿದಳು, 'ನೀನು ನಿನ್ನ ತಂಗಿಯನ್ನು ಸಂತೋಷದಿಂದ ನೋಡಬೇಕಾದರೆ ನನ್ನ ಗಂಡನನ್ನು ನನಗೆ ಕೊಡು', ತಂಗಿಯನ್ನು ನಿರಾಸೆಗೊಳಿಸದೆ ದಾನಿ ಬಲಿ ಲಕ್ಷ್ಮೀಗೆ ಶ್ರೀಹರಿಯನ್ನು ಬಿಟ್ಟು ಕೊಟ್ಟರು. ವಿಷ್ಣು ಬಲಿಯ ಔದಾರ್ಯದಿಂದ ಮತ್ತೆ ಬಹಳ ಸಂತುಷ್ಟನಾದ. ಮತ್ತು ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯವರೆಗೆ ಪಾತಾಳದಲ್ಲಿ ನೆಲೆಸುವುದಾಗಿ ಬಲಿಗೆ ಭರವಸೆ ನೀಡಿದ. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

Latest Videos
Follow Us:
Download App:
  • android
  • ios